ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ. ಯಾವ ಆಹಾರ ಎಷ್ಟು ಸೇವನೆ ಮಾಡ್ಬೇಕು ಎಂಬುದು ನಮಗೆ ತಿಳಿದಿರಬೇಕು. ಅತಿಯಾದ್ರೆ ಅದು ಆರೋಗ್ಯವನ್ನು ಹಾಳು ಮಾಡುತ್ತದೆ. ಅನ್ನ ಕೂಡ ಇದ್ರಲ್ಲಿ ಸೇರಿದೆ.
ಅನ್ನ ನಮ್ಮ ಜೀವನದ ಅತಿ ಮುಖ್ಯ ಆಹಾರದಲ್ಲಿ ಒಂದಾಗಿದೆ. ನಾವು ಅಕ್ಕಿಯಿಂದ ಅನೇಕ ವಿಧದ ಖಾದ್ಯಗಳನ್ನು ತಯಾರಿಸುತ್ತೇವೆ. ರೈಸ್ ಬಾತ್, ಬಿಳಿ ಅನ್ನ, ಪುಲಾವ್ ಸೇರಿದಂತೆ ಅನೇಕ ಆಹಾರದ ಜೊತೆ ಸಿಹಿ ತಿಂಡಿಗಳನ್ನು ಕೂಡ ನಾವು ತಯಾರಿಸುತ್ತೇವೆ. ಅನ್ನ ಪ್ರೇಮಿಗಳ ಸಂಖ್ಯೆ, ಭಾರತದಲ್ಲಿ ಅತಿ ಹೆಚ್ಚಿದೆ. ಪ್ರತಿ ದಿನ ಮೂರು ಹೊತ್ತು ಅನ್ನ ಸೇವನೆ ಮಾಡುವವರಿದ್ದಾರೆ. ಏನೇ ಆಹಾರ ತಿನ್ನಲಿ ಅನ್ನ ಸೇವನೆ ಮಾಡಿದ ಸಂತೋಷ ಸಿಗುವುದಿಲ್ಲ ಎನ್ನುವವರಿದ್ದಾರೆ. ಬೆಳಿಗ್ಗೆ ರೈಸ್ ಬಾತ್ ನಿಂದ ಶುರುವಾಗುವ ದಿನಚರಿ ರಾತ್ರಿ ಅನ್ನದಲ್ಲಿ ಮುಕ್ತಾಯವಾಗುತ್ತದೆ. ಅನ್ನ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಅತಿಯಾದ ಅನ್ನ ಸೇವನೆ ಆರೋಗ್ಯವನ್ನು ಹಾಳು ಮಾಡುತ್ತದೆ. ಅತಿಯಾಗಿ ಅನ್ನ ಸೇವಿಸಿದರೆ ಹಲವಾರು ರೋಗ ನಮ್ಮನ್ನು ಆವರಿಸುತ್ತದೆ.
ಅತಿಯಾಗಿ ಅನ್ನ (Rice) ತಿನ್ನುವುದರಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗುತ್ತದೆ. ಇದರಿಂದಾಗಿ ನಿದ್ರಾಹೀನತೆ (Insomnia) ಮತ್ತು ಆಲಸ್ಯ ಕಾಡುತ್ತದೆ. ಅನ್ನವನ್ನು ಅತಿಯಾಗಿ ತಿನ್ನುವುದ್ರಿಂದ ನಿಮ್ಮ ತೂಕ (Weight) ಕೂಡ ಹೆಚ್ಚಾಗುತ್ತದೆ. ಪ್ರತಿಯೊಬ್ಬರು ಅನ್ನ ಸೇವನೆ ಮಾಡುವುದಲ್ಲ ಎನ್ನುತ್ತಾರೆ ವೈದ್ಯರು. ಹೃದಯ, ಮಧುಮೇಹದಂತಹ ಹಲವಾರು ಕಾಯಿಲೆಗಳಿಂದ ಬಳಲುವ ಜನರು ಯಾವುದೇ ಕಾರಣಕ್ಕೂ ಅನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬಾರದು. ಒಂದು ತಿಂಗಳು ಅನ್ನದ ಸೇವನೆಯನ್ನು ಬಿಟ್ಟರೆ ಅದ್ರಿಂದ ಆಗುವ ಲಾಭವೇನು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ .
undefined
ಕಿಡ್ನಿ ಸ್ಟೋನ್‌ಗೆ ಬಿಯರ್ ಮದ್ದು, ಏನೀದರ ಅಸಲೀಯತ್ತು?
