ಕೆಸುವಿನ ಪತ್ರೊಡೆ ಯಾರಿಗಿಷ್ಟವಿಲ್ಲ ಹೇಳಿ? ಆರೋಗ್ಯಕ್ಕಿದು ಬೇಕು!

By Suvarna News  |  First Published Sep 23, 2023, 2:55 PM IST

ಕೆಸುವಿನ ಎಲೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕರ್ನಾಟಕದ ಕೆಲ ಭಾಗದಲ್ಲಿ ಮಾತ್ರ ಅದ್ರ ಬಳಕೆ ಹೆಚ್ಚಿದೆ. ಕೆಸುವಿನ ಎಲೆ ಪ್ರಯೋಜನ ತಿಳಿದ್ರೆ ನೀವೂ ಅದ್ರ ಸೇವನೆ ಶುರು ಮಾಡ್ತೀರಿ. ಬರೀ ರುಚಿ ಮಾತ್ರವಲ್ಲ ಆರೋಗ್ಯಕ್ಕೆ ಒಳ್ಳೆಯದು ಈ ಎಲೆ/
 


ಮಳೆಗಾಲದಲ್ಲಿ ಹಳ್ಳಿಗಳ ಮನೆಯಂಗಳದಲ್ಲಿ ಬೆಳೆಯುವ ಗಿಡಗಳಲ್ಲಿ ಕೆಸು ಕೂಡ ಸೇರಿದೆ. ಎಷ್ಟೇ ಮಳೆ ಬಿದ್ರೂ ಒಂದು ಹನಿಯೂ ಈ ಎಲೆ ಮೇಲೆ ನಿಲ್ಲೋದಿಲ್ಲ. ಇದನ್ನು ಕಸ ಅಂತಾ ಕಿತ್ತು ಎಸೆಯುವ ಬದಲು ಮಲೆನಾಡು, ಕೊಡಗು, ಮಂಗಳೂರಿನ ಜನರು ಇದನ್ನು ಅನೇಕ ರೀತಿಯಲ್ಲಿ ಬಳಸಿಕೊಳ್ತಾರೆ. ಇದ್ರಲ್ಲಿ ಕರಕಲಿ, ಪತ್ರೋಡೆ ಹೆಚ್ಚು ಪ್ರಸಿದ್ದಿ ಪಡೆದಿದೆ. ಮಳೆಗಾಲದಲ್ಲಿ ಕೆಸುವಿನ ಕರಕಲಿ ಮಲೆನಾಡಿಗರ ಅಚ್ಚುಮೆಚ್ಚಿನ ಪದಾರ್ಥ. ತರಕಾರಿ ಇಲ್ಲದ ಸಂದರ್ಭದಲ್ಲಿ ಇದೇ ಅಲ್ಲಿನವರಿಗೆ ಆಸರೆ. ಈಗಿನ ದಿನಗಳಲ್ಲಿ ಮೆಟ್ರೋ ಸಿಟಿಗಳಲ್ಲೂ ಇದು ಲಭ್ಯವಿದೆ. ಇದನ್ನು ಬರೀ ಎಲೆ ಅಂತಾ ಭಾವಿಸ್ಬೇಡಿ. ವರ್ಷಕ್ಕೆ ಒಂದೆರಡು ಬಾರಿಯಾದ್ರೂ ಇದ್ರ ಸೇವನೆ ಮಾಡಿ. ಇದ್ರಿಂದ ಅನೇಕ ಲಾಭವಿದೆ. ಕೆಲ ಅನಾರೋಗ್ಯಕ್ಕೆ ಇದು ಮದ್ದಿನಂತೆ ಕೆಲಸ ಮಾಡುತ್ತದೆ. ನಾವಿಂದು ಕಳೆಯಂತೆ ಎಲ್ಲಲ್ಲಿ ಬೆಳೆದು ನಿಲ್ಲುವ ಕೆಸುವಿನ ಪ್ರಯೋಜನ ಏನು ಎಂಬುದನ್ನು ಹೇಳ್ತೇವೆ.

ಕೆಸು (Arbi)ವಿನ ಪ್ರಯೋಜನ : 

Tap to resize

Latest Videos

ಕಣ್ಣಿನ ಆರೋಗ್ಯ : ಬೀಟಾ ಕ್ಯಾರೋಟಿನ್ (Beta Carotene) ಕೆಸುವಿನ ಎಲೆಗಳಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ವಯಸ್ಸಾದಂತೆ ಸಂಭವಿಸುವ ಕಣ್ಣಿನ ಸಂಬಂಧಿತ ಸಮಸ್ಯೆಗಳಿಂದ ರಕ್ಷಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.   

ರೊಟ್ಟಿ-ತುಪ್ಪ ಹಾಕಿ ತಿಂದ್ರೆ ತೂಕ ಹೆಚ್ಚಾಗುತ್ತಾ?

ಕೊಲೆಸ್ಟ್ರಾಲ್ (Cholesterol ) ನಿಯಂತ್ರಣ : ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆ ಪ್ರಕಾರ, ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ಕೆಸುವಿನ ಎಲೆಗಳು ಸಕಾರಾತ್ಮಕ ಪರಿಣಾಮ ಬೀರಿವೆ.  

