ನಾನ್‌ವೆಜ್‌ ಮುಟ್ಟಲ್ಲ, ಆದ್ರೆ ಮೊಟ್ಟೆ ತಿನ್ನೋ ಆಸೆನಾ, ಇಲ್ಲಿದೆ ವೆಜ್ ಎಗ್ ರೆಸಿಪಿ

By Suvarna News  |  First Published Aug 1, 2023, 2:34 PM IST

ದಿನಕ್ಕೊಂದು ಮೊಟ್ಟೆ ತಿಂದ್ರೆ ಸಾಕು ಆರೋಗ್ಯ ಚೆನ್ನಾಗಿರುತ್ತೆ ಅಂತ ವೈದ್ಯರೇ ಹೇಳ್ತಾರೆ. ಆದ್ರೆ ಹೆಲ್ದೀಯಾಗಿದ್ರೂ ವೆಜಿಟೇರಿಯನ್ಸ್‌ ಮಾತ್ರ ಮೊಟ್ಟೆಯಿಂದ ದೂರನೇ ಇರ್ಬೇಕಾಗುತ್ತೆ. ಮೊಟ್ಟೆ ತಿನ್ಬೇಕು, ಆದ್ರೆ ನಾನು ವೆಜಿಟೇರಿಯನ್ ಅನ್ನೋವವರಿಗಾಗಿಯೇ ಬಂದಿದೆ ಸ್ಪೆಷಲ್ ವೆಜ್‌ ಎಗ್‌. ಅರೆ, ಏನಿದು ಅಂತ ಗಾಬರಿಯಾಗ್ಬೇಡಿ. ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ.


ಮೊಟ್ಟೆಯು ಪ್ರೋಟೀನ್‌, ಪೋಷಕಾಂಶಗಳಿಂದ ತುಂಬಿರುವ ಸೂಪರ್ ಫುಡ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸೇರಿದಂತೆ ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಮೊಟ್ಟೆ ಹೊಂದಿರುತ್ತವೆ. ಇದನ್ನು ನಿಯಮಿತವಾಗಿ ಸೇವಿಸೋದ್ರಿಂದ ಸ್ನಾಯುಗಳು ಮತ್ತು ಮೂಳೆಗಳು ಬಲಗೊಳ್ಳುತ್ತವೆ. ಅಷ್ಟೆ ಅಲ್ಲ ಮೊಟ್ಟೆಯು ಟೇಸ್ಟಿಯಾಗಿರುತ್ತೆ ಮತ್ತು ಅಡುಗೆ ಮಾಡಲು ಸುಲಭವಾಗಿದೆ. ಮಕ್ಕಳಿಂದ ವೃದ್ಧರ ವರೆಗೆ ಎಲ್ಲರೂ ಸುಲಭವಾಗಿ ಮೊಟ್ಟೆಗಳನ್ನು ತಿನ್ನಬಹುದು. ನ್ಯೂಟ್ರಿಷಿಯನ್‌ಗ: ಪ್ರಕಾರ, ಒಂದು ಮೊಟ್ಟೆಯಲ್ಲಿ 6.3 ಗ್ರಾಂ ಪ್ರೋಟೀನ್, 69 ಮಿಗ್ರಾಂ ಪೊಟ್ಯಾಸಿಯಮ್, 5.4% ವಿಟಮಿನ್ ಎ, 2.2% ಕ್ಯಾಲ್ಸಿಯಂ ಮತ್ತು 4.9% ಕಬ್ಬಿಣವಿದೆ. ಹೀಗಾಗಿ ಇದರ ಸೇವನೆ ಆರೋಗ್ಯವನ್ನು ಬಲಪಡಿಸುತ್ತದೆ. 

ಆದರೆ ಅದೆಷ್ಟೇ ಪೋಷಕಾಂಶವಿದ್ರೂ ವೆಜಿಟೇರಿಯನ್ಸ್ ಮಾತ್ರ ಮೊಟ್ಟೆ (Egg) ತಿನ್ನೋಕಾಗಲ್ಲ. ಎಗ್‌ ಕರಿ, ಎಗ್ ಬಿರಿಯಾನಿ ನೋಡಿದ್ರೆ ಆಸೆಯಾಗುತ್ತೆ. ಎಗ್ ತಿನ್ನದೆ ದೇಹಕ್ಕೆ (Body) ಪ್ರೊಟೀನ್ ಸಹ ಮಿಸ್ಸಾಗ್ತಿದೆ ಅಂತ ಕೊರಗುವವರು ಇನ್ಮುಂದೆ ಈ ಸ್ಪೆಷಲ್ ವೆಜ್ ಮೊಟ್ಟೆಯನ್ನು ಟ್ರೈ ಮಾಡ್ಬೋದು. ಇದು ಯಾವುದೇ ನಾನ್‌ವೆಜ್‌ ವಸ್ತುವನ್ನು ಬಳಸದೆ ತಯಾರಿಸೋ ವೆಜ್ ಮೊಟ್ಟೆ. ವೆಜ್ ಮೊಟ್ಟೆಯ ಕರಿಯನ್ನು ಹೇಗೆ ಮಾಡೋದು ಅನ್ನೋ ಮಾಹಿತಿ ಇಲ್ಲಿದೆ.

