ಮಳೆಗಾಲಕ್ಕೆ Best ಅನಿಸುವ ಸೂಪ್ ಪಟ್ಟಿ ಇಲ್ಲಿದೆ ನೋಡಿ

Published : Jul 05, 2022, 01:08 PM IST
ಮಳೆಗಾಲಕ್ಕೆ Best ಅನಿಸುವ ಸೂಪ್ ಪಟ್ಟಿ ಇಲ್ಲಿದೆ ನೋಡಿ

ಸಾರಾಂಶ

ಸೂಪ್‌ಗಳು ಸುವಾಸನೆಯುಕ್ತ ಹಾಗೂ ಟೇಸ್ಟಿಯಾಗಿರುವ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿವೆ. ಮಾನ್ಸೂನ್ ಋತುವಿಗೆ ಅತ್ಯುತ್ತಮವಾದ ಸೂಪ್ ರೆಸಿಪಿಗಳ ಪಟ್ಟಿಯನ್ನು ನಾವು ಇಲ್ಲಿ ಒದಗಿಸುತ್ತಿದ್ದೇವೆ ನೋಡಿ..

ಮಾನ್ಸೂನ್ ಪ್ರಾರಂಭವಾಗಿದೆ ಹೊರಗೆ ಮಳೆ (Rain) ಸುರಿತ್ತಿರುವಾಗ ನೀವು ಬೆಚ್ಚಗೆ ರುಚಿಕರವಾದ ಆಹಾರವನ್ನು ಸೇವಿಸಲು ಬಯಸುತ್ತೀರಲ್ಲವೆ, ಅಂತಹ ಆಹಾರಗಳು ಆರೋಗ್ಯವನ್ನು ಹಾಳು ಮಾಡುವ ಬದಲಾಗಿ ಆರೋಗ್ಯ ವೃದ್ಧಿಸುವಂತಹ ಕೆಲಸ ಮಾಡಿದರೆ ಅದು ಇನ್ನೂ ಉತ್ತಮ ಆಯ್ಕೆ. ಹಾಗಾಗಿ ಆರೋಗ್ಯ ಹಾಗೂ ರುಚಿಕರ ಈ ಎರಡೂ ಉದ್ದೇಶವನ್ನು ಪೂರೈಸಲು ನೀವು ಸೂಪ್‌ಗಳ (Soup) ಸಹಾಯವನ್ನು ಏಕೆ ತೆಗೆದುಕೊಳ್ಳಬಾರದು? ನೀವು ವಿಸ್ತಾರವಾದ ಊಟವನ್ನು ಬೇಯಿಸಲು ಬಯಸುವುದಿಲ್ಲ ಆದರೆ, ನಿಮ್ಮ ಆಹಾರದಲ್ಲಿ ಪೌಷ್ಟಿಕಾಂಶದ ಅಗತ್ಯವನ್ನು ಪೂರೈಸಬೇಕು ಎಂದಾದರೆ ಅದಕ್ಕೆ ಸೂಪ್‌ಗಳು ಉತ್ತಮವಾಗಿವೆ.

ಮಾನ್ಸೂನ್ ಋತುವಿಗಾಗಿ ರುಚಿಕರವಾದ (Tasty) ಸೂಪ್ ರೆಸಿಪಿಗಳು ಇಲ್ಲಿವೆ:

 ಕ್ಯಾರೆಟ್-ಶುಂಠಿ (Carrot  ginger) ಸೂಪ್

ಸೂಪ್ ಬೌಲ್‌ನಲ್ಲಿ ಆರಾಮವನ್ನು ಕಂಡುಕೊಳ್ಳುವ ಜನರು ಇದನ್ನು ಬಹಳ ಇಷ್ಟ ಪಡುವುದರಲ್ಲಿ ಅನುಮಾನವಿಲ್ಲ. ಇದು ಹಗುರವಾದ, ರುಚಿಕರವಾದ ಮತ್ತು ಮನೆಯಲ್ಲಿ ತಯಾರಿಸಲು ಸುಲಭವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಇದು ಪೌಷ್ಟಿಕ ಮತ್ತು ಆರೋಗ್ಯಕರವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಶುಂಠಿ ಮತ್ತು ಇತರ ಮಸಾಲೆ (Spices) ಪದಾರ್ಥಗಳ ಜೊತೆ ಬಹಳಷ್ಟು ಕ್ಯಾರೆಟ್ಗಳು ಮತ್ತು ತರಕಾರಿಗಳನ್ನು ಸೇರಿಸಿ ಸೂಪ್ ತಯಾರಿಸಿ ಅದರ ರುಚಿಯನ್ನು ಸವಿದು ನೋಡಿ.

ಇದನ್ನೂ ಓದಿ: ಮಳೆಯಲ್ಲಿ ಕರಿದ ತಿಂಡಿ ತಿನ್ನೋ ಮಜಾನೇ ಬೇರೆ, ಒಳ್ಳೇದಲ್ಲ ಆರೋಗ್ಯಕ್ಕೆ!