ಹೃದಯದ ಆರೋಗ್ಯ ವೃದ್ಧಿ :  ಕೆಸುವಿನ ಎಲೆಗಳು ಹೃದಯವನ್ನು ಆರೋಗ್ಯವಾಗಿಡುವ ಕೆಲಸ ಮಾಡುತ್ತವೆ. ಇವು ಹೆಚ್ಚು ಫೈಬರ್ ಹೊಂದಿರುತ್ತವೆ.ಫೈಬರ್ ಭರಿತ ಆಹಾರವನ್ನು ಸೇವಿಸುವ ಮೂಲಕ ಹೃದ್ರೋಗದ ಅಪಾಯವನ್ನು ತಪ್ಪಿಸಬಹುದು.

ಒಂದೇ ಒಂದು ತಿಂಗಳು ಆಲೂಗಡ್ಡೆ ತಿನ್ನೋದು ಬಿಡಿ ಸಾಕು, ಆರೋಗ್ಯ ಹೇಗಾಗುತ್ತೆ ನೋಡಿ!

ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ :  ಕೆಸುವಿನ ಎಲೆ ರಕ್ತಹೀನತೆ ಸಮಸ್ಯೆಯಿಂದ ಬಳಲುವವರಿಗೆ ಒಳ್ಳೆಯ ಪರಿಣಾಮ ಬೀರುತ್ತದೆ. ಕೆಸುವಿನ ಎಲೆಯಲ್ಲಿ ಕಬ್ಬಿಣ ಸಮೃದ್ಧವಾಗಿವೆ. ರಕ್ತಹೀನತೆಯಿಂದ ಬಳಲುತ್ತಿರುವವರು ಇದ್ರ ಸೇವನೆ ಮಾಡಿದ್ರೆ  ರಕ್ತಹೀನತೆಯ ಲಕ್ಷಣಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬರುತ್ತದೆ.   

ಜೀರ್ಣಾಂಗ ವ್ಯವಸ್ಥೆ ಸುಧಾರಣೆ : ಜೀರ್ಣಾಂಗವ್ಯೂಹವನ್ನು ಆರೋಗ್ಯಕರವಾಗಿಡಲು ಕೆಸುವಿನ ಎಲೆ ಸಹಕಾರಿ. ಇದ್ರಲ್ಲಿ ಫೈಬರ್ ಹೇರಳವಾಗಿ ಲಭ್ಯವಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಫೈಬರ್ ಅಗತ್ಯ. ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.  

ತೂಕ ನಿಯಂತ್ರಣ : ಕೆಸು ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತವೆ. ಇದ್ರ ಸೇವನೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯ ಮೇಲೆ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಚರ್ಮದ ಆರೋಗ್ಯ : ತ್ವಚೆಗೆ ಸಂಬಂಧಿಸಿದ ಸಮಸ್ಯೆಗೂ ಇದು ಒಳ್ಳೆಯ ಮದ್ದು. ಇದು ವಿಟಮಿನ್ ಎ ಜೊತೆಗೆ ಬೀಟಾ-ಕ್ಯಾರೋಟಿನ್ ಮತ್ತು ಕ್ರಿಪ್ಟೋಕ್ಸಾಂಥಿನ್ ಎಂಬ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿಡುವಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಬಹುದು .

ಕೂದಲಿನ ಆರೋಗ್ಯ : ಕೆಸುವಿನ ಎಲೆಗಳು ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿ. ಆಂಟಿಫಂಗಲ್ ಸಮೃದ್ಧವಾದ ಕೆಸು, ತಲೆಹೊಟ್ಟು ನಿವಾರಣೆ ಮಾಡುತ್ತದೆ. 

ನೋವುವಿಗೆ ಪರಿಹಾರ : ಕೀಲು ನೋವಿನ ಸಮಸ್ಯೆ ಇದ್ದವರು ಕೆಸು  ಎಲೆಯ ಸೇವನೆ ಮಾಡುವುದು ಒಳ್ಳೆಯದು. ದೀರ್ಘಕಾಲದ ನೋವನ್ನು ನಿವಾರಿಸುವಲ್ಲಿ ಇವು ಪರಿಣಾಮಕಾರಿ ಎನ್ನಲಾಗಿದೆ.

ಕೆಸುವಿನ ಸೇವನೆ ಹೇಗೆ? : ಯಾವುದೇ ಕಾರಣಕ್ಕೂ ಕೆಸುವಿನ ಎಲೆಗಳನ್ನು ಹಸಿಯಾಗಿ ಸೇವನೆ ಮಾಡಬೇಡಿ. ಅದನ್ನು ಚೆನ್ನಾಗಿ ಬೇಯಿಸಿ ಸೇವನೆ ಮಾಡಬೇಕು. ಹಸಿ ಸೇವನೆ ಅಥವಾ ಬೇಯಿಸುವ ಸಂದರ್ಭದಲ್ಲಿ ಉಪ್ಪು ಮತ್ತು ಹುಳಿ ಹಾಕದೇ ಹೋದಲ್ಲಿ ಬಾಯಿ ತುರಿಕೆ ಕಾಣಿಸಿಕೊಳ್ಳುತ್ತದೆ. ಇದ್ರಿಂದ ಲಾಭಕ್ಕಿಂತ ನಷ್ಟ ಹೆಚ್ಚು. ಬಾಯಿಯಲ್ಲಿ ನೋವು ಅಥವಾ ನಾಲಿಗೆ ಮತ್ತು ತುಟಿಗಳ ಊತ, ಅತಿಯಾದ ಜೊಲ್ಲು, ವಾಂತಿ ಸಮಸ್ಯೆ ಕಾಡುವ ಅಪಾಯವಿದೆ.
 

click me!