ತಿಂಗಳು ಬೇಡ, ಎರಡು ವಾರ ಬಿಟ್ಟು ನೋಡಿ, ಆರೋಗ್ಯ ಸುಧಾರಿಸೋ ಬಗೆ ಇದು

By Suvarna News  |  First Published Aug 1, 2023, 3:48 PM IST

ಸಕ್ಕರೆ ಇಲ್ಲದೆ ಟೀ ಕುಡಿಯೋದೇ ಇಲ್ಲ ಅಂತಾ ಒಂದೆರಡು ಸ್ಫೂನ್ ಸಕ್ಕರೆ ಹಾಕಿಕೊಂಡ್ರೆ ಮುಂದಿನ ಜೀವನ ಕಷ್ಟ. ಈಗ್ಲೇ ನಿಮ್ಮ ಬಾಯಿ ಚಪಲಕ್ಕೆ ಬ್ರೇಕ್ ಹಾಕಿ. ಸಕ್ಕರೆಗೆ ಗುಡ್ ಬೈ ಹೇಳೋ ಮುನ್ನ ಎರಡು ವಾರ ಟ್ರೈಯಲ್ ಮಾಡಿ. 
 


ಬಾಯಿಗೆ ಸಿಹಿ ಎನಿಸುವ ಸಕ್ಕರೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಸಕ್ಕರೆ ಸೇವನೆ ಮಾಡೋದ್ರಿಂದ ತಮ್ಮ ತೂಕ ಹೆಚ್ಚಾಗುವುದಲ್ಲದೆ ನಾನಾ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ.  ಟೀ, ಕಾಫಿ ಜೊತೆಗೆ ಒಂದಿಷ್ಟು ಸಿಹಿಯನ್ನು ನೀವು ಸೇವನೆ ಮಾಡ್ತಿದ್ದರೆ ಅದ್ರಿಂದ ಹೊರಗೆ ಬರೋದು ಸುಲಭವಲ್ಲ. ಆದ್ರೆ ನಿಮ್ಮ ಆರೋಗ್ಯಕ್ಕಾಗಿ ನೀವು ಚಾಲೆಂಜ್ ಸ್ವೀಕರಿಸಲೇಬೇಕು. ಕೇವಲ ಎರಡು ವಾರ ಸಕ್ಕರೆಯನ್ನು ಬಿಟ್ಟು ನೋಡಿ. ಇದ್ರಿಂದ ಆಗುವ ಬದಲಾವಣೆ ನಿಮಗೆ ತಿಳಿಯುತ್ತೆ. ನಾವಿಂದು ಎರಡು ವಾರ ಸಕ್ಕರೆಯಿಂದ ದೂರವಿದ್ರೆ ನಮ್ಮಲ್ಲಿ ಏನೆಲ್ಲ ಬದಲಾವಣೆಯಾಗುತ್ತೆ ಎಂಬುದನ್ನು ಹೇಳ್ತೇವೆ.

ಸಕ್ಕರೆ (Sugar) ಬಿಟ್ಟು ಆರೋಗ್ಯ (Health) ಕಾಪಾಡಿಕೊಳ್ಳಿ : 

Tap to resize

Latest Videos

ಸಕ್ಕರೆ ತಿನ್ನುವ ಚಪಲ ಕಡಿಮೆ ಆಗುತ್ತೆ : ನಿಜವಾಗ್ಲೂ ಇದೊಂದು ರೋಗ. ಕೆಲವರಿಗೆ ಆಹಾರ ಸೇವನೆ ಮಾಡಿದ ನಂತ್ರ ಇಲ್ಲವೆ ಮಧ್ಯರಾತ್ರಿಯೆಲ್ಲ ಸಕ್ಕರೆ ತಿನ್ನುವ ಬಯಕೆಯಾಗುತ್ತದೆ. ಅವರು ಸಕ್ಕರೆಯಿಂದ ಮಾಡಿದ ಪದಾರ್ಥವನ್ನು ಸೇವನೆ ಮಾಡಿ ತಮ್ಮ ಆಸೆಯನ್ನು ಈಡೇರಿಸಿಕೊಳ್ತಾರೆ. ನಿಮಗೂ ಈ ಕ್ರೇವಿಂಗ್ ಇದ್ರೆ ನೀವು ಎರಡು ವಾರ ಸಕ್ಕರೆ ಬಿಟ್ಟು ನೋಡಿ. ನಿಮ್ಮ ಸಕ್ಕರೆ ಕ್ರೇವಿಂಗ್ ಕೂಡ ಕಡಿಮೆಯಾಗುತ್ತದೆ.

