Fitness Mantra: ಯಾವ ವಯಸ್ಸಿನಲ್ಲಿ ಏನನ್ನು ತಿನ್ನುವುದು ಸೂಕ್ತ ?

Suvarna News   | Asianet News
Published : Mar 15, 2022, 03:15 PM ISTUpdated : Mar 15, 2022, 03:25 PM IST
Fitness Mantra: ಯಾವ ವಯಸ್ಸಿನಲ್ಲಿ ಏನನ್ನು ತಿನ್ನುವುದು ಸೂಕ್ತ ?

ಸಾರಾಂಶ

ಮನುಷ್ಯನ ಜೀವನಶೈಲಿ (Lifestyle) ಬದಲಾಗಿದೆ. ಆಹಾರಪದ್ಧತಿ ಬದಲಾಗಿದೆ. ಜತೆಗೆ ಆರೋಗ್ಯ  ಸಮಸ್ಯೆ (Health Problem)ಯೂ ಹೆಚ್ಚಾಗಿದೆ. ಯಾವಾಗಲೂ ಆರೋಗ್ಯವಾಗಿರಲು ಯಾವ ರೀತಿಯ ಆಹಾರ (Food) ಸೇವಿಸಬೇಕು ? ಯಾವ ವಯಸ್ಸಿನಲ್ಲಿ ಏನನ್ನು ತಿನ್ನುವುದು ಸೂಕ್ತ ತಿಳಿಯೋಣ.

ನಾವು ತಿನ್ನುವ ಆಹಾರ (Food)ವು ನಮ್ಮ ಒಟ್ಟಾರೆ ಆರೋಗ್ಯವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಷ್ಟಬಂದದ್ದನ್ನು ಎಷ್ಟು ಬೇಕಾದ್ರೂ ತಿನ್ಬೋದು, ಆಮೇಲೆ ವರ್ಕೌಟ್ ಮಾಡಿದ್ರಾಯ್ತು ಅನ್ನೋ ವಿಚಾರ ಬಿಟ್ಬಿಡಿ. ವ್ಯಾಯಾಮ (Exercise) ಮಾಡೋದ್ರಿಂದ ಬೊಜ್ಜು ಕರಗುತ್ತೆ ಅನ್ನೋದು ನಿಜವಾದ್ರೂ, ಇದು ಆರೋಗ್ಯಕರ ಪರಿಹಾರವಲ್ಲ. ಹೀಗಾಗಿ ಯಾವಾಗಲೂ ಮಿತಾಹಾರ ತೆಗೆದುಕೊಳ್ಳುವುದು ಮುಖ್ಯ.

ಜೀವನಕ್ಕೆ ಫಿಟ್ನೆಸ್ (Fitness) ಮುಖ್ಯ. ಫಿಟ್ನೆಸ್ ಸರಿಯಾಗಿರಲು ಆರೋಗ್ಯವಾಗಿರಬೇಕಾದುದು ಮುಖ್ಯ. ಸಂಪೂರ್ಣ ಆರೋಗ್ಯವಾಗಿರಬೇಕಾದರೆ ತಿನ್ನುವ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಆರೋಗ್ಯವಾಗಿರಲು 20ನೇ ವಯಸ್ಸಿನಿಂದ 60 ವಯಸ್ಸಿನ ವರೆಗೆ ಏನನ್ನು ತಿನ್ನಬೇಕು ಎಂಬುದನ್ನು ತಿಳಿಯೋಣ.

Kama Kasturi: ಬಿಸಿಲ ಧಗೆಯಿಂದ ಆರೋಗ್ಯ ಸಮಸ್ಯೆನಾ ? ಸಬ್ಜಾ ಬೀಜ ತಿನ್ನಿ ಸಾಕು

ವಯಸ್ಸಿಗೆ ಅನುಗುಣವಾಗಿ ಯಾವ ಆಹಾರ ಸೇವಿಸಬೇಕು ?
ಸರಿಯಾದ ಆಹಾರಪದ್ಧತಿಯನ್ನು ಅನುಸರಿಸಿದರೆ ಹಲವಾರು ಆರೋಗ್ಯ (Health) ಸಮಸ್ಯೆಗಳು ಬರದಂತೆ ನೋಡಿಕೊಳ್ಳಬಹುದು. ತೂಕ ಹೆಚ್ಚಾಗುವುದು, ಸ್ನಾಯುವಿನ ನಷ್ಟ ಮತ್ತು ದೀರ್ಘಕಾಲದ ಕಾಯಿಲೆಗಳು ಪ್ರಾರಂಭವಾಗುವ ಮೊದಲು ತಡೆಯಬಹುದು ಎಂದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ. ಹೀಗಾಗಿ ನಿಮ್ಮ ನಿರ್ದಿಷ್ಟ ವಯಸ್ಸಿನಲ್ಲಿ ನೀವು ಏನು ತಿನ್ನಬೇಕು, ಯಾವ ಪ್ರಮಾಣದಲ್ಲಿ ಮತ್ತು ಯಾವಾಗ ಎಂಬುದನ್ನು ತಿಳಿದುಕೊಳ್ಳಬೇಕು.

