Worst Foods: ಆಯಸ್ಸು ಕಡಿಮೆ ಮಾಡೋ ಆಹಾರಗಳಿವು ! ನೀವಿದನ್ನು ತಿನ್ತಿದ್ದೀರಾ ಚೆಕ್ ಮಾಡ್ಕೊಳ್ಳಿ

By Suvarna News  |  First Published Mar 15, 2022, 5:44 PM IST

ಹೆಚ್ಚು ಕಾಲ ಬದುಕಿರೋಕೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದಕ್ಕೇ ಅಲ್ವಾ ಆಗಿಂದಾಗೆ ಹೆಲ್ತ್‌ ಚೆಕಪ್‌ (Health Checkup), ವರ್ಕೌಟ್‌ ಅಂತ ಮಾಡೋದು. ಆದ್ರೆ ನೀವು ತಿನ್ನೋ ಆಹಾರ (Food)ದಿಂದಾನೂ ಜೀವಕ್ಕೇ ಅಪಾಯವಿದೆ ಗೊತ್ತಾ ? ನಿಮ್ಮ ಫುಡ್‌ ಲಿಸ್ಟ್‌ನಲ್ಲಿ ಈ ಕೆಳಗಿನ ಆಹಾರವಿದ್ರೆ ಸೈಡಿಗಿಡಿ. ಇಲ್ಲಾಂದ್ರೆ ಆಯಸ್ಸು (Lifetime) ಕಡಿಮೆಯಾಗುತ್ತೆ.


ಜೀವನಶೈಲಿ (Lifestyle), ಆಹಾರಪದ್ಧತಿ, ಆರೋಗ್ಯ (Health) ಇದೆಲ್ಲವೂ ಪರಸ್ಪರ ಒಂದಕ್ಕೊಂದು ಬೆಸೆದುಕೊಂಡಿರುವಂಥದ್ದು. ನಾವೇನು ತಿನ್ನುತ್ತೇವೆ ಎಂಬುದು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ತಿನ್ನುವ ಆಹಾರ (Food) ಚೆನ್ನಾಗಿದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಪೋಷಕಾಂಶಗಳು, ವಿಟಮಿನ್‌, ಖನಿಜಗಳು, ಫೈಬರ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ದೇಹವನ್ನು ಯಾವಾಗಲೂ ಆರೋಗ್ಯವಾಗಿಡುತ್ತವೆ. ಬದಲಾಗಿ ದೇಹಕ್ಕೆ ಕಡಿಮೆ ಪೋಷಕಾಂಶಗಳನ್ನು ನೀಡುವ ಆಹಾರಗಳನ್ನು ಸೇವಿಸುತ್ತಾ ಹೋದಂತೆ ಆರೋಗ್ಯವೂ ಹದಗೆಡುತ್ತಾ ಹೋಗುತ್ತದೆ. 

ಆಹಾರಕ್ಕೂ ಆರೋಗ್ಯಕ್ಕೂ ಸಂಬಂಧವಿರುವ ಹಾಗೆಯೇ ಆಹಾರಕ್ಕೂ ಆಯುಷ್ಯಕ್ಕೂ ಸಂಬಂಧವಿದೆ. ನಾವು ಸರಿಯಾದ ಕ್ರಮದಲ್ಲಿ, ಸರಿಯಾದ ರೀತಿಯಲ್ಲಿ ಆಹಾರವನನ್ನು ಸೇವಿಸಿದರೆ ಆಯುಷ್ಯ (Lifetime) ಹೆಚ್ಚುತ್ತದೆ. ತಪ್ಪಾದ ರೀತಿಯಲ್ಲಿ, ತಪ್ಪಾದ ಆಹಾರವನ್ನು ಸೇವಿಸುತ್ತಿದ್ದರೆ ಆಯಸ್ಸು ಕಡಿಮೆಯಾಗುತ್ತದೆ. ಅನಾರೋಗ್ಯಗಳು ಬೇಗ ಕಾಡುತ್ತವೆ. ಸಾವು ಬೇಗ ಸಂಭವಿಸುತ್ತದೆ. ಆಯುಷ್ಯವನ್ನು ಕಡಿಮೆ ಮಾಡಬಹುದಾದ ಕೆಲವೊಂದು ಆಹಾರಗಳ ಬಗ್ಗೆ ನಾವ್ ಹೇಳ್ತೀವಿ. 

