New Recipe: ಬಾಯಲ್ಲಿಟ್ರೆ ಕರಗುವ ಜಾಮೂನ್ ಪರೋಟ

By Suvarna News  |  First Published Mar 15, 2022, 2:57 PM IST

ನೀವು ಸಿಹಿ ತಿಂಡಿ ಇಷ್ಟಪಡುವವರು ಆಗಿದ್ದರೆ ಈ ಹೊಸ ರೆಸಿಪಿಯನ್ನು ಒಮ್ಮೆ ಪ್ರಯತ್ನಿಸಲೇಬೇಕು. ಹೆಸರೇ ಸೂಚಿಸುವಂತೆ ಇದು ವಿಭಿನ್ನವಾದ ತಿಂಡಿ. ಗುಲಾಬ್ ಜಾಮೂನ್ ಅನ್ನು ಇಷ್ಟಪಡುವವರು ಇದರಿಂದಾಗಿ ತಯಾರಿಸುವ ವಿಶೇಷ ಪರೋಟವನ್ನು ಕೂಡ ಮೆಚ್ಚಿಕೊಳ್ಳುತ್ತಾರೆ..


ಪ್ರತಿ ದಿನ ಯಾವುದೋ ಒಂದೇ ರೀತಿಯ ಅಡುಗೆಯನ್ನು ಮಾಡಿಕೊಂಡು ತಿನ್ನುವುದರಲ್ಲಿ ಏನು ವಿಶೇಷತೆ (Speciality) ಇದೆ ಹೇಳಿ? ದಿನಕ್ಕೊಂದು ಹೊಸ ರೀತಿಯ ಪ್ರಯತ್ನಗಳನ್ನು ನಡೆಸುತ್ತಲೇ ಇರಬೇಕು. ಕನಿಷ್ಠ ಪಕ್ಷ ವಾರಕ್ಕೊಮ್ಮೆಯಾದರೂ ಹೊಸ ರೆಸಿಪಿ ಟ್ರೈ ಮಾಡ್ಬೇಕು. ಇದರಿಂದಾಗಿ ಹೊಸ ಹೊಸ ರೀತಿಯ ಅಡುಗೆ (Recipe) ಕಲಿಯುವುದರ ಜೊತೆಗೆ ನಿಮ್ಮ ನಾಲಿಗೆಗೆ ಹೊಸ ರುಚಿಯ ಪರಿಚಯ ಮಾಡಿ ಕೊಟ್ಟ ಹಾಗೆ ಇರುತ್ತದೆ.

ಫೇಮಸ್ ಫುಡ್ ಬ್ಲಾಗರ್ (Food blogger) ಒಬ್ಬರು ಗುಲಾಬ್ ಜಾಮೂನ್ ಇಂದ ಪರೋಟ ಮಾಡುವ ವಿಡಿಯೋ (Video) ಒಂದನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ವೀಕ್ಷಣೆ ಮಾಡಿದ ಹಲವಾರು (Many) ಜನರು ತಾವು ಇದನ್ನೊಮ್ಮೆ ಮನೆಯಲ್ಲಿ ಪ್ರಯತ್ನಿಸಬೇಕು ಎಂಬ ಕಮೆಂಟ್ಗಳನ್ನು ಮಾಡಿದ್ದಾರೆ. ಈಗಾಗಲೇ ಈ ವಿಡಿಯೋ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Tap to resize

Latest Videos

ವಿಡಿಯೋದಲ್ಲಿ ಹಂಚಿಕೊಂಡಿರುವಂತೆ ಜಾಮೂನ್ ನಿಂದ ಪರೋಟ ತಯಾರಿಸುವ ವಿಧಾನ ಹೀಗಿದೆ..

ಪರೋಟ ಹಿಟ್ಟನ್ನು ಚೆನ್ನಾಗಿ ಕಲಸಿ ಉರುಳಿಸಬೇಕು. ಅದರ ನಡುವೆ ಎರಡು ಗುಲಾಬ್ ಜಾಮೂನ್ ಗಳನ್ನು ಇಡಲಾಗುತ್ತದೆ. ನಂತರ ಸ್ಟವ್ ಆನ್ (On) ಮಾಡಿ, ತವಾವನ್ನು ಸ್ಟವ್ ಮೇಲೆ ಇಟ್ಟು ಅದು ಬಿಸಿಯಾಗುವವರೆಗೆ ಕಾಯಬೇಕು. ತವಾ ಕಾದ ಬಳಿಕ ಗುಲಾಬ್ ಜಾಮೂನುಗಳನ್ನು ತುಂಬಿಸಿರುವ ಪರೋಟವನ್ನು ತವಾ ಮೇಲೆ ಹಾಕಿ. ಇದರ ಸುತ್ತಲೂ ಸಕ್ಕರೆ ಪಾಕವನ್ನು (Sugar syrup) ಚೆನ್ನಾಗಿ ಮೆತ್ತಿಕೊಳ್ಳುವ ಹಾಗೆ ಹಾಕಿ ಚೆನ್ನಾಗಿ ಬೇಯಿಸಿ. ಇಷ್ಟೇ! ಬಹಳ ಸುಲಭವಾಗಿ ತಯಾರಿಸಲಾಗುವ ಜಾಮೂನ್ ಪರೋಟವನ್ನು ತಯಾರಿಸುವ ಕ್ರಮವನ್ನು ವಿಡಿಯೋ ಮೂಲಕ ಸೆರೆ ಹಿಡಿದು ತಮ್ಮ ಸಾಮಾಜಿಕ ಜಾಲತಾಣದ (Social media) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಫುಡ್ ಬ್ಲಾಗರ್ ಸೋನಾ ನೇಗಿ ಅವರು ಹಂಚಿಕೊಂಡಿರುವ ವಿಡಿಯೋ.