20 ವರ್ಷ: ಜೀವನದಲ್ಲಿ 20ನೇ ವರ್ಷ ಎಂದರೆ ಆರೋಗ್ಯವನ್ನು ಸರಿಯಾಗಿ ರೂಪಿಸುವ ಸಮಯ. ಈ ಸಂದರ್ಭದಲ್ಲಿ ಹೆಚ್ಚು ಪೋಷಕಾಂಶಭರಿತ ಹಾಗೂ ಫೈಬರ್‌ಯುಕ್ತ ಆಹಾರಗಳನ್ನು ಸೇವಿಸಬೇಕು. ದಿನಕ್ಕೆ ಕನಿಷ್ಠ ಮೂರು ಕಪ್ ತರಕಾರಿಗಳು ಮತ್ತು ಎರಡು ಕಪ್ ಹಣ್ಣುಗಳನ್ನು ಸೇವಿಸಿ. ವಿಟಮಿನ್ ಡಿ ಅಡಕವಾಗಿರುವ ತಿನಿಸುಗಳು ಆಹಾರದಲ್ಲಿ ಹೆಚ್ಚಿರಲಿ. ಹಾಲು, ಮೀನು, ಧಾನ್ಯಗಳು, ಓಟ್ ಮೀಲ್, ಸೋಯಾ ಆಹಾರದಲ್ಲಿರಲಿ.

30 ವರ್ಷ: 30 ವರ್ಷವಾದಾಗ ಚಯಾಪಚಯವು ನಿಧಾನಗೊಳ್ಳಲು ಆರಂಭವಾಗುತ್ತದೆ ಮತ್ತು ಇದರಿಂದ ತೂಕ ಹೆಚ್ಚಾಗುವ ಸಮಸ್ಯೆ ಆರಂಭವಾಗುತ್ತದೆ. ಇದರಿಂದ ಸ್ನಾಯು ನಷ್ಟದ ಅಪಾಯ ಹೆಚ್ಚಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಆಹಾರದಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೆಚ್ಚು ಸೇರಿಸಿ. ಲಘುವಾಗಿ ಬೇಯಿಸಿದ ಮೀನಿನೊಂದಿಗೆ ಸರಳವಾದ ತಿನಿಸುಗಳನ್ನು ತಯಾರಿಸಿ. ಇದು ಹೆಚ್ಚು ಒಮೆಗಾ 3 ಅಂಶವನ್ನು ಒಳಗೊಂಡಿರುತ್ತದೆ. ಸಸ್ಯಾಹಾರಿಗಳು ಹಸಿರು ಬಟಾಣಿಯನ್ನು ಹೆಚ್ಚು ಸೇವಿಸಿ. ಪುರುಷರು ಈ ವಯಸ್ಸಿನಲ್ಲಿ ಮದ್ಯ ಕುಡಿಯುವ ಅಭ್ಯಾಸಕ್ಕೆ ಬೀಳದಂತೆ ಎಚ್ಚರಿಕೆ ವಹಿಸಬೇಕು.

Exercise Tips: ವರ್ಕೌಟ್ ನಂತರ ಏನು ತಿನ್ಬೇಕು ? ಏನು ತಿನ್ಬಾರ್ದು

40 ವರ್ಷ: 40 ವರ್ಷದ ಬಳಿಕ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹೆಚ್ಚಿನ ಫೈಬರ್ ಆಹಾರ ತಿನ್ನಬೇಕಾಗುತ್ತದೆ. ಕಾಟೇಜ್ ಚೀಸ್, ಓಟ್ ಮೀಲ್ ಅಥವಾ ಮೊಸರನ್ನು ಹೆಚ್ಚಾಗಿ ಸೇವಿಸಿ. ಕಾಲೋಚಿತ ಮತ್ತು ಸ್ಥಳೀಯವಾಗಿ ಲಭ್ಯವಿರುವ ಹಣ್ಣುಗಳು ಆಹಾರದಲ್ಲಿ ಅಡಕವಾಗಿರಲಿ. ತರಕಾರಿಗಳನ್ನು ಸೇರಿಸಿ ಸಲಾಡ್‌ ತಯಾರಿಸಿ ಸೇವಿಸುವುದು ಸುಲಭವಾದ ಜೀರ್ಣಕ್ರಿಯೆ ಮತ್ತು ಸೋಂಕು ನಿವಾರಣೆಗಾಗಿ ಉತ್ತಮವಾಗಿದೆ. 

