ನಾವು ಸೇವಿಸುವ ಆಹಾರ, ಪಾನೀಯಗಳು ನಮ್ಮ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಹಾನಿಯುಂಟು ಮಾಡುತ್ತವೆ. ಕೆಲ ಆಹಾರಗಳನ್ನು ನಿಗದಿತ ಸಮಯದಲ್ಲಿ ಮಾತ್ರ ತೆಗೆದುಕೊಳ್ಬೇಕು. ಯಾವ್ದ ಯಾವುದೋ ಸಮಯದಲ್ಲಿ ಸೇವಿಸಿದ್ರೆ ಸಮಸ್ಯೆ ಕಾಡೋಕೆ ಶುರುವಾಗುತ್ತೆ.
ಖಾಲಿ ಹೊಟ್ಟೆಯಲ್ಲಿ ಟೀ – ಕಾಫಿ ಕುಡಿಬೇಡಿ ಅಂತಾ ವೈದ್ಯರು ಹೇಳ್ತಾನೆ ಇರ್ತಾರೆ. ಆದ್ರೆ ಒಮ್ಮೆ ಅಭ್ಯಾಸವಾದ್ರೆ ಬಿಡೋದು ಕಷ್ಟ ಎನ್ನುವ ಸಬೂಬು ಹೇಳ್ತಾ ಜನರು ಸೇವನೆ ಮಾಡ್ತಾನೆ ಇರ್ತಾರೆ. ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲಿ ಟೀ – ಕಾಫಿ ಕುಡಿದ್ರೆ ಗ್ಯಾಸ್ಟ್ರಿಕ್, ಆಸಿಡಿಟಿ ಶುರುವಾಗುತ್ತೆ ಎಂಬ ಮಾತನ್ನು ನೀವು ಕೇಳಿರ್ತೀರಿ. ಬೆಳಿಗ್ಗೆ ಎದ್ದ ತಕ್ಷಣ ಮತ್ತೇನನ್ನೂ ತಿನ್ನದೆ ಅಥವಾ ಸೇವನೆ ಮಾಡದೆ ಹಾಗೆಯೇ ಟೀ ಅಥವಾ ಕಾಫಿ ನಿಮ್ಮ ಹೊಟ್ಟೆ ಸೇರಿದ್ರೆ ಬರೀ ಗ್ಯಾಸ್ಟ್ರಿಕ್ ಮಾತ್ರವಲ್ಲ ಮಾನಸಿಕ ಸಮಸ್ಯೆ ಕೂಡ ನಿಮ್ಮನ್ನು ಕಾಡುತ್ತದೆ. ಈ ಬಗ್ಗೆ ನಡೆದ ಹೊಸ ಸಂಶೋಧನೆಯಲ್ಲೂ ಇದನ್ನೇ ಹೇಲಲಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಟೀ, ಕಾಫಿ ಕುಡಿಬಾರದು ಅಂದ್ರೆ ಮತ್ತೆ ಯಾವಾಗ ಕುಡಿಯಬೇಕು ಅಂತಾ ನೀವು ಕೇಳ್ಬಹುದು. ನಾವಿಂದು ಬೆಳಿಗ್ಗೆ ಎದ್ದ ಎಷ್ಟು ಹೊತ್ತಿನ ನಂತ್ರ ನೀವು ಟೀ – ಕಾಫಿ ಸೇವನೆ ಮಾಡೋಕೆ ಅರ್ಹರು ಅಂತಾ ಹೇಳ್ತೇವೆ.
ಈ ಸಮಯದಲ್ಲಿ ಟೀ (Tea) – ಕಾಫಿ ಕುಡಿರಿ : ಬೆಳಿಗ್ಗೆ ಹಾಸಿಗೆಯಲ್ಲಿರುವಾಗ್ಲೇ ಬಿಸಿ ಬಿಸಿ ಟೀ ಅಥವಾ ಕಾಫಿ (Coffee) ಹೀರಿದ್ರೆ ಜನರಿಗೆ ಏಳೋಕೆ ಮನಸ್ಸು ಬರುತ್ತೆ. ಇಂಥ ಜನರ ಲೀಸ್ಟ್ ನಲ್ಲಿ ನೀವೂ ಸೇರಿದ್ದರೆ ಇಂದೇ ಈ ಅಭ್ಯಾಸವನ್ನು ಗಟ್ಟಿ ಮನಸ್ಸು ಮಾಡ್ಕೊಂಡು ಬಿಟ್ಟುಬಿಡಿ. ಯಾಕೆಂದ್ರೆ ಬೆಳಿಗ್ಗೆ ಎದ್ದಾಗ ನಮ್ಮ ಒತ್ತಡದ ಹಾರ್ಮೋನ್ (hormones) ಕಾರ್ಟಿಸೋಲ್ ಮಟ್ಟ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಕೆಫೀನ್ (caffeine) ಕುಡಿಯುವುದರಿಂದ ಕಾರ್ಟಿಸೋಲ್ ಮಟ್ಟ ಮತ್ತಷ್ಟು ಹೆಚ್ಚಾಗುತ್ತದೆ. ಇದ್ರಿಂದ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ನೀವು ಹಾಸಿಗೆಯಿಂದ ಎದ್ದ 1 ರಿಂದ ಎರಡು ಗಂಟೆ ನಂತರ ಕಾಫಿ ಅಥವಾ ಟೀ ಕುಡಿಯಿರಿ. ಒಂದ್ವೇಲೆ ಅಷ್ಟೊತ್ತು ಕಾಯೋಕೆ ಸಾಧ್ಯವಿಲ್ಲ ಎನ್ನುವವರು ನೀವಾಗಿದ್ದರೆ ಮೊದಲು ಏನನ್ನಾದ್ರೂ ತಿನ್ನಿ. ನಂತ್ರ ಕಾಫಿ ಅಥವಾ ಟೀ ಕುಡಿಯಿರಿ.
undefined
Healthy Food : ಮಧ್ಯರಾತ್ರಿ ಗ್ಯಾಸ್ಟ್ರಿಕ್ – ಹುಳಿತೇಗಿಗೆ ಇದಿರಬಹುದು ಕಾರಣ
ಖಾಲಿ ಹೊಟ್ಟೆಯಲ್ಲಿ ಕಾಫಿ – ಟೀ ಸೇವನೆ ಮಾಡಿದ್ರೆ ಏನಾಗುತ್ತೆ? :
ಆಮ್ಲೀಯತೆ ಹೆಚ್ಚಳ : ಮೊದಲೇ ಹೇಳಿದಂತೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಹೊಟ್ಟೆ ತುಂಬಿದಂತೆ ಆಗುತ್ತದೆ. ನಿಮಗೆ ಹಸಿವು ಕಡಿಮೆಯಾಗುತ್ತದೆ. ಆಗ ಜನರು ಆಹಾರ ಸೇವನೆ ಮಾಡೋದಿಲ್ಲ. ಮತ್ತೆ ಕೆಲವರು ಮೂರ್ನಾಲ್ಕು ಕಪ್ ಟೀ ಕುಡಿದೇ ಹೊಟ್ಟೆ ತುಂಬಿಸಿಕೊಂಡಿರ್ತಾರೆ. ಇದ್ರಿಂದ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಆಮ್ಲೀಯತೆ ಹೆಚ್ಚಾಗುತ್ತದೆ. ನೀವು ಬೆಳಿಗ್ಗೆ ಎದ್ದು ನಿತ್ಯಕರ್ಮ ಮುಗಿಸಿ, ನೀರು ಕುಡಿದು, ಏನನ್ನಾದ್ರೂ ಸ್ವಲ್ಪ ತಿಂದು ನಂತ್ರ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ದುರ್ಬಲಗೊಳ್ಳುವ ಮೂಳೆ : ನಿಮಗೆ ಅಚ್ಚರಿ ಎನ್ನಿಸಿದ್ರೂ ಇದು ಸತ್ಯ. ನೀವು ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವನೆ ಮಾಡೋದ್ರಿಂದ ಮೂಳೆಗಳು ದುರ್ಬಲಾಗುತ್ತವೆ. ಕೀಲುಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.
ಮಧುಮೇಹ ಕಾಡ್ಬಾರ್ದು ಅಂದ್ರೆ ಕೆಫೀನ್ ಮುಕ್ತ ಚಿಕೋರಿ ಕಾಫಿ ಕುಡೀರಿ
ಪೌಷ್ಠಿಕಾಂಶದ ಕೊರತೆ : ಟೀ ಅಥವಾ ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿದ ನಂತ್ರ ಹೊಟ್ಟೆ ಭಾರವಾಗುತ್ತದೆ. ಹಾಗಾಗಿ ನೀವು ಅತಿ ಕಡಿಮೆ ಆಹಾರವನ್ನು ಸೇವನೆ ಮಾಡ್ತೀರಿ. ಕೆಲ ಮಹಿಳೆಯರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಕಪ್ ಟೀ ಅಥವಾ ಕಾಫಿ ಸೇವನೆ ಮಾಡಿ ಮಧ್ಯಾಹ್ನ 12ರವರೆಗೂ ಹಾಗೆಯೇ ಇರ್ತಾರೆ. ಆದ್ರೆ ಇದು ಕೆಟ್ಟ ಅಭ್ಯಾಸ. ಇದ್ರಿಂದ ದೇಹಕ್ಕೆ ಪೋಷಕಾಂಶದ ಕೊರತೆ ಕಾಡುತ್ತದೆ. ದೇಹಕ್ಕೆ ಬೇಕಾಗುವಷ್ಟು ಆಹಾರ, ಪೋಷಕಾಂಶ ಸಿಗುವುದಿಲ್ಲ. ಇದ್ರಿಂದ ತಲೆಸುತ್ತು, ಸುಸ್ತು ಕಾಡಲು ಶುರುವಾಗುತ್ತದೆ.