Healthy Food : ಬಾಳಿಹಣ್ಣಿನ ಹೂವಿಗೆ ಮೂಡ್ ಬೂಸ್ತರ್ ಅಂತಾರೆ! ಹೇಗೆ ಬಳಸೋದು ಇದನ್ನು!

By Suvarna News  |  First Published May 31, 2023, 1:25 PM IST

ಆರೋಗ್ಯದ ವಿಷ್ಯ ಬಂದಾಗ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸ್ತೇವೆ. ಯಾವುದೇ ರೋಗ ಕಾಡಬಾರದು ಅಂದ್ರೆ ಆರಂಭದಿಂದಲೇ ನಾವೇನು ತಿನ್ನುತ್ತಿದ್ದೇವೆ ಎಂಬ ಎಚ್ಚರಿಕೆ ಇರಬೇಕು. ಬಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂಬ ಅರಿವಿರುವ ನಿಮಗೆ ಬಾಳೆ ಹೂ ಗುಟ್ಟು ತಿಳಿದಿದ್ರೆ ಬೆಸ್ಟ್.
 


ಕೆಲವೊಂದು ಹಣ್ಣುಗಳನ್ನು ಮಾತ್ರ ನಾವು ಸೇವನೆ ಮಾಡ್ತೇವೆ. ಎಲೆ, ಚಿಗುರು, ಹೂವಿನ ಸುದ್ದಿಗೆ ಹೋಗೋದಿಲ್ಲ. ಇದ್ರಲ್ಲಿ ಬಾಳೆ ಹಣ್ಣು ಕೂಡ ಸೇರಿದೆ. ಅನೇಕರಿಗೆ ಬಾಳೆ ಹಣ್ಣಿನ ಹೂವು ಹೇಗಿರುತ್ತೆ ಅನ್ನೋದೇ ತಿಳಿದಿಲ್ಲ. ಬಾಳೆ ಹಣ್ಣಿನಲ್ಲಿ ಸಾಕಷ್ಟು ಪೌಷ್ಟಿಕಾಂಶವಿರುತ್ತದೆ. ಹಾಗೆಯೇ ಹೂವು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಾವಿಂದು ಬಾಳೆ ಹೂವಿನ ಲಾಭಗಳ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ಬಾಳೆ ಹೂವು (Banana Flower) ಹಣ್ಣಿಗಿಂತ ಹೆಚ್ಚು ಪ್ರಯೋಜನಕಾರಿ ಅಂದ್ರೆ ನಿಮಗೆ ಅಚ್ಚರಿ ಆಗ್ಬಹುದು. ಇದು ಸತ್ಯ. ಬಾಳೆ ಹೂವಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ (Protein), ಫೈಬರ್, ವಿಟಮಿನ್ ಎ, ಸಿ, ರಂಜಕ, ಪೊಟ್ಯಾಸಿಯಮ್ ಇದೆ. 

Latest Videos

undefined

Health Tips: ಹೈಪರ್‌ ಟೆನ್ಷನ್‌ ದೂರವಾಗಿಸುತ್ತೆ ಎಲ್ಲರಿಗೂ ಲಭ್ಯವಾಗುವ ಈ ಸಾಮಾನ್ಯ ಹಣ್ಣು

ಬಾಳೆ ಹೂ ಸೇವನೆಯಿಂದ ಆಗುವ ಲಾಭಗಳು : 

ತೂಕ (Weight) ಇಳಿಕೆಗೆ ಸಹಕಾರಿ : ಬಾಳೆ ಹೂವನ್ನು ನೀವು ಡಯಟ್ ನಲ್ಲಿ ಸೇರಿಸಿಕೊಳ್ಳುವ ಮೂಲಕ ತೂಕ ಇಳಿಸಿಕೊಳ್ಳಬಹುದು. ಇದರಲ್ಲಿ ಫೈಬರ್ ಅಂಶವಿರುತ್ತದೆ. ಇದು ಹೊಟ್ಟೆ ತುಂಬಿದ ಅನುಭವ ನೀಡುವ ಕಾರಣ ನಿಮಗೆ ದೀರ್ಘ ಸಮಯ ಹಸಿವಾಗೋದಿಲ್ಲ.

ಎದೆ ಹಾಲಿನಲ್ಲಿ ಹೆಚ್ಚಳ : ಬಾಳೆ ಹೂವಿನಲ್ಲಿರುವ ಗ್ಯಾಲಕ್ಟಾಗೋಗ್ ಅಂಶ ಎದೆ ಹಾಲನ್ನು ಹೆಚ್ಚಿಸುತ್ತದೆ. ನವಜಾತ ಶಿಶುವಿನ ತಾಯಂದಿರು, ಎದೆ ಹಾಲಿನ ಸಮಸ್ಯೆಯಿರುವವರು ಇದನ್ನು ಸೇವನೆ ಮಾಡೋದು ಒಳ್ಳೆಯದು.

Health Tips: ಇವರೆಲ್ಲ ಸೇಬು ಹಣ್ಣಿನ ಸೇವನೆ ಮಾಡ್ಬೇಡಿ

ಹೃದಯದ ಆರೋಗ್ಯ ಕಾಪಾಡುತ್ತೆ : ಬಾಳೆಹಣ್ಣು ಹೃದಯದ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತದೆ. ಕಾರ್ಡಿಯೋ ಪ್ರೊಟೆಕ್ಟಿವ್ ಮೇಲೆ ಬಾಳೆ ಹೂ ಪರಿಣಾಮ ಬೀರುತ್ತದೆ.  

