ಗೂಗಲ್ ಸಿಇಒ ಸುಂದರ್ ಪಿಚೈಗೆ ಈ ಭಾರತೀಯ ಆಹಾರವಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!

By Vinutha Perla  |  First Published May 19, 2024, 10:03 AM IST

ವಿಶ್ವದ ಟೆಕ್ ದಿಗ್ಗಜ ಗೂಗಲ್‌ ಮುನ್ನಡೆಸುತ್ತಿರುವ ಭಾರತೀಯ ಸಿಇಒ ಸುಂದರ್ ಪಿಚೈ ಮೂಲತಃ ಭಾರತೀಯ. ಹೀಗಾಗಿ ಇವರಿಗೆ ಇಂಡಿಯನ್ ಫುಡ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಇತ್ತೀಚಿಗೆ ಪಿಚೈ ಭಾರತದಲ್ಲಿ ತಮ್ಮ ನೆಚ್ಚಿನ ಆಹಾರ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.


ಗೂಗಲ್ ಸಿಇಒ ಸುಂದರ್ ಪಿಚೈ ಅವರು ಹೊಸ ಬೆಳವಣಿಗೆಗಳೊಂದಿಗೆ ಜಾಗತಿಕ ಮಟ್ಟಕ್ಕೆ ಸಾಗುತ್ತಿರುವ ಅನೇಕ ಭಾರತೀಯ ಮೂಲದ ವ್ಯಕ್ತಿಗಳಲ್ಲಿ ಒಬ್ಬರು. ಅವರು ತಮ್ಮ ಹೆಚ್ಚಿನ ಸಮಯವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಳೆಯುತ್ತಿದ್ದರೂ, ಹುಟ್ಟಿ ಬೆಳೆದಿದ್ದೆಲ್ಲಾ ತಮಿಳುನಾಡಿನ ಚೆನ್ನೈನಲ್ಲಿ. ಗೂಗಲ್‌ನ ಉನ್ನತ ಅಧಿಕಾರಿ ಆಗಿರುವ ಅವರು ನಂತರದಲ್ಲಿ ಅಮೆರಿಕಾಗೆ ವಲಸೆ ಹೋದವರು. ಹೀಗಾಗಿಯೇ ಅವರಿಗೆ ಭಾರತದ ಜೊತೆ ಅವಿನಾವಭಾವ ನಂಟಿದೆ. ಇತ್ತೀಚಿಗೆ ಸಂವಾದದ ಸಮಯದಲ್ಲಿ, ಪಿಚೈ ಅವರು ಭಾರತದ ಮೇಲೆ AI ಪ್ರಭಾವ, ಭಾರತೀಯ ಇಂಜಿನಿಯರ್‌ಗಳಿಗೆ ಅವರ ಸಲಹೆಗಳು, ಸ್ಟಾರ್ಟ್‌ಅಪ್‌ಗಳ ಅಭಿವೃದ್ಧಿ ಒಳಗೊಂಡಂತೆ ಅನೇಕ ವಿಷಯಗಳ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಸುಂದರ್‌ ಪಿಚೈ ಭಾರತ ಮತ್ತು ಭಾರತೀಯ ಆಹಾರದ ಮೇಲಿನ ಪ್ರೀತಿಯನ್ನು ಸಹ ವ್ಯಕ್ತಪಡಿಸಿದರು. ತಾವು ಫುಡ್ಡೀಯಾಗಿದ್ದು, ಎಲ್ಲಾ ರೀತಿಯ ಆಹಾರವನ್ನು ತಿನ್ನಲು ಇಷ್ಟಪಡುತ್ತೇನೆ ಎಂಬುದುನ್ನು ತಿಳಿಸಿದರು. ಮಾತ್ರವಲ್ಲ ಭಾರತದಲ್ಲಿ ತಮ್ಮ ನೆಚ್ಚಿನ ಆಹಾರ ಯಾವುದು ಎಂಬುದನ್ನು ಬಹಿರಂಗಪಡಿಸಿದರು.

