
ಮನೆಯಲ್ಲಿ ತಯಾರಿಸೋ ಆಹಾರ ಯಾವಾಗಲೂ ಬೆಸ್ಟ್..ಮನೆಯಿಂದ ಹೊರಗಡೆ ಹೊಟೇಲ್, ಟ್ರೈನ್, ವಿಮಾನದಲ್ಲಿ ಸಿಗೋ ಆಹಾರದ ಗುಣಮಟ್ಟದ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆಯೆಂಬಂತೆ ಆಗಾಗ ಕಳಪೆ ಗುಣಮಟ್ಟದ ಆಹಾರಗಳ ಫೋಟೋ ವೈರಲ್ ಆಗುತ್ತಲೇ ಇರುತ್ತದೆ. ಹಾಗೆಯೇ ಸದ್ಯ ಎಮಿರೇಟ್ಸ್ ಏರ್‌ಲೈನ್ ಆಹಾರದಲ್ಲಿ ಕೂದಲು ಸಿಕ್ಕಿರೋ ಫೋಟೋವನ್ನು ಸಂಸದರೊಬ್ಬರು ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ, ತೃಣಮೂಲ ಕಾಂಗ್ರೆಸ್ ರಾಜಕಾರಣಿ ಮತ್ತು ಲೋಕಸಭಾ ಸಂಸದೆ ಮಿಮಿ ಚಕ್ರವರ್ತಿ ಅವರು ತಮ್ಮ ಆಹಾರದಲ್ಲಿ ಕೂದಲು ಕಂಡುಬಂದ ನಂತರ ಎಮಿರೇಟ್ಸ್ ಏರ್‌ಲೈನ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಆಹಾರ ತಿನ್ನುತ್ತಿದ್ದಾಗ ಕೂದಲು ಸಿಕ್ಕಿರುವುದರ ಬಗ್ಗೆ ಸಂಸದೆಯ ಟ್ವೀಟ್
ವಿಮಾನದಲ್ಲಿ (Aeroplane) ಪ್ರಯಾಣಿಸುತ್ತಿದ್ದ ಸಂಸದೆ ಮಿಮಿ ಚಕ್ರವರ್ತಿ ಆಹಾರ ತಿನ್ನುತ್ತಿದ್ದಾಗ ಕೂದಲು ಸಿಕ್ಕಿರುವುದರ ಬಗ್ಗೆ ಹೇಳಿದ್ದಾರೆ. ಏರ್‌ಲೈನ್ ಕಂಪನಿಯನ್ನು ಟ್ಯಾಗ್ ಮಾಡಿದ ಟ್ವೀಟ್‌ನಲ್ಲಿ ಚಕ್ರವರ್ತಿ ಹೀಗೆ ಹೇಳಿದ್ದಾರೆ, 'ಪ್ರೀತಿಯ ಎಮಿರೇಟ್ಸ್ ನಿಮ್ಮೊಂದಿಗೆ ಪ್ರಯಾಣಿಸುವ ಜನರ ಬಗ್ಗೆ ಕಡಿಮೆ ಕಾಳಜಿ (Care) ವಹಿಸುತ್ತಿದ್ದೀರಿ. ಊಟದಲ್ಲಿ ಕೂದಲು (Hair) ಸಿಗುವುದು ಮನಸ್ಸಿಗೆ ಖುಷಿ ನೀಡುವುದಿಲ್ಲ. ಕಳಪೆ ಗುಣಮಟ್ಟದ ಆಹಾರ ವಿತರಣೆಯ ಬಗ್ಗೆ ನಾನು ನಿಮ್ಮ ತಂಡಕ್ಕೆ (Team) ಮೇಲ್ ಮಾಡಿದ್ದೇನೆ. ಆದರೆ ನೀವು ಪ್ರತ್ಯುತ್ತರಿಸುವ ಅಥವಾ ಕ್ಷಮೆಯಾಚಿಸುವ ಯಾವುದೇ ಕೆಲಸವನ್ನು ಮಾಡಿಲ್ಲ. ನಾನು ಎಮಿರೇಟ್ಸ್ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ' ಎಂದು ತಿಳಿಸಿದ್ದಾರೆ.
ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ದೂರು: ನೆಟ್ಟಿಗರ ಆಕ್ರೋಶ; IRCTC ಪ್ರತಿಕ್ರಿಯೆ
ಅರ್ಧ ತಿಂದ ಆಹಾರ ತಟ್ಟೆಯ ಚಿತ್ರಗಳನ್ನೂ ಚಕ್ರವರ್ತಿ ಪೋಸ್ಟ್ ಮಾಡಿದ್ದಾರೆ. ಟ್ವೀಟ್ ಸಾಕಷ್ಟು ವೈರಲ್ ಆಗಿದೆ. ಹಲವಾರು ಮಂದಿ ಈ ಟ್ವೀಟ್‌ಗೆ ಲೈಕ್ ಮಾಡಿದ್ದಾರೆ ಮತ್ತು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಏರ್‌ಲೈನ್ಸ್‌ನಲ್ಲಿ ತಮಗಾಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ.
ಶೀಘ್ರದಲ್ಲೇ, ಎಮಿರೇಟ್ಸ್ ಟೀಮ್ ಟ್ವೀಟ್‌ಗೆ ಪ್ರತಿಕ್ರಿಯಿಸಿತು. ಘಟನೆಯ ಬಗ್ಗೆ ಕ್ಷಮೆಯಾಚಿಸಿತು. 'ಏರ್‌ಲೈನ್ಸ್‌ನಲ್ಲಿ ನಿಮಗೆ ಕಳಪೆ ಆಹಾರ ಸಿಕ್ಕಿರುವುದಕ್ಕೆ ನಮಗೆ ಬೇಸರವಿದೆ. ಆನ್‌ಲೈನ್ ಫಾರ್ಮ್ ಅನ್ನು ಪೂರ್ಣಗೊಳಿಸುವ ಮೂಲಕ ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಬರೆಯಿರಿ. ನಮ್ಮ ಗ್ರಾಹಕ (Customer) ಸಂಬಂಧಗಳ ತಂಡವು ಪ್ರಸ್ತಾಪಿಸಿದ ವಿಷಯದ ಆಧಾರದ ಮೇಲೆ ಅದನ್ನು ಪರಿಶೀಲಿಸುತ್ತದೆ ಮತ್ತು ಇಮೇಲ್ ಮೂಲಕ ನಿಮಗೆ ಪ್ರತಿಕ್ರಿಯಿಸುತ್ತದೆ. ಯಾವುದೇ ಸಹಾಯಕ್ಕಾಗಿ ದಯವಿಟ್ಟು ನಮಗೆ ಡಿಎಂ ಮಾಡಿ. ಧನ್ಯವಾದಗಳು' ಎಂದು ಎಮಿರೇಟ್ಸ್‌ನ ಟ್ವೀಟ್ ಹೇಳಿದೆ.
ವಿಮಾನಗಳಲ್ಲಿ ಕಳಪೆ ಆಹಾರ (Food) ಪೂರೈಕೆಯಾಗಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಹಲವು ಬಾರಿ ಭಾರತೀಯ ವಿಮಾನ ಸೇವೆಗಳಿಂದ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು. ಜಿರಳೆ, ಹಲ್ಲಿ ಬಿದ್ದ ಆಹಾರ ಗ್ರಾಹಕರಿಗೆ ದೊರಕಿತ್ತು.
ಈ ಆಹಾರಗಳ ಬೆಲೆ ಕೇಳಿದ್ರೆ ತಿನ್ನೋದಾ? ಲಾಕರ್ ನಲ್ಲಿಡೋದ? ಅನ್ಸೋದು ಗ್ಯಾರಂಟಿ
ವಿಮಾನದ ಊಟದಲ್ಲಿ ಕತ್ತರಿಸಿದ ಹಾವಿನ ತಲೆ ಪತ್ತೆ
ಟರ್ಕಿ ಮೂಲದ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಗಗನಸಖಿಯೊಬ್ಬರು ವಿಮಾನದ ಊಟದಲ್ಲಿ ಕತ್ತರಿಸಿದ ಹಾವಿನ ತಲೆಯನ್ನು ಕಂಡು ಗಾಬರಿಗೊಂಡಿದ್ದಾರೆ. ಊಟದ ತಟ್ಟೆಯಲ್ಲಿ ಹಾವಿನ ತಲೆಯೊಂದಿಗೆ ವಿವರಿಸುವ ಕಿರು ಕ್ಲಿಪ್ಪನ್ನು ಈಗ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಜುಲೈ 21 ರಂದು ಅಂಕಾರಾದಿಂದ ಡಸೆಲ್ಡಾರ್ಫ್‌ಗೆ ಹೊರಟಿದ್ದ ಸನ್‌ಎಕ್ಸ್‌ಪ್ರೆಸ್ ವಿಮಾನದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ತಾವು ಊಟ ಮಾಡಲು ಪ್ರಾರಂಭಿಸುವಾಗ ಆಲೂಗಡ್ಡೆ ಮತ್ತು ತರಕಾರಿಗಳಲ್ಲಿ ಸಣ್ಣ ಹಾವಿನ ತಲೆಯನ್ನು ಕಂಡರು ಎಂದು ಎಂದು ಕ್ಯಾಬಿನ್ ಸಿಬ್ಬಂದಿ ಹೇಳಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್ ವಿವಿಧ ತರಕಾರಿಗಳನ್ನು ಒಳಗೊಂಡಿರುವ ಟ್ರೇ ಮತ್ತು ಪ್ಲೇಟ್‌ನ ಶಾಟ್‌ನೊಂದಿಗೆ ಪ್ರಾರಂಭವಾಗುತ್ತದೆ. ಆದರೆ ಅದು ಝೂಮ್ ಇನ್ ಆಗುತ್ತಿದ್ದಂತೆ, ಹಾವಿನ ಕತ್ತರಿಸಿದ ತಲೆಯು ಆಹಾರದ ಮಧ್ಯೆ ಕಾಣಿಸಿಕೊಳ್ಳುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.