ನಿಮ್ಮ ಯೋಚನಾ ಶಕ್ತಿಯನ್ನೇ ನಿಲ್ಲಿಸುತ್ತೆ ಅಲ್ಟ್ರಾ ಪ್ರೊಸೆಸ್ಡ್ ಆಹಾರ!

By Suvarna News  |  First Published Oct 3, 2023, 2:02 PM IST

ಆಹಾರ ಯಾವುದಾದ್ರೆ ಏನಾಯ್ತು, ಹೊಟ್ಟೆ ತುಂಬಿದ್ರೆ ಮುಗೀತು ಎಂದುಕೊಳ್ಳುವವರು ಅನೇಕರಿದ್ದಾರೆ. ಇದೇ ಕಾರಣಕ್ಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತಿದ್ರೂ ಕೆಲ ಆಹಾರ ಸೇವನೆ ಮಾಡ್ತಾರೆ. ಅದ್ರಲ್ಲಿ ಅಲ್ಟ್ರಾ ಪ್ರೊಸೆಸ್ಡ್ ಆಹಾರ ಕೂಡ ಒಂದು. ಹೊಸ ಅಧ್ಯಯನ ಇದ್ರ ಬಗ್ಗೆ ಆಘಾತಕಾರಿ ವಿಷ್ಯ ಹೇಳಿದೆ.
 


ಜನರು ಆರೋಗ್ಯಕ್ಕಿಂತ ಬಾಯಿ ರುಚಿಗೆ ಹೆಚ್ಚು ಆದ್ಯತೆ ನೀಡ್ತಾರೆ. ಕೊರೊನಾ ನಂತ್ರ ಜನರು ಬದಲಾದ್ರೂ ಅಲ್ಟ್ರಾ ಪ್ರೊಸೆಸ್ಡ್ ಫುಡ್ ತಿನ್ನುವ ಜನರ ಸಂಖ್ಯೆ ಏನೂ ಕಡಿಮೆ ಆಗಿಲ್ಲ. ಆತುರದ ಜೀವನ ಶೈಲಿಯಿಂದಾಗಿ ಜನರಿಗೆ ಅಡುಗೆ ತಯಾರಿಸೋಕೆ ಸಮಯ ಸಿಗೋದಿಲ್ಲ. ಹಾಗೆ ಬಾಯಿ ರುಚಿ ಬೇಡುವ ಕಾರಣ ವೀಕ್ ಆಂಡ್, ಪಾರ್ಟಿಗಳಲ್ಲಿ ಅಲ್ಟ್ರಾ ಪ್ರೊಸೆಸ್ಡ್ ಫುಡ್ ಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ತಾರೆ. ಪ್ರತಿ ದಿನ ಎರಡು – ಮೂರು ಬಾರಿ ಇಂಥ ಆಹಾರ ಸೇವನೆ ಮಾಡುವವರಿದ್ದಾರೆ. ರೆಡಿ ಟು ಈಟ್ ಆಹಾರಕ್ಕೆ ಈಗಿನ ದಿನಗಳಲ್ಲಿ ಬೇಡಿಕೆ ಹೆಚ್ಚು. 

