ಬ್ರೇಕ್ ಫಾಸ್ಟ್ ಗೆ ಏನ್ ಮಾಡ್ಲಿ? ಎಲ್ಲ ಮಹಿಳೆಯರು ಕಾಮನ್ ಪ್ರಶ್ನೆ. ಆರೋಗ್ಯವೂ ಆಗಿರಬೇಕು, ರುಚಿಯೂ ಆಗಿರಬೇಕು. ಅಂತ ತಿಂಡಿ ಹುಡುಕಾಟ ದಿನ ನಡೆದಿರುತ್ತದೆ. ನೀವೂ ಅವ್ರಲ್ಲಿ ಒಬ್ಬರು ಅಂತಾದ್ರೆ ಈ ಅಡುಗೆ ಟ್ರೈ ಮಾಡಿ.
ಜಗತ್ತಿನಲ್ಲಿ ಸಾವಿರಾರು ವರ್ಷಗಳಿಂದ ಬಳಕೆ ಮಾಡ್ತಿರುವ ಆಹಾರದಲ್ಲಿ ಸೋಯಾಬಿನ್ ಕೂಡ ಒಂದು. ಸೋಯಾಬಿನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಾಂಸಹಾರ ತಿನ್ನದೆ ಹೋದವರಿಗೆ ಇದು ಅತ್ಯುತ್ತಮ ಆಹಾರವೆನ್ನಲಾಗುತ್ತದೆ. ಯಾಕೆಂದ್ರೆ ಸೋಯಾಬಿನ್ ನಲ್ಲಿ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಹಾಗೆ ಕೊಬ್ಬು ಇದ್ರಲ್ಲಿರೋದಿಲ್ಲ. ಅನೇಕರು ಇದನ್ನು ಮಾಂಸ ಎಂದೂ ಕರೆಯೋದಿದೆ.
ಸೋಯಾಬಿನ್ (Soybean) ನಲ್ಲಿ ಉತ್ಕರ್ಷಣ ನಿರೋಧಕವಿದೆ. ಒಮೆಗಾ 3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಫೈಬರ್ (Fiber) ಕೂಡ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಸೋಯಾಬಿನ್ ಶುಗರ್ (Sugar), ಹೃದ್ರೋಗಗಳ ಅಪಾಯ ಕಡಿಮೆಯಾಗುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ಆಹಾರ ಜೀರ್ಣಕ್ರಿಯೆ (Digestion) ಗೂ ಒಳ್ಳೆಯದು.
undefined
FERTILITY FOOD; ಗರ್ಭ ಧರಿಸಲು ಸಮಸ್ಯೆಯಿದ್ದರೆ ಅಂಡಾಣುವಿನ ಗುಣಮಟ್ಟ ಹೆಚ್ಚಿಸೋ ಈ ಆಹಾರ ಸೇವಿಸಿ
ಸೋಯಾಬೀನ್ ದ್ವಿದಳ ಧಾನ್ಯವಾಗಿದೆ. ಸೋಯಾವನ್ನು ನಾವು ಅನೇಕ ರೂಪದಲ್ಲಿ ಬಳಸಬಹುದು. ಸಾಸ್ ತಯಾರಿಕೆಗೆ ಸೋಯಾ ಬಳಸಲಾಗುತ್ತದೆ. ಸೋಯಾದಿಂದ ಎಣ್ಣೆ ಕೂಡ ತಯಾರಿಸಲಾಗುತ್ತದೆ. ಮನುಷ್ಯನಿಗೆ ಮಾತ್ರವಲ್ಲ ಕೋಳಿ,ಹಂದಿಗಳಂತಹ ಜಾನುವಾರುಗಳಿಗೆ ಪ್ರತಿ ವರ್ಷ ಲಕ್ಷಾಂತರ ಟನ್ ಸೋಯಾಬೀನ್ ನೀಡಲಾಗುತ್ತದೆ. ಚೀನಾದಲ್ಲಿ ಮೊದಲ ಬಾರಿ ಸೋಯಾ ಬೆಳೆ ಶುರುವಾಯ್ತು ಎಂದು ಇತಿಹಾಸದಲ್ಲಿ ಹೇಳಲಾಗುತ್ತದೆ. ಜಪಾನ್ ಮತ್ತು ಕೋರಿಯಾದಲ್ಲೂ ಸಾವಿರಾರು ವರ್ಷಗಳ ಹಿಂದೆಯೇ ಸೋಯಾವನ್ನು ಔಷಧಿ ರೂಪದಲ್ಲಿ ಬಳಕೆ ಮಾಡಲಾಗ್ತಾಯಿತ್ತಂತೆ. ಈ ಸೋಯಾದಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು. ನಾವಿಂದು ಸೋಯಾ ಇಡ್ಲಿ ಮಾಡೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೆವೆ.
ಸೋಯಾ ಇಡ್ಲಿ ಮಾಡಲು ಅಗತ್ಯವಿರುವ ಪದಾರ್ಥಗಳು : ಒಂದು ಕಪ್ ಸೋಯಾ, ಎರಡು ಕಪ್ ಅಕ್ಕಿ, ಅರ್ಧ ಕಪ್ ಉದ್ದಿನ ಬೇಳೆ, ಒಂದು ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಇದನ್ನು ಬಳಸಿ ನೀವು ಆರಾಮವಾಗಿ ಸೋಯಾ ಇಡ್ಲಿ ತಯಾರಿಸಬಹುದು.
