ತೂಕ ಇಳಿಸೋಕೆ ವ್ಯಾಯಾಮದ ಜೊತೆ ಡಯಟ್ ಮುಖ್ಯ. ಶೇಕಡಾ 70ರಷ್ಟು ಡಯಟ್ ಇದ್ರೆ ಶೇಕಡಾ 30ರಷ್ಟು ವ್ಯಾಯಾಮ ಇರಬೇಕು. ಕೊಬ್ಬು ಕರಗಿಸಬೇಕು ಎನ್ನುವವರು ನೀವಾಗಿದ್ದರೆ ತಜ್ಞರ ಡಯಟ್ ಚಾರ್ಟ್ ಫಾಲೋ ಮಾಡಿ.
ತೂಕ ಹೆಚ್ಚಾಗ್ತಿದ್ದಂತೆ ಜನರ ಟೆನ್ಷನ್ ಜಾಸ್ತಿಯಾಗೋಕೆ ಶುರುವಾಗುತ್ತದೆ. ತೂಕ ಏರೋದು ತಿಳಿಯೋದೇ ಇಲ್ಲ ಆದ್ರೆ ತೂಕ ಇಳಿಸೋದು ಮಾತ್ರ ಏನೇ ಮಾಡಿದ್ರೂ ಸಾಧ್ಯವಾಗೋದಿಲ್ಲ. ಕೊಬ್ಬು ಕರಗಿಸಿಕೊಳ್ಳಲು ಜನರು ಸಿಕ್ಕಾಪಟ್ಟೆ ಪ್ರಯತ್ನ ಮಾಡ್ತಾರೆ. ವ್ಯಾಯಾಮ, ಡಯಟ್ ಅಂತಾ ತಲೆಕೆಡಿಸಿಕೊಳ್ತಾರೆ. ಕೆಲವರು ಊಟ ಬಿಟ್ಟು ತೂಕ ಇಳಿಸಿಕೊಳ್ಳಲು ಮುಂದಾದ್ರೆ ಮತ್ತೆ ಕೆಲವರು ವ್ಯಾಯಾಮ ಮಾಡಿ, ಬೆವರು ಹರಿಸಿ ಕೊಬ್ಬು ಕರಗಿಸಿಕೊಳ್ಳಲು ಮುಂದಾಗ್ತಾರೆ. ಇನ್ನು ಕೆಲವರು ತಿಂದುಂಡು, ವ್ಯಾಯಾಮ ಮಾಡಿ, ಕೊಬ್ಬು ಕರಗ್ತಿಲ್ಲ ಅಂತಾರೆ. ತಜ್ಞರ ಪ್ರಕಾರ, ಉಪವಾಸ ಮಾಡಿದ್ರೆ ಅಥವಾ ಸರಿಯಾಗಿ ತಿಂದು ವ್ಯಾಯಾಮ ಮಾಡಿದ್ರೆ ತೂಕ ಇಳಿಯೋದು ಕಷ್ಟ. ಬೇಗ ಸ್ಲಿಮ್ ಆಗ್ಬೇಕು, ಡಯಟ್ ಆರೋಗ್ಯವಾಗಿರಬೇಕು ಅಂದಾದ್ರೆ ನೀವು ಹೆಲ್ತಿ ಡಯಟ್ ಚಾರ್ಟ್ ಫಾಲೋ ಮಾಡಿ.
ಏಳು ದಿನ ಅಂದರೆ ಒಂದು ವಾರದಲ್ಲಿ ಸ್ಲಿಮ್ (Slim) ಟ್ರಿಮ್ ದೇಹವನ್ನು ಪಡೆಯಲು ನೀವು ಬಯಸಿದ್ರೆ ಕೆಳಗಿನ ಆಹಾರ (Food) ದ ಚಾರ್ಟ್ ಅನುಸರಿಸಿ. ಇದ್ರಿಂದ ತೂಕ (Weight) ಕಡಿಮೆಯಾಗುವ ಜೊತೆಗೆ ಆರೋಗ್ಯಕರ ಜೀವನ ನಿಮ್ಮದಾಗುತ್ತದೆ.
ಸಮ್ಮರ್ ವೆಕೇಷನ್‌ನಲ್ಲಿ ತೂಕ ಹೆಚ್ಚಾಗೋ ಭಯಾನ? ಈ ಹಾಲಿಡೇ ವರ್ಕೌಟ್ ಮಾಡಿ
ಏಳು ದಿನದ ಡಯಟ್ ಚಾರ್ಟ್ ಹೀಗಿರಲಿ :
ಬೆಳಗಿನ ಆರಂಭ : ವಾರದ ಏಳು ದಿನ ತಪ್ಪದೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ಜೇನುತುಪ್ಪದ ಜೊತೆ ಎಂದಿಗೂ ನಿಂಬೆ ರಸವನ್ನು ಸೇರಿಸಬೇಡಿ. ಬಿಸಿ ನೀರಿಗೆ ವಿಟಮಿನ್ ಸಿ ಹಾಕಿದ್ರೆ ಅದು ಆರೋಗ್ಯ ಹಾಳುಮಾಡುತ್ತದೆ. ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.
