ಮಗುವಿನ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ತಿಳಿದಾಗ ಪ್ರತಿಯೊಬ್ಬ ಪೋಷಕರೂ ಆತಂಕಗೊಳ್ಳುತ್ತಾರೆ. ತಮ್ಮ ಮಗುವಿನ ತೂಕ ಮತ್ತು ಎತ್ತರ ಹೆಚ್ಚಬೇಕೆಂದು ಬಯಸುತ್ತಾರೆ. ಇಂತಹ ಪರಿಸ್ಥಿತಿ ನಿಮಗೂ ಎದುರಾದರೆ ಭರವಸೆ ಕಳೆದುಕೊಳ್ಳಬೇಡಿ. ಮಗು ಮತ್ತೆ ಆರೋಗ್ಯವಂತವಾಗಿ ಬೆಳೆಯಲು ಏನು ತಿನ್ನೋಕೆ ಕೊಡ್ಬೇಕು ತಿಳ್ಳೊಳ್ಳಿ.
ಬಾಲ್ಯದಲ್ಲಿ ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ ಅಥವಾ ಅತಿಯಾದ ಪೋಷಕಾಂಶಗಳಿಂದಲೂ ಅಪೌಷ್ಟಿಕತೆ ಉಂಟಾಗುತ್ತದೆ. ಇದು, ಮಗುವಿನ ಸಮಗ್ರ ಬೆಳವಣಿಗೆಗೆ ಹಾನಿಕಾರಕವಾಗಿದೆ. ವಿಶ್ವಾದ್ಯಂತ ನೋಡುವುದಾದರೆ, ಮೂವರಲ್ಲಿ ಒಬ್ಬರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಮಕ್ಕಳ ಬೆಳವಣಿಗೆ ಕುಂಠಿತವಾಗಲು ಅಪೌಷ್ಟಿಕತೆಯೇ ಕಾರಣ. ಮಕ್ಕಳಲ್ಲಿ ಅಪೌಷ್ಠಿಕತೆಯಿದ್ದಾಗ ವಯಸ್ಸಿಗೆ ಸೂಕ್ತವಾದ ಎತ್ತರ, ತೂಕವಿರೋದಿಲ್ಲ. ಇಂದು, ಪ್ರಪಂಚದಾದ್ಯಂತ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 149 ಮಿಲಿಯನ್ ಕುಂಠಿತ ಮಕ್ಕಳಿದ್ದಾರೆ. ವಾಸ್ತವವಾಗಿ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾ: ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 40.6 ಮಿಲಿಯನ್ ಮಕ್ಕಳಿದ್ದಾರೆ. ಇದು, ಜಾಗತಿಕ ಬಾಲ್ಯದ ಕುಂಠಿತ ಹೊರೆಯ ಸುಮಾರು ಮೂರನೇ ಒಂದು ಭಾಗವಾಗಿದೆ.
ಅಬಾಟ್‌ನ ನ್ಯೂಟ್ರಿಷನ್ ವ್ಯವಹಾರ, ವೈದ್ಯಕೀಯ ಮತ್ತು ವೈಜ್ಞಾನಿಕ ವ್ಯವಹಾರಗಳ ನಿರ್ದೇಶಕರಾದ ಡಾ.ಗಣೇಶ್ ಕಾಧೆ, ಮಕ್ಕಳ ಬೆಳವಣಿಗೆ ಕುಂಠಿತವಾಗಲು ಕಾರಣವೇನು ಎಂಬುದರ ಬಗ್ಗೆ ಮಾಹಿತಿ ನೀಡುತ್ತಾರೆ.
ಎರಡು ವರ್ಷ ಕಳೆದ ಮೇಲೆ ಮಕ್ಕಳಿಗೆ ಇಂಥಾ ಆಹಾರ ಕೊಡದೇ ಇರಬೇಡಿ
ಪೌಷ್ಠಿಕ ಆಹಾರದಿಂದ ಮಾತ್ರ ಮಕ್ಕಳ ಅಭಿವೃದ್ಧಿ ಸಾಧ್ಯ
ಪೌಷ್ಟಿಕ ಆಹಾರವೇ ಎಲ್ಲಕ್ಕೂ ಮೂಲ. ಸರಿಯಾದ ಆಹಾರ (Food) ಮಕ್ಕಳು ಬೆಳೆಯಲು, ಕಲಿಯಲು, ಅಭಿವೃದ್ಧಿ ಹೊಂದಲು ಮತ್ತು ಉತ್ತಮ ಸಾಧನೆಗಳನ್ನು ಮಾಡಲು ಸಹಾಯ ಮಾಡಲು ಅಗತ್ಯವಾದ ಬಿಲ್ಡಿಂಗ್ ಬ್ಲಾಕ್ಸ್ ಒದಗಿಸುತ್ತದೆ. ಅಸಮರ್ಪಕ ಆಹಾರ ಸೇವನೆ, ಪೋಷಕಾಂಶಗಳನ್ನು ಪೂರ್ತಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದಿರುವುದು ಅಥವಾ ಕಳಪೆ ಪೋಷಕಾಂಶಗಳ ಸೇವನೆಗಳಿಂದ ಅಪೌಷ್ಟಿಕತೆ ಉಂಟಾಗುತ್ತದೆ. ಇದರಿಂದ ಪ್ರತಿರಕ್ಷಣಾ ನ್ಯೂನತೆಗಳು, ಅರಿವಿನ ಶಕ್ತಿ ಕಡಿಮೆಯಾಗುವುದು, ನಡವಳಿಕೆ ಸಮಸ್ಯೆಗಳು, ಮೂಳೆ ಆರೋಗ್ಯವಾಗಿಲ್ಲದಿರುವುದು ಮತ್ತು ಸ್ನಾಯುವಿನ ದ್ರವ್ಯರಾಶಿಯನ್ನು ಕಡಿಮೆ ಮಾಡುವ ಅಪಾಯಗಳು ಹೆಚ್ಚಿನ ಗಂಭೀರ ಪರಿಣಾಮಗಳಾಗಬಹುದು. ಆದ್ದರಿಂದ, ಸಾಧ್ಯವಾದಷ್ಟೂ ಬೇಗನೆ ಪೋಷಕಾಂಶಗಳ ಕೊರತೆಯನ್ನು ಪರಿಹರಿಸಿದರೆ ಮಕ್ಕಳು (Children) ಸರಿಯಾಗಿ ಬೆಳೆಯುತ್ತಾರೆ.
ಬೆಳವಣಿಗೆ, ಅರಿವಿನ ಬೆಳವಣಿಗೆ ಮತ್ತು ಪ್ರತಿರಕ್ಷಣಾ ಕಾರ್ಯಗಳಿಗೆ ಸಂಪೂರ್ಣ, ಸಮತೋಲಿತ ಪೋಷಣೆ ಅತ್ಯಗತ್ಯ. ಬಹುತೇಕ ಸಂದರ್ಭಗಳಲ್ಲಿ ಪರಿಹಾರ ಸರಳವಾದಾರೂ ಅದರಿಂದ ಮಕ್ಕಳ ಬೆಳವಣಿಗೆಗೆ ಆಗುವ ಸಹಾಯ (Help) ಮಾತ್ರ ಬಹಳ ದೊಡ್ಡದು. ಪೋಷಕರು ತಮ್ಮ ಮಗುವಿನ ಬೆಳವಣಿಗೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡಬೇಕು. ಅನುಮಾನಗಳಿದ್ದರೆ ಆರೋಗ್ಯ ವೃತ್ತಿಪರರೊಂದಿಗೆ ಮಾತನಾಡಬೇಕು. ಕೆಲವೊಮ್ಮೆ, ಪೌಷ್ಟಿಕಾಂಶ ಪೂರಕ ಪಾನೀಯಗಳು ಪೌಷ್ಟಿಕಾಂಶಗಳ ಕೊರತೆಯನ್ನು ಕಡಿಮೆ ಮಾಡಲು ಮತ್ತು ಆಹಾರದಿಂದ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮಗುವಿಗೆ ಯಾವ ಪೌಷ್ಟಿಕಾಂಶ ಪೂರಕ ಪಾನೀಯ ನೀಡಬಹುದು ಎಂಬುದನ್ನು ನಿರ್ಧರಿಸಲು ಪೋಷಕರು (Parents) ಮತ್ತು ನೋಡಿಕೊಳ್ಳುವವರು ತಮ್ಮ ಮಗುವಿನ ವೈದ್ಯರ ಸಲಹೆಯನ್ನು (Suggestion) ಪಡೆಯಬೇಕು.
