Food Tips: ಹಸಿವಾಗುತ್ತೆ ಅಂತ ಆಗಾಗ ತಿನ್ಬೇಡಿ..ಊಟದ ಮಧ್ಯೆ ಇಷ್ಟು ಗಂಟೆ ಗ್ಯಾಪ್ ಇರ್ಲೇಬೇಕು

By Suvarna News  |  First Published Feb 1, 2022, 8:45 PM IST

ಹಸಿವಾಗುತ್ತೆ ಅಂತ ಆಗಾಗ ತಿನ್ತೀರಾ. ಹಾಗಿದ್ರೆ ಇಲ್ ಕೇಳಿ. ಹೀಗೆ ಒಂದು ಹೊತ್ತಿನ ನಂತರ ಆಹಾರ (Food)ದ ನಂತರ ಗ್ಯಾಪ್ (Gap) ಕೊಡದೆ ಮತ್ತೊಮ್ಮೆ ಊಟ, ತಿಂಡಿ ಮಾಡೋದು ಸಿಕ್ಕಾಪಟ್ಟೆ ಡೇಂಜರ್. ಬೆಳಗ್ಗಿನ ತಿಂಡಿ, ಮಧ್ಯಾಹ್ನ, ರಾತ್ರಿಯ ಊಟದ ಮಧ್ಯೆ ಎಷ್ಟು ಗಂಟೆ (Hour)ಗಳ ಅಂತರವಿರಬೇಕು ತಿಳ್ಕೊಳ್ಳಿ.
 


ಮನುಷ್ಯನಿಗೆ ಆರೋಗ್ಯ (Health) ಎಂಬುದು ಅತೀ ಮುಖ್ಯ. ಆರೋಗ್ಯವಾಗಿರಲು ಆಹಾರಪದ್ಧತಿ ಸಮರ್ಪಕವಾಗಿರಬೇಕು. ಸರಿಯಾದ ಸಮಯಕ್ಕೆ ಸರಿಯಾದ ಆಹಾರ (Food) ವನ್ನು ಸೇವಿಸುವುದರಿಂದ ಆರೋಗ್ಯ ಹದಗೆಡದಂತೆ ಕಾಪಾಡಬಹುದು. ಅದರಲ್ಲೂ ದಿನದ ಮೂರು ಹೊತ್ತು ಊಟ ಮಾಡುವಾಗ ಯಾವ ರೀತಿ ಸಮಯ ಪಾಲನೆ ಮಾಡಬೇಕು, ಊಟಗಳ ನಡುವೆ ಎಷ್ಟು ಗಂಟೆಗಳ ಅಂತರ (Gap)ವಿರಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ಸರಿಯಾಗಿ ಮತ್ತು ಸಮಯೋಚಿತವಾಗಿ ತಿನ್ನುವುದು ಏಕೆ ಅಗತ್ಯ ? 
ಪೌಷ್ಟಿಕತಜ್ಞ ಅಡೆಲ್ಲೆ ಡೇವಿಸ್ 1960ರ ದಶಕದಲ್ಲಿ ಆಹಾರದ ಬಗ್ಗೆ ಹೇಳಿರುವ ಈ ಮಾತು ಇಂದಿಗೂ ಜನಜನಿತವಾಗಿದೆ. ಉಪಾಹಾರ ರಾಜನಂತೆ ತಿನ್ನಿರಿ, ಮಧ್ಯಾಹ್ನದ ಊಟ ರಾಜಕುಮಾರನಂತೆ ಮತ್ತು ರಾತ್ರಿಯ ಊಟವನ್ನು ಬಡವನಂತೆ ಸೇವಿಸಿ. ಎಂಬ ಮಾತಿದೆ. ಇದರಂತೆ ಪ್ರತಿಯೊಬ್ಬರೂ ಈ ಪ್ರಮಾಣದಲ್ಲಿ ಆಹಾರ ಸೇವಿಸುವುದು ಮುಖ್ಯವಾಗಿದೆ. ದೇಹಕ್ಕೆ ಹೇಗೆ, ಯಾವಾಗ ಮತ್ತು ಏನು ಹೋಗುತ್ತದೆ ಎಂಬುದು ನಿಮ್ಮ ದೇಹದ ಆರೋಗ್ಯವನ್ನು ನಿರ್ಧರಿಸುತ್ತದೆ. ದೇಹಕ್ಕೆ ಆಹಾರದ ರೂಪದಲ್ಲಿ  ಶಕ್ತಿಯ ನಿರಂತರ ಪೂರೈಕೆಯ ಅಗತ್ಯವಿದೆ ಮತ್ತು ಈ ಪೂರೈಕೆಯು ಸಮರ್ಪಕವಾಗಿರಬೇಕು ಮತ್ತು ಸರಿಯಾದ ಮಾದರಿಯಲ್ಲಿರಬೇಕು. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯು ಆಹಾರಕ್ಕಾಗಿ ದಿನಚರಿಯನ್ನು ಹೊಂದಿರಬೇಕು.

