ವಾರೆವ್ಹಾ..ಇದು ಮೌಂಟೇನ್ ಡ್ಯೂ ಜಿಲೇಬಿ, ಹಸಿರು ಬಣ್ಣದ ಸ್ವೀಟ್‌ ಫೋಟೋ ವೈರಲ್‌

Published : Jul 14, 2023, 03:53 PM IST
ವಾರೆವ್ಹಾ..ಇದು ಮೌಂಟೇನ್ ಡ್ಯೂ ಜಿಲೇಬಿ, ಹಸಿರು ಬಣ್ಣದ ಸ್ವೀಟ್‌ ಫೋಟೋ ವೈರಲ್‌

ಸಾರಾಂಶ

ಜಿಲೇಬಿ ಎಂದ ತಕ್ಷಣ ನಿಮ್ಮ ನೆನಪಿಗೆ ಬರೋದು ಯಾವುದು? ಸಕ್ಕರೆ ಪಾಕದಲ್ಲಿ ಅದ್ದಿ ಕಿತ್ತಳೆ ಬಣ್ಣದಲ್ಲಿರುವ ಸಿಹಿ ತಿಂಡಿ ಅಲ್ವಾ? ಆದರೆ, ಜಿಲೇಬಿ ಹಸಿರು ಬನ್ಣದಲ್ಲಿದ್ದರೆ ಹೇಗಿರಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇಲ್ಲಾಂದ್ರೆ ಇಲ್ಲಿದೆ ನೋಡಿ, ಮೌಂಟೇನ್‌ ಡ್ಯೂ ಜಿಲೇಬಿ ಎಲ್ಲೆಡೆ ವೈರಲ್ ಆಗ್ತಿದೆ.

ಭಾರತದಲ್ಲಿ ಯಾವುದೇ ಮದ್ವೆ ಸಮಾರಂಭವಿರಲಿ ಅಥವಾ ಹಬ್ಬ-ಹರಿದಿನವಿರಲಿ ಅಲ್ಲಿ ಜಿಲೇಬಿಗೆ ಪ್ರಮುಖ ಸ್ಥಾನವಿದೆ. ಸಕ್ಕರೆಪಾಕದಲ್ಲಿ ಅದ್ದಿದ ಈ ಸಿಹಿತಂಡಿ ಹಲವರಿಗೆ ಅಚ್ಚುಮೆಚ್ಚು. ಜಿಲೇಬಿ ಅಂದ್ರೆ ತಕ್ಷಣಕ್ಕೆ ನೆನಪಾಗೋದೆ ಕಿತ್ತಳೆ ಬಣ್ಣದಲ್ಲಿರುವ ಸ್ವೀಟ್‌. ಈ ಜಿಲೇಬಿ ಹಸಿರು ಬಣ್ಣದಲ್ಲಿದ್ದರೆ ಹೇಗಿರಬಹುದು ನೀವು ಎಂದಾದರೂ ಯೋಚಿಸಿದ್ದೀರಾ? ಹೌದು, ಸದ್ಯ ಹಸಿರು ಬಣ್ಣದ ಜಿಲೇಬಿ ಸಹ ಲಭ್ಯವಿದೆ. ಇದನ್ನು ಮೌಂಟೇನ್ ಡ್ಯೂ ಜಿಲೇಬಿ ಎಂದು ಕರೆಯಲಾಗುತ್ತದೆ. ಇನ್‌ಸ್ಟಾಗ್ರಾಂ ಫುಡ್‌ ಬ್ಲಾಗರ್ ಅಮರ್ ಸಿರೋಹಿ ಎಂಬವರು ಹಸಿರು ಬಣ್ಣದ ಜಿಲೇಬಿಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅವುಗಳನ್ನು ಮೌಂಟೇನ್ ಡ್ಯೂ ಜಲೇಬಿ ಎಂದು ಕರೆದಿದ್ದಾರೆ. 

ಹಸಿರು ಬಣ್ಣದ ಮೌಂಟೇನ್‌ ಡ್ಯೂ ಜಿಲೇಬಿ
ಈ ಜಿಲೇಬಿಗಳು ಇಬ್ಬನಿ ಅಥವಾ ತಿಳಿಹಸಿರು ಬಣ್ಣದಿಂದ (Green Colour) ಕೂಡಿರುವುದರಿಂದ ಇದಕ್ಕೆ ಫುಡ್‌ ಬ್ಲಾಗರ್ ಈ ಹೆಸರನ್ನಿಟ್ಟಿದ್ದಾರೆ. ಆದರೆ ವಾಸ್ತವವಾಗಿ ಇದು ಮೌಂಟೇನ್‌ ಡ್ಯೂ ಜಿಲೇಬಿಯಲ್ಲ. ಬದಲಿಗೆ ಅವರೇಬೇಳೆ ಜಿಲೇಬಿ. ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿ ಇದು ಸಾಕಷ್ಟು ಜನಪ್ರಿಯವಾಗಿವೆ. ಇವುಗಳನ್ನು ಅವರೇಕಾಳಿನಿಂದ ತಯಾರಿಸಲಾಗುತ್ತದೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದಾಗಿನಿಂದ ಈ ಹಸಿರು ಜಿಲೇಬಿಯ (Green Jalebi) ಫೋಟೋ ವೈರಲ್ ಆಗಿದ್ದು, ಪೋಸ್ಟ್​ ಅನ್ನು ಸುಮಾರು 25,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಗ್ರೀನ್ ಜಿಲೇಬಿಯನ್ನು ಮೆಚ್ಚಿಕೊಂಡಿರುವ ಮಂದಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

Viral Video: ಜಿಲೇಬಿ ಜೊತೆ ಆಲೂಗಡ್ಡೆ ಪಲ್ಯ? ಜನರು ಏನ್ ತಿನ್ತಿದ್ದಾರೆ ಸ್ವಾಮಿ!?