Health Tips: ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಿಸುತ್ತೆ ಸಾಬೂದಾನ ಕಿಚಡಿ

ವಿಡಿಯೋದಲ್ಲಿನ ಈ ವಿಶೇಷ ತಿಂಡಿಯ ರುಚಿ ನೋಡಿರುವ ಅವರ ಅನುಭವ ಕೂಡ ಹಂಚಿಕೊಂಡಿದ್ದಾರೆ. ಇಂತಹ ವಿಭಿನ್ನ ಪ್ರಯತ್ನಕ್ಕಾಗಿ ಕ್ಷಮಿಸಿ. ಆದರೆ, ಇದರ ರುಚಿ ನಿಜಕ್ಕೂ ಅದ್ಭುತವಾಗಿದೆ. ನನಗೂ ಕೂಡ ಇದರಿಂದಾಗಿ ಆಶ್ಚರ್ಯವಾಗಿದೆ (Shock) ಎಂಬುದಾಗಿ ಹೇಳಿಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣ ಅಂದಮೇಲೆ ಒಬ್ಬರ ಪೋಸ್ಟ್ (Post) ಕೆಳಗೆ ಇನ್ನೊಬ್ಬರು ಕಮೆಂಟ್ (Comment) ಮಾಡುವುದು ಸಾಮಾನ್ಯ ವಿಚಾರ. ಅದರಲ್ಲೂ ಇಂಥ ವಿಭಿನ್ನ ಪ್ರಯತ್ನವನ್ನು ಮಾಡಿರುವ ವಿಡಿಯೋಗಳಿಗೆ ಕಮೆಂಟ್ ಗಳ ಸುರಿಮಳೆಯೇ ಇರುತ್ತದೆ. ಈ ವಿಡಿಯೋದಲ್ಲಿ ಕೂಡ ಹಲವಾರು ಜನರು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ಬಹಳ ರುಚಿಯಾಗಿದೆ (Tasty) ಎಂಬುದಾಗಿ ಹೇಳಿದ್ದರೆ, ಇನ್ನು ಕೆಲವರು, ಈ ಅಡುಗೆಯನ್ನು ನಾವು ತಯಾರಿಸಲು ಕಾಯುತ್ತಿದ್ದೇವೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಹಲವಾರು ಜನ ಪಾಸಿಟಿವ್ (Positive) ಆಗಿ ಕಾಮೆಂಟ್ ಮಾಡಿದ್ದಾರೆ.

Food And Drinks: ಈ 5 ವಸ್ತುಗಳು ಕೇವಲ 2 ದಿನದಲ್ಲಿ ವಾಸನೆಯುಕ್ತ ಮೂತ್ರ ಸಮಸ್ಯೆ ನಿವಾರಿಸುತ್ತವೆ!

ಇನ್ನು ಕೆಲವರು, ಜನರ ಇಂಥ ವ್ಯರ್ಥ ಪ್ರಯತ್ನಗಳಿಗಾಗಿ ಯಾಕೆ ಸಮಯ ಹಾಳು ಮಾಡಿದ್ದೀರಿ ಎಂಬುದಾಗಿ ಟೀಕೆ ಮಾಡಿದ್ದಾರೆ. ಇನ್ನು ಕೆಲವರು ಸ್ವಲ್ಪ ಮುಂದುವರೆದು ತರಕಾರಿಗಳನ್ನು (Vegitables) ಕೂಡ ಸೇರಿಸಬಹುದಿತ್ತು ಅಲ್ಲವೇ ಎಂಬುದಾಗಿ ಕಾಲೆಳೆದಿದ್ದಾರೆ. ಹೀಗೆ ಹಲವಾರು ಜನರು ಈ ವಿಭಿನ್ನ (Different) ಪ್ರಯತ್ನದ ಕುರಿತು ಹಲವಾರು ರೀತಿಯ ಅಭಿಪ್ರಾಯಗಳನ್ನು (opinions) ವ್ಯಕ್ತಪಡಿಸಿದ್ದಾರೆ. 

ಅದೇನೇ ಇದ್ದರೂ ಸುಲಭವಾಗಿ ತಯಾರಿಸಬಹುದಾದ ಈ ಹೊಸ ರುಚಿಯನ್ನು ಒಮ್ಮೆ ಮನೆಯಲ್ಲಿ ತಯಾರಿಸಲು ಪ್ರಯತ್ನ ಪಡುವುದರಲ್ಲಿ ತಪ್ಪಿಲ್ಲ ಅಲ್ಲವೇ?

click me!