ಬೇಸಿಗೆ ಕಾಲ ಪ್ರಾರಂಭವಾಗಿದೆ. ದೇಹವನ್ನು ಹೈಡ್ರೀಕರಿಸಿ ಇಟ್ಟುಕೊಳ್ಳಲು ಜನರು ಹೆಚ್ಚೆಚ್ಚು ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾರೆ. ಆದರೆ ಇದರಲ್ಲಿ ಹೆಚ್ಚಿನವರು ಕಲ್ಲಂಗಡಿ ಹಣ್ಣು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ತಿನ್ನೋ ಅಭ್ಯಾಸ ಹೊಂದಿದ್ದಾರೆ. ಆದರೆ ಇದು ಆರೋಗ್ಯಕ್ಕೆಷ್ಟು ಅಪಾಯಕಾರಿ ನಿಮ್ಗೆ ಗೊತ್ತಿದ್ಯಾ?
ಬೇಸಿಗೆ ಕಾಲ ಪ್ರಾರಂಭವಾಗಿದೆ. ಬಿಸಿಲ ಧಗೆಗೆ ಸುಸ್ತು, ಆಯಾಸ ಹೆಚ್ಚುತ್ತಿದೆ. ಹೆಚ್ಚಿದ ಬಿಸಿಲಿನ ತಾಪದಿಂದ ಕಾಡೋ ಆರೋಗ್ಯ ಸಮಸ್ಯೆಯಿಂದ ದೂರ ಇರೋಕೆ ದೇಹವನ್ನು ಹೈಡ್ರೇಟ್ ಮಾಡಿಟ್ಟುಕೊಳ್ಳುವುದು ಮುಖ್ಯವಾಗಿದೆ. ಸಾಕಷ್ಟು ನೀರು ಕುಡಿಯುವುದು ನಿಸ್ಸಂಶಯವಾಗಿ ದೇಹವನ್ನು ಹೈಡ್ರೀಕರಿಸಿಡಲು ಅತ್ಯುತ್ತಮ ಮಾರ್ಗವಾಗಿದೆ. ಹೀಗಾಗಿಯೇ ಬೇಸಿಗೆಯಲ್ಲಿ ಹೆಚ್ಚಿನವರು ನೀರಿನಂಶ ಹೆಚ್ಚಿನ ಪ್ರಮಾಣದಲ್ಲಿರುವ ರಸಭರಿತವಾದ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾರೆ.
ಈ ಹಣ್ಣು ನಮ್ಮ ದೇಹವನ್ನು ತಂಪಾಗಿರಿಸುತ್ತದೆ ಮತ್ತು ಇದು 92 ಪ್ರತಿಶತದಷ್ಟು ನೀರನ್ನು ಹೊಂದಿರುವುದರಿಂದ, ಇದು ನಮ್ಮ ದೇಹದಲ್ಲಿನ ನೀರಿನ ನಷ್ಟವನ್ನು ಪುನಃ ತುಂಬಿಸುತ್ತದೆ. ಇದರಿಂದಾಗಿ ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚು. ಕಲ್ಲಂಗಡಿಯಲ್ಲಿ ಲೈಕೋಪೀನ್, ಆ್ಯಂಟಿ ಆಕ್ಸಿಡೆಂಟ್‌ಗಳು, ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿವೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಈ ಹಣ್ಣು ತುಂಬಾ ಉಪಯುಕ್ತವಾಗಿದೆ. ಇದರಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇರುವುದರಿಂದ ಈ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ.
ಈ ಉರಿ ಬಿಸಿಲಿಗೆ ಎಸಿ ಬೇಕು ನಿಜ. ಆದರೆ ಬರೋ ರೋಗಗಳ ಬಗ್ಗೆಯೂ ಇರಲಿ ಸ್ವಲ್ಪ ಅರಿವು
ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್‌ನಲ್ಲಿಟ್ಟು ತಿಂದ್ರೆ ಏನಾಗುತ್ತೆ?
