ಹೊರಗಡೆ ಜಿಟಿ ಜಿಟಿ ಮಳೆ (Rain). ಮನೆಯ ಒಳಗೆ ಚಳಿ ಚಳಿ. ಹೀಗಿದ್ದಾಗ ಬಿಸಿ ಬಿಸಿಯಾಗಿ ಸ್ನ್ಯಾಕ್ಸ್ (Snacks) ತಿನ್ನೋಕೆ ಯಾರ್ ತಾನೇ ಇಷ್ಟಪಡೋದಿಲ್ಲ ಹೇಳಿ. ಆದ್ರೆ ಕೆಲವರಿಗೆ ಮಾತ್ರ ಇಂಥಾ ಸ್ನ್ಯಾಕ್ಸ್ ತಿಂದ್ರೆ ತೂಕ (Weight) ಹೆಚ್ಚಾಗುತ್ತೆ ಅನ್ನೋ ಭಯ. ಆದ್ರೆ ಇಂಥಾ ಸ್ನ್ಯಾಕ್ಸ್ ತಿಂದ್ರೆ ತೂಕ ಹೆಚ್ಚಾಗೋ ಭಯಾನೇ ಇರಲ್ಲ ನೋಡಿ.
ಮಳೆಗಾಲ (Monsoon) ಶುರುವಾಗೇ ಬಿಡ್ತು. ಈಗೆಲ್ಲಾ ಸಂಜೆಯಾದ್ರೆ ಸಾಕು ಬಿಸಿಬಿಸಿಯಾಗಿ ಟೀ (Tea), ಜೊತೆಗೆ ಏನಾದ್ರೂ ಬಜ್ಜಿ, ಬೋಂಡ, ಪಕೋಡಾ (Pakoda) ತಿನ್ನೋಣ ಅನ್ಸುತ್ತೆ. ಬಿಸಿಯಾದ, ಹಬೆಯಾಡುವ ಪಕೋಡಗಳು ಮತ್ತು ಸಮೋಸಗಳನ್ನು ಚಹಾದ ಜೊತೆಗೆ ಆನಂದಿಸಲು ಮಳೆಗಾಲಕ್ಕಿಂತ ಉತ್ತಮವಾದ ಸಮಯವಿಲ್ಲ. ಆದರೆ ಇಂಥಾ ಕರಿಯಾದ ತಿಂಡಿಯನ್ನು ಅತಿಯಾಗಿ ತಿನ್ನುವುದು ಫಿಟ್ನೆಸ್ (Fitness) ಪ್ರಿಯರಿಗೆ ಇಷ್ಟವಾಗುವುದಿಲ್ಲ. ಯಾಕೆಂದರೆ ಇದು ತೂಕ (Weight) ಹೆಚ್ಚಳಕ್ಕೆ ಕಾರಣವಾಗುತ್ತೆ ಅನ್ನೋದು ಇಂಥವರ ಭಯ. ಆದ್ರೂ ತಿನ್ಬೇಕು ಅನ್ನೋ ಚಪಲ ಮಾತ್ರ ಕಡಿಮೆಯಾಗಲ್ಲ. ಹೀಗಾಗಿ ಮಳೆಗಾಲದಲ್ಲಿ ತಿನ್ನಬಹುದಾದ, ತೂಕ ಹೆಚ್ಚಿಸದ ಕೆಲವು ಆರೋಗ್ಯಕರ ತಿಂಡಿಗಳ (Snacks) ಮಾಹಿತಿ ಇಲ್ಲಿದೆ.
ಈ ಸಿಂಪಲ್ ಸ್ನ್ಯಾಕ್ಸ್‌ಗಳು ಮಳೆಯ ಸಮಯದಲ್ಲಿ ನಿಮ್ಮ ತಿನ್ನುವ ಕಡುಬಯಕೆಗಳನ್ನು ಪೂರೈಸುತ್ತದೆ. ಮಾತ್ರವಲ್ಲ ಇದು ನಿಮ್ಮ ಡಯೆಟ್‌ಗೂ ಯಾವುದೇ ರೀತಿ ತೊಂದರೆ ಉಂಟು ಮಾಡುವುದಿಲ್ಲ. ಹೀಗಾಗಿ ತೂಕ ಹೆಚ್ಚಾಗುವ ಭಯವಿಲ್ಲ. ಕೆಲವು ಆರೋಗ್ಯಕರ ಮತ್ತು ತೂಕ ನಷ್ಟ ಸ್ನ್ಯಾಕ್ಸ್ ಲಿಸ್ಟ್ ಇಲ್ಲಿದೆ.
undefined
ಮೂಂಗ್ ದಾಲ್ ಸಮೋಸಾ: ಮೂಂಗ್ ದಾಲ್ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಹೀಗಾಗಿ ಇದನ್ನು ಸೇರಿಸಿದ ಸಮೋಸಾ ಸೇವನೆ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಸಮೋಸಾಗಳಿಗೆ ಆಲೂಗಡ್ಡೆಗೆ ಇದು ಉತ್ತಮ ಪರ್ಯಾಯವಾಗಿದೆ.
