ನೀವು ವರ್ಕೌಟ್ (Workout) ಮಾಡ್ತೀರಾ ? ಬೆಳಗ್ಗೇ ಎದ್ದು ವ್ಯಾಯಾಮ (Exercise) ಮಾಡಿ ಬಂದ್ ಬಿಟ್ರೆ ಮತ್ತೇನ್ ಪ್ರಾಬ್ಲಂ ಇಲ್ಲ ಅಂದ್ಕೊಂಡಿದ್ದೀರಾ ? ಹಾಗಿದ್ರೆ ಇಲ್ಲೇ ನೀವು ತಪ್ಪು ಮಾಡಿರೋದು. ವರ್ಕೌಟ್ ಮಾಡಿದ ಎಷ್ಟು ಗಂಟೆಯ ನಂತರ ಊಟ ಮಾಡಬೇಕು ? ವ್ಯಾಯಾಮ ನಂತರದ ಆರೋಗ್ಯ (Health) ಕರ ಊಟ ಯಾವುದು ಮೊದಲು ತಿಳ್ಕೊಳ್ಳಿ.
ಈಗಂತೂ ವರ್ಕೌಟ್ ಮಾಡದವರೇ ಇಲ್ಲ. ಕುಳಿತು ಮಾಡುವ ಕೆಲಸ, ಒತ್ತಡದ ಜೀವನಶೈಲಿಯಿಂದ ತೂಕ ಹೆಚ್ಚಳವೆಂಬುದು ಸಾರ್ವತ್ರಿಕ ಸಮಸ್ಯೆಯಾಗಿಬಿಟ್ಟಿದೆ. ಹೀಗಾಗಿ ಎಲ್ಲರೂ ಜಿಮ್ (Gym), ಯೋಗ, ಧ್ಯಾನ ಎಂದು ಹಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಷ್ಟಪಟ್ಟು ವರ್ಕೌಟ್ (Workout) ಮಾಡೋದೇನೋ ಸರಿ. ಆದರೆ, ಅದನ್ನು ಸರಿಯಾದ ರೀತಿಯಲ್ಲಿ ಮಾಡಿದಾಗ ಮಾತ್ರ ಪ್ರಯೋಜನ ಸಿಗಲು ಸಾಧ್ಯ. ಹಾಗೆಯೇ ವರ್ಕೌಟ್ ಮಾಡುವ ಮೊದಲು, ವರ್ಕೌಟ್ ಮಾಡಿದ ನಂತರ ಯಾವ ರೀತಿ ಆಹಾರ (Food) ಸೇವಿಸಬೇಕು ಎಂಬುದನ್ನು ಸಹ ಸರಿಯಾಗಿ ತಿಳಿದುಕೊಳ್ಳಬೇಕು. ಮಾತ್ರವಲ್ಲ ವರ್ಕೌಟ್ ಮಾಡಿ ಎಷ್ಟು ಗಂಟೆ ಹಸಿವಿನಿಂದ ಇರಬಹುದು ಎಂಬುದನ್ನು ಸಹ ತಿಳಿದುಕೊಳ್ಳುವುದು ಮುಖ್ಯ.
ವರ್ಕೌಟ್ ಮಾಡುವವರು ಆಹಾರದಲ್ಲಿ ಏನನ್ನು ಸೇರಿಸಬೇಕು, ಏನನ್ನು ಸೇವಿಸುವುದನ್ನು ತಪ್ಪಿಸಬೇಕು, ವರ್ಕೌಟ್ ಮಾಡಿದ ಎಷ್ಟು ಸಮಯದ ಮೊದಲು ಊಟ ಮಾಡಬೇಕು ಎಂಬುದರ ಬಗ್ಗೆ ಸೆಲೆಬ್ರಿಟಿ ಆಹಾರತಜ್ಞೆ ರುಜುತಾ ದಿವೇಕರ್ ಮಾಹಿತಿ ನೀಡಿದ್ದಾರೆ.
undefined
Health Tips: ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ?