ಒಂದು ತಿಂಗಳು ನೀವು ಅನ್ನ ತ್ಯಜಿಸಿ ನೋಡಿ :
ದೇಹದಲ್ಲಿ ಸಕ್ಕರೆ ಮಟ್ಟದ ನಿಯಂತ್ರಣ : ನಾವು ಹೆಚ್ಚು ಕಾರ್ಬೋಹೈಡ್ರೇಟ್ ಸೇವನೆ ಮಾಡಿದಾಗ ಅದನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಕ್ಕರೆ ಅಗತ್ಯವಿರುತ್ತದೆ. ಆಗ ನಮ್ಮ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಂತೆ ಮಧುಮೇಹ ಸಮಸ್ಯೆ ಕಾಡುತ್ತದೆ. ಮಧುಮೇಹಿಗಳಿಗೆ ಸಮಸ್ಯೆ ಹೆಚ್ಚಾಗುತ್ತದೆ. ಇದಲ್ಲದೆ ಥೈರಾಯ್ಡ್ ಮತ್ತು ಪಿಸಿಒಡಿ ಇರುವವರಿಗೂ ಇದು ಒಳ್ಳೆಯದಲ್ಲ. ದೇಹದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರಬೇಕು ಅಂದ್ರೆ ಯಾವುದೇ ಖಾಯಿಲೆಯಿಂದ ಬಳಲುವ ಜನರು ಅಕ್ಕಿಯನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
ತೂಕ ನಿಯಂತ್ರಣಕ್ಕೆ ಮಾಡಿ ಈ ಕೆಲಸ : ತೂಕ ನಿಯಂತ್ರಣ ಈಗಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಜನರು ತೂಕ ಕಡಿಮೆ ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಆಹಾರದಲ್ಲೂ ಕಂಟ್ರೋಲ್ ಮಾಡುವುದು ಬಹಳ ಮುಖ್ಯವಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ತೇನೆ ಎನ್ನುವವರು ಒಂದು ತಿಂಗಳ ಕಾಲ ಅನ್ನವನ್ನು ಬಿಟ್ಟುಬಿಡಿ. ಕೆಲವೇ ದಿನಗಳಲ್ಲಿ ನಿಮಗೆ ವ್ಯತ್ಯಾಸ ತಿಳಿಯುತ್ತದೆ. ಅಕ್ಕಿ ವೇಗವಾಗಿ ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ. ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ಹೊಟ್ಟೆಯ ಕೊಬ್ಬು ಮತ್ತು ಬೊಜ್ಜು ಹೆಚ್ಚಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಬೇಕು ಅಂದ್ರೆ ಎಷ್ಟೇ ಇಷ್ಟವಿದ್ರೂ ಒಂದು ತಿಂಗಳು ಅನ್ನವನ್ನು ಬಿಟ್ಟು ನೋಡಿ.
ಬೇಕಾಬಿಟ್ಟಿ ಉಪ್ಪು ತಿನ್ನೋರ ಗಮನಕ್ಕೆ! ಆರೋಗ್ಯ ಹದಗೆಡಬಹುದು ಹುಷಾರು
ಈಗಿನಿಗಿಂತ ಹೆಚ್ಚು ಆಕ್ಟಿವ್ ಆಗಿರುತ್ತೆ ದೇಹ : ಅನ್ನ ಸೇವನೆ ಮಾಡುವುದ್ರಿಂದ ಆಲಸ್ಯ ಹೆಚ್ಚಾಗುತ್ತದೆ. ನಿದ್ರೆ ಹೆಚ್ಚಾಗಿ ಬರುತ್ತದೆ. ಇದ್ರಿಂದಾಗಿ ಕೆಲಸ ಮಾಡಲು ಆಸಕ್ತಿ ಇರೋದಿಲ್ಲ. ಆದ್ರೆ ಅನ್ನ ಸೇವನೆಯನ್ನು ಬಿಟ್ಟಲ್ಲಿ ನಿಮ್ಮ ದೇಹ ಮೊದಲಿಗಿಂತ ಸಕ್ರಿಯವಾಗುತ್ತದೆ. ಆಲಸ್ಯ ಕಡಿಮೆಯಾಗುತ್ತದೆ. ಕುಳಿತಲ್ಲಿ ನಿಂತಲ್ಲಿ ನಿದ್ರೆ ಬರುವುದಿಲ್ಲ. ಈ ಹಿಂದೆ ಅನುಭವಿಸಿರದಂತಹ ಅನೇಕ ಬದಲಾವಣೆಗಳನ್ನು ನೀವು ಕಾಣಬಹುದು. ದೇಹದ ಭಾರ ಕಡಿಮೆಯಾದಂತೆ ಭಾಸವಾಗುತ್ತದೆ. ಇದ್ರಿಂದ ನೀವು ಹೆಚ್ಚು ವ್ಯಾಯಾಮ ಮಾಡಬಹುದು. ನಿಮ್ಮ ಮೆದುಳು ಹೆಚ್ಚು ಆಕ್ಟಿವ್ ಆಗುವ ಕಾರಣ ವೇಗವಾಗಿ ನೀವು ಕೆಲಸ ಮಾಡುತ್ತೀರಿ.