ಯಾವುದೇ ಆಹಾರ (Food)ವನ್ನು ತಯಾರಿಸಲು ಎಣ್ಣೆ (Oil)ಯನ್ನು ಮುಖ್ಯವಾಗಿ ಬಳಸಬೇಕಾಗುತ್ತದೆ. ಆದರೆ ಈ ರೀತಿ ಅತಿಯಾಗಿ ಎಣ್ಣೆಯನ್ನು ಬಳಸೋದ್ರಿಂದ ಆರೋಗ್ಯ (Health) ಹದಗೆಡುವ ಸಾಧ್ಯತೆನೂ ಹೆಚ್ಚು. ಹಾಗಿದ್ರೆ ಅಡುಗೆಯಲ್ಲಿ ಎಣ್ಣೆಯ ಬಳಕೆ ಕಡಿಮೆ ಮಾಡುವುದು ಹೇಗೆ ?
ಅಡುಗೆಮನೆ (Kitchen)ಯಲ್ಲಿ ಮುಖ್ಯವಾಗಿ ಬೇಕಾಗುವ ಪದಾರ್ಥಗಳಲ್ಲೊಂದು ಎಣ್ಣೆ (Oil). ಬಹುತೇಕ ಎಲ್ಲಾ ರೀತಿಯ ಆಹಾರಗಳನ್ನು ತಯಾರಿಸಲು ಎಣ್ಣೆಯ ಅಗತ್ಯವಿರುತ್ತದೆ. ಭಾರತೀಯ ಅಡುಗೆಯೆಂದರೆ ಆಹಾರ (Food)ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಮತ್ತು ಬೆಣ್ಣೆಯ ಜೊತೆಗೆ ಸಾಕಷ್ಟು ಮಸಾಲೆಗಳು ಮತ್ತು ಗಿಡಮೂಲಿಕೆಗಳನ್ನು ಸೇರಿಸುವುದು. ಭಾರತೀಯರ ಪ್ರಕಾರ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಯನ್ನು ಸೇರಿಸದಿದ್ದರೆ ಆಹಾರಗಳು ಉತ್ತಮ ರುಚಿಯನ್ನು ಪಡೆದುಕೊಳ್ಳುವುದಿಲ್ಲ ಎಂಬುದಾಗಿದೆ. ಹೀಗಾಗಿ ಹೆಚ್ಚಿನ ಆಹಾರ ಪದಾರ್ಥಗಳ ಮೇಲೆ ರೂಪುಗೊಂಡ ಎಣ್ಣೆಯ ಪದರವನ್ನು ನೋಡಬಹುದು.
ಆದರೆ ಅತಿಯಾದ ಎಣ್ಣೆಯಿದ್ದಾಗ ಆಹಾರಕ್ಕೆ ರುಚಿ ಹೆಚ್ಚೆನಿಸಿದರೂ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ ಅನ್ನೋದು ನಿಮಗೆ ಗೊತ್ತಿರಬಹುದು. ಯಾಕೆಂದರೆ ಇದು ಆಮ್ಲೀಯತೆ, ಅಜೀರ್ಣ, ಉಬ್ಬುವುದು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಉತ್ತಮ ಆರೋಗ್ಯಕ್ಕಾಗಿ ನೀವು ಆಹಾರದಲ್ಲಿ ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು. ನೀವು ಅನುಸರಿಸಬಹುದಾದ ಕೆಲವೊಂದು ಸಲಹೆಗಳು ಇಲ್ಲಿವೆ.