ಪಾಲಕ್‌ (Palak) ಸೂಪ್‌ 

ನೀವು ವಿವಿಧ ಪಾಲಾಕಿನ ಭಕ್ಷ್ಯಗಳನ್ನು ಸವಿದಿರುತ್ತೀರಿ. ಆದರೆ, ಲಘು ಭೋಜನವನ್ನು (Light Meal) ಆನಂದಿಸಲು ನೀವು ಬಯಸಿದರೆ, ಕಾಟೇಜ್ ಚೀಸ್‌ನೊಂದಿಗೆ ಮಸಾಲೆಯುಕ್ತ ಪಾಲಕ ಸೂಪ್‌ನ ಮೊರೆ ಹೋಗುವುದು ಉತ್ತಮ ಎಂಬ ಸಲಹೆ ನೀಡುತ್ತೇವೆ. ಈ ಉತ್ತಮ ಹಳೆಯ ಪಾಲಕ ಸೂಪ್ ನಿಮ್ಮ ದೇಹಕ್ಕೆ ಪೌಷ್ಟಿಕಾಂಶದ ವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆ.

 ಮಿಶ್ರ ತರಕಾರಿ (Mixed vegetable) ಸೂಪ್

ನಿಮ್ಮ ದೇಹವು ಶೀತ (Cold), ಕೆಮ್ಮು ಮತ್ತು ಜ್ವರ ಹೀಗೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಮಾನ್ಸೂನ್‌ನ ಸಂದರ್ಭದಲ್ಲಿ ಎದುರಿಸಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಬಲವಾದ ರೋಗನಿರೋಧಕ (Immunity) ಶಕ್ತಿಯನ್ನು ನಿರ್ಮಿಸುವುದು. ಈ ಟೇಸ್ಟಿಯಾಗಿರುವ ಮಿಶ್ರ ತರಕಾರಿಯ ಸೂಪ್ ಅನ್ನು ಹಲವಾರು ಆರೋಗ್ಯಕರ ತರಕಾರಿಗಳೊಂದಿಗೆ ಬೇಯಿಸಿ ತಯಾರಿಸಲಾಗುತ್ತದೆ.

ಮೆಕ್ಸಿಕನ್ (Mexican) ಸೂಪ್

ನೀವು ವಿಲಕ್ಷಣ (Exotic) ಸೂಪ್ ಪಾಕವಿಧಾನವನ್ನು ಪ್ರಯತ್ನಿಸಲು ಸಿದ್ಧರಿದ್ದೀರಾ? ಹೌದು ಎಂದಾದರೆ, ಈ ಖಾದ್ಯವನ್ನು ಪ್ರಯತ್ನಿಸಿ. ಮೆಕ್ಸಿಕನ್ ಸೂಪ್ ಕಡಲೆ, ಕಿಡ್ನಿ ಬೀನ್ಸ್ ಮತ್ತು ಸಾಕಷ್ಟು ತರಕಾರಿಗಳೊಂದಿಗೆ ತಯಾರಿಸಿದ ಒಂದು ರುಚಿಕರವಾದ ಸಾರು. ಇದು ತಯಾರಾಗಲು ಇದು ಕೇವಲ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನೀವು ಇದನ್ನು ಮನೆಯಲ್ಲಿಯೇ ಪ್ರಯತ್ನಿಸಬಹುದು ಮತ್ತು ನಿಮ್ಮ ಕುಟುಂಬದ ಸದಸ್ಯರ (Family members) ಜೊತೆ ರುಚಿ ಸವಿಯಬಹುದು.

ಇದನ್ನೂ ಓದಿ: ಬೆಳ್ಳಿ ತಟ್ಟೆಯಲ್ಲಿ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ!

ಟೊಮೆಟೊ (Tomato) ಸೂಪ್

ಟೊಮೆಟೊ ಸೂಪ್ ಪ್ರತಿಯೊಂದು ಮನೆಯಲ್ಲೂ ಅತ್ಯಂತ ಆದ್ಯತೆಯ (Preffered) ಸೂಪ್‌ಗಳಲ್ಲಿ ಒಂದಾಗಿದೆ. ಇದು ಉತ್ತಮವಾದ, ಅಡುಗೆ ಮಾಡಲು ಸುಲಭವಾದ ಪಾಕವಿಧಾನವಾಗಿದೆ. ಇದು ಕೂಡ ಮಳೆಗಾಲಕ್ಕೆ ಹೇಳಿ ಮಾಡಿಸಿದಂತೆ ಇರುವ ಆಯ್ಕೆ.

 ಚಿಕನ್ ತರಕಾರಿ (Chicken vegitable) ಸೂಪ್

 ಚಿಕನ್ ಇಷ್ಟಪಡುವ ಜನರಿಗೆ ಮಾನ್ಸೂನ್‌ನಲ್ಲಿ ಚಿಕನ್ ಅನ್ನು ಆನಂದಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. ಹೊರಗೆ ಮಳೆ ಬೀಳುತ್ತಿದೆ ಮತ್ತು ನೀವು ಈ ಹಸಿವನ್ನುಂಟುಮಾಡುವ (Hunger) ಚಿಕನ್ ತರಕಾರಿ ಸೂಪ್ ಅನ್ನು ತಿನ್ನುತ್ತಿದ್ದೀರಿ ಎಂದರೆ ಅದರ ಮಜವೇ ಬೇರೆ ಅಲ್ಲವೇ. ಅಂದಮೇಲೆ ಇದನ್ನು ಒಮ್ಮೆ ಮಿಸ್ (Miss) ಮಾಡದೆಯೇ ಟ್ರೈ ಮಾಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?