Tap to resize

Latest Videos

undefined

Celebrity Food: ಬಾಲಿವುಡ್ ಟಾಪ್ ನಟಿಯರು ಬ್ರೇಕ್ ಫಾಸ್ಟ್‌ಗೆ ಏನು ತಿನ್ತಾರೆ ?

ಸರಿಯಾದ ಸಮಯದಲ್ಲಿ ಆಹಾರ ಸೇವಿಸುವ ಕ್ರಮ ಗ್ಲುಕೋಸ್ ಆಧಾರಿತವಾದ ಕೀಟೋನ್ ಆಧಾರಿತ ಶಕ್ತಿಗೆ ಚಯಾಪಚಯ ಸ್ವಿಚ್ ಅನ್ನು ಪ್ರಚೋದಿಸುತ್ತದೆ. ಒತ್ತಡ, ಕ್ಯಾನ್ಸರ್ ಸೇರಿದಂತೆ ರೋಗಗಳ ಸಂಭವವು ಕಡಿಮೆಯಾಗುತ್ತದೆ. ಮಾತ್ರವಲ್ಲ ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು ಸ್ಥೂಲಕಾಯದ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದಿಂದ ತಿಳಿದುಬಂದಿದೆ.

ಸಿರ್ಕಾಡಿಯನ್ ರಿದಮ್‌ನೊಂದಿಗೆ ಊಟದ ಸಮಯವನ್ನು ಹೊಂದಿಸಿ
ಸಿರ್ಕಾಡಿಯನ್ ರಿದಮ್ ಎಂಬುದು ವ್ಯಕ್ತಿಯ ನಿದ್ದೆ (Sleep) ಮತ್ತು ಎಚ್ಚರವಾಗಿರುವ ಸ್ಥಿತಿಯನ್ನು ನಿಯಂತ್ರಿಸುವ ಘಟಕವಾಗಿದೆ. ಇದು ಪ್ರತಿ 24 ಗಂಟೆಗಳಿಗೊಮ್ಮೆ ಪುನರಾವರ್ತನೆಯಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಸರ್ಕಾಡಿಯನ್ ಗಡಿಯಾರವು ವಿಭಿನ್ನವಾಗಿರುತ್ತದೆ. ನಿದ್ರೆ ಮತ್ತು ಎಚ್ಚರಗೊಳ್ಳುವ ಸಮಯದ ಮಾದರಿಯು ದೇಹದಲ್ಲಿನ ಆಂತರಿಕ ಪ್ರಕ್ರಿಯೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಿರ್ಧರಿಸುತ್ತದೆ. ಆದ್ದರಿಂದ ಒಬ್ಬರು ತಮ್ಮ ಸರ್ಕಾಡಿಯನ್ ಚಕ್ರದ ಪ್ರಕಾರ ಕಸ್ಟಮೈಸ್ ಮಾಡಿದ ಊಟದ ವೇಳಾಪಟ್ಟಿಯನ್ನು ಅನುಸರಿಸಬೇಕು.