Food Tips: ಆಗಾಗ ಕಾಯಿಲೆ ಬೀಳ್ತಿದ್ದೀರಾ ? ಅಡುಗೆಗೆ ತೆಂಗಿನ ಎಣ್ಣೆ ಬಳಸಿ ನೋಡಿ
ಎಣ್ಣೆ, ಅಡುಗೆ ಮಾಡಲು ಅಗತ್ಯವಾದ ಪದಾರ್ಥ ಹೌದು. ಆದರೆ ಎಣ್ಣೆಯನ್ನು ಬಳಸದೆಯೂ ಅಡುಗೆ ಮಾಡಬಹುದು ಅಥವಾ ಕಡಿಮೆ ಎಣ್ಣೆಯನ್ನು ಬಳಸಿಯೂ ಅಡುಗೆ ಮಾಡಬಹುದಾಗಿದೆ. ಹಾಗಿದ್ರೆ ಅಡುಗೆಯಲ್ಲಿ ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡುವುದು ಹೇಗೆ. ಇಲ್ಲಿದೆ ಕೆಲವು ಸಲಹೆಗಳು.
ನಾನ್ ಸ್ಟಿಕ್ ಪ್ಯಾನ್‌ಗಳ ಬಳಕೆ
ಅಡುಗೆ ಮಾಡುವಾಗ ನಾನ್‌ಸ್ಟಿಕ್ ಪ್ಯಾನ್‌ಗಳು, ಪಾತ್ರೆಗಳ ಬಳಕೆ ನೀವು ಬಳಸುವ ಎಣ್ಣೆಯನ್ನು ಕಡಿಮೆ ಮಾಡಲು ಅನುಕೂಲಕರ ಮಾರ್ಗವಾಗಿದೆ. ನಾನ್ ಸ್ಟಿಕ್ ಪ್ಯಾನ್‌ಗೆ ಅತಿ ಕಡಿಮೆ ಪ್ರಮಾಣದಲ್ಲಿ ಎಣ್ಣೆ ಬಳಸಿದರೆ ಸಾಕಾಗುತ್ತದೆ. ಹೀಗಾಗಿ ಆಹಾರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಸೇರಿಕೊಳ್ಳುವ ಭಯವಿಲ್ಲ. ಅತ್ಯುತ್ತಮ ಗುಣಮಟ್ಟದ ಕುಕ್‌ವೇರ್‌ನ್ನು ಆಯ್ಕೆ ಮಾಡುವುದು ಮೊದಲಿಗೆ ದುಬಾರಿಯಾಗಬಹುದು.ಆದರೆ ನಾನ್ ಸ್ಟಿಕ್ ಪ್ಯಾನ್‌ಗಳ ಜೀವಿತಾವಧಿ ಮತ್ತು ಬಳಕೆಯು ನಿಮ್ಮ ಸಾಮಾನ್ಯ ಪಾತ್ರೆಗಳನ್ನು ಗಮನಾರ್ಹವಾಗಿ ಮೀರಿಸುತ್ತದೆ.
ಎಣ್ಣೆಯನ್ನು ಚಮಚದಿಂದ ಅಳೆದು ಹಾಕಿ
ಅಡುಗೆ ಮಾಡುವಾಗ ಹೆಚ್ಚಿನವರು ಹಲವು ಪದಾರ್ಥಗಳನ್ನು ಅಂದಾಜಿನ ವಿಷಯದಲ್ಲಿ ಹಾಕಿಕೊಳ್ಳುತ್ತಾರೆ. ಅಕ್ಕಿ, ಮಸಾಲೆಯನ್ನು ಹೀಗೆ ಹಾಕಿದರೂ ಸರಿ, ಆದರೆ ಎಣ್ಣೆಯ ವಿಷಯದಲ್ಲಿ ಈ ಅಂದಾಜನ್ನು ಅನುಸರಿಸಲು ಹೋಗಬೇಡಿ. ತೈಲದ ವಿಷಯಕ್ಕೆ ಬಂದಾಗ, ನಿಖರವಾದ ಪ್ರಮಾಣವನ್ನು ಬಳಸದಿರುವುದು ಆಹಾರಕ್ಕೆ ಹೆಚ್ಚು ಎಣ್ಣೆ ಸೇರ್ಪಡೆಯಾಗಲು ಕಾರಣವಾಗಬಹುದು. ಎಣ್ಣೆಯನ್ನು ಪಾತ್ರೆಗೆ ನೇರವಾಗಿ ಸುರಿಯುವುದರ ಬದಲು ಅಳತೆ ಚಮಚವನ್ನು ಬಳಸಿ ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ.
