ತಿನ್ನದೇ ಇರೋದ್ರಿಂದ ತೂಕ ಕಡಿಮೆಯಾಗಲ್ಲ..ವೈಟ್ ಲಾಸ್ ಬಗ್ಗೆ ನಿಮ್ಗೆ ಗೊತ್ತಿರದ ವಿಚಾರಗಳಿವು

By Vinutha Perla  |  First Published Apr 23, 2024, 9:40 AM IST

ತೂಕ ಹೆಚ್ಚಳ ಇವತ್ತಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಆದ್ರೆ ಏನೆಲ್ಲಾ ಸರ್ಕಸ್ ಮಾಡಿದ್ರೂ ತೂಕ ಇಳಿಸಿಕೊಳ್ಳೋದು ತುಂಬಾ ಕಷ್ಟವಾಗಿ ಬಿಡುತ್ತೆ. ಇದಕ್ಕೆ ವೈಟ್‌ ಲಾಸ್‌ ಬಗ್ಗೆಯಿರುವ ಕೆಲವು ತಪ್ಪು ಕಲ್ಪನೆಗಳೇ ಕಾರಣ. ಅದು ಯಾವುದೆಲ್ಲಾ ತಿಳಿಯೋಣ.


ತೂಕ ಹೆಚ್ಚಳ ಇವತ್ತಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಒತ್ತಡದ ಜೀವನಶೈಲಿ, ಕುಳಿತುಕೊಂಡೇ ಮಾಡುವ ಕೆಲಸ, ಅನ್‌ಹೆಲ್ದೀ ಆಹಾರಕ್ರಮ ಈ ಎಲ್ಲಾ ಸಮಸ್ಯೆಗೆ ಕಾರಣವಾಗ್ತಿದೆ. ಆದ್ರೆ ಏನೆಲ್ಲಾ ಸರ್ಕಸ್ ಮಾಡಿದ್ರೂ ತೂಕ ಇಳಿಸಿಕೊಳ್ಳೋದು ತುಂಬಾ ಕಷ್ಟವಾಗಿ ಬಿಡುತ್ತೆ. ಇದಕ್ಕೆ ವೈಟ್‌ ಲಾಸ್‌ ಬಗ್ಗೆಯಿರುವ ಕೆಲವು ತಪ್ಪು ಕಲ್ಪನೆಗಳೇ ಕಾರಣ. ಅದು ಯಾವುದೆಲ್ಲಾ ತಿಳಿಯೋಣ.

ಊಟ ಸ್ಕಿಪ್ ಮಾಡುವುದರಿಂದ ತೂಕ ಕಡಿಮೆಯಾಗಲ್ಲ
ಹೆಚ್ಚಿನವರು ಊಟ ಸ್ಕಿಪ್ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ಅಂದುಕೊಂಡಿದ್ದಾರೆ. ಅದಕ್ಕಾಗಿ ಬ್ರೇಕ್‌ಫಾಸ್ಟ್‌, ಲಂಚ್‌, ಡಿನ್ನರ್ ಸ್ಕಿಪ್ ಮಾಡುವುದು ಮಾಡುತ್ತಾರೆ. ಆದರೆ ಇದು ನಿಜವಲ್ಲ. ಊಟ ಸ್ಕಿಪ್ ಮಾಡುವುದರಿಂದ ತೂಕ ಕಡಿಮೆಯಾಗುವುದಿಲ್ಲ. ಬದಲಿಗೆ ಬಾಡಿ ಅನ್‌ಹೆಲ್ದೀಯಾಗುತ್ತದೆ. ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಊಟ ಬಿಡೋ ಬದಲು ಮಾಡೋ ಊಟದ ಪ್ರಮಾಣವನ್ನು ಕಡಿಮೆ ಮಾಡೋ ಅಭ್ಯಾಸ ಒಳ್ಳೆಯದು.

Latest Videos

ದಿನಾ ಈ ಹಣ್ಣುಗಳನ್ನು ತಿಂದ್ರೆ ಬೆಲ್ಲಿ ಫ್ಯಾಟ್ ಈಝಿಯಾಗಿ ಕರಗುತ್ತೆ

ಸಪ್ಲಿಮೆಂಟ್‌ನಿಂದ ವೈಟ್ ಲಾಸ್‌ ಅಸಾಧ್ಯ
ತೂಕ ನಷ್ಟದ ಹೆಸರಿನಲ್ಲಿ ನಡೆಯೋ ಹಲವಾರು ಉದ್ಯಮಗಳಿವೆ. ವಿವಿಧ ಕಂಪನಿಗಳು ವೈಟ್‌ ಲಾಸ್‌ಗೆಂದೇ ಸಪ್ಲಿಮೆಂಟ್‌ಗಳನ್ನು ಪೂರೈಸುತ್ತವೆ. ಜನರು ಈ ಮಾರ್ಕೆಟಿಂಗ್ ತಂತ್ರಗಳನ್ನು ನಂಬಿ ಸಪ್ಲಿಮೆಂಟ್ಸ್‌ಗಳನ್ನು ಕೊಳ್ಳುತ್ತಾರೆ. ಕೆಲವು ಪೂರಕಗಳು ತೂಕ ನಷ್ಟದ ಮೇಲೆ ಸಾಧಾರಣ ಪರಿಣಾಮವನ್ನು ಬೀರುತ್ತವೆ. ಆದರೆ ಇದಲ್ಲದೆ ಸಪ್ಲಿಮೆಂಟ್ಸ್ ಆರೋಗ್ಯದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು.

