ಅತೀಯಾಗಿ ತಿನ್ನುವ ವೀಡಿಯೋಗಳಿಂದ ಫೇಮಸ್ ಆಗಿದ್ದ ಟಿಕ್‌ಟಾಕ್ ಸ್ಟಾರ್ ಎಫೆಕನ್ ಕುಲ್ತೂರ್ 24ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬೊಜ್ಜುತನದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅತೀಯಾಗಿ ತಿನ್ನುವ ಮಕಬಂಗ್ ವೀಡಿಯೋಗಳಿಂದಲೇ ಫೇಮಸ್ ಅಗಿದ್ದ ಟಿಕ್‌ಟಾಕ್ ಸ್ಟಾರ್ ತಮ್ಮ 24ನೇ ವಯಸ್ಸಿನಲ್ಲಿ ಹಠಾತ್ ಆಗಿ ಸಾವನ್ನಪ್ಪಿದ್ದಾರೆ. ಟರ್ಕಿ ಮೂಲದ ಎಫೆಕನ್ ಕುಲ್ತೂರ್ ಎಳೆ ಪ್ರಾಯದಲ್ಲೇ ಪ್ರಾಣಬಿಟ್ಟ ಟಿಕ್‌ಟಾಕ್ ಸ್ಟಾರ್, ಟರ್ಕಿ ಮೂಲದವರಾದ ಇವರು ಬೊಜ್ಜುತನದ ಸಮಸ್ಯೆಯಿಂದ ಬಳಲುತ್ತಿದ್ದು, ಆ ಕಾರಣದಿಂದಲೇ ಹಠಾತ್ ನಿಧನರಾಗಿದ್ದಾರೆ. ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು.
ಎಫೆಕನ್ ಕುಲ್ತೂರ್ ಅವರು ಅತೀಯಾಗಿ ಆಹಾ ಸೇವನೆ ಮಾಡುವ ಮಕ್‌ಬಂಗ್ ವೀಡಿಯೋಗಳಿಂದಲೇ ಸಾಕಷ್ಟು ಫೇಮಸ್ ಆಗಿದ್ದರು. ಅವರು ಕ್ಯಾಮೆರಾ ಮುಂದೆಯೇ ಅಪಾರ ಪ್ರಮಾಣದ ಆಹಾರವನ್ನು ಸೇವಿಸುತ್ತಿದ್ದರು. ಆದರೆ ಬೊಜ್ಜು ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಯಲ್ಲಿ ಮೂರು ತಿಂಗಳು ಕಳೆದ ಅವರು ಮಾರ್ಚ್ 7 ರಂದು ನಿಧನರಾಗಿದ್ದಾರೆ ಎಂದು ಟಿಕ್‌ಟಾಕ್‌ನಲ್ಲಿನ ಪೋಸ್ಟ್ ಉಲ್ಲೇಖಿಸಿ ಟರ್ಕಿಯೆ ಟುಡೇ ವರದಿ ಮಾಡಿದೆ.
ಕದ್ದ ಬಟ್ಟೆ ಧರಿಸಿ ಟಿಕ್‌ಟಾಕಲ್ಲಿ ಶೋಕಿ: ಬಂಧಿಸಿ ಜೈಲಿಗಟ್ಟಿದ ಪೊಲೀಸರು
ಎಂಟು ತಿಂಗಳ ಹಿಂದೆ ಅವರು ಕೊನೆಯ ಬಾರಿಗೆ ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿದ್ದರು, ಆದರೆ ಅಕ್ಟೋಬರ್ 15 ರಂದು ಟಿಕ್‌ಟಾಕ್‌ನಲ್ಲಿ ಅಪ್‌ಲೋಡ್ ಮಾಡಲಾದ ಅವರ ಕೊನೆಯ ಬಾರಿ ಮುಕ್‌ಬಾಂಗ್ ವೀಡಿಯೊದಲ್ಲಿ ಅವರು ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿದ್ದನ್ನು ಹೇಳಿಕೊಂಡಿದ್ದರು. ತಮ್ಮ ಆರೋಗ್ಯವನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿ ಹೆಚ್ಚುವರಿ ಉಪ್ಪನ್ನು ತಪ್ಪಿಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಈ ವೀಡಿಯೋದ ನಂತರ ಅವರು ಯಾವುದೇ ವೀಡಿಯೋವನ್ನು ಹಾಕಿರಲಿಲ್ಲ.
ಅವರು ಉಸಿರಾಟದ ತೊಂದರೆ ಮತ್ತು ನೋವು ಸೇರಿದಂತೆ ತೀವ್ರ ವೈದ್ಯಕೀಯ ಸಮಸ್ಯೆಗಳಿಂದಾಗಿ ಹಾಸಿಗೆ ಹಿಡಿದಿದ್ದರಿಂದ ವೀಡಿಯೊ ಮಾಡುವುದನ್ನು ನಿಲ್ಲಿಸಿದ್ದರು. ಇವರ ತಾಯಿ ಕಳೆದ ವರ್ಷವಷ್ಟೇ ಸಾವನ್ನಪ್ಪಿದ್ದರು. ಎಫೆಕನ್ ಕುಲ್ತೂರ್ ಅವರ ಸಾವಿಗೆ ಅವರ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.