ಅಲ್ಟ್ರಾ ಪ್ರೊಸೆಸ್ಡ್ (Ultra Processed ) ಫುಡ್ ಆರೋಗ್ಯ (Health) ಕ್ಕೆ ಒಳ್ಳೆಯದಲ್ಲ. ದೈನಂದಿನ ಜೀವನದಲ್ಲಿ ಶೇಕಡಾ 20ಕ್ಕಿಂತ ಹೆಚ್ಚು  ಅಲ್ಟ್ರಾ ಪ್ರೊಸೆಸ್ಡ್ ಆಹಾರವನ್ನು ನೀವು ಸೇವನೆ ಮಾಡ್ತಿದ್ದರೆ ಇಂದೇ ಈ ಅಭ್ಯಾಸ ಬಿಡಿ. ಯಾಕೆಂದ್ರೆ ಅವುಗಳ ಸೇವನೆಯಿಂದ ಕೆಲವೇ ಕೆಲವು ದಿನಗಳಲ್ಲಿ ನೀವು ಗಂಭೀರ ಕಾಯಿಲೆ (Disease) ಗೆ ತುತ್ತಾಗುವ ಸಾಧ್ಯತೆ ಇರುತ್ತದೆ.  ನೀವು ದಿನಕ್ಕೆ 2,000 ಕ್ಯಾಲೋರಿಯಷ್ಟು ಅಲ್ಟ್ರಾ ಪ್ರೊಸೆಸ್ಡ್ ಫುಡ್ ಸೇವನೆ ಮಾಡುತ್ತೀರಿ ಎಂದಾದ್ರೆ ಅದು ನಿಮ್ಮ ದಿನದ ಆಹಾರದಲ್ಲಿ ಸುಮಾರು 400 ಕ್ಯಾಲೊರಿಗಳಿಗೆ ಸಮನಾಗಿರುತ್ತದೆ.  ಮೆಕ್‌ಡೊನಾಲ್ಡ್ಸ್ ಫ್ರೈಸ್ ಮತ್ತು ಸಾಮಾನ್ಯ ಚೀಸ್ ನ ಸಣ್ಣ ಬರ್ಗರ್‌ 530 ಕ್ಯಾಲೊರಿಗಳನ್ನು ಹೊಂದಿರುತ್ತದೆ. 

Tap to resize

Latest Videos

undefined

ಮೇಡ್‌ ಇನ್‌ ಇಂಡಿಯಾ ವಿಸ್ಕಿಗೆ 'ಜಗತ್ತಿನ ಸರ್ವಶ್ರೇಷ್ಠ ವಿಸ್ಕಿ' ಎನ್ನುವ ಮನ್ನಣೆ!

ಅಲ್ಟ್ರಾ-ಸಂಸ್ಕರಿಸಿದ ಆಹಾರಗಳನ್ನು ನೀವು ಆಗಾಗ ಸೇವನೆ ಮಾಡ್ತಿದ್ದರೆ ಅದು ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಪೆಟ್ಟು ನೀಡುತ್ತದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳಿದೆ. ಭಾರತದ 30,000 ವ್ಯಕ್ತಿಗಳನ್ನು ಒಳಗೊಂಡಿರುವ ಒಂದು ಮೆಗಾ ಜಾಗತಿಕ ಅಧ್ಯಯನದಲ್ಲಿ ಈ ಮಹತ್ವದ ವಿಷ್ಯ ಹೊರಬಿದ್ದಿದೆ. 

ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಅಲ್ಟ್ರಾ ಪ್ರೊಸೆಸ್ಡ್ ಫುಡ್ ಸೇವನೆ ಮಾಡುವ ಜನರನ್ನು, ಅಲ್ಟ್ರಾ ಪ್ರೊಸೆಸ್ಡ್ ಫುಡ್ ಸೇವನೆ ಮಾಡದ ಜನರಿಗಿಂತ ಮೂರು ಪಟ್ಟು ಹೆಚ್ಚು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಹಾಗೂ ಬಲಿಯಾಗುತ್ತಿದ್ದಾರೆ ಎಂದು ಅಧ್ಯಯನದಲ್ಲಿ ಪತ್ತೆ ಮಾಡಲಾಗಿದೆ. ವಿಶ್ವದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆದಿದೆ. ಯುಎಸ್ ಮೂಲದ ಸೇಪಿಯನ್ಸ್ ಲ್ಯಾಬ್ಸ್  ಈ ವರದಿಯನ್ನು ಬಿಡುಗಡೆ ಮಾಡಿದೆ. ಪ್ಯಾಕ್ ಮಾಡಿದ ಚಿಪ್ಸ್, ಸ್ನ್ಯಾಕ್ಸ್, ಅನೇಕ ಮಿಠಾಯಿ, ಹೀಟ್ ಆಂಡ್ ಈಟ್ ಆಹಾರಗಳು  , ಅಲ್ಟ್ರಾ ಪ್ರೊಸೆಸ್ಡ್ ಫುಡ್ ಗಳಾಗಿರುತ್ತವೆ. 