ರುಜುತಾ ದಿವೇಕರ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ 12 ವಾರಗಳ ದೀರ್ಘ ಫಿಟ್‌ನೆಸ್ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ, ಅಲ್ಲಿ ಅವರು ಪ್ರತಿ ವಾರ ಹಲವಾರು ದೇಹದ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಮತ್ತು ಉತ್ತಮ ಮತ್ತು ಆರೋಗ್ಯಕರ ಜೀವನಶೈಲಿ (Lifestyle) ಯನ್ನು ಹೊಂದಲು ಅನುಸರಿಸಬೇಕಾದ ವ್ಯಾಯಾಮದ ದಿನಚರಿಗಳನ್ನು ಪ್ರದರ್ಶಿಸುತ್ತಾರೆ.
2020ರಲ್ಲಿ ಕೋವಿಡ್ ಸಾಂಕ್ರಾಮಿಕವು ಹರಡುವುದರೊಂದಿಗೆ ಮನುಷ್ಯನ ಜೀವನಶೈಲಿಯೇ ಸಂಪೂರ್ಣವಾಗಿ ಬದಲಾಯಿತು. ಜನರು ಹೆಚ್ಚು ಚಟುವಟಿಕೆಯಿಲ್ಲದೆ ಮನೆಯೊಳಗೇ ಬಂಧಿಯಾಗಬೇಕಾಯಿತು. ವಿದ್ಯಾರ್ಥಿಗಳು, ಉದ್ಯೋಗಿಗಳ ಬದುಕು ಮೊಬೈಲ್, ಲ್ಯಾಪ್‌ಟಾಪ್ ಇಷ್ಟಕ್ಕೆ ಸೀಮಿತವಾಯಿತು. ಮನೆಯಲ್ಲಿ ಕುರ್ಚಿಯ ಮೇಲೆ, ಲ್ಯಾಪ್‌ಟಾಪ್‌ನ ಮುಂದೆ ಕುಳಿತು ಕೈಕಾಲು ಕದಲದೆ ಕೆಲಸ ಮಾಡುವುದನ್ನು ಅನುಸರಿಸಬೇಕಾಯಿತು. ಇದರಿಂದ ಅತಿ ಹೆಚ್ಚು ತೊಂದರೆಗೊಳಗಾದುದು ದೇಹ. ಮನೆಯಿಂದ ಕಚೇರಿ, ಕಚೇರಿಯೆಂಬ ಚಟುವಟಿಕೆಯೇ ದೇಹಕ್ಕೆ ಇಲ್ಲವಾಯಿತು. ದೇಹ ಹೆಚ್ಚು ಆಲಸಿಯಾಯಿತು. ಹೀಗಾಗಿಯೇ ಹೆಚ್ಚಿನವರು ವರ್ಕೌಟ್, ಯೋಗಾಭ್ಯಾಸಗಳನ್ನು ಮಾಡುತ್ತಿದ್ದಾರೆ.
Exercise Tips: ಸಂಧಿನೋವಿದ್ಯಾ ? ವ್ಯಾಯಾಮ ಮಾಡುವಾಗ ಈ ತಪ್ಪು ಮಾಡ್ಲೇಬೇಡಿ
ರುಜುತಾ ದಿವೇಕರ್ ಇನ್‌ಸ್ಟಾಗ್ರಾಂ ಪ್ರೊಫೈಲ್ ಫಿಟ್‌ನೆಸ್ ಮತ್ತು ಆಹಾರದ ಮಾಹಿತಿಗೆ ಮೀಸಲಾಗಿರುತ್ತದೆ. ಅಲ್ಲಿ ಅವರು ತಮ್ಮ ಸ್ವಂತ ಫಿಟ್‌ನೆಸ್ (Fitness) ದಿನಚರಿಯಿಂದ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಸರಳವಾದ ವ್ಯಾಯಾಮದ ದಿನಚರಿಗಳೊಂದಿಗೆ ಬೆನ್ನು ನೋವನ್ನು ಹೇಗೆ ನಿಗ್ರಹಿಸುವುದು, ಆರೋಗ್ಯಕರ ದೇಹವನ್ನು ಹೊಂದಲು ಅನುಸರಿಸಬೇಕಾದ ಆಹಾರದ ಹೀಗೆ ಹಲವು ವಿಚಾರದ ಬಗ್ಗೆ ಮಾತನಾಡುತ್ತಾರೆ. ಇತ್ತೀಚಿಗಿನ ಪೋಸ್ಟ್‌ನಲ್ಲಿ ರುಜುತಾ, ವ್ಯಾಯಾಮದ ಮೊದಲು, ನಂತರದ ಊಟವನ್ನು ನಿರ್ಧರಿಸಲು ಅನುಸರಿಸಬೇಕಾದ ವಿಚಾರಗಳು ವಿವರಿಸಿದರು.