ಸೋಯಾ ಇಡ್ಲಿ ಮಾಡುವ ವಿಧಾನ : ಸೋಯಾ ಇಡ್ಲಿ ಮಾಡುವ ಮೊದಲು ನೀವು ಅಕ್ಕಿ ಹಾಗೂ ಸೋಯಾವನ್ನು ಪ್ರತ್ಯೇಕವಾಗಿ ನೀರಿನಲ್ಲಿ ನೆನೆ ಹಾಕಬೇಕು. ಇದರಂತೆ ಅರ್ಧ ಕಪ್ ಉದ್ದಿನ ಬೇಳೆಯನ್ನು ನೀವು ನೀರಿನಲ್ಲಿ ಎರಡರಿಂದ ಮೂರು ಗಂಟೆಯವರೆಗೆ ನೆನೆ ಹಾಕಬೇಕು. ಅಕ್ಕಿಯನ್ನು ಎರಡು ಗಂಟೆ ನೆನೆಸಿಟ್ಟ ನಂತ್ರ ಅದ್ರಲ್ಲಿರುವ ನೀರನ್ನು ತೆಗೆದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ಅಕ್ಕಿ ನುಣ್ಣಗಾಗ್ತಾ ಇದ್ದಂತೆ ನೀವು ಸೋಯಾವನ್ನು ಅದಕ್ಕೆ ಹಾಕಿ. ಅದನ್ನು ಕೂಡ ನೀವು ನುಣ್ಣಗೆ ರುಬ್ಬಬೇಕು. ಇದಾದ್ಮೇಲೆ ನೀವು ನೆನೆ ಹಾಕಿದ ಉದ್ದಿನ ಬೇಳೆಯನ್ನು ಮಿಕ್ಸಿ ಜಾರಿಗೆ ಹಾಕಿ ಅದನ್ನು ಕೂಡ ಚೆನ್ನಾಗಿ ರುಬ್ಬಿ ದಪ್ಪದಾದ ಪೇಸ್ಟ್ ಸಿದ್ಧಪಡಿಸಿಕೊಳ್ಳಿ.
ನಂತ್ರ ಈ ಎಲ್ಲ ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಾದ್ಮೇಲೆ ಈ ಮಿಶ್ರಣವನ್ನು ಮುಚ್ಚಿಡಿ. ನೀವು ಐದರಿಂದ ಆರು ಗಂಟೆಗಳ ಕಾಲ ಈ ಮಿಶ್ರಣವನ್ನು ಹಾಗೆ ಬಿಡಬೇಕು. ಐದು ಗಂಟೆ ನಂತ್ರ ಮಿಶ್ರಣವನ್ನು ಮತ್ತೊಮ್ಮೆ ಮಿಕ್ಸ್ ಮಾಡಿ, ಇಡ್ಲಿ ಪಾತ್ರೆಗೆ ಹಾಕಬೇಕು. ಇಡ್ಲಿ ಪಾತ್ರೆಗೆ ಎಣ್ಣೆ ಸವರಿ ನೀವು ಈ ಮಿಶ್ರಣವನ್ನು ಹಾಕಬೇಕು. ನಂತ್ರ ಪಾತ್ರೆಯ ಮುಚ್ಚಳ ಮುಚ್ಚಿ ಹಬೆಯಲ್ಲಿ ಬೇಯಿಸಬೇಕು. ಸುಮಾರು 10 ನಿಮಿಷಗಳ ಕಾಲ ಇಡ್ಲಿಯನ್ನು ಹಬೆಯಲ್ಲಿ ಬೇಯಿಸಿ. ಆ ಮೇಲೆ ಗ್ಯಾಸ್ ಆಫ್ ಮಾಡಿ. ಸ್ವಲ್ಪ ತಣ್ಣಗಾದ್ಮೇಲೆ ಇಡ್ಲಿ ಪಾತ್ರೆಯ ಮುಚ್ಚಳ ತೆಗೆಯಿರಿ. ಈಗ ಇಡ್ಲಿ ಸವಿಯಲು ಸಿದ್ಧ.
ಸಿಕ್ಕಾಪಟ್ಟೆ ಬಿಸಿ ನೀರು, ಟೀ ಕುಡಿತೀರಾ? ಆರೋಗ್ಯಕ್ಕೆ ಒಳ್ಳೇದಲ್ಲ ಈ ಅಭ್ಯಾಸ!
ನೀವು ಈ ಇಡ್ಲಿಯನ್ನು ಸಾಂಬಾರ್ ಅಥವಾ ಚೆಟ್ನಿ ಜೊತೆ ಸವಿಯಬಹುದು. ಮೊದಲೇ ಹೇಳಿದಂತೆ ಸೋಯಾ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಕಾರಣ ಬೆಳಗಿನ ಉಪಹಾರಕ್ಕೆ ಒಳ್ಳೆಯದು. ನಿಮಗೆ ಇದು ದಿನವಿಡಿ ಕೆಲಸ ಮಾಡಲು ಶಕ್ತಿ ನೀಡುತ್ತದೆ.