ಹೆಚ್ಚು ನೀರಿರುವ ಎಳನೀರು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್​

By Vinutha Perla  |  First Published Apr 4, 2024, 10:47 AM IST

ಬೇಸಿಗೆಯ ಧಗೆ ಹೆಚ್ಚುತ್ತಿದೆ. ಸುಡುವ ಬಿಸಿಲಿನ ತಾಪಕ್ಕೆ ಎಷ್ಟು ನೀರು ಕುಡಿದರೂ, ಜ್ಯೂಸ್ ಹೀರಿದರೂ ಸಾಕಾಗುವುದಿಲ್ಲ. ಸಮ್ಮರ್ ಹೀಟ್ ಬೀಟ್ ಮಾಡೋಕೆ ಬಹುತೇಕರು ಮೊರೆ ಹೋಗೋದು ಎಳನೀರನ್ನು. ಆದ್ರೆ ಹೆಚ್ಚು ನೀರಿರೋ ಎಳನೀರನ್ನು ಆಯ್ಕೆ ಮಾಡೋದು ಹೇಗೆ ನಿಮ್ಗೆ ಗೊತ್ತಿದ್ಯಾ?


ಬೇಸಿಗೆಯ ಧಗೆ ಹೆಚ್ಚುತ್ತಿದೆ. ಸುಡುವ ಬಿಸಿಲಿನ ತಾಪಕ್ಕೆ ಎಷ್ಟು ನೀರು ಕುಡಿದರೂ, ಜ್ಯೂಸ್ ಹೀರಿದರೂ ಸಾಕಾಗುವುದಿಲ್ಲ. ಸಮ್ಮರ್ ಹೀಟ್ ಬೀಟ್ ಮಾಡೋಕೆ ಬಹುತೇಕರು ಮೊರೆ ಹೋಗೋದು ಎಳನೀರನ್ನು. ಆದ್ರೆ ಬಾಯಾರಿಕೆ ನೀಗಲಿ, ಆರೋಗ್ಯ ಚೆನ್ನಾಗಿರ್ಲಿ ಅಂತ ಎಳನೀರು ಕುಡಿಯೋಕೆ ಹೋದ್ರೆ ಪ್ರತಿಬಾರಿಯೂ ಕಡಿಮೆ ನೀರು ಇರೋ ಎಳನೀರೇ ಸಿಕ್ಕಿಬಿಡುತ್ತದೆ. ಒಂದೆಡೆ ಬಿಸಿಲ ಧಗೆಗೆ ಹೆಚ್ಚಾಗಿರುವ ಎಳನೀರಿನ ಬೆಲೆ, ಇದರ ಮೇಲೆ ಎಳನೀರು ತಗೊಂಡ್ರೂ ಒಳಗೆ ನೀರೇ ಇಲ್ಲದ ಪರಿಸ್ಥಿತಿ ಎಂಥವರಿಗೂ ನಿರಾಶೆ ತರಿಸದೆ ಇರದು. ಹಾಗಿದ್ರೆ ಹೆಚ್ಚು ನೀರಿರೋ ಎಳನೀರು ಆಯ್ಕೆ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್.

ಎಳನೀರು ಚೆನ್ನಾಗಿ ಅಲ್ಲಾಡಿಸಿ
ಖರೀದಿ ಮಾಡುವ ಮೊದಲು ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಅಲ್ಲಾಡಿಸಿ. ಅಲುಗಾಡುವ ಸಮಯದಲ್ಲಿ ನೀವು ಹೆಚ್ಚು ಶಬ್ದವನ್ನು ಗಮನಿಸಿದರೆ, ಅದು ಕಡಿಮೆ ನೀರಿನ ಅಂಶವನ್ನು ಸೂಚಿಸುತ್ತದೆ. ಕಡಿಮೆ ಶಬ್ದ ಬಂದರೆ ಎಳನೀರಲ್ಲಿ ಹೆಚ್ಚು ನೀರಿದೆ ಎಂದು ತಿಳಿದುಕೊಳ್ಳಬಹುದು.

Tap to resize

Latest Videos

ಕರ್ಬೂಜ ಬೀಜದಲ್ಲೂ ಇಷ್ಟೆಲ್ಲಾ ಪವರ್ ಇದ್ಯಾ? ಇನ್ನಾದ್ರೂ ಎಸೆಯೋ ಮುನ್ನ ಯೋಚಿಸಿ

ಗಾತ್ರವನ್ನು ಗಮನಿಸಿಕೊಳ್ಳಿ
ಸಣ್ಣ ಗಾತ್ರದ ತೆಂಗಿನಕಾಯಿ ಯಾವಾಗಲೂ ಸಿಲಿಂಡರ್ ಶೇಪ್‌ನಲ್ಲಿರುತ್ತದೆ. ಹೀಗಾಗಿ ಇದರೊಳಗಡೆ ಹೆಚ್ಚು ನೀರು ನಿಲ್ಲುತ್ತದೆ. ಹೀಗಾಗಿ ಯಾವಾಗಲೂ ದೊಡ್ಡ ಗಾತ್ರದ ಎಳನೀರನ್ನು ಆಯ್ಕೆ ಮಾಡದೆ ಸಣ್ಣ ಗಾತ್ರದ ಎಳನೀರನ್ನೇ ಆಯ್ಕೆ ಮಾಡಿಕೊಳ್ಳಿ.