ವರ್ಕೌಟ್ ಮಾಡಿದ 20 ನಿಮಿಷಗಳಲ್ಲಿ ಪೌಷ್ಟಿಕಾಂಶ ಭರಿತ ಊಟವನ್ನು ಮಾಡುವುದು ಮುಖ್ಯ ಎಂದು ಸೆಲೆಬ್ರಿಟಿ ಆಹಾರತಜ್ಞೆ ರುಜುತಾ ದಿವೇಕರ್ ಬರೆದಿದ್ದಾರೆ. ತಾಜಾ ಹಣ್ಣುಗಳು, ತಿಂಡಿಗಳು ಅಥವಾ ಅಥವಾ ಪ್ರೋಟೀನ್‌ಯುಕ್ತ ಇತರ ಆಹಾರಗಳನ್ನು ಸಹ ಸೇವಿಸಬಹುದು. ವರ್ಕೌಟ್ ಮಾಡುವವರು ಊಟ ಮಾಡುವಾಗ 4 ರೂಲ್ಸ್‌ಗಳನ್ನು ನಿರ್ವಹಿಸಬೇಕು ಎಂದು ಅವರು ಹೇಳಿದರ. ಪುನರ್ಜಲೀಕರಣ, ಮರುಪೂರಣ, ದುರಸ್ತಿ ಮತ್ತು ಚೇತರಿಸಿಕೊಳ್ಳಲು. ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳುವುದಾಗಿದೆ. ವ್ಯಾಯಾಮದ ನಂತರ 30 ನಿಮಿಷಗಳಿಗಿಂತ ಹೆಚ್ಚು ಕಾಲ ಹಸಿವಿನಿಂದ ಇರಬಾರದು. ವರ್ಕೌಟ್ ಮಾಡಿದ 2 ಗಂಟೆಗಳ ವರೆಗೆ ಚಹಾ, ಕಾಫಿ ಮತ್ತು ಅಲ್ಕೋಹಾಲ್ (Alcohol) ಸೇವಿಸಬಾರದು ಎಂದು ರುಜುತಾ ತಿಳಿಸಿದ್ದಾರೆ.
ವ್ಯಾಯಾಮದ ನಂತರದ ಊಟವು ವ್ಯಾಯಾಮದ ಸಮಯದಲ್ಲಿ ಸ್ನಾಯುಗಳು ಅನುಭವಿಸುವ ಸೂಕ್ಷ್ಮ ಹಾನಿಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದು ಸ್ನಾಯುಗಳ ಗ್ಲೈಕೊಜೆನ್ ಮಳಿಗೆಗಳನ್ನು ಪುನಃ ತುಂಬಿಸಲು ಸಹಾಯ ಮಾಡುತ್ತದೆ. ವ್ಯಾಯಾಮದ ನಂತರದ ಊಟವು ವ್ಯಾಯಾಮದ ಸಮಯದಲ್ಲಿ ಉತ್ಪತ್ತಿಯಾಗುವ ಸ್ವತಂತ್ರ ರಾಡಿಕಲ್‌ಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸೆಲೆಬ್ರಿಟಿ ಆಹಾರತಜ್ಞೆ ಮಾಹಿತಿ ನೀಡಿದ್ದಾರೆ.