ಇವತ್ತಿನ ದಿನಗಳಲ್ಲಿ ಒತ್ತಡದ ಜೀವನಶೈಲಿ (Lifestyle),ಕಳಪೆ ಆಹಾರಪದ್ಧತಿಯಿಂದ ಅಧಿಕ ತೂಕ (Weight), ಬೊಜ್ಜು ಹಲವರಲ್ಲಿ ಕಂಡು ಬರುವ ಸಮಸ್ಯೆ. ತೂಕ ಇಳಿಸಿಕೊಳ್ಳೋಕೆ ಜಿಮ್, ಯೋಗ, ಡಯೆಟ್ (Diet) ಅಂತ ಏನೆಲ್ಲಾ ಸರ್ಕಸ್ ಮಾಡ್ತಾರೆ. ಆದ್ರೆ ಹಾಲು (Milk) ಕುಡ್ದು ಸಹ ತೂಕ ಇಳಿಸಿಕೊಳ್ಬೋದು ಅನ್ನೋದು ನಿಮ್ಗೊತ್ತಾ ?
ಹಾಲು (Milk) ಆರೋಗ್ಯ (Health) ಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯಬೇಕೆಂದು ವೈದ್ಯರು (Doctors) ಸಲಹೆ ನೀಡ್ತಾರೆ. ಹಾಲು ರೋಗ (Disease)ಗಳಿಂದ ನಮ್ಮನ್ನು ದೂರವಿಡುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ (Calcium), ಪ್ರೊಟೀನ್, ಮೆಗ್ನೀಸಿಯಮ್, ವಿಟಮಿನ್ ಎ, ಡಿ, ಇ ಇತ್ಯಾದಿ ಪೋಷಕಾಂಶಗಳು ಹೇರಳವಾಗಿದೆ. ಹೀಗಾಗಿಯೇ ಹಾಲನ್ನು ನಮ್ಮ ದಿನ ನಿತ್ಯದ ಆಹಾರಕ್ರಮದಲ್ಲಿ ಸೇರಿಸುವುದು ತುಂಬಾನೇ ಅವಶ್ಯಕ.
ಹಾಲು ಆರೋಗ್ಯಕ್ಕೆ ಅತ್ಯುತ್ತಮ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷ್ಯ, ಆದ್ರೆ ಜಸ್ಟ್ ಹಾಲು ಕುಡಿಯೋದ್ರಿಂದ ತೂಕ (Weight) ಇಳಿಸಿಕೊಳ್ಬೋದು ಅನ್ನೋದು ನಿಮಗೆ ತಿಳಿದಿದೆಯಾ. ಆ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ನಾವ್ ಹೇಳ್ತೀವಿ.
World Milk Day 2022: ಹಾಲಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು
ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಡೈರಿ ಉತ್ಪನ್ನಗಳನ್ನು ತ್ಯಜಿಸುವುದು ಸಾಮಾನ್ಯ ಸಲಹೆಗಳಲ್ಲಿ ಒಂದಾಗಿದೆ. ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳಿಂದ ತುಂಬಿರುವ ಹಾಲನ್ನು ಸಾಮಾನ್ಯವಾಗಿ ಸಂಪೂರ್ಣ ಆಹಾರ ಎಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ರಾತ್ರಿ ಭರ್ಜರಿಯಾಗಿ ಊಟ ಮಾಡುವ ಬದಲು, ಒಂದು ಲೋಟ ಹಾಲನ್ನು ಸೇವಿಸುವುದು ರಾತ್ರಿಯ ನಿದ್ರೆಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಇತ್ತೀಚಿಗೆ ಹೆಚ್ಚಿನ ಮಂದಿ ಬಾದಾಮಿ ಹಾಲು, ಸೋಯಾ ಹಾಲು ಸೇವನೆ ಮಾಡುತ್ತಿದ್ದಾರೆ. ಈ ಹಾಲಿನಲ್ಲಿ ಸ್ವಾಭಾವಿಕವಾಗಿ ಲ್ಯಾಕ್ಟೋಸ್ (ಸಕ್ಕರೆ) ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ.
ತೂಕ ನಷ್ಟಕ್ಕೆ ಹಾಲು ಮತ್ತು ಹಾಲಿನ ಆಹಾರ
ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಇತ್ತೀಚಿನ ವರದಿಯ ಪ್ರಕಾರ, ಹಾಲು ಸೇರಿದಂತೆ ಡೈರಿ ಉತ್ಪನ್ನಗಳು ನಿಮ್ಮ ತೂಕ ನಷ್ಟ ಪ್ರಯತ್ನಕ್ಕೆ ಸಹಾಯ ಮಾಡಬಹುದು ಎಂದು ಹೇಳಲಾಗಿದೆ. ಹೆಚ್ಚಿನ ಡೈರಿ ಕ್ಯಾಲ್ಸಿಯಂ ಸೇವನೆ ಮತ್ತು ಹೆಚ್ಚಿದ ವಿಟಮಿನ್ (Vitamin) ಡಿ ಎರಡೂ ಹೆಚ್ಚಿನ ಆಹಾರ-ಪ್ರೇರಿತ ತೂಕ ನಷ್ಟಕ್ಕೆ ಸಂಬಂಧಿಸಿವೆ ಎಂದು ಅಧ್ಯಯನವು ಸೂಚಿಸುತ್ತದೆ.