Tap to resize

Latest Videos

undefined

ಈಗ ಕೇಳೋಕೆ ಮುಂಚೆ ಎಲ್ಲಾ ಸಿಗುತ್ತೆ ಆದ್ರೆ ಆಗ ಫೋನ್‌ಗಾಗಿ 5 ವರ್ಷ ಕಾದಿದ್ರಂತೆ ಸುಂದರ್ ಪಿಚೈ

ಪಾಡ್‌ಕ್ಯಾಸ್ಟ್ ಸಮಯದಲ್ಲಿ, ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ವರುಣ್ ಮಯ್ಯ ಭಾರತದಲ್ಲಿ ಅವರ ನೆಚ್ಚಿನ ಆಹಾರದ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರವಾಗಿ ಸುಂದರ್ ಪಿಚೈ ಭಾರತದ ಮೂರು ಮೆಟ್ರೋಪಾಲಿಟನ್ ನಗರಗಳಿಂದ ತಮ್ಮ ನೆಚ್ಚಿನ ಆಹಾರವನ್ನು ಆಯ್ಕೆ ಮಾಡಿದರು: ದೆಹಲಿ, ಮುಂಬೈ ಮತ್ತು ಬೆಂಗಳೂರು ತಮ್ಮ ನೆಚ್ಚಿನ ಆಹಾರವನ್ನು ಹೊಂದಿದೆ ಎಂದು ತಿಳಿಸಿದರು. ಬೆಂಗಳೂರಿನ ದೋಸೆ, ದೆಹಲಿಯ ಚೋಲೆ ಭಟೂರ್ ಮತ್ತು ಮುಂಬೈನ ಪಾವ್ ಭಾಜಿಯನ್ನು ತುಂಬಾ ಇಷ್ಟಪಡುತ್ತೇನೆ ಎಂದು ಬಹಿರಂಗಪಡಿಸಿದರು. 

ಸುಂದರ್ ಪಿಚೈ ಅವರು ತಮ್ಮ ನೆಚ್ಚಿನ ಭಾರತೀಯ ಖಾದ್ಯದ ಬಗ್ಗೆ ಮಾತನಾಡುವುದರ ಜೊತೆಗೆ, ಅಮೀರ್ ಖಾನ್ ಅವರ ಸೂಪರ್‌ಹಿಟ್ ಚಿತ್ರ 3 ಈಡಿಯಟ್ಸ್‌ನ ಒಂದು ದೃಶ್ಯವನ್ನು ಉಲ್ಲೇಖಿಸಿದ್ದಾರೆ. ಆಳವಾದ ಕಲಿಕೆಯ ಪ್ರಾಮುಖ್ಯತೆಯನ್ನು ಪಿಚೈ ಒತ್ತಿ ಹೇಳಿದರು . 'ನಾನು 3 ಈಡಿಯಟ್ಸ್ ಅಥವಾ ಅಂತಹದ್ದೇನಾದರೂ ಚಲನಚಿತ್ರದ ಬಗ್ಗೆ ತುಂಬಾ ಪ್ರಭಾವಿತನಾಗಿದ್ದೇನೆ. ಅಮೀರ್ ಖಾನ್‌ಗೆ ಮೋಟರ್‌ನ ವ್ಯಾಖ್ಯಾನವನ್ನು ಕೇಳಿದಾಗ ಅಲ್ಲಿ ಒಂದು ದೃಶ್ಯವಿದೆ. ಮತ್ತು ಮೋಟಾರ್ ಏನೆಂದು ವಿವರಿಸುವ ಒಂದು ಆವೃತ್ತಿ ಇದೆ. ಮತ್ತು ಮೋಟಾರು ಏನು ಎಂದು ನೀವು ನಿಜವಾಗಿಯೂ ಅರ್ಥಮಾಡಿಕೊಳ್ಳುವ ಆವೃತ್ತಿಯಿದೆ' ಎಂದಿದ್ದಾರೆ.

ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರ ಐಕಾನಿಕ್‌ IIT ಫೋಟೋ ವೈರಲ್‌, ಪಕ್ಕದಲ್ಲಿರುವ ಯುವತಿ ಕೂಡ ಫೇಮಸ್‌!

ಸುಂದರ್ ಪಿಚೈ ಬಗ್ಗೆ ಮಾತನಾಡುತ್ತಾ, ಅವರು ತಮಿಳುನಾಡಿನಲ್ಲಿ ಜನಿಸಿದರು. ನಂತರ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಲು ಯುಎಸ್ಎಗೆ ತೆರಳಿದರು. 2004ರಲ್ಲಿ, Google ನಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದರು. 2015ರಲ್ಲಿ, ಟೆಕ್ ದೈತ್ಯದ ಮುಂದಿನ CEO ಆಗಿ ನೇಮಕಗೊಂಡರು.

click me!