ಮಳೆಗಾಲಕ್ಕೆ Best ಅನಿಸುವ ಸೂಪ್ ಪಟ್ಟಿ ಇಲ್ಲಿದೆ ನೋಡಿ
ಮಾಡುವ ವಿಧಾನ: ಸಮೋಸಾಕ್ಕಾಗಿ ಹಿಟ್ಟನ್ನು ತಯಾರಿಸಿಟ್ಟುಕೊಳ್ಳಿ. ಹಿಟ್ಟಿಗೆ ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ ಮತ್ತು ನೀರಿನಿಂದ ಬೆರೆಸಿಕೊಳ್ಳಿ. ಹಿಟ್ಟನ್ನು ಸ್ಪಲ್ಪ ಹೊತ್ತು ಹಾಗೆಯೇ ಬಿಡಿ. ಈ ಮಧ್ಯೆ ಮೂಂಗ್ ದಾಲ್ ಅಥವಾ ಉದ್ದಿನಬೇಳೆಯನ್ನು ರುಬ್ಬಿಕೊಂಡು ಹೂರಣವನ್ನು ತಯಾರಿಸಿ. 2 ಚಮಚ ಎಣ್ಣೆಯನ್ನು ಬಿಸಿ ಮಾಡಿ ಜೀರಿಗೆ ಮತ್ತು ಇಂಗು ಹಾಕಿ. ಅದು ಬಿಸಿಯಾದ ನಂತರ, ಚಮಚದೊಂದಿಗೆ ಬೆರೆಸಿ ದಾಲ್ ಅನ್ನು ಸೇರಿಸಿ ಮತ್ತು ಹುರಿದು ಮತ್ತು ಕೊನೆಯದಾಗಿ, ಎಲ್ಲಾ ಮಸಾಲೆಗಳನ್ನು ಸೇರಿಸಿ. ತಣ್ಣಗಾಗಲು ಮಿಶ್ರಣವನ್ನು ಪಕ್ಕಕ್ಕೆ ಬಿಡಿ. ಸಮೋಸಾವನ್ನು ತಯಾರಿಸಲು, ಹಿಟ್ಟನ್ನು ನಯವಾದ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಇದನ್ನು ಕೈಗಳಿಂದ ರೋಲ್ ಮಾಡಿ ಮತ್ತು 4 ಇಂಚಿನ ಸ್ವಲ್ಪ ಫ್ಲಾಟ್ ಡಿಸ್ಕ್ ಅನ್ನು ರಚಿಸಿ. 2 ಭಾಗಗಳಾಗಿ ಕತ್ತರಿಸಿ. ಒಂದು ಅರ್ಧವನ್ನು ತೆಗೆದುಕೊಳ್ಳಿ, ಅಂಚುಗಳನ್ನು ತೇವಗೊಳಿಸಿ, ಕೋನ್ ಆಕಾರವನ್ನು ರೂಪಿಸುವ ಮೂಲೆಗಳಿಂದ ಅಂಟಿಸಿಕೊಳ್ಳಿ. ಕೋನ್ ಅನ್ನು ಫಿಲ್ಲಿಂಗ್‌ಗಳೊಂದಿಗೆ ತುಂಬಿಸಿ ಮತ್ತು ಎರಡೂ ಮೂಲೆಗಳನ್ನು ನೀರಿನಿಂದ ಅಂಟಿಸಿ ಮತ್ತು ನಿಧಾನವಾಗಿ ಒತ್ತಿರಿ.
ಸಿಹಿ ಆಲೂಗಡ್ಡೆ ಪಕೋಡಾ: ಸಿಹಿ ಆಲೂಗಡ್ಡೆ ಫೈಬರ್ ಮತ್ತು ಇತರ ಹಲವಾರು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ತೂಕ ನಷ್ಟಕ್ಕೆ ಸ್ನೇಹಿಯಾಗಿದೆ ಮತ್ತು ಅನೇಕ ಇತರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಮಾಡುವ ವಿಧಾನ: ಸಿಹಿ ಗೆಣಸು ಅಥವಾ ಪಕೋಡವನ್ನು ತಯಾರಿಸಲು, ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ಸುಲಿದು ತುರಿದು ಈರುಳ್ಳಿ, ಉಪ್ಪು, ಕರಿಬೇವಿನ ಸೊಪ್ಪು, ಅರಿಶಿನ, ಕೆಂಪು ಮೆಣಸಿನ ಪುಡಿಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕಡಲೆಪುಡಿ ಸೇರಿಸಿ. ಹಿಟ್ಟು ದಪ್ಪವಾಗಲು ಸ್ವಲ್ಪ ನೀರು ಸೇರಿಸಿ. ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದರಲ್ಲಿ ಬೇಸನ್ ಮತ್ತು ಸಿಹಿ ಗೆಣಸು ಮಿಶ್ರಣದ ಸಣ್ಣ ಭಾಗವನ್ನು ಬಿಡಿ. ಇದನ್ನು ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಡೀಪ್ ಫ್ರೈ ಮಾಡಿ. ಇದನ್ನು ಸ್ವಲ್ಪ ಚಟ್ನಿ ಮತ್ತು ಚಹಾದೊಂದಿಗೆ ಸವಿಯಿರಿ.