ಹಸಿರು ಬಣ್ಣ
ಕೆಲವು ತೆಂಗಿನಕಾಯಿಗಳಲ್ಲಿ ಗಾಢ ಕಂದು ಬಣ್ಣದ ಚುಕ್ಕೆಗಳಿರುತ್ತದೆ. ಇಂಥವುಗಳು ಬಲಿತು ಎಳನೀರಿನ ಬದಲು ತೆಂಗಿನಕಾಯಿ ಆಗುವ ಹಂತದಲ್ಲಿದೆ ಎಂದರ್ಥ. ಈ ತೆಂಗಿನಕಾಯಿಗಳು ಕಡಿಮೆ ನೀರನ್ನು ಹೊಂದಿರುತ್ತವೆ, ಏಕೆಂದರೆ ಅವು ಪಕ್ವತೆಯ ಪ್ರಕ್ರಿಯೆಯಲ್ಲಿ ಮತ್ತಷ್ಟು ಮುಂದುವರೆದಿದೆ. ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊಂದಿರುವ ತೆಂಗಿನಕಾಯಿಗಳನ್ನು ಆಯ್ಕೆ ಮಾಡುವುದು ಉತ್ತಮ. ಏಕೆಂದರೆ ಅವುಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ.

ಬೇಸಿಗೆ ಧಗೆ ಅಂತ ವಿಪರೀತ ಎಳ್ನೀರು ಕುಡೀಬೇಡಿ, ಹೀಗೂ ಆಗಬಹುದು

ವೈಯಕ್ತಿಕ ಆಯ್ಕೆ
ಕೆಲವರು ಆಗಷ್ಟೇ ಕಟ್ ಮಾಡಿದ ಎಳನೀರನ್ನು ಖರೀದಿಸಲು ಬಯಸುತ್ತಾರೆ. ಈ ರೀತಿಯ ಎಳನೀರು ಸಾಮಾನ್ಯವಾಗಿ ಸ್ವಲ್ಪ ಸಿಹಿ ರುಚಿಯನ್ನು ನೀಡುತ್ತದೆ. ಆದಾಗ್ಯೂ, ಮೊದಲೇ ಒಡೆದು ಇಟ್ಟ ಎಳನೀರನಲ್ಲಿನ ನೀರಿಗೆ ಹೋಲಿಸಿದರೆ ಒಡೆಯದೆ ಇಟ್ಟಿರುವ ಎಳನೀರಿನಲ್ಲಿರುವ ನೀರಿನ ಪ್ರಮಾಣವು ಕಡಿಮೆ ಇರಬಹುದು ಎಂಬುದನ್ನು ಗಮನಿಸುವುದು ಮುಖ್ಯ. ಆದ್ದರಿಂದ, ನಿಮ್ಮ ಆದ್ಯತೆಗೆ ಅನುಗುಣವಾಗಿ ಖರೀದಿಸಲು ಸಲಹೆ ನೀಡಲಾಗುತ್ತದೆ.

ಎಳನೀರನ್ನು ಕತ್ತರಿಸಿದ ತಕ್ಷಣ ಕುಡಿಯಿರಿ
ಮತ್ತೊಂದು ಪ್ರಮುಖ ವಿಷಯವೆಂದರೆ, ಎಳನೀರನ್ನು ಯಾವಾಗಲೂ ಕಟ್ ಮಾಡಿದ ತಕ್ಷಣ ಕುಡಿಯಿರಿ. ಹೀಗೆ ಮಾಡುವುದರಿಂದ ನೀರಿನಲ್ಲಿ ಇರುವ ಎಲ್ಲಾ ಪೋಷಕಾಂಶಗಳು ಆರೋಗ್ಯಕ್ಕೆ ಸಿಗುತ್ತದೆ. ಆದರೆ ಅದರ ಬದಲಿಗೆ ಇದನ್ನು ತಡವಾಗಿ ಕುಡಿಯುವುದರಿಂದ ಎಳನೀರಿನಲ್ಲಿರುವ ಪೋಷಕಾಂಶಗಳ ನಷ್ಟವಾಗಬಹುದು.

click me!