ಉಪಹಾರ ಹೀಗಿರಲಿ : ಬೆಳಗಿನ ಉಪಹಾರವನ್ನು ಎಂದೂ ತಪ್ಪಿಸಬಾರದು. ಪ್ರತಿ ದಿನ ಬೆಳಿಗ್ಗೆ ಆಹಾರ ಸೇವನೆ ಮಾಡ್ಬೇಕು. ಅದು ಲಘುವಾಗಿರಬೇಕು. ಬೆಳಗಿನ ಉಪಾಹಾರಕ್ಕೆ ಓಟ್ಸ್ ಅಥವಾ ಎರಡು ರೊಟ್ಟಿ ಮತ್ತು ಒಂದು ಬೌಲ್ ದಾಲ್ ಸೇವಿಸಿ. ನೀವು ಮೊಟ್ಟೆ, ಹಾಲನ್ನು ಕೂಡ ತಿನ್ನಬಹುದು. ಬೇಳೆಕಾಳುಗಳಲ್ಲಿ ಪ್ರೋಟೀನ್ ಉತ್ತಮ ಪ್ರಮಾಣದಲ್ಲಿ ಇರುವ ಕಾರಣ ನಿಮ್ಮ ಸ್ನಾಯುಗಳು ಬಲಗೊಳ್ಳುತ್ತವೆ.
ಉಪಹಾರ – ಊಟದ ಮಧ್ಯೆ ಏನು ತಿನ್ಬೇಕು? : ಬೆಳಗಿನ ಉಪಾಹಾರದ ಒಂದು ಗಂಟೆಯ ನಂತರ ನೀವು ಹಣ್ಣುಗಳನ್ನು ಸೇವನೆ ಮಾಡಬಹುದು. ಜ್ಯೂಸ್ ಕೂಡ ಕಡಿಯಬಹುದು. ಸೇಬು ಅಥವಾ ಬಾಳೆಹಣ್ಣನ್ನು ಸೇವನೆ ಮಾಡಿದ್ರೆ ಒಳ್ಳೆಯದು ಎನ್ನುತ್ತಾರೆ ತಜ್ಞರು.
ಮಧ್ಯಾಹ್ನದ ಊಟಕ್ಕೆ ಏನು ತಿನ್ನಬೇಕು? : ಮಧ್ಯಾಹ್ನ 2 ಗಂಟೆ ಮೊದಲು ಊಟ ಮಾಡುವುದು ಮುಖ್ಯವಾಗುತ್ತದೆ. ಕಂದು ಅಕ್ಕಿ, ಉದ್ದಿನಬೇಳೆ, ಹಸಿರು ತರಕಾರಿಗಳನ್ನು ಮಧ್ಯಾಹ್ನ ಊಟಕ್ಕೆ ಸೇವಿಸಬೇಕು. ಬ್ರೌನ್ ರೈಸ್ ಫೈಬರ್‌ನ ಉತ್ತಮ ಮೂಲವಾಗಿದೆ. ದೀರ್ಘಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಅಲ್ಲದೆ ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.
Lose Weight: ತೂಕ ಇಳಿಸ್ಬೇಕಾ? ಅನಾನಸ್ ಗ್ರೀನ್ ಟೀ ಟ್ರೈ ಮಾಡಿ
ತೂಕ ಇಳಿಕೆಗೆ ಮಹಿಳೆಯರು ಏನು ಮಾಡ್ಬೇಕು? : ಊಟವಾದ ಎರಡು ಗಂಟೆ ನಂತರ ಮಹಿಳೆಯರು ಮೊಳಕೆ ಬರಿಸಿದ ಕಾಳುಗಳನ್ನು ತಿನ್ನಬೇಕು. ಇದಕ್ಕೆ ನಿಂಬೆ ರಸವನ್ನು ಬೆರೆಸಿ ನೀವು ತಿನ್ನಬಹುದು. ಮೊಳಕೆ ಬಂದ ಕಾಳುಗಳು ತೂಕ ಇಳಿಸಲು ನೆರವಾಗುತ್ತದೆ. ಸ್ನಾಯುಗಳನ್ನು ಕೂಡ ಬಲಪಡಿಸುತ್ತದೆ.
ರಾತ್ರಿ ಊಟ ಹೀಗಿರಲಿ : ತೂಕ ಬೇಗ ಇಳಿಯಬೇಕು ಎನ್ನುವವರು ರಾತ್ರಿ ಕಡಿಮೆ ಆಹಾರವನ್ನು ಸೇವನೆ ಮಾಡ್ಬೇಕು. ಎರಡು ರೊಟ್ಟಿ, ಬೇಯಿಸಿದ ಉದ್ದಿನಬೇಳೆ, ಹಸಿರು ತರಕಾರಿ ಸೇವಿಸಬೇಕು. ಕೋಳಿ ಮತ್ತು ಮೊಟ್ಟೆ ಕೂಡ ತಿನ್ನಬಹುದು. ತಿಂದ ತಕ್ಷಣ ನೀವು ಮಲಗಬಾರದು. ರಾತ್ರಿ ಊಟ ಮಾಡಿದ ಎರಡು ಗಂಟೆ ನಂತ್ರ ನೀವು ಮಲಗಬೇಕು. ಊಟವಾದ ಒಂದು ಗಂಟೆ ನಂತ್ರ ಅರಿಶಿನದ ಹಾಲನ್ನು ನೀವು ಸೇವನೆ ಮಾಡಬೇಕು. ಇದ್ರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ದೇಹದ ತೂಕ ಕಡಿಮೆಯಾಗುತ್ತದೆ.