Latest Videos

undefined

Healthy Weight Gain: ತೂಕವನ್ನು ಹೆಚ್ಚಿಸಲು ಈ 8 ಬಿಳಿ ವಸ್ತುಗಳನ್ನು ಸೇವಿಸಿ

ಗೋಮಾಂಸ, ಚಿಕನ್ ಮತ್ತು ಡೈರಿ ವಸ್ತುಗಳು ನಿಮ್ಮ ಆಹಾರದ ನಿಯಮಿತ ಭಾಗವಾಗಿದ್ದರೆ ಇದನ್ನು ದೂರವಿಡುವುದು ಒಳಿತು. ಯಾಕೆಂದರೆ, ಮೆರ್ಕ್ ಮ್ಯಾನುಯಲ್ ಮೂಲಕ ಪೆನ್ಸಿಲ್ವೇನಿಯಾದ ಹರ್ಷೆಯಲ್ಲಿರುವ ಪೆನ್ ಸ್ಟೇಟ್ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದ ಪ್ರಕಾರ ಈ ಮೂರು ಆಹಾರ ಆಯ್ಕೆಗಳು ನಿಮ್ಮ ಆಯುಷ್ಯವನ್ನು ಕಡಿಮೆಗೊಳಿಸಬಹುದು. ಹೀಗಾಗಿ  ಆಹಾರದಲ್ಲಿ ಇದಕ್ಕೆ ಪರ್ಯಾಯವಾಗಗಿ ಬದಲಾವಣೆಗಳನ್ನು ಮಾಡಿಕೊಳ್ಳಲು ಇದು ಸೂಕ್ತ ಸಮಯವಾಗಿದೆ.

ಗೋಮಾಂಸ, ಕೋಳಿ (Chicken) ಮತ್ತು ಡೈರಿಗಳು ಸಲ್ಫರ್ ಅಮೈನೋ ಆಮ್ಲಗಳನ್ನು ಒಳಗೊಂಡಿರುತ್ತವೆ. ಈ ಆಮ್ಲಗಳು ಅಡಕವಾಗಿರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹೃದಯರಕ್ತನಾಳದ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ. ದೇಹದಲ್ಲಿ ಈ ಆಮ್ಲಗಳ ಪ್ರಮಾಣ ಹೆಚ್ಚಾಗುವುದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದ ಎರಡು ದೀರ್ಘಾವಧಿಯ ಅಧ್ಯಯನಗಳನ್ನು ಸಂಶೋಧಕರು ಪರಿಶೀಲಿಸಿದಾಗ ದೇಹದಲ್ಲಿ ಸಲ್ಫರ್ ಅಮೈನೋ ಆಮ್ಲಗಳ ಪ್ರಮಾಣ ಹೆಚ್ಚಿರುವವರಲ್ಲಿ ಹೃದಯನಾಳದ ಕಾಯಿಲೆಯ ಅಪಾಯ ಹೆಚ್ಚಿದೆ ಎಂದು ತಿಳಿದುಬಂತು. 32 ವರ್ಷಗಳ ಅಧ್ಯಯನದ ಅವಧಿಯಲ್ಲಿ ಈ ಸ್ಥಿತಿಯಿಂದ ಸಾಯುವ ಅಪಾಯ 28% ಹೆಚ್ಚಿದೆ. ಸಲ್ಫರ್ ಅಮೈನೋ ಆಮ್ಲಗಳ ಬಹುಪಾಲು ಗೋಮಾಂಸ, ಕೋಳಿ ಮತ್ತು ಡೈರಿಗಳಂತಹ ಆಹಾರಗಳಿಂದ ಬರುತ್ತಿದೆ ಎಂದು ಅಧ್ಯಯನದಿಂದ ಕಂಡು ಹಿಡಿಯಲಾಯಿತು.