ಮಲೇರಿಯಾ ತಡೆಗೆ ಈ ಲಸಿಕೆ ಬೆಸ್ಟ್‌: ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು

ಇದಕ್ಕೂ ಮೊದಲು ನಡೆದ ಅಧ್ಯಯನದಲ್ಲಿ ಅಲ್ಟ್ರಾ ಪ್ರೊಸೆಸ್ಡ್ ಫುಡ್ ಸ್ಥೂಲಕಾಯತೆ, ಮಧುಮೇಹ ಮತ್ತು ಹೃದ್ರೋಗದ ಜೊತೆ ಖಿನ್ನತೆಗೆ ಕಾರಣವಾಗ್ತಿದೆ ಎಂದಿತ್ತು. ಈಗಿನ ಹೊಸ ಅಧ್ಯಯನ 26 ದೇಶಗಳಲ್ಲಿ ನಡೆದಿದೆ. ಈ ಅಧ್ಯಯನ ಹಿಂದಿನ ಅಧ್ಯಯನಕ್ಕಿಂತ ಒಂದು ಹಂತ ಮುಂದೆ ಹೋಗಿದ್ದು, ಅಲ್ಟ್ರಾ ಪ್ರೊಸೆಸ್ಡ್ ಆಹಾರ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದಿದೆ. 

ಅಲ್ಟ್ರಾ ಪ್ರೊಸೆಸ್ಡ್ ಆಹಾರ (Ultra Processed Food) ಸೇವನೆಯ ಹೆಚ್ಚಿನ ಆವರ್ತನದೊಂದಿಗೆ ಖಿನ್ನತೆಯ ಲಕ್ಷಣಗಳನ್ನು ಉಲ್ಬಣಗೊಳಿಸುತ್ತದೆ. ಖಿನ್ನತೆಯನ್ನು ಮೀರಿ ಮಾನಸಿಕ ಸ್ಥಿತಿಯನ್ನು ಇಲ್ಲಿ ನೋಡ್ಬಹುದು. ಭಾವನೆ ಮತ್ತು ಆಲೋಚನೆಗಳನ್ನು ನಿಯಂತ್ರಿಸಲು ಇದು ಸಾಧ್ಯವಾಗೋದಿಲ್ಲವೆಂದು ಅಧ್ಯಯನದಲ್ಲಿ ಹೇಳಲಾಗಿದೆ. 24 ಮಾನಸಿಕ ಕಾರ್ಯದ ಮೇಲೆ ಇದು ಪ್ರಭಾವ ಬೀರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಖಿನ್ನತೆಯ ಲಕ್ಷಣಗಳಾದ ದುಃಖ, ಯಾತನೆ ಮತ್ತು ಹತಾಶತೆಯ ಭಾವನೆಗಳು ಮತ್ತು ಹಸಿವಿನ ನಿಯಂತ್ರಣ ಪುರುಷ ಹಾಗೂ ಮಹಿಳೆ ಮೇಲೆ ಸಮಾನ ಪ್ರಭಾವ ಬೀರುತ್ತದೆ ಎಂದು ಅಧ್ಯಯನ ಹೇಳಿದೆ. 
ಯುವಕರ ಮೇಲೆ ಇದ್ರ ಪ್ರಭಾವ ಹೆಚ್ಚು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ದಿನದಲ್ಲಿ ಎರಡು ಬಾರಿ ಇಂಥಹ ಆಹಾರ ಸೇವನೆ ಮಾಡುವ 18 – 24 ವರ್ಷದ ಯುವಕರು, 45 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಜನರಿಗಿಂತ ಬೇಗ ಮಾನಸಿಕ ಸಮಸ್ಯೆಗೆ ಒಳಗಾಗ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 
 

click me!