Actor Ram Charan Teja And Upasana Konidela Daughter Photo: ನಟ ರಾಮ್ ಚರಣ್ ತೇಜ ಹಾಗೂ ಉಪಾಸನಾ ಕೊನಿಡೆಲ ಇದುವರೆಗೂ ಎಲ್ಲಿಯೂ ಮಗಳ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇತ್ತೀಚೆಗೆ ಉಪಾಸನಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದಾಗ ರಾಮ್ ಚರಣ್ ತೇಜ ಅವರು ಮಗಳ ಜೊತೆ ಆಸ್ಪತ್ರೆಗೆ ಬಂದಿದ್ದರು.
ಈಗ ಉಪಾಸನಾ, ರಾಮ್ ಮಗಳು ಕ್ಲಿನ್ ಕಾರಾಗೆ ಈಗ ಮೂರನೇ ವರ್ಷದ ಸಂಭ್ರಮ. ಈ ಖುಷಿಯಲ್ಲಿ ಈ ಜೋಡಿ ಫೋಟೋಶೂಟ್ ಮಾಡಿಸಿದ್ದು, ಮಗಳ ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಅನೇಕರು ಕ್ಲಿನ್ ಕಾರಾಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
25
ಮಗಳ ವಿಶ್
ಇತ್ತೀಚೆಗೆ ರಾಮ್ ಚರಣ್ ತೇಜ ಅವರ ಪೆದ್ದಿ ಸಿನಿಮಾ ಪ್ರಚಾರದ ವೇಳೆ ಕ್ಲಿನ್ ಕಾರಾ ತನ್ನ ತಂದೆಗೆ ವಿಶ್ ಮಾಡಿದ ಆಡಿಯೋ ವೈರಲ್ ಆಗಿತ್ತು. ಮುದ್ದಾದ ಧ್ವನಿಯಲ್ಲಿ "ಇದು ನಿಮಗಾಗಿ ನಾನ್ನಾ ( ಅಪ್ಪ), ಐ ಲವ್ ಯೂ ಸೋ ಮಚ್" ಎಂದು ಹೇಳಿದ್ದರು.
35
ಅದ್ದೂರಿ ಮದುವೆ
ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ನ ಸಂಸ್ಥಾಪಕ ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳಾದ ಉಪಾಸನಾ ಕಾಮಿನೇನಿ ಹಾಗೂ ರಾಮ ಚರಣ್ ತೇಜ ಅವರು ಜೂನ್ 14, 2012 ರಂದು ಹೈದರಾಬಾದ್‌ನಲ್ಲಿ ಅತ್ಯಂತ ಅದ್ಧೂರಿಯಾಗಿ ಮದುವೆಯಾದರು. ಇವರಿಬ್ಬರದ್ದು ಲವ್ ಮ್ಯಾರೇಜ್.
ಮದುವೆಯಾಗಿ 11 ವರ್ಷಗಳ ಬಳಿಕ ಈ ಜೋಡಿ ಮೊದಲ ಮಗಳು ಕ್ಲಿನ್ ಕಾರಾ ಕೊನಿಡೆಲರನ್ನು (Klin Kaara Konidela) ಸ್ವಾಗತಿಸಿದರು. 'ಲಲಿತಾ ಸಹಸ್ರನಾಮ'ದಿಂದ ಈ ಶಬ್ದವನ್ನು ಆರಿಸಿಕೊಳ್ಳಲಾಗಿದೆ. ಆಧ್ಯಾತ್ಮಿಕ ಜಾಗೃತಿಯನ್ನು ತರುವ, ಶುದ್ಧೀಕರಿಸುವ, ಪರಿವರ್ತನೆಯನ್ನು ಉಂಟುಮಾಡುವ ದೈವಿಕ ಶಕ್ತಿ ಎಂದರ್ಥ.
55
ಅವಳಿ ಮಕ್ಕಳ ಆಗಮನ
ಜನವರಿ 31, 2026 ರಂದು ಉಪಾಸನಾ ಅವರು ಶಿವ ರಾಮ್ ಮತ್ತು ಅನ್ವೀರಾ ದೇವಿ (Shivram & Anveera Devi) ಎಂಬ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ರಾಮ್ ಚರಣ್ ತೇಜ ತಂದೆ ಮೆಗಾಸ್ಟಾರ್ ಚಿರಂಜೀವಿ ಅಸಲಿ ಹೆಸರು ಶಿವ ಶಂಕರ ವರ ಪ್ರಸಾದ್. ಹೀಗಾಗಿ 'ಶಿವ ರಾಮ್' ಎಂದು ಹೆಸರಿಸಲಾಗಿದೆ. ಕನಕದುರ್ಗಾ ದೇವಿಯ ಆಶೀರ್ವಾದ ಎಂದು ಕಿರಿಯ ಮಗಳಿಗೆ 'ಅನ್ವೀರಾ ದೇವಿ' ಎಂದು ಹೆಸರು ಇಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.