ಬಾಯಿ ಚಪ್ಪರಿಸಿಕೊಂಡು ಭೇಲ್ ತಿನ್ತೀರಾ? ಮಂಡಕ್ಕಿ ಹೇಗ್ ಮಾಡ್ತಾರೆ ನೋಡಿದ್ರೆ ವಾಕರಿಕೆ ಬರೋದು ಖಂಡಿತ!

By Vinutha Perla  |  First Published Jun 4, 2023, 11:12 AM IST

ರೋಡ್‌ಸೈಡ್‌ನಲ್ಲಿ ಸಿಗೋ ಚಾಟ್ಸ್ ಅಂದ್ರೆ ಸಾಕು ಎಲ್ಲರೂ ಬಾಯಿಚಪ್ಪರಿಸಿಕೊಂಡು ತಿನ್ತಾರೆ. ಪಾನಿಪುರಿ, ಮಸಾಲಪುರಿ, ಭೇಲ್ ಪುರಿ ಅಂದ್ರೆ ಸಾಕು ನಮ್ ಫೇವರಿಟ್ ಅಂತಾರೆ. ಈ ಹಿಂದೆ ಕಾಲಲ್ಲಿ ತುಳಿದು ಪಾನಿಪುರಿಯ ಪೂರಿಯ ಹಿಟ್ಟು ತಯಾರಿಸೋ ವಿಡಿಯೋ ವೈರಲ್ ಆಗಿತ್ತು. ಎಲ್ಲರೂ ಛೀ, ಥೂ ಅಂದಿದ್ರು. ಹಾಗೆಯೇ ಸದ್ಯ ಭೇಲ್‌ಪುರಿ ಮಾಡೋ ಫಫ್ಡ್‌ ರೈಸ್ ಅಥವಾ ಮಂಡಕ್ಕಿ ಮಾಡೋದು ಹೇಗೆ ನೋಡಿದ್ರೆ ನೀವು ಮೂಗು ಮುರಿಯೋದು ಖಂಡಿತ.
 


ಇವತ್ತಿನ ದಿನಗಳಲ್ಲಿ ಜನರು ಮನೆಯಲ್ಲಿ ಅಡುಗೆ ಮಾಡಿ ತಿನ್ನೋದಕ್ಕಿಂತ ಹೊರಗಡೆ ತಿನ್ನೋದಕ್ಕೆ ಜಾಸ್ತಿ ಇಷ್ಟಪಡುತ್ತಾರೆ. ರೋಡ್‌ಸೈಡ್‌ನಲ್ಲಿ ಸಿಗೋ ಚಾಟ್ಸ್ ಅಂದ್ರೆ ಸಾಕು ಎಲ್ಲರೂ ಬಾಯಿಚಪ್ಪರಿಸಿಕೊಂಡು ತಿನ್ತಾರೆ. ಪಾನಿಪುರಿ, ಮಸಾಲಪುರಿ, ಭೇಲ್ ಪುರಿ ಅಂದ್ರೆ ಸಾಕು ನಮ್ ಫೇವರಿಟ್ ಅಂತಾರೆ. ಸಂಜೆಯಾದ್ರೆ ಸಾಕು ಇಂಥಾ ಚಾಟ್ಸ್ ಸೆಂಟರ್ ಬಳಿ ಗುಂಪುಗಟ್ಟಲೆ ಜನ್ರು ನಿಂತಿರ್ತಾರೆ. ಹಾಗೆಯೇ ಮಂಡಕ್ಕಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಯಾವ ಕಾಲದಲ್ಲಿಯಾದರೂ ಕುರುಂ ಕುರುಂ ಎಂದು ಬಾಯಾಡಿಸುವ ಮಂಡಕ್ಕಿಗೆ ಸದಾ ಡಿಮ್ಯಾಂಡ್‌. ಸಂಜೆಯ ಸ್ನಾಕ್ಸ್‌, ಬೆಳಗಿನ ಉಪಹಾರ ಎಲ್ಲಕ್ಕೂ ಉಪಯುಕ್ತವಾದ ಮಂಡಕ್ಕಿ ಹಲವರ ಫೇವರಿಟ್‌. ಅದರಿಂದ ತಯಾರಿಸೋ ಭೇಲ್‌ ಪುರಿ, ಚಾಟ್ಸ್ ಸಹ ಎಲ್ಲರಿಗೂ ಇಷ್ಟ. 