Tap to resize

Latest Videos

ಬೆಳಗ್ಗಿನ ತಿಂಡಿಗೆ ಒಂದ್ಸಲ ಟ್ರೈ ಮಾಡಿ ನೋಡಿ ಈ ಜಪಾನೀಸ್ ಎಗ್ ಸ್ಯಾಂಡ್‌ವಿಚ್

ಬೇಕಾದ ಪದಾರ್ಥಗಳು
ಕಡಲೇಬೇಳೆ-1 ಕಪ್
ಪೆರಿಪೆರಿ ಮಸಾಲ- 1 ಸ್ಪೂನ್
ಮ್ಯಾಗಿ ಮಸಾಲ- 1 ಸ್ಪೂನ್
ಸ್ಪಲ್ಪಎಣ್ಣೆ
ಕಾಲು ಸ್ಪೂನ್ ಅರಿಶಿನ
ರುಚಿಗೆ ತಕ್ಕಷ್ಟು ಉಪ್ಪು
ಮಲೈ ಪನೀರ್- 1 ಕಪ್‌ 
ಕಾರ್ನ್‌ ಫ್ಲೋರ್‌- 1 ಸ್ಪೂನ್
 
ಹಂತ 1:
ಮೊದಲಿಗೆ ಕಡಲೇಬೇಳೆಯನ್ನು ರೋಸ್ಟ್ ಮಾಡಿ, ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ಸ್ಪಲ್ಪ ಪೆರಿಪೆರಿ ಮಸಾಲ, ಮ್ಯಾಗಿ ಮಸಾಲ, ಸ್ಪಲ್ಪ ನೀರು ಸೇರಿಸಿಕೊಳ್ಳಬೇಕು. ಈ ಹಿಟ್ಟನ್ನು ತೆಗೆದುಕೊಂಡು ಮೊಟ್ಟೆಯೊಳಗಿನ ಯೆಲ್ಲೋಂತೆ ಉಂಡೆ ಮಾಡಿಟ್ಟುಕೊಳ್ಳಬೇಕು. 

ಹಂತ 2:
ನಂತರ 1 ಕಪ್‌ ಮಲೈ ಪನೀರ್‌ಗೆ ಕಾರ್ನ್‌ ಪುಡಿ ಸೇರಿಸಿ, ಸ್ಪಲ್ಪ ಉಪ್ಪು ಹಾಕಿ ಮಿಕ್ಸಿ ಮಾಡಿಕೊಳ್ಳಬೇಕು. ಈಗ ಹದವಾದ ಹಿಟ್ಟು ಸಿದ್ಧವಾಗುತ್ತದೆ. ಇದನ್ನು ಮೊಟ್ಟೆ ಶೇಪ್‌ ಮಾಡಿ,  ಇದಕ್ಕೆ ಈಗಾಗ್ಲೇ ಸಿದ್ಧಮಾಡಿಟ್ಟಿರುವ ಯೆಲ್ಲೋ ಉಂಡೆಯನ್ನು ಸೇರಿಸಿಕೊಳ್ಳಬೇಕು. ನಂತರ ಬಿಸಿಯಾದ ನೀರಿನಲ್ಲಿ ಈ ಮೊಟ್ಟೆಯನ್ನು ಬೇಯಿಸಿಕೊಳ್ಳಬೇಕು. 

ಎಗ್‌ ಪಾನಿಪುರಿ ವಿಡಿಯೋ ವೈರಲ್‌; ಏನೆಲ್ಲಾ ಅವಾಂತರ ಮಾಡ್ತೀರಪ್ಪಾ ಕ್ಯಾಕರಿಸಿ ಉಗಿದ ನೆಟ್ಟಿಗರು!

ಹಂತ 3:
ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ (Onion) ಹಾಕಿ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಟೊಮೆಟೋ ಪೇಸ್ಟ್‌ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. (ಟೊಮೆಟೋ ಬೇಯಿಸಿ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು). ನಂತರ ಇದಕ್ಕೆ ಅಚ್ಚ ಖಾರದ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಅರಿಶಿನ ಪುಡಿ, ಬೇಕಾದಷ್ಟು ಉಪ್ಪನ್ನು ಸೇರಿಸಿಕೊಳ್ಳಬೇಕು. ಒಂದೂವರೆ ಸ್ಪೂನ್ ಚಿಕನ್ ಮಸಾಲ ಆಡ್ ಮಾಡಬೇಕು. ಬೇಕಾದಷ್ಟು ನೀರು ಮತ್ತು ಕಸ್ತೂರಿ ಮೇಥಿ ಸೇರಿಸಿ ಮಿಕ್ಸ್ ಮಾಡಬೇಕು. ಈಗ ಮೊಟ್ಟೆಯನ್ನು ಕಟ್ ಮಾಡಿ ಈ ಮಸಾಲೆಗೆ ಸೇರಿಸಿಕೊಳ್ಳಬೇಕು.

ಇನ್ಯಾಕೆ ತಡ, ನೀವೂ ಸಹ ವೆಜಿಟೇರಿಯನ್ ಆಗಿದ್ದು, ಮೊಟ್ಟೆ ಪ್ರಿಯರಾಗಿದ್ದರೆ ಈ ವೆಜ್ ಎಗ್ ರೆಸಿಪಿಯನ್ನು ಮಿಸ್ ಮಾಡ್ದೆ ಟ್ರೈ ಮಾಡಿ.

 
 
 
 
 
 
 
 
 
 
 
 
 
 
 

A post shared by onu (@soft_7memes)

click me!