ಬಿಪಿ ನಿಯಂತ್ರಣ : ಬಾಳೆ ಹೂವಿನ ಸೇವನೆಯಿಂದ ಬಿಪಿಯನ್ನು ಸಹ ನಿಯಂತ್ರಣದಲ್ಲಿಡಬಹುದು. ಬಿಪಿ ಖಾಯಿಲೆಯಿಂದ ಬಳಲುತ್ತಿರುವ ಜನರು ಆಗಾಗ ಬಾಳೆ ಹೂ ಸೇವನೆಯನ್ನು ಮರೆಯಬಾರದು.

ಮಧುಮೇಹಕ್ಕೆ ಮದ್ದು (Diabetic Medicine) : ಬಾಳೆ ಹೂವನ್ನು ತಿನ್ನುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಇದು ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಕಷಾಯ ಮಾಡಿ ಸೇವಿಸಬಹುದು.

ಮೂತ್ರಪಿಂಡ ರೋಗಕ್ಕೆ ಔಷಧಿ (Best Medicine for Kidney) : ಬಾಳೆ ಹೂ ಮೂತ್ರಪಿಂಡದ ರೋಗಕ್ಕೆ ಒಳ್ಳೆಯ ಔಷಧಿ ಎನ್ನಲಾಗಿದೆ. ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಇದು ನೆರವಾಗುತ್ತದೆ. ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡಿದ್ದರೆ ಬಾಳೆ ಹೂ ಹಾಗೂ ಬಾಳೆ ದಿಂಡಿನ ಸೇವನೆ ಮಾಡಬೇಕು ಎಂದು ತಜ್ಞರು ಸಲಹೆ ನೀಡ್ತಾರೆ.

ಅಧಿಕರಕ್ತದೊತ್ತಡ (High Blood Pressure) ನಿಯಂತ್ರಣ : ಅಧಿಕ ರಕ್ತದೊತ್ತಡವನ್ನು ಬಾಳೆಹೂವಿನಿಂದ ನಿಯಂತ್ರಿಸಬಹುದು. ಬಾಳೆ ಹೂವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಆಂಟಿ ಹೈಪರ್‌ಟೆನ್ಸಿವ್ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತದೆ.

ಮುಟ್ಟಿನ ನೋವಿಗೆ ಪರಿಹಾರ (Solution for Periods pain) : ಮುಟ್ಟಿನ ಸಮಯದಲ್ಲಿ ವಿಪರೀತ ನೋವು ತಿನ್ನುವ ಮಹಿಳೆಯರು ಬಾಳೆ ಹೂವಿನ ಬಳಕೆ ಮಾಡಬೇಕು. ಬಾಳೆ ಹೂ ಪ್ರೊಜೆಸ್ಟರಾನ್ ಹಾರ್ಮೋನ್ ಅನ್ನು ನಿಯಂತ್ರಿಸುವ ಮೂಲಕ ರಕ್ತಸ್ರಾವದ ಸಮಯದಲ್ಲಿ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಿಬ್ಬೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ.

ಮಾನಸಿಕ ಆರೋಗ್ಯ (Mental Health) : ಬಾಳೆ ಹೂ ಮಾನಸಿಕ ಆರೋಗ್ಯ ವೃದ್ಧಿಸುವ ಕೆಲಸ ಮಾಡುತ್ತದೆ. ಮೂಡನ್ನು ಇದು ಬೂಸ್ಟ್ ಮಾಡುತ್ತದೆ. ಒತ್ತಡವನ್ನು ಕಡಿಮೆ ಮಾಡುವ ಮೂಲಕ ಖಿನ್ನತೆಯನ್ನು ಹೋಗಲಾಡಿಸುವ ಕೆಲಸ ಮಾಡುತ್ತದೆ. 

ಜೀರ್ಣಕ್ರಿಯೆಗೆ ಸಹಕಾರಿ (Helps to Digest) : ಬಾಳೆ ಹೂವಿನಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಮಲಬದ್ಧತೆ ದೂರವಿಡುವ ಕೆಲಸವನ್ನು ಇದು ಮಾಡುತ್ತದೆ. 

ಬಾಳೆ ಹೂವಿನ ಸೇವನೆ ಹೇಗೆ? : ಬಾಳೆ ಹೂವನ್ನು ನೀವು ಸಬ್ಜಿಯಾಗಿ, ಸೂಪ್ ಆಗಿ, ಕಷಾಯವಾಗಿ, ದಾಲ್ ನಲ್ಲಿ ಬೆರೆಸಿ ಸೇವನೆ ಮಾಡಬಹುದಾಗಿದೆ. ಪಕೋಡಾ, ಕಟ್ಲೆಟ್ ತಯಾರಿಸುವ ವೇಳೆಯೂ ಕೆಲವರು ಬೇರೆ ಟೇಸ್ಟ್ ಬರಲಿ ಎನ್ನುವ ಕಾರಣಕ್ಕೆ ಇದನ್ನು ಹಾಕ್ತಾರೆ. 
 

click me!