ಪುಟಾಣಿ ಮಕ್ಕಳು ತಾವಾಗಿಯೇ ಆಹಾರ ತಿನ್ನುವಂತೆ ಮಾಡೋದು ಹೇಗೆ?
ಮಗುವಿನ ಬೆಳವಣಿಗೆಯ ಸಾಮರ್ಥ್ಯ ಹೆಚ್ಚಿಸಲು ಅಗತ್ಯವಾದ ಪೋಷಕಾಂಶಗಳು
ಕ್ಯಾಲ್ಸಿಯಂ: ಮೂಳೆ ಮತ್ತು ಹಲ್ಲಿನ ಆರೋಗ್ಯಕ್ಕೆ ಅತೀ ಮುಖ್ಯ. ಸ್ನಾಯು ಸಂಕೋಚನ, ರಕ್ತ ಪರಿಚಲನೆ ಮತ್ತು ನರಗಳ ಸಂವಹನಗಳಿಗೂ ಅಗತ್ಯ. ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರಗಳಲ್ಲಿ ಡೈರಿ ಉತ್ಪನ್ನಗಳಾದ ಹಾಲು, ಮೊಸರು ಮತ್ತು ಚೀಸ್ ಕೂಡ ಸೇರಿವೆ. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರಿಗೆ, ಬಲವರ್ಧಿತ ಸಸ್ಯಾಧಾರಿತ ಹಾಲಿನಂತಹ (ಸೋಯಾ ಹಾಲು, ಬಾದಾಮಿ ಹಾಲು) ಪರ್ಯಾಯಗಳನ್ನು ಪ್ರಯತ್ನಿಸಬಹುದು. ಹಸಿರು ಎಲೆ ಸೊಪ್ಪುಗಳಾದ ಪಾಲಕ್ ಮತ್ತು ಮೆಂತ್ಯ (ಮೇಥಿ) ಸಹ ಬಹಳ ಒಳ್ಳೆಯವು. ಜೊತೆಗೆ, ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳಲು ಮತ್ತು ಬಳಸಿಕೊಳ್ಳಲು ವಿಟಮಿನ್ ಕೆ 2 ಸಹಾಯ ಮಾಡುತ್ತದೆ.
ವಿಟಮಿನ್ ಡಿ: ಇದು, ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ನಮ್ಮ ದೇಹದಲ್ಲಿ ಸಂಶ್ಲೇಷಿಸಲ್ಪಡುತ್ತದೆ. ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅತ್ಯವಶ್ಯಕ. ಕ್ಯಾಲ್ಸಿಯಂನೊಂದಿಗೆ ಸೇರಿಕೊಂಡು ಮೂಳೆಗಳನ್ನು ಬಲಪಡಿಸುವುದಲ್ಲದೆ ವಿಟಮಿನ್ ಡಿ ಮಕ್ಕಳ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲೂ ನೆರವಾಗುತ್ತದೆ. ವಿಟಮಿನ್ ಡಿ ಆಹಾರ ಮೂಲಗಳ ಉದಾಹರಣೆಗಳು: ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್‌ಗಳಂತಹ ಕೊಬ್ಬಿನ ಮೀನುಗಳು; ಹಾಲು ಮತ್ತು ಧಾನ್ಯಗಳಂತಹ ಬಲವರ್ಧಿತ ಡೈರಿ ಉತ್ಪನ್ನಗಳು.
