World Milk Day 2022: ಹಾಲಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು

Published : Jun 01, 2022, 11:20 AM ISTUpdated : Jun 01, 2022, 11:21 AM IST
World Milk Day 2022: ಹಾಲಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು

ಸಾರಾಂಶ

ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರೂ ಆರೋಗ್ಯ (Health) ಕ್ಕಾಗಿ ಹಾಲು (Milk) ಕುಡೀತಾರೆ. ಹಾಲಿನಿಂದ ತಯಾರಿಸಿದ ಸ್ವೀಟ್ಸ್‌ (Sweets)ಗಳನ್ನು ಬಾಯಿ ಚಪ್ಪರಿಸಿಕೊಂಡು ಸವೀತಾರೆ. ಆದ್ರೆ ಹಾಲಿನ ಮಹತ್ವ (Importance) ಸಾರಲೆಂದೇ ವರ್ಷದಲ್ಲೊಂದು ದಿನವಿದೆ ಅನ್ನೋದು ನಿಮ್ಗೆ ಗೊತ್ತಾ ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಹಾಲು (Milk) ಆರೋಗ್ಯಕ್ಕೆ (Health) ಅತ್ಯುತ್ತಮ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ, ಹೀಗಾಗಿಯೇ ಹಾಲನ್ನು ನಮ್ಮ ದಿನ ನಿತ್ಯದ ಆಹಾರಕ್ರಮದಲ್ಲಿ ಸೇರಿಸುವುದು ತುಂಬಾನೇ ಅವಶ್ಯಕ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು ಮಕ್ಕಳ (Children) ಬೆಳವಣಿಗೆಗೆ ಅವಶ್ಯಕವಾಗಿದೆ, ದೊಡ್ಡವರಲ್ಲಿ ಕ್ಯಾಲ್ಸಿಯಂ (Calcium) ಕೊರತೆ ನೀಗಿಸಲು ಹಾಲಿನ ಸೇವನೆ ಅವಶ್ಯಕವಾಗಿದೆ. ಹಸು, ಕುರಿ, ಎಮ್ಮೆ, ಆಡು, ಕತ್ತೆ ಹಾಲು ಈ ಎಲ್ಲಾ ಹಾಲುಗಳಲ್ಲಿ ತುಂಬಾನೇ ಪೋಷಕಾಂಶವಿದೆ.

ಆದರೆ ಹೆಚ್ಚಾಗಿ ಜನರು ಹಸುವಿನ ಹಾಲನ್ನು ಸೇವಿಸುತ್ತಾರೆ. ಇನ್ನು ಕತ್ತೆ ಹಾಲು ತಾಯಿಯ ಎದೆ ಹಾಲಿಗೆ ಪರ್ಯಾಯ ಎನ್ನುತ್ತಾರೆ. ಇದರರ್ಥ ಅದರಲ್ಲಿ ಅಷ್ಟೊಂದು ಪೋಷಕಾಂಶ ಇದೆ ಎಂಬುದಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರ ಪಾಲಿಗೂ ಹಾಲು ಆರೋಗ್ಯಕರವಾಗಿದೆ. ಆದರೆ ಹಾಲಿನ ಮಹತ್ವವನ್ನು ಸಾರಲು ಕೂಡಾ ಒಂದು ದಿನವಿದೆ ಅನ್ನೋದು ನಿಮ್ಗೆ ಗೊತ್ತಾ ?  ಹೌದು, ಜೂನ್‌ 1ನ್ನು ವಿಶ್ವ ಹಾಲಿನ ದಿನ (World Milk Day)ವನ್ನಾಗಿ ಆಚರಿಸಲಾಗುತ್ತದೆ. ಯಾವತ್ತಿನಿಂದ ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಈ ದಿನದ ವಿಶೇಷತೆಯೇನು ? ಮಹತ್ವವೇನು ಎಂಬುದನ್ನು ತಿಳಿದುಕೊಳ್ಳೋಣ. 

ಹಾಲು ಆರೋಗ್ಯಕ್ಕೆ ಒಳ್ಳೇದು ನಿಜ, ಆದ್ರೆ ಈ ಸಮಸ್ಯೆಯಿರುವವರು ಕುಡಿಲೇಬಾರ್ದು !

