ಏನೇನೋ ಹಾಲು ಕುಡಿಯೋದಕ್ಕಿಂತ ಸುಮ್ಮನಿರಿ, ಬೇಕಾದ್ದು ಮೇಯೋ ದೇಸೀ ಹಸು ಹಾಲು ಬೆಸ್ಟ್!

By Suvarna NewsFirst Published Aug 1, 2023, 2:30 PM IST
Highlights

ಹಸುವಿನ ಹಾಲಿಗೆ ಪರ್ಯಾಯವಾದ ಉತ್ಪನ್ನಗಳು ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಹಸುವಿನ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲ, ಸಸ್ಯಾಧಾರಿತ ಹಾಲು ಸೇವನೆ ಮಾಡಿ ಎಂಬ ಜಾಹೀರಾತನ್ನು ನೀವು ಕೇಳಿರಬಹುದು. ಆದ್ರೆ ಇದ್ರಲ್ಲಿ ಯಾವುದು ಬೆಸ್ಟ್ ಗೊತ್ತಾ?
 

ಇಂದಿಗೂ, ವಿಶ್ವದ ಹೆಚ್ಚಿನ ಜನಸಂಖ್ಯೆಯು ಆಹಾರದಲ್ಲಿ  ಸರಿಯಾದ ಪ್ರಮಾಣದ ಪೌಷ್ಟಿಕಾಂಶ ತೆಗೆದುಕೊಳ್ತಿಲ್ಲ. ವಿಜ್ಞಾನಿಗಳು ಅಗ್ಗದ ಪೌಷ್ಟಿಕಾಂಶದ ಆಯ್ಕೆಗಳನ್ನು ಹುಡುಕುತ್ತಿದ್ದಾರೆ.  ಈ ಬಗ್ಗೆ ಈಗಾಗಲೇ ಅನೇಕ ಪರೀಕ್ಷೆ ನಡೆದಿದೆ. ವಿಜ್ಞಾನಿಗಳು, ಹಸುವಿನ ಹಾಲು ಹಾಗೂ ಪರ್ಯಾಯ ಹಾಲಿನ ಮಧ್ಯೆ ಇರುವ ವ್ಯತ್ಯಾಸ ಪತ್ತೆ ಹಚ್ಚುವ ಕೆಲಸ ಮಾಡಿದ್ದಾರೆ. 

ಹಸು (Cow) ವಿನ ಹಾಲು ಆರೋಗ್ಯ (Health) ಕ್ಕೆ ಒಳ್ಳೆಯದಲ್ಲ ಎನ್ನುವ ಚರ್ಚೆಗಳು ಈಗಿನ ದಿನಗಳಲ್ಲಿ ಕೇಳಿ ಬರ್ತಿವೆ. ಈ ಮಧ್ಯೆ ಹಸುವಿನ ಹಾಲಿ (Milk) ಗೆ ಪರ್ಯಾಯವಾಗಿ ಓಟ್ ಹಾಲು, ಸೋಯಾ ಹಾಲು ಮತ್ತು ಬಾದಾಮಿ ಹಾಲು ಮುಂತಾದ ಹೆಚ್ಚಿನ ಸಸ್ಯ ಆಧಾರಿತ ಹಾಲು ಹೆಚ್ಚು ಜನಪ್ರಿಯವಾಗುತ್ತಿವೆ. ಹೊಸ ಅಧ್ಯಯನದಲ್ಲಿ ಈ ಸಸ್ಯ ಆಧಾರಿತ ಯಾವುದೇ ಹಾಲು ಹಸುವಿನ ಹಾಲಿಗೆ ಸಮನಲ್ಲ ಎಂದು ಹೇಳಿದೆ. ಹಸುವಿನ ಹಾಲಿನಷ್ಟು ಪೌಷ್ಟಿಕಾಂಶವನ್ನು ಉಳಿದ ಹಾಲುಗಳು ಹೊಂದಿಲ್ಲ ಎಂದು ಅಧ್ಯಯನ ಹೇಳಿದೆ. ಹಸುವಿನ ಹಾಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪ್ರಮುಖ ಮೂಲ. ಸಸ್ಯ-ಆಧಾರಿತ ಹಾಲಿನ ಪರ್ಯಾಯಗಳ ಪೌಷ್ಟಿಕಾಂಶ ಹಸುವಿನ ಹಾಲಿಗೆ ಪರ್ಯಾಯವಾಗಬಲ್ಲದೆ ಎನ್ನುವ ಬಗ್ಗೆ ನಿರ್ಣಯಿಸಲು, ಸಂಶೋಧಕರು 2023 ರಲ್ಲಿ ಯುಎಸ್ ನಲ್ಲಿ ಮಾರಾಟವಾಗುತ್ತಿರುವ 200 ಕ್ಕೂ ಹೆಚ್ಚು ಸಸ್ಯ ಆಧಾರಿತ ಹಾಲಿನ ಪರ್ಯಾಯ ಉತ್ಪನ್ನಗಳನ್ನು ಪರಿಶೀಲಿಸಿದ್ದಾರೆ. ಹಸುವಿನ ಹಾಲಿಗೆ ಹೋಲಿಸಿದರೆ  ಕೇವಲ ಶೇಕಡಾ 12ರಷ್ಟು  ಹಾಲಿನ ಪರ್ಯಾಯ ಉತ್ಪನ್ನಗಳು ಹೋಲಿಸಬಹುದಾದ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೋಟೀನ್  ಈ ಎಲ್ಲಾ ಮೂರು ಪೋಷಕಾಂಶಗಳನ್ನು ಒಳಗೊಂಡಿತ್ತು.