ಅಧ್ಯಯನದಲ್ಲಿ ತಿಳಿದು ಬಂದಿದ್ದೇನು ?
ಹೆಚ್ಚು ಡೈರಿ ಆಹಾರವನ್ನು ಸೇವಿಸದ ಮತ್ತು 2 ವರ್ಷಗಳಲ್ಲಿ ಕೇವಲ 3.1 ಕೆಜಿ ತೂಕ ಕಳೆದುಕೊಂಡವರಿಗೆ ಹೋಲಿಸಿದರೆ ದಿನಕ್ಕೆ ಹೆಚ್ಚು ಡೈರಿ ಸೇವಿಸುವ ಮಂದಿ ಆರು ತಿಂಗಳ ಕೊನೆಯಲ್ಲಿ ಸುಮಾರು 5.4 ಕೆಜಿ ಕಳೆದುಕೊಂಡಿದ್ದಾರೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.
ಹಸಿ ಹಾಲು ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ ?
ಹಾಲು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ
ಬೆಳಗಿನ ಉಪಾಹಾರ (Breakfast)ದೊಂದಿಗೆ ಒಂದು ಲೋಟ ಹಾಲನ್ನು ಕುಡಿಯುವಂತೆ ಪೋಷಕರು ಒತ್ತಾಯಿಸಲು ಕಾರಣವಿದೆ. ಈ ಅದ್ಭುತ ಪಾನೀಯವು ಪೆಪ್ಟೈಡ್ ವೈವೈ ಎಂದು ಕರೆಯಲ್ಪಡುವ ಹಾರ್ಮೋನ್ ಅನ್ನು ಹೊಂದಿರುತ್ತದೆ, ಇದು ಹಸಿವು-ಹೋರಾಟದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ದೀರ್ಘ ಕಾಲ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ. ಹೀಗಾಗಿ ಆಗಿಂದಾಗೆ ಜಂಕ್‌ಫುಡ್, ಹಾಳು ಮೂಳು ತಿನ್ನುವುದು ತಪ್ಪುತ್ತದೆ. ಹೀಗಾಗಿ ತೂಕ ಹೆಚ್ಚಾಗುವ ಭಯವಿಲ್ಲ.
ವ್ಯಾಯಾಮದ ನಂತರ ಕುಡಿಯಲು ಉತ್ತಮ
ಹಾಲು ಹೇರಳವಾಗಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಬಿ 2, ಬಿ 12 ಮತ್ತು ಹಲವಾರು ಇತರ ಪ್ರಮುಖ ಪೋಷಕಾಂಶಗಳಿಂದ ತುಂಬಿರುತ್ತದೆ. ಇದರರ್ಥ ವರ್ಕ್ ಔಟ್ (Workout) ಸೆಷನ್ ನಂತರ ಒಂದು ಲೋಟ ಹಾಲು ಅಗತ್ಯ ಶಕ್ತಿಯನ್ನು ನೀಡುತ್ತದೆ. ಇದು ನಿಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಬಲವಾಗಿಡಲು ಸಹ ಸಹಾಯ ಮಾಡುತ್ತದೆ.
ತೂಕವನ್ನು ಕಳೆದುಕೊಳ್ಳಲು ನೀವು ದಿನಕ್ಕೆ ಎಷ್ಟು ಹಾಲು ಕುಡಿಯಬೇಕು?
ಸುವಾಸನೆಯ ಹಾಲು ಉತ್ತಮ ರುಚಿಯನ್ನು ಹೊಂದಿರಬಹುದು ಆದರೆ ತೂಕವನ್ನು ಕಳೆದುಕೊಳ್ಳಲು ಇಂಥಾ ಹಾಲಿನ ಸೇವನೆ ಉತ್ತಮವಲ್ಲ. ಯಾಕೆಂದರೆ ಇದು ಹೆಚ್ಚಿನ ಕ್ಯಾಲೋರಿ (Calorie)ಗಳಿಂದ ತುಂಬಿರುತ್ತದೆ. ಹೀಗಾಗಿ ನೀವು ತೂಕ ಇಳಿಸಿಕೊಳ್ಳಲು ಬಯಸುವುದಾದರೆ, ಸಾಮಾನ್ಯ ಹಾಲನ್ನು ಕುಡಿಯುವುದು ಸೂಕ್ತವಾಗಿದೆ. ಒಂದು ಲೋಟ ಕೆನೆ ತೆಗೆದ ಹಾಲು ಕೇವಲ 83 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದ್ದರಿಂದ ನೀವು ದಿನದ ನಿಮ್ಮ ಕ್ಯಾಲೊರಿಗಳ ಅವಶ್ಯಕತೆಗಳಿಗೆ ಹಾಲನ್ನು ಕುಡಿಯಬಹುದು. ಮತ್ತು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಬಹುದು.