ವಡಾ ಪಾವ್‌ ಪಿಜ್ಜಾ ಮಾಡೋ ವೀಡಿಯೋ ವೈರಲ್, ಯಾಕ್ರಪ್ಪಾ ಹೀಗೆಲ್ಲಾ ಅಸಹ್ಯ ಮಾಡ್ತೀರಿ!

By Vinutha Perla  |  First Published Feb 23, 2023, 3:40 PM IST

ಖಾರ ಖಾರವಾಗಿರುವ ವಡಾ ಪಾವ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಹಾಗೆಯೇ ಪಿಜ್ಜಾ ಕೂಡಾ ಹಲವರ ಫೇವರಿಟ್. ಆದ್ರೆ ಇವೆರಡನ್ನು ಮಿಕ್ಸ್ ಮಾಡಿದ್ರೆ ಹೇಗಿರುತ್ತೆ..ಯಪ್ಪಾ ಅನ್ಬೇಡಿ..ಇಲ್ಲೊಂದೆಡೆ ಅಂಥಾ ಫುಡ್ ಎಕ್ಸಪರಿಮೆಂಟ್ ಮಾಡಿದ್ದಾರೆ.


ಭಾರತೀಯರು ಪುರಾತನ ಕಾಲದಿಂದಲೂ ಆಹಾರಪ್ರಿಯರಾಗಿರುವ ಕಾರಣ ವೆರೈಟಿ ವೆರೈಟಿ ಫುಡ್ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಹಲವು ಆಹಾರಗಳನ್ನು ಸೇರಿಸಿ ಏನನ್ನಾದರೂ ಎಕ್ಸಮರಿಮೆಂಟ್ ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಆದರೆ ಇನ್ನು ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಇನ್‌ಸ್ಟ್ರಾಗ್ರಾಂ, ಫುಡ್ ಬ್ಲಾಗರ್ಸ್ ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರಗಳು ಎಲ್ಲರಿಗೂ ಪರಿಚಯವಾಗುತ್ತಿದೆ. 

ಫುಡ್‌ನಲ್ಲಿ ಎಕ್ಸಪರಿಮೆಂಟ್ ಮಾಡೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡಿ ಟ್ರೈ ಮಾಡುತ್ತಾರೆ ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆದರೆ, ಕೆಲವೊಮ್ಮೆ ತನ್ನ ಕೆಟ್ಟ ಕಾಂಬಿನೇಶನ್‌ನಿಂದ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಕೆಲವೇ ದಿನಗಳ ಹಿಂದಷ್ಟೇ ಥಂಬ್ಸಪ್‌ ಪಾನಿಪುರಿ ಹಾಗೂ ಕ್ಯಾಡ್‌ಬರಿ ಆಮ್ಲೆಟ್ ಮಾಡುವ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಹಾಗೆಯೇ ಸದ್ಯಕ್ಕೆ ಎಲ್ಲರ ಗಮನ ಸೆಳೀತಾ ಇರೋದು ವಡಾ ಪಾವ್ ಪಿಜ್ಜಾ..

Tap to resize

Latest Videos

Food Trend: ಜಿಲೇಬಿ ಸವಿಯೋಕೆ ಆಲೂಗಡ್ಡೆ ಸಾರು, ಇದೆಂಥಾ ಅಸಹ್ಯ ಎಂದ ನೆಟ್ಟಿಗರು

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೋನಲ್ಲಿ ವ್ಯಕ್ತಿಯೊಬ್ಬ ವಡಾ ಪಾವ್ ಬಳಸಿಕೊಂಡು ಪಿಜ್ಜಾ ತಯಾರಿಸುತ್ತಾರೆ. ನಾಲ್ಕೈದು ಬನ್‌ಗಳು  ತೆಗೆದುಕೊಂಡು ಅದರಲ್ಲಿ ಸ್ಪಲ್ಪ ಪ್ರಮಾಣದಲ್ಲಿ ಮೇಯನೇಸ್, ರೆಡ್ ಸಾಸ್, ವಡಾ, ಚೀಸ್ ಮತ್ತು ತರಕಾರಿಗಳನ್ನು (Vegetables) ಸೇರಿಸುತ್ತಾರೆ. ನಂತರ ಅದನ್ನು ಒವೆನ್‌ನಲ್ಲಿಟ್ಟು ಬೇಯಿಸುತ್ತಾರೆ. ಬಳಿಕ 'ಬಾಹುಬಲಿ ಪಿಜ್ಜಾ ವಡಾಪಾವ್'ನ್ನು ತುಂಡುಗಳಾಗಿ ಕತ್ತರಿಸಿ ಹೆಚ್ಚು ಚೀಸ್‌ನಿಂದ ಅಲಂಕರಿಸಿ ಕೊನೆಯಲ್ಲಿ ಸರ್ವ್‌ ಮಾಡುತ್ತಾರೆ.

ವಿಚಿತ್ರ ಫುಡ್‌ ಎಕ್ಸಪರಿಮೆಂಟ್‌ಗೆ ನೆಟ್ಟಿಗರ ತರಾಟೆ
ಕೆಲವೊಬ್ಬರು ಈ ವಡಾ ಪಾವ್‌ ಪಿಜ್ಜಾಗೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಇದೆಂಥಾ ವಿಚಿತ್ರ ಎಕ್ಸ್‌ಪರಿಮೆಂಟ್ (Weird food) ಎಂದು ಹೀಯಾಳಿಸಿದ್ದಾರೆ. ಮತ್ತೆ ಕೆಲವರು ಉತ್ತಮವಾದ ಆಹಾರವನ್ನು ಯಾಕೆ ಹೀಗೆ ಹಾಳು ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮೂರನೇಯ ಬಳಕೆದಾರರು 'ಕ್ಯಾಪ್ಸಿಕಮ್ ಈರುಳ್ಳಿ ಮತ್ತು ಚೀಸ್ ಸೇರಿಸುವುದರಿಂದ ವಡಾ ಪಾವ್‌, ಪಿಜ್ಜಾ ಆಗುವುದಿಲ್ಲ' ಎಂದಿದ್ದಾರೆ. ಮತ್ತೆ ಕೆಲವರು 'ಬಹಳ ವರ್ಷಗಳಿಂದಲೂ ಅದೆಷ್ಟೋ ಜನರ ಫೇವರಿಟ್ ಆಗಿರುವ ವಡಾ ಪಾವ್‌ನ್ನು ಹೀಗೆ ಅಸಹ್ಯವಾಗಿ ಬಳಸಿಕೊಳ್ಳಬೇಡಿ' ಎಂದಿದ್ದಾರೆ. ಒಟ್ನಲ್ಲಿ ಪಿಜ್ಜಾ ಇಷ್ಟ, ವಡಾ ಪಾವ್ ಇಷ್ಟ ಅನ್ನೋರಿಗೂ ಈ ವಡಾ ಪಾವ್‌ ಪಿಜ್ಜಾ ಅಷ್ಟೊಂದು ಇಷ್ಟವಾಗಿಲ್ಲ ಅನ್ನೋದು ಕೂಡಾ ನಿಜ. 

Food Trend: ಮ್ಯಾಂಗೋ ಮ್ಯಾಗಿ ತಯಾರಿಸುವ ವೀಡಿಯೋ ವೈರಲ್‌

ಥಮ್ಸಪ್ ಪಾನಿಪುರಿ ಮಾಡೋ ವೀಡಿಯೋ ವೈರಲ್
ಪಾನಿಪುರಿ ಅಥವಾ ಗೋಲ್ಗಪ್ಪ ಇದನ್ನು ಇಷ್ಟಪಡದವರಿಲ್ಲ. ರಸ್ತೆ ಬದಿಯೇ ಇರಲಿ ಫೈವ್‌ ಸ್ಟಾರ್‌ ಹೊಟೇಲೇ ಆಗಲಿ ಪಾನಿಪುರಿ ಇರುವಲ್ಲೆಲ್ಲಾ ಜನ ಗುಂಪು ಗೂಡಿರುತ್ತಾರೆ.  ಇಂದು ವಿಭಿನ್ನ ವಿಧದ ಪಾನಿಪುರಿಗಳು ಬಂದಿದ್ದು, ವಿವಿಧ ರುಚಿಗಳಲ್ಲಿ ಇದು ಲಭ್ಯವಿದೆ. ಆದರೆ ತಂಪು ಪಾನೀಯ ಥಮ್ಸ್‌ ತುಂಬಿಸಿ ಪಾನಿಪುರಿ ನೀಡುವುದನ್ನು ನೀವು ಎಲ್ಲಾದರು ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲೊಂದು ಕಡೆ ಪಾನಿಪುರಿವಾಲಾ ಹೊಸತನ ಪ್ರಯೋಗ ಮಾಡಿದ್ದು, ಥಮ್ಸಪ್ ಪಾನಿಪುರಿ ನೀಡಲು ಶುರು ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

@MFuturewala ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ. ಪಾನಿ ಪುರಿ ಪ್ರಿಯರೇ, ಇಲ್ಲಿ ಥಂಪ್ಸ್ ಅಪ್ ಪಾನಿ ಪುರಿ (thums Up panipuri) ನೀಡಲಾಗುತ್ತದೆ. 

 
 
 
 
 
 
 
 
 
 
 
 
 
 
 

A post shared by Nitesh (@bhukkadbhaiyaji_)

click me!