Late Night Eating : ನಿಮಗೂ ಈ ಅಭ್ಯಾಸವಿದ್ರೆ ಇಂದೇ ಎಚ್ಚೆತ್ತುಕೊಳ್ಳಿ

ಉಪಾಹಾರ
ಬೆಳಗ್ಗೆ ಬೇಗನೇ ತಿಂಡಿ ತಿನ್ನುವ ಅಭ್ಯಾಸ ಯಾವಾಗಲೂ ಒಳ್ಳೆಯದು. ಉಪಾಹಾರ (Breakfast) ಮತ್ತು ರಾತ್ರಿಯ ಊಟದ ನಡುವೆ 12 ಗಂಟೆ ಅಂತರವಿರಬೇಕು. ಆದ್ದರಿಂದ, ನೀವು ಬೆಳಗ್ಗೆ 6 ಗಂಟೆಗೆ ಎದ್ದರೂ ಸಹ, ರಾತ್ರಿಯ ಊಟದ 12 ಗಂಟೆ ಕಳೆದ ನಂತರವೇ ಉಪಾಹಾರವನ್ನು ತೆಗೆದುಕೊಳ್ಳಿ. ಬೇಗ ಮಲಗುವುದು ಮತ್ತು ಬೇಗ ಏಳುವುದು ವ್ಯಕ್ತಿಯನ್ನು ಆರೋಗ್ಯವಂತ, ಮತ್ತು ಬುದ್ಧಿವಂತನನ್ನಾಗಿ ಮಾಡುತ್ತದೆ. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ದಿನದ ಮೊದಲ ಊಟವು ಸಹಜವಾಗಿ, ಪೌಷ್ಟಿಕಾಂಶವನ್ನು ಹೊಂದಿರಬೇಕು.

ಮಧ್ಯಾಹ್ನದ ಊಟ
ನಾವು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗ ವ್ಯವಸ್ಥೆಯು ಸುಮಾರು 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ, ಬೆಳಗಿನ ಉಪಾಹಾರದ ನಂತರ ಕನಿಷ್ಠ 4 ಗಂಟೆಗಳ ನಂತರ ಮಧ್ಯಾಹ್ನದ ಊಟವನ್ನು ಮಾಡಬೇಕು. ಅದಲ್ಲದೆ, ಬೆಳಗಿನ ಉಪಾಹಾರ ಮತ್ತು ಊಟದ ನಡುವಿನ ಅವಧಿಯನ್ನು ಹೆಚ್ಚಿಸದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಇದು ಆಮ್ಲೀಯತೆಗೆ ಕಾರಣವಾಗಬಹುದು.

ಭೋಜನ
ರಾತ್ರಿ 8 ಅಥವಾ 9 ಗಂಟೆಗೆಲ್ಲಾ ಊಟ ಮಾಡಿಬಿಡಬೇಕು. ಹೆಚ್ಚು ಸಮಯ ವಿಸ್ತರಿಸಬಾರದು. ಏಕೆಂದರೆ ಇದು ಮರುದಿನದ ಉಪಾಹಾರ ಸಮಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಆರೋಗ್ಯ ತಜ್ಞರು ಭೋಜನವನ್ನು ಲಘುವಾಗಿ ಮತ್ತು ಸರಳವಾಗಿಡಲು ಶಿಫಾರಸು ಮಾಡುತ್ತಾರೆ. ಇದು ಪ್ರತಿಯೊಬ್ಬ ವ್ಯಕ್ತಿಗೆ ಉಪಯುಕ್ತವಾಗಿದ್ದರೂ, ತೂಕ (Weight)ವನ್ನು ಕಳೆದುಕೊಳ್ಳುವ ಗುರಿಯನ್ನು ಹೊಂದಿರುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಮಧ್ಯ ಆಹಾರದ ಪ್ರಾಮುಖ್ಯತೆ
ಆಹಾರದ ನಡುವಿನ ಈ ಅಂತರವನ್ನು ಪಾಲಿಸಲು ಪ್ರತಿಯೊಬ್ಬರಿಗೂ ಸಾಧ್ಯವಾಗಬೇಕೆಂದಿಲ್ಲ. ಕೆಲವೊಬ್ಬರಿಗೆ ಬೇಗನೇ ಹಸಿವಾಗುತ್ತದೆ. ಊಟಕ್ಕೂ ಮೊದಲು ಏನಾದರೂ ತಿನ್ನಬೇಕಾಗುತ್ತದೆ. ಹೀಗಿದ್ದಾಗ ಸಮಯ (Time) ಆಗಿಲ್ಲವೆಂದು ಹಸಿವಿನಿಂದ ಇರಬೇಡಿ. ಇಂಥಹಾ ಸಂದರ್ಭದಲ್ಲಿ ಮೊಳಕೆ ಬರಿಸಿದ ಕಾಳುಗಳು, ಒಣ ಹಣ್ಣುಗಳನ್ನು ತಿನ್ನಬಹುದು.

click me!