ಚಾಕೋಲೇಟ್ ಎಲ್ಲರನ್ನೂ ಆಕರ್ಷಿಸೋದು ನಿಜ. ಮನಸ್ಸು ಸಿಹಿ ಪದಾರ್ಥ ಕೇಳಿದಾಗ ನಾವು ಚಾಕೋಲೇಟ್ ತಿನ್ನುತ್ತೇವೆಯೇ ವಿನಃ ಡ್ರೈ ಫ್ರೂಟ್ಸ್ ಮುಟ್ಟೋದಿಲ್ಲ. ಈ ತಿಂಗಳು ಚಾಕೋಲೇಟ್ ಕಡೆ ತಿರುಗಿಯೂ ನೋಡ್ಬೇಡಿ.
ಚಾಕೋಲೇಟ್ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ? ಒಂದೇ ಬೈಟಕ್ ನಲ್ಲಿ ದೊಡ್ಡದೊಂದು ಚಾಕೋಲೇಟ್ ತಿಂದು ಮುಗಿಸ್ತಾರೆ ಜನ. ಊಟವಾದ್ಮೇಲೆ, ತಿಂಡಿ ತಿಂದಾದ್ಮೇಲೆ ಚಾಕೋಲೇಟ್ ಬೇಕೇಬೇಕು ಎನ್ನುವವರಿದ್ದಾರೆ. ಬ್ಯಾಗ್ ನಲ್ಲಿ ಒಂದು ಚಾಕೋಲೇಟ್ ಇದ್ರೆ ಕೆಲವರಿಗೆ ಸಮಾಧಾನ. ಹಸಿವಾದಾಗ ಬ್ಯಾಗ್ ನಲ್ಲಿರುವ ಚಾಕೋಲೇಟ್ ತೆಗೆದು ತಿನ್ನುತ್ತಾರೆ. ಚಾಕೋಲೇಟ್ ಕೇಕ್, ಚಾಕೋಲೇಟ್ ಐಸ್ ಕ್ರೀಂ ಹೀಗೆ ಎಲ್ಲದ್ರಲ್ಲೂ ಚಾಕೋಲೇಟ್ ಪ್ಲೇವರ್ ಇಷ್ಟ ಕೆಲವರಿಗೆ. ಚಾಕೋಲೇಟ್ ಇಷ್ಟ ಹೌದು ಆದ್ರೆ ಅದನ್ನು ತಿಂದ್ಮೇಲೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತೆ ಎನ್ನುವವರು ನೀವಾಗಿದ್ದರೆ ಒಂದು ತಿಂಗಳು ಚಾಕೋಲೇಟ್ ಬಿಟ್ಟು ನೋಡಿ. ಅದ್ರಿಂದ ಆಗುವ ಲಾಭವೇನು ಎಂಬುದನ್ನು ನಾವು ಹೇಳ್ತೇವೆ.
ಒಂದು ತಿಂಗಳು ಚಾಕೋಲೇಟ್ (Chocolate) ಬಿಟ್ಟು ನೋಡಿ : ಚಾಕೋಲೇಟ್ ತಿನ್ನೋದು ಕೂಡ ಒಂದು ಚಟವಿದ್ದಂತೆ. ಊಟವಾದ್ಮೇಲೆ ಚಾಕೋಲೇಟ್ ಬಾಯಿಗೆ ಹೋಗಿಲ್ಲವೆಂದ್ರೆ ಸಮಾಧಾನ ಇಲ್ಲ ಎನ್ನುವವರು ಒಣದ್ರಾಕ್ಷಿ, ಗೋಡಂಬಿ, ಖರ್ಜೂರ ತಿನ್ನಬಹುದು. ಸಿಹಿತಿಂಡಿಗಳು ದೇಹಕ್ಕೆ ಒಳ್ಳೆಯದಲ್ಲ ಆದರೆ ಅವು ಹೆಚ್ಚು ಹಾನಿಯನ್ನುಂಟುಮಾಡುತ್ತವೆ.
undefined
ಆಹಾರ ಸೇವಿಸೋವಾಗ ನೀವು ಮಾಡೋ ಈ ತಪ್ಪಿನಿಂದಾನೆ ನಿಮಗೆ ರೋಗ ಬರೋದು!
ಕ್ಯಾಲೋರಿ (Calories) ಕಡಿಮೆ : ನೀವು ಒಂದು ತಿಂಗಳು ಬಾಯಿಕಟ್ಟಿ, ಚಾಕೋಲೇಟ್ ಬಿಟ್ರೆ ನಿಮ್ಮ ದೇಹದ ಕ್ಯಾಲೋರಿ ನಿಯಂತ್ರಣ ಮಾಡ್ಬಹುದು. ಚಾಕೋಲೇಟ್ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ ಇದು ದೇಹದಲ್ಲಿರುವ ಸಕ್ಕರೆ (Sugar) ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಹಲ್ಲಿನ ಸಮಸ್ಯೆಗೆ ಪರಿಹಾರ : ಮಕ್ಕಳಿಗೆ ಪೆಪರ್ ಮೆಂಟ್ ನೀಡಿ, ಚಾಕೋಲೇಟ್ ನೀಡ್ಬೇಡಿ ಎಂದು ತಜ್ಞರು ಹೇಳೋದಿದೆ. ಯಾಕೆಂದ್ರೆ ಈ ಚಾಕೋಲೇಟ್ ಬಾಯಿಗೆ ಅಂಟಿಕೊಳ್ಳುತ್ತೆ. ಇದ್ರಿಂದ ಹಲ್ಲು ನೋವು, ಹಲ್ಲಿನ ಹುಳು ಸೇರಿದಂತೆ ಅನೇಕ ಹಲ್ಲಿನ ಸಮಸ್ಯೆ ಕಾಡುತ್ತದೆ. ಅದೇ ನೀವು ಚಾಕೋಲೇಟ್ ಸೇವನೆ ಬಿಟ್ರೆ ನಿಮ್ಮ ಹಲ್ಲನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.