ನಾನ್‌ವೆಜ್‌ ಮುಟ್ಟಲ್ಲ, ಆದ್ರೆ ಮೊಟ್ಟೆ ತಿನ್ನೋ ಆಸೆನಾ, ಇಲ್ಲಿದೆ ವೆಜ್ ಎಗ್ ರೆಸಿಪಿ

ಹಸಿವಿನ ನಿಯಂತ್ರಣ : ಸಿಹಿ ಪದಾರ್ಥಗಳನ್ನು ಅದ್ರಲ್ಲೂ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ನಿಮಗೆ ಹಸಿವು ಹೆಚ್ಚಾಗುತ್ತದೆ. ಹಾಗಾಗಿ ನೀವು ಮತ್ತಷ್ಟು ಆಹಾರ ಸೇವನೆ ಮಾಡ್ತೀರಿ. ಇದ್ರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಅದೇ ನೀವು ಎರಡು ವಾರ ಸಕ್ಕರೆ ತಿನ್ನೋದನ್ನು ಬಿಟ್ರೆ ತಾನಾಗಿಯೇ ನಿಮ್ಮ ಹಸಿವು ನಿಯಂತ್ರಣಕ್ಕೆ ಬರುತ್ತದೆ. 

ಆಯಾಸ ನಿಯಂತ್ರಣ : ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ನಿಮಗೆ ಹೆಚ್ಚು ಆಯಾಸ ಕಾಡುತ್ತದೆ. ನೀವು ಸಕ್ಕರೆ ಸೇವನೆ ನಿಲ್ಲಿಸಿದ್ರೆ ಇದ್ರಲ್ಲೂ ಪಾಸಿಟಿವ್ ಫಲಿತಾಂಶ ಕಾರಣಬಹುದು. 

ಏನೇನೋ ಹಾಲು ಕುಡಿಯೋದಕ್ಕಿಂತ ಸುಮ್ಮನಿರಿ, ಬೇಕಾದ್ದು ಮೇಯೋ ದೇಸೀ ಹಸು ಹಾಲು ಬೆಸ್ಟ್!

ಕಡಿಮೆಯಾಗುತ್ತೆ ಮುಖದ ಊತ : ಸತತವಾಗಿ ಸಕ್ಕರೆ ತಿನ್ನುವುದರಿಂದ ಮುಖ ಊದಿಕೊಳ್ಳುತ್ತದೆ. ಸಕ್ಕರೆ ನಿಮ್ಮ ಶರೀರದ ಊತವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ನೀವು ಕೇವಲ 2 ವಾರ ಸಕ್ಕರೆ ತಿನ್ನುವುದನ್ನು ಬಿಟ್ಟರೆ ಮುಖ ಊದಿಕೊಂಡಂತೆ ಅನಿಸೋದಿಲ್ಲ.  

ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣ : ನಿರಂತರವಾಗಿ ಸಕ್ಕರೆಯ ಸೇವನೆ ಮಾಡಿದಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗುತ್ತದೆ.  ಶರೀರದಲ್ಲಿ ಸಕ್ಕರೆಯ ಮಟ್ಟ ಸ್ಥಿರವಾಗಿರಲು ನೀವು ಸಕ್ಕರೆ ಸೇವನೆಯನ್ನು ನಿಲ್ಲಿಸಬೇಕು.   

ಹೊಟ್ಟೆಯ ಆರೋಗ್ಯದಲ್ಲಿ ಸುಧಾರಣೆ :  ಅನೇಕ ರೋಗಗಳು  ಹೊಟ್ಟೆಯಿಂದಲೇ ಆರಂಭವಾಗುತ್ತದೆ. ಸಕ್ಕರೆ ನಮ್ಮ ಹೊಟ್ಟೆಯ ಆರೋಗ್ಯವನ್ನು ಹಾಳು ಮಾಡುತ್ತದೆ. ಸಕ್ಕರೆಯ ಸೇವನೆಯಿಂದ ಹೊಟ್ಟೆ ಊದಿಕೊಳ್ಳುವುದು, ಗ್ಯಾಸ್ ಮತ್ತು ಹೊಟ್ಟೆ ನೋವು ಮುಂತಾದವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸಕ್ಕರೆ ಸೇವಿಸುವುದನ್ನು ಬಿಡೋದ್ರಿಂದ ಅನೇಕ ಸಮಸ್ಯೆಗಳಿಂದ ದೂರವಿರಬಹುದು.
 
ತೂಕ ನಿಯಂತ್ರಣ : ಮೊದಲೇ ಹೇಳಿದಂತೆ ನೀವು ಸಕ್ಕರೆ ಸೇವನೆ ನಿಲ್ಲಿಸಿದ್ರೆ ನಿಮ್ಮ ದೇಹದ ತೂಕವನ್ನು ನೀವು ಕಡಿಮೆಮಾಡಬಹುದು. ಒಂದೇ ವಾರದಲ್ಲಿ ನಿಮ್ಮ ತೂಕ ಗಮನಾರ್ಹವಾಗಿ ಬದಲಾಗಿರುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ :  ನಾವು ಇಷ್ಟಪಟ್ಟು ತಿನ್ನುವ ಸಕ್ಕರೆಯಿಂದ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾದಾಗ ಯಾವುದೇ ರೋಗಗಳು ನಮ್ಮನ್ನು ಸುಲಭವಾಗಿ ಆವರಿಸಬಹುದು. ಇದರಿಂದ ನಾವು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಕ್ಕರೆ ಹಾಗೂ ಸಕ್ಕರೆಯ ಅಂಶವನ್ನು ಹೊಂದಿರುವ ಆಹಾರ ಸೇವನೆಯನ್ನು ಬಿಡುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

click me!