ವಿಶ್ವ ಹಾಲು ದಿನದ ಇತಿಹಾಸ
ವಿಶ್ವಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆ 2001ರಿಂದ ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳ ಪ್ರಯೋಜನಗಳ ಕುರಿತು ಜನರಿಗೆ ತಿಳಿಸಿ , ಡೈರಿ ಕೈಗಾರಿಕೆಯನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ, ಈ ದಿನವನ್ನು ಹಾಲು ಮತ್ತು ಡೈರಿ ಉತ್ಪನ್ನಗಳ ಪ್ರಯೋಜನಗಳನ್ನು ಪ್ರಚಾರ ಮಾಡುವ ಕಾರ್ಯಕ್ರಮಗಳು ಮತ್ತು ಅಭಿಯಾನಗಳೊಂದಿಗೆ ಆಚರಿಸಲಾಗುತ್ತದೆ, 

ವಿಶ್ವ ಹಾಲು ದಿನದ ಮಹತ್ವ
ಮನುಷ್ಯನ ಆರೋಗ್ಯಕ್ಕೆ ಹಾಲು ಮತ್ತು ಡೈರಿ ಉತ್ಪನ್ನಗಳು ಅತ್ಯುತ್ತಮವಾಗಿದೆ. ಹಾಲು ಮತ್ತು ಡೈರಿ ಉತ್ಪನ್ನಗಳು ಪೋಷಣೆಯ ಉತ್ತಮ ಮೂಲವಾಗಿದೆ, ಆದರೆ ಅವು ಪ್ರಪಂಚದಾದ್ಯಂತ ಸುಮಾರು ಒಂದು ಶತಕೋಟಿ ಜನರಿಗೆ ಆದಾಯದ ಮೂಲವಾಗಿದೆ. ವಿಶ್ವ ಹಾಲು ದಿನದ ಪ್ರಾಥಮಿಕ ಗುರಿ ನಮ್ಮ ಜೀವನದಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. 

ಜಗತ್ತಿನಾದ್ಯಂತ ಒಂದು ಶತಕೋಟಿಗೂ ಹೆಚ್ಚು ಜನರಿಗೆ ಜೀವನೋಪಾಯವನ್ನು ಒದಗಿಸಲು ಡೈರಿ ಉದ್ಯಮದ ಕೊಡುಗೆಯನ್ನು ಎತ್ತಿ ತೋರಿಸುತ್ತದೆ ಎಂದು ತಿಳಿದುಬಂದಿದೆ. ಜಾಗತಿಕ ಡೈರಿ ಮಾರುಕಟ್ಟೆಯು ಜಾಗತಿಕ ಆರ್ಥಿಕತೆಯ ನಿರ್ಣಾಯಕ ಅಂಶವಾಗಿದೆ ಮತ್ತು ಭಾರತೀಯ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತವು ಅತಿ ಹೆಚ್ಚು ಹಾಲು ಉತ್ಪಾದಕ ದೇಶಗಳಲ್ಲಿ ಒಂದಾಗಿದೆ.

ಎದೆಹಾಲಿನ ಆಭರಣ ಮಾರಿ ಈಕೆ ಸಂಪಾದಿಸ್ತಿರೋದು ಕೋಟಿ ಕೋಟಿ..!

ವಿಶ್ವ ಹಾಲು ದಿನ 2022ರ ಥೀಮ್
2022ರ ವಿಶ್ವ ಹಾಲು ದಿನಾಚರಣೆಯ ವಿಷಯವು ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಬಗ್ಗೆ ಪ್ರಪಂಚದ ಗಮನವನ್ನು ಸೆಳೆಯುವುದು ಮತ್ತು ಡೈರಿ ಉದ್ಯಮವು ಗ್ರಹದ ಮೇಲೆ ಅದರ ಪರಿಣಾಮವನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದಾಗಿದೆ. ಮುಂದಿನ 30 ವರ್ಷಗಳಲ್ಲಿ ಉದ್ಯಮದ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಮೂಲಕ 'ಡೈರಿ ನೆಟ್ ಶೂನ್ಯ' ಸಾಧಿಸುವತ್ತ ಗಮನ ಹರಿಸಲಾಗಿದೆ.

ಹಾಲು ರೋಗ (Disease) ದಿಂದ ನಮ್ಮನ್ನು ದೂರವಿಡುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ (Calcium), ಪ್ರೊಟೀನ್, ಮೆಗ್ನೀಸಿಯಮ್, ವಿಟಮಿನ್ ಎ, ಡಿ, ಇ ಇತ್ಯಾದಿ ಪೋಷಕಾಂಶಗಳು ಹೇರಳವಾಗಿದೆ. ನಿಯಮಿತವಾಗಿ ಹಾಲಿನ ಸೇವನೆ ಮೂಳೆ (Bone) ಗಳು ಮತ್ತು ಹಲ್ಲು (Tooth) ಗಳು ಗಟ್ಟಿಯಾಗಲು ಸಹಾಯ ಮಾಡುತ್ತದೆ. ತೂಕ ಇಳಿಕೆಗೂ ಹಾಲು ಸೇವನೆ ನೆರವಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
ನಿಂಬೆಯಿಂದ ಮೊಟ್ಟೆ ಸಿಪ್ಪೆ ತೆಗೆಯೋದು, ಎಣ್ಣೆ ರಹಿತ ಕ್ರಿಸ್ಪಿ ಪೂರಿ.. 2025ರಲ್ಲಿ ಜನ ಮೆಚ್ಚಿದ Food Hacks