ಕೇವಲ ವರ್ಕೌಟ್ ಮಾಡುವುದರಿಂದ ಸ್ಲಿಮ್ ಆಗಲ್ಲ
ಸರಿಯಾಗಿ ವರ್ಕೌಟ್ ಮಾಡಿದರೆ ಸಾಕು ತೂಕ ಇಳಿಸಿಕೊಳ್ಳೋದು ತುಂಬಾ ಈಝಿ ಅನ್ನೋ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಅತಿಯಾಗಿ ತಿನ್ನುತ್ತಲೇ, ವರ್ಕೌಟ್ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ವ್ಯಾಯಾಮವನ್ನು ಕ್ರಮವಾಗಿ ಅನುಸರಿಸುವ ಹಾಗೆಯೇ ಆಹಾರದಲ್ಲಿ ಪೋರ್ಷನ್ ಕಂಟ್ರೋಲ್ ಮಾಡುವುದು ಸಹ ತುಂಬಾ ಮುಖ್ಯವಾಗುತ್ತದೆ. 

ಬರೀ ಔಷಧಿಯಿಂದ ಆರೋಗ್ಯ ಸುಧಾರಣೆ ಸಾಧ್ಯವಿಲ್ಲ
ಯಾವುದೇ ಔಷಧಿ ಅಥವಾ ವೈದ್ಯರು ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡಲು ಸಾಧ್ಯವಿಲ್ಲ. ನಿಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ತಿನ್ನುವ ಆಹಾರಗಳು ಆರೋಗ್ಯಕರವಾಗಿರಬೇಕು. ವ್ಯಾಯಾಮ, ಯೋಗ ಮೊದಲಾದ ಉತ್ತಮ ಅಭ್ಯಾಸಗಳು ರೆಗ್ಯುಲರ್ ಆಗಿರಬೇಕು. ಸ್ಮೋಕಿಂಗ್‌, ಡ್ರಿಂಕಿಂಗ್ ಮೊದಲಾದ ಕೆಟ್ಟ ಅಭ್ಯಾಸಗಳನ್ನು ತಪ್ಪಿಸಬೇಕು.

ವರ್ಕೌಟ್ ಇಲ್ಲದೆ ಇದನ್ನು ತಿಂದು 15 ಕೆಜಿ ತೂಕ ಇಳಿಸಿದ ಬಿಲಿಯನೇರ್ ಮುಖೇಶ್ ಅಂಬಾನಿ

ಫಾಸ್ಟ್‌ಫುಡ್‌ ತೂಕ ಹೆಚ್ಚಳಕ್ಕೆ ಮುಖ್ಯ ಕಾರಣ
ತೆಳ್ಳಗೆ ಕಂಡವರು ಯಾರೂ ಆರೋಗ್ಯವಂತರಾಗಿರುವುದಿಲ್ಲ. ಕೆಟ್ಟದ್ದನ್ನು ತಿಂದರೆ ದೇಹವು ಕೆಟ್ಟ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಲ್ಲವನ್ನೂ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ದೇಹದ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಹೀಗಾಗಿ ಹೆಲ್ದೀ ಆಹಾರವನ್ನು ಹೆಚ್ಚು ತಿನ್ನಿ. ಫಾಸ್ಟ್‌ಫುಡ್‌ಗಳಿಂದ ಆದಷ್ಟು ದೂರವಿರಿ.

ಪ್ರತಿ ಗಂಟೆಗೆ ಸ್ವಲ್ಪ ತಿನ್ನುವುದು ಹೆಚ್ಚು ಆರೋಗ್ಯಕರ
ಹೆಚ್ಚು ಕ್ಯಾಲೋರಿಗಳ ಅಗತ್ಯವಿರುವವರು  ಒಮ್ಮೆಗೇ ಹೆಚ್ಚಿನ ಪ್ರಮಾಣದಲ್ಲಿ ಆಹಾರ ತಿನ್ನೋ ಬದಲು ಪ್ರತಿ ಗಂಟೆಗೆ ಸ್ಪಲ್ಪ ಪ್ರಮಾಣದ ಆಹಾರವನ್ನು ತಿನ್ನುವುದು ಉತ್ತಮ ಆಯ್ಕೆಯಾಗಿದೆ. ಕೆಲವು ಕಾಯಿಲೆಗಳಲ್ಲಿ, ವೈದ್ಯರು ಸಣ್ಣ ಪ್ರಮಾಣದಲ್ಲಿ ಮತ್ತು ದಿನಕ್ಕೆ ಹಲವಾರು ಬಾರಿ ತಿನ್ನಲು ಸಲಹೆ ನೀಡುತ್ತಾರೆ. ಆದರೆ ಈ ಅಭ್ಯಾಸ ಸಾಮಾನ್ಯ ವ್ಯಕ್ತಿಗೆ ಒಳ್ಳೆಯದಲ್ಲ. ನೀವು ದಿನಕ್ಕೆ ಎರಡು ಅಥವಾ ಮೂರು ಆರೋಗ್ಯಕರ ಆಹಾರವನ್ನು ಸೇವಿಸಿದರೆ ಸಾಕು.

click me!