Latest Videos

ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಉಂಟಾಗುತ್ತೆ ಅನ್ನೋದು ನಿಜಾನ?

ಮಿನ್ನೇಸೋಟ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್ ಕೋ ಆರ್ಡಿನೇಟಿಂಗ್ ಸೆಂಟರ್‌ನ ಸಹಾಯಕ ಪ್ರಾಧ್ಯಾಪಕ ಮತ್ತು ಸಹಾಯಕ ನಿರ್ದೇಶಕ ಅಬಿಗೈಲ್ ಜಾನ್ಸನ್, ಜುಲೈ 22-25 ರಂದು ಬೋಸ್ಟನ್‌ನಲ್ಲಿ ನಡೆದ ಅಮೇರಿಕನ್ ಸೊಸೈಟಿ ಫಾರ್ ನ್ಯೂಟ್ರಿಷನ್‌ನ ವಾರ್ಷಿಕ ಸಭೆಯಾದ ನ್ಯೂಟ್ರಿಷನ್ 2023 ರಲ್ಲಿ ಸಂಶೋಧನಾ ವರದಿಯನ್ನು ಪ್ರಸ್ತುತಪಡಿಸಿದ್ದಾರೆ. ಸಸ್ಯ-ಆಧಾರಿತ ಹಾಲಿನ ಪರ್ಯಾಯಗಳು ಹಸುವಿನ ಹಾಲಿಗೆ ಸಮನಾದ ಪೌಷ್ಟಿಕಾಂಶ ನೀಡುವುದಿಲ್ಲ ಎಂಬುದಕ್ಕೆ ಈ ಅಧ್ಯಯನ ಪುರಾವೆ ನೀಡುತ್ತದೆ. ಗ್ರಾಹಕರು ಸಸ್ಯ ಆಧಾರಿತ ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲವೆ ಬೇರೆ ಮೂಲಗಳಿಂದ ಅದನ್ನು ಪಡೆಯುವ ಪ್ರಯತ್ನ ನಡೆಸಬೇಕು ಎಂದವರು ಹೇಳಿದ್ದಾರೆ. 

ಪ್ರತಿ ಉತ್ಪನ್ನದ  ಪೌಷ್ಟಿಕಾಂಶದ ಮಾಹಿತಿಯನ್ನು ಅಂದಾಜು ಮಾಡಲು ಪೌಷ್ಟಿಕಾಂಶದ ಲೆಕ್ಕಾಚಾರದ ಪ್ರೋಗ್ರಾಂ ಅನ್ನು ಸಂಶೋಧಕರು ಅನ್ವಯಿಸಿದ್ದರು. ನಂತರ ಅವರು ಒಂದು ವರ್ಗದೊಳಗಿನ ವಿವಿಧ ಉತ್ಪನ್ನಗಳ ಪೌಷ್ಟಿಕಾಂಶದ ಅಂಶವನ್ನು ಹೋಲಿಸಿದ್ದರು. ಉದಾಹರಣೆಗೆ, ಬಾದಾಮಿ ಹಾಲು, ಓಟ್ ಹಾಲು ಮತ್ತು ಸೋಯಾ ಹಾಲನ್ನು ಹಸುವಿನ ಹಾಲಿಗೆ ಹೋಲಿಸಿ ನೋಡಿದ್ದರು.