ಅನೇಕ ಜನರು ಕಲ್ಲಂಗಡಿ ಹಣ್ಣನ್ನು ಸೇವಿಸಲು ಇಷ್ಟಪಡುತ್ತಾರೆ. ಆದರೆ ಒಬ್ಬೊಬ್ಬರು ತಿನ್ನುವ ರೀತಿ ವಿಭಿನ್ನವಾಗಿರುತ್ತದೆ. ಕೆಲವೊಬ್ಬರು ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಹಾಗೆಯೇ ತಿನ್ನಲು ಇಷ್ಟಪಡುತ್ತಾರೆ. ಇನ್ನು ಕೆಲವರು ಜ್ಯೂಸ್ ರೂಪದಲ್ಲಿ ಸೇವಿಸಲು ಬಯಸುತ್ತಾರೆ. ತಾಜಾ ಕಲ್ಲಂಗಡಿ ಸಿಟ್ರುಲಿನ್ ಅನ್ನು ಹೊಂದಿರುತ್ತದೆ, ಇದು ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಸಹಾಯ ಮಾಡುವ ಅಗತ್ಯವಾದ ಅಮೈನೋ ಆಮ್ಲವಾಗಿದೆ. ಕಲ್ಲಂಗಡಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಆಹಾರಕ್ರಮದಲ್ಲಿರುವವರಿಗೆ ಪ್ರಯೋಜನಕಾರಿಯಾಗಿದೆ.
ಒಟ್ಟಾರೆಯಾಗಿ, ಹಣ್ಣಾಗಿ ಸೇವಿಸಿದರೂ ಅಥವಾ ಜ್ಯೂಸ್ ಆಗಿ ಸೇವಿಸಿದರೂ, ಕಲ್ಲಂಗಡಿ ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಒಬ್ಬರ ಆಹಾರಕ್ರಮಕ್ಕೆ ಪೌಷ್ಟಿಕಾಂಶದ ಸೇರ್ಪಡೆಯಾಗಿದೆ.
ಆದರೆ ಕಲ್ಲಂಗಡಿ ಹಣ್ಣಿನ ಸೇವನೆಯ ಸಮಯದಲ್ಲಿ ಪೌಷ್ಟಿಕಾಂಶದ ಮೌಲ್ಯವನ್ನು ಉಳಿಸಿಕೊಳ್ಳುವ ಬಗ್ಗೆ ಎಲ್ಲರಿಗೂ ತಿಳಿದಿರುವುದಿಲ್ಲ. ತಜ್ಞರ ಪ್ರಕಾರ, ಕಲ್ಲಂಗಡಿಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಾರದು. ಹೀಗೆ ಮಾಡುವುದರಿಂದ ಹಣ್ಣಿನಲ್ಲಿರುವ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ತನ್ನ ಅಧ್ಯಯನದಲ್ಲಿ, ಕೋಣೆಯ ಉಷ್ಣಾಂಶದಲ್ಲಿ ಇರಿಸಲಾದ ಕಲ್ಲಂಗಡಿ ಫ್ರಿಡ್ಜ್‌ನಲ್ಲಿ ಇಡುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ.
ಕರ್ಬೂಜ ಬೀಜದಲ್ಲೂ ಇಷ್ಟೆಲ್ಲಾ ಪವರ್ ಇದ್ಯಾ? ಇನ್ನಾದ್ರೂ ಎಸೆಯೋ ಮುನ್ನ ಯೋಚಿಸಿ
ಇದಲ್ಲದೆ, ಕತ್ತರಿಸಿದ ಕಲ್ಲಂಗಡಿ ಎಂದಿಗೂ ಫ್ರಿಜ್ ಒಳಗೆ ಇಡಬಾರದು ಏಕೆಂದರೆ ಅದು ಬ್ಯಾಕ್ಟೀರಿಯಾದ ಬೆಳವಣಿಗೆಯಾಗುವ ಸ್ಥಳವಾಗಿದೆ. ಆದ ಕಾರಣ ಕಲ್ಲಂಗಡಿ ಹಣ್ನನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡುವ ಬದಲು ಅದನ್ನು ಸ್ಮೂಥಿ ಅಥವಾ ಮಿಲ್ಕ್‌ಶೇಕ್ ರೂಪದಲ್ಲಿ ಸೇವಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.