ಆದರೆ ಇದನ್ನು ತಯಾರಿಸೋ ರೀತಿ ಹೇಗಿದೆ ಅನ್ನೋದು ಹಲವರಿಗೆ ತಿಳಿದಿಲ್ಲ. ಈ ಹಿಂದೊಮ್ಮೆ ಕಾಲಲ್ಲಿ ತುಳಿದು ಪಾನಿಪುರಿಯ ಪೂರಿಯ ಹಿಟ್ಟು ತಯಾರಿಸೋ ವಿಡಿಯೋ ವೈರಲ್ ಆಗಿತ್ತು. ಎಲ್ಲರೂ ಛೀ, ಥೂ ಅಂದಿದ್ರು. ಮಾತ್ರವಲ್ಲ ಇನ್ನೊಂದು ವಿಡಿಯೋ ಸಹ ಟ್ವಿಟರ್‌, ಫೇಸ್‌ಬುಕ್‌ನಲ್ಲಿ ವೈರಲ್ ಆಗಿತ್ತು. ವೈರಲ್ ಆದ ವಿಡಿಯೋದಲ್ಲಿ ರಸ್ತೆ ಬದಿಯಲ್ಲಿ ಪಾನಿಪುರಿ ಮಾರುವಾತ, ನೀರಿಗೆ ಮೂತ್ರ (Urine) ಬೆರೆಸುತ್ತಿರುವ ದೃಶ್ಯವಿತ್ತು. ಇದನ್ನು ನೋಡಿದವರು ಪಾನಿಪುರಿಯನ್ನು ಹೀಗೂ ಮಾಡ್ತಾರಾ ಎಂದು ಗಾಬರಿಯಾಗಿದ್ರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹಾಗೆಯೇ ಸದ್ಯ ಭೇಲ್‌ ಪುರಿ ಚಾಟ್ಸ್ ತಯಾರಿಸಲೋ ಬಳಸೋ ಮಂಡಕ್ಕಿ (Puffed Rice) ಹೇಗೆ ತಯಾರಿಸ್ತಾರೆ ಅನ್ನೋ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Tap to resize

Latest Videos

ತೆಲಂಗಾಣದಲ್ಲಿ ಟೈಫಾಯ್ಡ್‌ ಹೆಚ್ಚಳಕ್ಕೆ ಕಾರಣವಾಗ್ತಿದೆ ಪಾನಿಪುರಿ !

ಕಾಲಲ್ಲಿ ತುಳಿದೂ ತುಳಿದೂ ಮಂಡಕ್ಕಿ ಮಾಡ್ತಾರೆ!
ಸ್ಟ್ರೀಟ್‌ಫುಡ್ ಅಂದ್ರೆ ನಾವು ಸಾಕಷ್ಟು ಹೈಜೀನ್‌ ಇರಬೇಕು ಅಂತ ಎಕ್ಸ್‌ಪೆಕ್ಟ್ ಮಾಡೋ ಹಾಗಿಲ್ಲ. ಯಾಕಂದ್ರೆ ರಸ್ತೆಬದಿಯಲ್ಲಿ ಹೆಚ್ಚು ವ್ಯವಸ್ಥೆ ಇಲ್ಲದ ಕಾರಣ ಸಹಜವಾಗಿಯೇ ಅಲ್ಲಿ ಹೆಚ್ಚು ಸ್ವಚ್ಛತೆ (Hygeine) ಕಾಪಾಡಲು ಸಾಧ್ಯವಾಗುವುದಿಲ್ಲ. ಆದರೆ ಸ್ಪಲ್ಪ ಮಟ್ಟಿಗಾದರೂ ಹೈಜೀನ್‌ ಆಗಿರಬೇಕಲ್ಲ. ಆದರೆ ಕಾರ್ಖಾನೆಯಲ್ಲಿ (Factory) ಅಕ್ಕಿಯಿಂದ ಈ ಫಪ್ಡ್‌ ರೈಸ್‌ನ್ನು ಎಷ್ಟು ಕೆಟ್ಟದಾಗಿ ತಯಾರಿಸ್ತಾರೆ ನೋಡಿ. 

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಕಾರ್ಖಾನೆಯಲ್ಲಿ ಕೊಳಕು ಬಟ್ಟೆಯನ್ನು ಧರಿಸಿದ ವ್ಯಕ್ತಿ ಕಾಲಲ್ಲಿ ತುಳಿದು ಅಕ್ಕಿಯಿಂದ ಮಂಡಕ್ಕಿಯನ್ನು ತಯಾರಿಸುವುದನ್ನು ನೋಡಬಹುದು. ಆಹಾರ ಬ್ಲಾಗರ್ ಅಮರ್ ಸಿರೋಹಿ ಅವರು ತಮ್ಮ Instagram ಪುಟದ foodie_incarnateನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅಕ್ಕಿ (Rice)ಯಿಂದ ಮಂಡಕ್ಕಿಯನ್ನು ತಯಾರಿಸುವ ಸಂಪೂರ್ಣ ವಿಧಾನವಿದೆ. ಕೆಟ್ಟದಾಗಿ ಮಂಡಕ್ಕಿ ತಯಾರಿಸುವ ರೀತಿ ಚಾಟ್ಸ್‌ ಪ್ರಿಯರು ಬೆಚ್ಚಿಬೀಳುವಂತೆ ಮಾಡಿದೆ. 