Kitchen Tips: ಅಡುಗೆಗೆ ಆವಕಾಡೊ ಎಣ್ಣೆ ಬಳಸಿ, ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ
ಆಹಾರವನ್ನು ಪ್ಯಾನ್ ಫ್ರೈ ಮಾಡಿ
ಆಹಾರವನ್ನು ಡೀಪ್ ಫ್ರೈ ಮಾಡುವಾಗ ಎಲ್ಲರೂ ಹೆಚ್ಚುವರಿ ಎಣ್ಣೆಯನ್ನು ಬಳಸುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ ಆಹಾರವನ್ನು ತಯಾರಿಸುವಾಗ ಯಾವಾಗಲೂ ಪ್ಯಾನ್ ಫ್ರೈ ಮಾಡಲು ಆಯ್ಕೆ ಮಾಡಿ. ಅಡುಗೆ ಪಾತ್ರೆಯ ಮೇಲೆ ಮುಚ್ಚಳವನ್ನು ಇರಿಸುವುದರಿಂದ ಇದಕ್ಕೆ ಕಡಿಮೆ ಎಣ್ಣೆ ಸಾಕಾಗುತ್ತದೆ. ಯಾಕೆಂದರೆ ತೇವಾಂಶವು ಆಹಾರವನ್ನು ವೇಗವಾಗಿ ಬೇಯಿಸಲು ಸಹಾಯ ಮಾಡುತ್ತದೆ.
ಸ್ಟೀಮ್ ಅಡುಗೆ
ಸ್ಟೀಮ್ ಅಡುಗೆ ತೈಲ ಬಳಕೆಯನ್ನು ಗಣನೀಯವಾಗಿ ಕಡಿತಗೊಳಿಸಬಹುದಾದ ಮತ್ತೊಂದು ತಂತ್ರವಾಗಿದೆ. ಸ್ಟೀಮ್ ಮಾಡುವುದು ಎಂದರೆ ಆಹಾರವನ್ನು ಉಗಿಯಲ್ಲಿ ಬೇಯಿಸುವುದಾಗಿದೆ. ಈ ರೀತಿಯಲ್ಲಿ ಆಹಾರ ತಯಾರಿಸಲು ಎಣ್ಣೆ ಬೇಕಾಗಿಲ್ಲ ಮತ್ತು ಈ ರೀತಿಯ ಪಾಕವಿಧಾನ ಆರೋಗ್ಯಕ್ಕೂ ಒಳ್ಳೆಯದು. ನಿರ್ದಿಷ್ಟ ಪಾಕವಿಧಾನಗಳನ್ನು ಭಾಗಶಃ ಸಮಯಕ್ಕೆ ಮುಂಚಿತವಾಗಿ ಬೇಯಿಸಬಹುದು ಮತ್ತು ನಂತರ ಒಲೆಯಲ್ಲಿ ಬೇಯಿಸಬಹುದು.
ಬೇಕಿಂಗ್
ಬೇಕಿಂಗ್ ಕಡಿಮೆ ಎಣ್ಣೆಯನ್ನು ಬಳಸುವ ಮತ್ತೊಂದು ಸರಳವಾದ ವಿಧಾನವಾಗಿದೆ. ನೀವು ಯಾವುದೇ ಗಟ್ಟಿಯಾದ ತರಕಾರಿಗಳನ್ನು ಬೇಯಿಸುತ್ತಿದ್ದರೆ, ನೀವು ಮೊದಲು ಅವುಗಳನ್ನು ಕುದಿಸಬಹುದು. ನಂತರ ಸ್ಪಲ್ಪ ಎಣ್ಣೆ, ಮಸಾಲೆಗಳನ್ನು ಸೇರಿಸಿ ಮತ್ತೊಮ್ಮೆ ಬೇಯಿಸಿಕೊಂಡು ಆಹಾರ ತಯಾರಿಸಿಕೊಳ್ಳಬಹುದು.