ಸೊಳ್ಳೆ ರಾಕೆಟ್ ಮೇಲೆ ಬ್ರೆಡ್ ಟೋಸ್ಟ್‌ ಮಾಡಿದ ಮಹಿಳೆ, ವೀಡಿಯೋ ವೈರಲ್‌

By Vinutha Perla  |  First Published May 10, 2024, 9:52 AM IST

ಪ್ರತಿ ದಿನವೂ, ಜುಗಾಡ್‌ನ ಹೊಸ ವೀಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ಇದೀಗ, ಮಹಿಳೆಯೊಬ್ಬರು ಸೊಳ್ಳೆ ರಾಕೆಟ್‌ನಲ್ಲಿ ಬ್ರೆಡ್ ಟೋಸ್ಟ್ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. 


ಭಾರತೀಯರ ಜೀವನದಲ್ಲಿ ಜುಗಾಡ್‌ ತುಂಬಾ ಸಾಮಾನ್ಯವಾಗಿದೆ. ಸಣ್ಣಪುಟ್ಟ ಟೆಕ್ನಿಕ್ ಉಪಯೋಗಿಸಿ ಯಾವುದೇ ಕೆಲಸವನ್ನು ಸರಳವಾಗಿಸಲು ಯತ್ನಿಸುತ್ತಾರೆ. ಐರನ್ ಬಾಕ್ಸ್‌ನಲ್ಲಿ ಆಮ್ಲೆಟ್‌, ಬಿಸಿಲಿನಲ್ಲಿ ಎಗ್‌ ಭುರ್ಜಿ ಮಾಡುವ ಹಲವಾರು ವೀಡಿಯೋಗಳನ್ನು ನೀವು ನೋಡಿರಬಹುದು. ಹೆಚ್ಚೂ ಕಡಿಮೆ ಪ್ರತಿ ದಿನವೂ, ಜುಗಾಡ್‌ನ ಹೊಸ ವೀಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ಇದೀಗ, ಮಹಿಳೆಯೊಬ್ಬರು ಸೊಳ್ಳೆ ರಾಕೆಟ್‌ನಲ್ಲಿ ಬ್ರೆಡ್ ಟೋಸ್ಟ್ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. 

ವೀಡಿಯೋ ಕ್ಲಿಪ್‌ನಲ್ಲಿ, ಮಹಿಳೆ ಮಾಸ್ಕಿಟೋ ರಾಕೆಟ್‌ನೊಂದಿಗೆ ಹಾಸಿಗೆಯ ಮೇಲೆ ಕುಳಿತಿರುವುದು ಕಂಡುಬರುತ್ತದೆ. ಕೆಲವು ಸೆಕೆಂಡುಗಳ ನಂತರ, ಮಹಿಳೆ ಅದರ ಮೇಲೆ ಬ್ರೆಡ್ ಚೂರುಗಳನ್ನು ಟೋಸ್ಟ್ ಮಾಡುತ್ತಾಳೆ. ಕ್ಲಿಪ್‌ನ ಕೊನೆಯಲ್ಲಿ, ಮಹಿಳೆ ಬ್ರೆಡ್ ಟೋಸ್ಟ್‌ನ್ನು ಸವಿಯುವುದನ್ನು ನೋಡಬಹುದು. ವೀಡಿಯೊವನ್ನು ಹಂಚಿಕೊಳ್ಳುವ ಸಮಯದಲ್ಲಿ ಮಹಿಳೆ, ಬ್ರೆಡ್‌ನ್ನು ಟೋಸ್ಟ್ ಮಾಡಲು ಹೊಸ ತಂತ್ರ ಎಂದು ಬರೆದಿದ್ದಾರೆ.

Tap to resize

Latest Videos

undefined

ಮುರಿದೋಯ್ತು ಕಾರಿನ ಮಿರರ್, ಮಾಲೀಕನ ಐಡಿಯಾಗೆ ದಂಗಾದ ಟಾಟಾ ಮೋಟಾರ್ಸ್!

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಜನರ ಒಂದು ವಿಭಾಗವು ಈ ವೀಡಿಯೊವನ್ನು ರಚಿಸುವುದರ ಹಿಂದಿನ ಕಾರಣವನ್ನು ತಿಳಿಯಲು ಬಯಸಿದೆ.  ಒಬ್ಬ ಬಳಕೆದಾರರು, 'ಸೊಳ್ಳೆ ಜೊತೆಗೆ ಬ್ರೆಡ್ ತಿನ್ನುವ ಸಮಯ' ಎಂದು ಬರೆದಿದ್ದಾರೆ. ಇನ್ನೊಬ್ಬರು, 'ಬ್ರೆಡ್ ವಿತ್ ಸೊಳ್ಳೆ ಸ್ಯಾಂಡ್‌ವಿಚ್' ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ವ್ಯಕ್ತಿ, 'ಈ ಐಡಿಯಾ ಪೇಯಿಂಗ್ ಗೆಸ್ಟ್‌ಗಳಾಗಿ ವಾಸಿಸುವ ಜನರಿಗೆ ಉಪಯುಕ್ತವಾಗಿದೆ' ಎಂದು ಸೇರಿಸಿದ್ದಾರೆ. ಮತ್ತೆ ಕೆಲವರು ಖಾದ್ಯವನ್ನು 'ಮಚ್ಚರ್ ಟೋಸ್ಟ್' ಎಂದು ಹೆಸರಿಸಿದ್ದಾರೆ. ಮತ್ತೆ ಕೆಲವರು ವಿಡಿಯೋ ಎಡಿಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಇದು ತುಂಬಾ ಕೆಟ್ಟ ಅಭ್ಯಾಸವಾಗಿದೆ. ತುಂಬಾ ಅನೈರ್ಮಲ್ಯ ಕೂಡಿದೆ' ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಈ ಮಹಿಳೆ ಗ್ಯಾಸ್ ಉಳಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಕುತೂಹಲದಿಂದ ಪ್ರಶ್ನಿಸಿದ್ದಾರೆ.

ಯಪ್ಪಾ..ಲುಂಗಿಯನ್ನು ಹೀಗೆಲ್ಲಾ ಬಳಸ್ಬೋದಾ, ಯುವಕನ ವಿಡಿಯೋ ವೈರಲ್

click me!