ಪಾನಿಪುರಿ ನೀರಿಗೆ ಮೂತ್ರ ಬೆರೆಸಿದ 'ಅಂಕಲ್': ತೆರೆ ಹಿಂದಿನ ವಿಡಿಯೋ ವೈರಲ್!

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್, ಛೀ, ಥೂ ಎಂದ ನೆಟ್ಟಿಗರು
ಮೊದಲಿಗೆ ಕಾರ್ಖಾನೆಯ ಕೆಲಸಗಾರನು ಅಕ್ಕಿಯನ್ನು ನೀರಿನಲ್ಲಿ ನೆನೆಸಿ ತನ್ನ ಕಾಲುಗಳಿಂದ ಹಿಸುಕುವ ಮೂಲಕ ಹೆಚ್ಚುವರಿ ಸಿಪ್ಪೆಯನ್ನು ತೊಡೆದುಹಾಕುತ್ತಾನೆ. ನಂತರ ಅಕ್ಕಿ ರಾಶಿಯಾಗಿ ಕೆಳಕ್ಕೆ ಬೀಳುತ್ತದೆ. ನಂತರ ಈ ಮಿಶ್ರಣಕ್ಕೆ ಉಪ್ಪು ಸೇರಿಸಲಾಗುತ್ತದೆ. ನಂತರ ಕೆಲಸಗಾರನು ತನ್ನ ಕಾಲುಗಳೊಂದಿಗೆ ಇದನ್ನು ಮಿಶ್ರಣ ಮಾಡುತ್ತಾನೆ. ಮುಂದಿನ ಹಂತವು ಭತ್ತದ ಕಾಳುಗಳನ್ನು ಯಂತ್ರಕ್ಕೆ (Machine) ನೀಡುವುದನ್ನು ತೋರಿಸಿತು, ತುಪ್ಪುಳಿನಂತಿರುವ, ಉಬ್ಬಿದ ಅಕ್ಕಿ ಬಳಕೆಗೆ ಸಿದ್ಧವಾಗಿದೆ. ಸಂಪೂರ್ಣ ವಿಧಾನ ಅನೈರ್ಮಲ್ಯದಿಂದ (Unhygienic) ಕೂಡಿರುವುದನ್ನು ನೋಡಬಹುದು. ಈ ವಿಡಿಯೋವನ್ನು ನೋಡಿದ ವೀಕ್ಷಕರು ಆಘಾತಕ್ಕೊಳಗಾಗಿದ್ದಾರೆ. ಫಪ್ಡ್‌ ರೈಸ್‌ನ್ನು ಇಷ್ಟು ಕೆಟ್ಟದಾಗಿ ತಯಾರಿಸುತ್ತಾರಾ ಎಂದು ಆಘಾತ ವ್ಯಕ್ತಪಡಿಸಿದ್ದಾರೆ. 

ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರನು 'ಇನ್ನೂ ರಸ್ತೆಬದಿಯ ಚಾಟ್ಸ್‌ ತಿನ್ನಿ' ಎಂದು ವ್ಯಂಗವಾಡಿದ್ದಾರೆ. ಮತ್ತೊಬ್ಬರು, 'ಪ್ರಕ್ರಿಯೆಯನ್ನು ಸ್ವಲ್ಪ ಆರೋಗ್ಯಕರವಾಗಿ ಮಾಡಬಹುದಿತ್ತು' ಎಂದು ಹೇಳಿದ್ದಾರೆ. ವಿಡಿಯೋ ನೋಡಿ ಕಳವಳ ವ್ಯಕ್ತಪಡಿಸಿದ ಮೂರನೇ ಬಳಕೆದಾರರು, 'ಇಂಥಾ ವಿಷಯಗಳಿಂದಲೇ ಜಗತ್ತು ಭಾರತವನ್ನು ಅತ್ಯಂತ ಕೊಳಕು ದೇಶವೆಂದು ನೋಡುತ್ತದೆ' ಎಂದು ಟೀಕಿಸಿದ್ದಾರೆ.

click me!