Kitchen Tips: ಅಡುಗೆಯಲ್ಲಿ ಎಣ್ಣೆಯ ಬಳಕೆ ಕಡಿಮೆ ಮಾಡುವುದು ಹೇಗೆ ?

ಹೊಸ ಸಂಶೋಧನೆಯು ಹೆಚ್ಚಿನ ಪ್ರಾಣಿ ಪ್ರೋಟೀನ್‌ (Protein)ನಲ್ಲಿನ ಆಹಾರಗಳು ಎಂದರೆ ಮಾಂಸ, ಕೋಳಿ ಮತ್ತು ಡೈರಿಗಳಲ್ಲಿ ಸರ್ಫರ್-ಒಳಗೊಂಡಿರುವ ಅಮೈನೋ ಆಮ್ಲಗಳು ಕಳಪೆ ಆರೋಗ್ಯಕ್ಕೆ ಕಾರಣವಾಗುತ್ತವೆ ಎಂಬುದನ್ನು ತಿಳಿಸಿದೆ. ಪೌಷ್ಟಿಕತಜ್ಞ ಲಿಸಾ ಯಂಗ್‌, ಹೃದಯದ ಆರೋಗ್ಯಕ್ಕೆ ಹೆಚ್ಚು ಕೋಳಿ, ಮಾಂಸ, ಡೈರಿ ಪದಾರ್ಥಗಳನ್ನು ತಿನ್ನಬಾರದೆಂದು ಸಲಹೆ ನೀಡುತ್ತಾರೆ.

ಮಾತ್ರವಲ್ಲ ಬದಲಾಗಿ, ಹೃದಯ ಆರೋಗ್ಯಕಕ್ಕೆ ಆಹಾರದಲ್ಲಿ ಹೆಚ್ಚು ಹಣ್ಣುಗಳು ಮತ್ತು ತರಕಾರಿ (Vegetables)ಗಳು ಒಳಗೊಂಡಿರಬೇಕು ಎಂದು ಹೇಳುತ್ತಾರೆ. ಮಾಂಸ (Meat) ಮತ್ತು ಡೈರಿ ಬದಲಿಗೆ ಬೀನ್ಸ್ ಮತ್ತು ಬೀಜಗಳಂತಹ ಸಸ್ಯ ಪ್ರೋಟೀನ್‌ಗಳನ್ನು ಸೇವಿಸುವಂತೆ ಅಧ್ಯಯನವು ಸೂಚಿಸುತ್ತದೆ.

ಮಾಂಸ ಮತ್ತು ಡೈರಿಗಳಂತಹ ಆಹಾರದಲ್ಲಿ ಸಲ್ಫರ್ ಅಮೈನೋ ಆಮ್ಲಗಳ ಅಂಶ ಹೆಚ್ಚಿದೆ. ಹಾಗಂತ ಆಹಾರಪದ್ಧತಿಯಿಂದ ಈ ಆಹಾರವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ, ಆದರೆ ನಾವು ಆರೋಗ್ಯಕರ ಆಹಾರದ ಮಾದರಿಗಳನ್ನು ರಚಿಸುವತ್ತ ಗಮನ ಹರಿಸಬೇಕು ಎಂದು ಯಂಗ್ ಹೇಳುತ್ತಾರೆ. ಹೀಗಾಗಿ ಮಾಂಸ, ಮೀನು, ಡೈರಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ ಆರೋಗ್ಯಕರ ಹಣ್ಣು, ತರಕಾರಿ, ಒಣಹಣ್ಣು, ಒಣಬೀಜಗಳನ್ನು ಹೆಚ್ಚು ಸೇವಿಸುವುದರಿಂದ ಆಯಸ್ಸು ಹೆಚ್ಚಾಗುತ್ತದೆ.

click me!