ಬೆಂಗಳೂರಿನ ಅವರೇಮೇಳದಲ್ಲಿ ಈ ಸ್ಪೆಷಲ್ ಜಿಲೇಬಿ ಲಭ್ಯ
ಒಬ್ಬ ಬಳಕೆದಾರರು, 'ನನ್ನ ಜೀವನದಲ್ಲಿ ನಾನು ಹಿಂದೆಂದೂ ಇಂಥದ್ದನ್ನು ನೋಡಿಲ್ಲ, ಇದು ತುಂಬಾ ಆಕರ್ಷಕವಾಗಿದೆ' ಎಂದಿದ್ದಾರೆ. . ಇನ್ನೊಬ್ಬರು 'ಆಹಾ ಇದು ನಮ್ಮ ಬೆಂಗಳೂರಿನಲ್ಲಿ ಮಾತ್ರ ತಯಾರಾಗುವ ಜಿಲೇಬಿ' ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ 'ಈ ತನಕ ನಾನು ಇಂಥ ಜಿಲೇಬಿಯನ್ನು  ನೋಡಿಯೇ ಇರಲಿಲ್ಲ, ಬೆಂಗಳೂರಿಗೆ ಹೋದಾಗ ಖಂಡಿತ ತಿನ್ನುತ್ತೇನೆ' ಎಂದು ಹೇಳಿದ್ದಾರೆ ಹಲವರು. ಒಬ್ಬರು ಈ ಜಿಲೇಬಿ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಇದು ಎಲ್ಲಾ ಬೇಕರಿ ಅಥವಾ ಸಿಹಿಅಂಗಡಿಗಳಲ್ಲಿ ಸಿಗದು. ಸಜ್ಜನ್​ರಾವ್ ಸರ್ಕಲ್​ನಲ್ಲಿ ಪ್ರತೀ ವರ್ಷ ಏರ್ಪಡಿಸುವ ಅವರೆಮೇಳಕ್ಕಾಗಿ ನೀವು ಕಾಯಬೇಕು' ಎಂದು ಉತ್ತರಿಸಿದ್ದಾರೆ.

ಸದ್ಯ. ನಿಜವಾದ ಜಿಲೇಬಿಯೇ, ನಾನು ಜಿಲೇಬಿಗೂ ಬಣ್ಣ ಹಾಕಲು ಕಲಿತರಾ ಈ ಸಿಹಿಯಂಗಡಿಯವರು ಎಂದು ಕಂಗಾಲಾದೆ ಎಂದಿದ್ದಾರೆ ಇನ್ನೊಬ್ಬ ಬಳಕೆದಾರರು.. ಈ ಜಿಲೇಬಿಯನ್ನು ಮಾಡುವ ವಿಧಾನ ಹೇಗೆ? ಎಂಥ ಅವರೆಬೇಳೆಯನ್ನು ಬಳಸಬೇಕು ಎಂದು ಕೆಲವರು ಕೇಳಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ನಾನು ಈ ಜಿಲೇಬಿಯನ್ನು ಟೇಸ್ಟ್ ಮಾಡಿದ್ದೇನೆ.. ಅವರಬೇಳೆಯ ವಿಶಿಷ್ಟ ಸುವಾಸನೆಯು ಎಷ್ಟು ಜನಪ್ರಿಯವಾಗಿದೆ ಎಂದರೆ ಅದಕ್ಕಾಗಿ ಬೆಂಗಳೂರಿನಲ್ಲಿ ವಿಶೇಷವಾಗಿ ಅವರೇಬೇಳೆ ಮೇಳವೇ ನಡೆಯುತ್ತದೆ. ಇಲ್ಲಿ ಈ ಅದ್ಭುತ ರುಚಿಯ ಜಿಲೇಬಿಯನ್ನು ಸವಿಯಬಹುದು' ಎಂದಿದ್ದಾರೆ.

ಚಳಿಗಾಲದಲ್ಲಿ ಹಾಲು-ಜಿಲೇಬಿ ತಿನ್ನಿ ಎಂದು ಹಿರಿಯರು ಹೇಳೋದ್ಯಾಕೆ ?

ಈ ಪೋಸ್ಟ್ ಅನ್ನು ಜೂನ್ 1, 2020ರಂದು ಹಂಚಿಕೊಳ್ಳಲಾಗಿದೆ. ಆದರೂ ಇದು ಮತ್ತೊಮ್ಮೆ ಜನರ ಗಮನವನ್ನು ಸೆಳೆದಿದೆ. ಕೇವಲ ಕಿತ್ತಳೆ ಬಣ್ಣದಲ್ಲಿ ಮಾತ್ರವಲ್ಲದೆ ಡಿಫರೆಂಟ್ ಆಗಿ ಹಸಿರು ಬಣ್ಣದಲ್ಲೂ ಜಿಲೇಬಿ ಸಿಗ್ತಿರೋದಕ್ಕೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸ್ಪೆಷಲ್‌ ಜಿಲೇಬಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್‌ನಲ್ಲಿ ತಿಳಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಡ್ಜ್‌ನಲ್ಲಿಟ್ಟ ಮೊಟ್ಟೆಗಳು ಕೊಳೆಯುತ್ತವೆಯೇ? ಗೃಹಿಣಿಯರು ತಿಳಿದುಕೊಳ್ಳಬೇಕಾದ ವಿಷಯವಿದು!
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!