Biriyani Recipe: ಬಾಯಲ್ಲಿ ನೀರೂರಿಸೋ ಬಿರಿಯಾನಿ ರೆಸಿಪಿ ಇಲ್ಲಿವೆ!
ಹುರಿದ ಕಡಲೆ: ಕಡಲೆಯು ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಅತ್ಯಂತ ಆರೋಗ್ಯಕರ ಮತ್ತು ತೂಕ ನಷ್ಟಕ್ಕೆ ಉತ್ತಮವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಮಾಡುವ ವಿಧಾನ: ಹುರಿದ ಕಡಲೆಯನ್ನು ವಿಶೇಷವಾಗಿ ಮಳೆಗಾಲದಲ್ಲಿ ತಯಾರಿಸಲು ತುಂಬಾ ಸುಲಭ . ಒ ಕಡಲೆಯನ್ನು ತೊಳೆದು ಒಣಗಿಸಿಟ್ಟುಕೊಳ್ಳಿ. ಸುಮಾರು 35-45 ನಿಮಿಷಗಳ ಕಾಲ ಹುರಿಯಿರಿ. ಬಿಸಿಯಾಗಿರುವಾಗಲೇ ನಿಮ್ಮ ನೆಚ್ಚಿನ ಮಸಾಲೆಗಳನ್ನು ಸೇರಿಸಿ ಸವಿಯಿರಿ.
ರಾಗಿ ಚಕ್ಕುಲಿ: ಚಕ್ಕುಲಿಯುವ ಹಲವಾರು ಪೋಷಕಾಂಶಗಳನ್ನು ಹೊಂದಿದೆ. ಫೈಬರ್ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ರಾಗಿ ಚಕ್ಕುಲಿಯ ಸೇವನೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ರಾಗಿಯು ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವನ್ನು ಒಳಗೊಂಡಿರುವ ಧಾನ್ಯವಾಗಿದ್ದು ಅದು ಒಬ್ಬರ ಹಸಿವನ್ನು ನಿಗ್ರಹಿಸುತ್ತದೆ ಮತ್ತು ಸಂಭವನೀಯ ತೂಕ ನಷ್ಟಕ್ಕೆ ಕಾರಣವಾಗುತ್ತದೆ.
ಸಾರು ಮಾಡೋ ರೆಸಿಪಿ ಹೇಳ್ಕೊಡೋ ಬಾಲ ಬಾಣಸಿಗ, ನೀವು ಕಲ್ತ್‌ಕೊಂಡ್ರಾ?
ಮಾಡುವ ವಿಧಾನ: ಸುಮಾರು 4-6 ನಿಮಿಷಗಳ ಕಾಲ ರಾಗಿಯನ್ನು ಹುರಿಯಿರಿ. ಇದನ್ನು ಪುಡಿ ಮಾಡಿಕೊಂಡು ಮೆಣಸಿನ ಪುಡಿ, ಉಪ್ಪು ಮತ್ತು ಜೀರಿಗೆ ಒಟ್ಟಿಗೆ ಮಿಶ್ರಣ ಮಾಡಿ. ಇದಕ್ಕೆ ಬೆಣ್ಣೆಯನ್ನು ಸೇರಿಸಿ ಮತ್ತು ನೀರನ್ನು ಬೆರೆಸಿ ಮೃದುವಾದ ಹಿಟ್ಟನ್ನು ರೂಪಿಸಿ. 10 ನಿಮಿಷಗಳ ಕಾಲ ಹಿಟ್ಟನ್ನು ಹಾಗೆಯೇ ಬಿಡಿ. ಹಿಟ್ಟನ್ನು 4-5 ಭಾಗಗಳಾಗಿ ವಿಂಗಡಿಸಿ ಮತ್ತು ಅದನ್ನು ಚಕ್ಲಿ ಮೇಕರ್‌ಗೆ ಸೇರಿಸಿ ಒತ್ತಿರಿ. ಇದನ್ನು ಬಿಸಿ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ರವರೆಗೆ ಡೀಪ್ ಫ್ರೈ ಮಾಡಿ. ಚಹಾ ಅಥವಾ ಕಾಫಿಯೊಂದಿಗೆ ಬಿಸಿಯಾಗಿ ತಿನ್ನಲು ಚೆನ್ನಾಗಿರುತ್ತದೆ.