50 ವರ್ಷ: ಮಹಿಳೆಯರಿಗೆ ಇದು ಋತುಬಂಧದ ಸಮಯವಾಗಿದೆ. ಹೀಗಾಗಿ ಸೊಪ್ಪು ತರಕಾರಿಗಳು, ಹಣ್ಣುಗಳನ್ನು ಹೆಚ್ಚು ಸೇವಿಸಿ. ರಕ್ತದಲ್ಲಿನ ಕೊಲೆಸ್ಟ್ರಾಲ್, ರಕ್ತದೊತ್ತಡವನ್ನು ಪರೀಕ್ಷಿಸಿ. ಪೊಟ್ಯಾಸಿಯಮ್-ಭರಿತ ಆಹಾರಗಳನ್ನು ಆಹಾರದಲ್ಲಿ ಹೆಚ್ಚು ಸೇರಿಸಿ. ಇದು ಆರೋಗ್ಯಕರ ರಕ್ತದೊತ್ತಡವನ್ನು ಬೆಂಬಲಿಸುತ್ತದೆ, ಇದು ಹೃದಯದ ಆರೋಗ್ಯಕ್ಕೆ ಪ್ರಮುಖವಾಗಿದೆ. ಚಿಪ್ಸ್, ಫ್ರೈಸ್ ಮುಂತಾದ ಪ್ಯಾಕ್ ಮಾಡಲಾದ ತಿಂಡಿಗಳನ್ನು ತಿನ್ನುವುದನ್ನು ನಿಲ್ಲಿಸಿ. ಸ್ಥೂಲಕಾಯತೆಯ ಬಗ್ಗೆ ಗಮನವಿರಲಿ. ಮತ್ತು ಕೆಲಸಕ್ಕೆ ಸಂಬಂಧಿಸಿದ ಒತ್ತಡವನ್ನು ತೊಡೆದುಹಾಕಲು, ಯೋಗ, ಧ್ಯಾನ, ನಡಿಗೆಯ ಅಭ್ಯಾಸಗಳಲ್ಲಿ ಅಳವಡಿಸಿಕೊಳ್ಳಿ.

60 ವರ್ಷ: ಪೋಷಕಾಂಶಗಳು ಮತ್ತು ಪ್ರೋಟೀನ್‌ಗಳ ನಿರಂತರ ಪೂರೈಕೆಯನ್ನು ಪಡೆಯುವ ರೀತಿಯಲ್ಲಿ ನಿಮ್ಮ ಊಟವನ್ನು ಯೋಜಿಸಿ. ಆಹಾರದ ಮೂಲಕ ನಿಮ್ಮ ಪ್ರೋಟೀನ್ ಸೇವನೆಯು ತೃಪ್ತಿಕರವಾಗಿದೆಯೇ ಎಂದು ತಿಳಿಯಲು ನಿಮ್ಮ ವೈದ್ಯರನ್ನು ಪರೀಕ್ಷಿಸಿ. ಸೊಪ್ಪು ತರಕಾರಿಗಳು, ಕಾಳುಗಳು, ಧಾನ್ಯಗಳನ್ನು ಹೆಚ್ಚು ತಿನ್ನಿ. ಹೆಚ್ಚು ನೀರು ಕುಡಿಯಿರಿ.

ಎಲ್ಲಾ ವಯಸ್ಸಿನಲ್ಲಿ ಉತ್ತಮ ಆಹಾರ ಸೇವಿಸಿ ಮತ್ತು ಆರೋಗ್ಯವಾಗಿರಿ. ಇಲ್ಲದಿದ್ದರೆ ಆಹಾರವನ್ನು ಔಷಧಿಯಂತೆ ತೆಗೆದುಕೊಳ್ಳಿ, ಇಲ್ಲದಿದ್ದಲ್ಲಿ ಔಷಧಿಯನ್ನೇ ಆಹಾರವಾಗಿ ತೆಗೆದುಕೊಳ್ಳಬೇಕಾದೀತು ಎಂಬಂಥಾ ದಿನ ದೂರವಿಲ್ಲ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್‌ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್‌, ಇದರಿಂದ ಇದೆ ಸಾಕಷ್ಟು ಪ್ರಯೋಜನ!
Fridge storage guide: ಮರೆತೂ ಕೂಡ ಈ 5 ಆಹಾರವನ್ನ ಫ್ರಿಡ್ಜ್‌ನಲ್ಲಿ ಇಡ್ಬೇಡಿ