ಸತು (Zinc): ಪ್ರತಿರಕ್ಷಣಾ ಕೋಶಗಳಿಗೆ ಶಕ್ತಿ ನೀಡುತ್ತದೆ ಮತ್ತು ಸರಿಯಾದ ಬೆಳವಣಿಗೆಗೆ ನೆರವಾಗುತ್ತದೆ. ವಿಶೇಷವಾಗಿ ಬಾಲ್ಯದಲ್ಲಿ. ಸತು ಸಮೃದ್ಧವಾಗಿರುವ ಆಹಾರಗಳನ್ನು ತಿನ್ನಬೇಕು.ಮಸೂರ ಮತ್ತು ಕಡಲೆ, ಬೀಜಗಳು (ವಿಶೇಷವಾಗಿ ಗೋಡಂಬಿ ಮತ್ತು ಬಾದಾಮಿ), ಗೋಧಿ ಮತ್ತು ಅಕ್ಕಿಯಂತಹ ಧಾನ್ಯಗಳು ಮತ್ತು ಡೈರಿ ಉತ್ಪನ್ನಗಳು.
ವಿಟಮಿನ್ ಎ: ಚರ್ಮ, ಬಾಯಿ ಮತ್ತು ಶ್ವಾಸಕೋಶಗಳ ಆರೋಗ್ಯಕ್ಕೆ, ಸೋಂಕುಗಳ ವಿರುದ್ಧ ಹೋರಾಡಲು ಮತ್ತು ದೃಷ್ಟಿಯನ್ನು ಕಾಪಾಡಿಕೊಳ್ಳಲು ಅತ್ಯಗತ್ಯ. ವಿಟಮಿನ್ ಎ ಅಧಿಕವಾಗಿರುವ ಆಹಾರಗಳ ಉದಾಹರಣೆಗಳು: ಕಿತ್ತಳೆ ಮತ್ತು ಹಳದಿ ಹಣ್ಣುಗಳು ಮತ್ತು ತರಕಾರಿಗಳಾದ ಕ್ಯಾರೆಟ್, ಸಿಹಿ ಆಲೂಗಡ್ಡೆ ಮತ್ತು ಮಾವಿನ ಹಣ್ಣುಗಳು.
ಪ್ರೊಟೀನ್: ಜೀವಕೋಶಗಳು, ಸ್ನಾಯುಗಳು ಮತ್ತು ಹಾರ್ಮೋನುಗಳ ಬಿಲ್ಡಿಂಗ್ ಬ್ಲಾಕ್ಸ್; ಸ್ನಾಯುವಿನ ಬೆಳವಣಿಗೆ ಮತ್ತು ತೃಪ್ತಿಗೆ ಸಹಾಯ ಮಾಡುತ್ತದೆ. ಉತ್ತಮ ಪ್ರೊಟೀನ್ ಮೂಲಗಳ ಉದಾಹರಣೆಗಳು: ಮಸೂರ, ಬೀನ್ಸ್, ಕಡಲೆ, ತೋಫು, ಪನೀರ್ (ಭಾರತೀಯ ಕಾಟೇಜ್ ಚೀಸ್), ಕೋಳಿಮಾಂಸದಂತಹ ನೇರ ಮಾಂಸಗಳು ಮತ್ತು ಡೈರಿ ಉತ್ಪನ್ನಗಳು.
ದ್ರವಗಳು ಮತ್ತು ಇಲೆಕ್ಟ್ರೊಲೈಟ್ಸ್: ಕೀಲುಗಳನ್ನು ನಯಗೊಳಿಸಲು, ತ್ಯಾಜ್ಯವನ್ನು ತೆಗೆದುಹಾಕಲು ಮತ್ತು ತಾಪಮಾನ ನಿಯಂತ್ರಣಕ್ಕೆ ಬಹಳ ಅಗತ್ಯ. ನೀರು, ಎಳ ನೀರು, ಇಲೆಕ್ಟ್ರೋಲೈಟ್‌ಗಳ ನೈಸರ್ಗಿಕ ಮೂಲಗಳು. ಸಾಂಪ್ರದಾಯಿಕ ಭಾರತೀಯ ಪಾನೀಯಗಳಾದ ಮಜ್ಜಿಗೆ (ಚಾಸ್) ಮತ್ತು ನಿಂಬೆ ಪಾನಕಗಳು ಜಲಸಂಚಯನ ಮತ್ತು ಇಲೆಕ್ಟ್ರೋಲೈಟ್ ಸಮತೋಲನಕ್ಕೆ ಸಹಾಯ ಮಾಡುತ್ತವೆ.