Health Tips: ಬೆಳಿಗ್ಗೆ ಉಪಹಾರ ಬಿಡ್ತೀರಾ? ಈ ರೋಗ ಕಾಡ್ಬಹುದು ಎಚ್ಚರ!
ಚಾಕೋಲೇಟ್ ಬಿಟ್ಟ ನಂತ್ರ ಏನಾಗುತ್ತೆ? : ನೀವು ನಿಯಮಿತವಾಗಿ ಚಾಕೋಲೇಟ್ ಸೇವನೆ ಮಾಡ್ತಿದ್ದರೆ ಅದನ್ನು ಬಿಟ್ಟ ನಂತ್ರ ಕೆಲವರಿಗೆ ಸಮಸ್ಯೆ ಆಗ್ಬಹುದು. ನೀವು ಕಿರಿಕಿರಿ ಅನುಭವಿಸಬಹುದು. ಆದ್ರೆ ಈ ಕಿರಿಕಿರಿ ತಾತ್ಕಾಲಿಕ. ಕೆಲವೇ ದಿನಗಳಲ್ಲಿ ನೀವು ಈ ಕಿರಿಕಿರಿಯಿಂದ ಹೊರಗೆ ಬರಬಹುದು.
ಚಾಕೋಲೇಟ್ ಬಿಟ್ಟ ನಂತ್ರ ತಲೆನೋವು ಕಾಡುವುದಿದೆ. ನೀವು ಪ್ರತಿ ದಿನ ಚಾಕೋಲೇಟ್ ತಿನ್ನುತ್ತಿದ್ದು, ಅದನ್ನು ಬಿಟ್ರೆ ನಿಮಗೆ ತಲೆನೋವು ಬರಬಹುದು. ಆದ್ರೆ ಇದು ಕೂಡ ತಾತ್ಕಾಲಿಕ. ನೀವು ಚಾಕೋಲೇಟ್ ಬದಲು ನೈಸರ್ಗಿಕವಾಗಿ ಸಿಹಿ ಅಂಶವಿರುವ ಆಹಾರವನ್ನು ಸೇವನೆ ಮಾಡಲು ಶುರು ಮಾಡಿ. ಇದು ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿಯುಂಟು ಮಾಡುವುದಿಲ್ಲ.
ಹೆಚ್ಚು ಕೊಕೊ ಹೊಂದಿರುವ ಡಾರ್ಕ್ ಚಾಕೋಲೇಟ್ ಸೇವನೆ ಕೂಡ ನೀವು ಕಡಿಮೆ ಮಾಡಬೇಕು. ನೀವು ಚಾಕೋಲೇಟ್ ಬದಲು ಡ್ರೈ ಫ್ರೂಟ್ಸ್ ಸೇವನೆ ಮಾಡೋದು ಆರೋಗ್ಯಕರ. ಹಣ್ಣನ್ನು ಕೂಡ ನೀವು ರಿಪ್ಲೇಸ್ ಮಾಡಬಹುದು. ಮಾವು, ಅನಾನಸ್, ಬ್ಲ್ಯಾಕ್‌ಬೆರಿ ಅಥವಾ ಪೀಚ್‌ಗಳಂತಹ ನೈಸರ್ಗಿಕ ಸಿಹಿ ಹಣ್ಣನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ. ನಿಮಗೆ ಚಾಕೋಲೇಟ್ ಸೇವನೆ ಮಾಡ್ಲೇಬೇಕು ಎಂದಾದ್ರೆ ಖರ್ಜೂರ ಮತ್ತು ಡ್ರೈ ಫ್ರೂಟ್ಸ್ ನಂತಹ ಆರೋಗ್ಯಕರ ಪದಾರ್ಥಗಳನ್ನು ಬಳಸಿಕೊಂಡು ಮನೆಯಲ್ಲಿ ಚಾಕೋಲೇಟ್ ತಯಾರಿಸಿ ಸೇವನೆ ಮಾಡಿ.
ಚಾಕೋಲೇಟ್ ಸೇವನೆಯಿಂದಾಗುವ ಅಡ್ಡಪರಿಣಾಮ : 44 ಗ್ರಾಂ ಚಾಕೋಲೇಟ್ ನಲ್ಲಿ 235 ಕ್ಯಾಲೋರಿ, 221 ಗ್ರಾಂ ಸಕ್ಕರೆ ಇರುತ್ತದೆ. ಇದನ್ನು ನಾವು ನಿತ್ಯ ಸೇವನೆ ಮಾಡೋದ್ರಿಂದ ಹೃದಯ ಸಂಬಂಧಿ ಸಮಸ್ಯೆ, ಸ್ಟ್ರೋಕ್, ಆತಂಕ, ಹೊಟ್ಟೆ ನೋವು, ಕಿಡ್ನಿ ಸಮಸ್ಯೆ ನಿಮ್ಮನ್ನು ಕಾಡುತ್ತದೆ.