Health Tips: ಅಕ್ಕಿಯಿಂದ ತೂಕ ಹೆಚ್ಚುವ ಭಯ ಬೇಡ್ವೇ ಬೇಡ: ಕೆಂಪಕ್ಕಿ ಆರೋಗ್ಯಕ್ಕೆ ಬೇಕು

ಅಧ್ಯಯನದಲ್ಲಿ ಸೇರಿಸಲಾದ ಉತ್ಪನ್ನಗಳಲ್ಲಿ ಸುಮಾರು ಮೂರನೇ ಎರಡರಷ್ಟು ಬಾದಾಮಿ, ಓಟ್ಸ್ ಮತ್ತು  ಸೋಯಾದಿಂದ ತಯಾರಿಸಲ್ಪ ಉತ್ಪನ್ನಗಳಾಗಿವೆ. 170 ಸಸ್ಯ ಆಧಾರಿತ ಹಾಲಿನ ಪರ್ಯಾಯಗಳಲ್ಲಿ  ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡೂ ಬಲವರ್ಧಿತವಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಶೇಕಡಾ 60 ಓಟ್ ಆಧಾರಿತ ಉತ್ಪನ್ನಗಳು, ಶೇಕಡಾ 69ರಷ್ಟು ಸೋಯಾ ಆಧಾರಿತ ಮತ್ತು ಶೇಕಡಾ 66 ರಷ್ಟು ಬಾದಾಮಿ ಆಧಾರಿತ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡೂ ಸಮೃದ್ಧವಾಗಿವೆ. ಇನ್ನು ಸರಾಸರಿ ಪ್ರೋಟೀನ್ ಅಂಶವು 240 ಮಿಲಿಗೆ 2.0 ಗ್ರಾಂ  ಇತ್ತು. ಮುಂದಿನ ದಿನಗಳಲ್ಲಿ ಸಂಶೋಧಕರು ಸಸ್ಯ ಆಧಾರಿತ ಹಾಲಿನ ಪರ್ಯಾಯಗಳಲ್ಲಿ ಇತರ ಪೋಷಕಾಂಶಗಳನ್ನು ಪತ್ತೆ ಮಾಡುವ ಆಲೋಚನೆ ಮಾಡಿದ್ದಾರೆ.  ಹಸುವಿನ ಹಾಲು ಹೊಂದಿರದ ಕೆಲವು ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಇದು ಸಹಾಯವಾಗಲಿದೆಯೇ ಎಂದು ಪರೀಕ್ಷಿಸಲಿದ್ದಾರೆ. 

ಶುದ್ಧ ಭಾರತೀಯ - ದೇಸಿ ತಳಿಗಳಿಂದ ಸಿಗುವ ಹಾಲು ಎಲ್ಲರಿಗೂ ಆರೋಗ್ಯಕರು. ಅದರಲ್ಲೂ ದೇಸಿ ತಳಿ ಆಗಿರಬೇಕು. ಹಾಗಂತೆ ಅವನ್ನು ಕಟ್ಟಿ ಹಾಕಿದರೆ ಉಪಯೋಗವಿಲ್ಲ. ಅದು ಹೊರ ಹೋಗಿ, ಬಿಸಿಲಲ್ಲಿ ಓಡಾಡಿ, ಎಲ್ಲೆಂದರಲ್ಲಿ ಅಲೆದು, ತನಗೆ ಬೇಕಾದದ್ದನ್ನ ಮೇಯ್ದು, ಬಂದು ಹಾಲು ಕೊಡಬೇಕು. ಅಂಥ ಹಸುವಿನ ಹಾಲು ನಿಜವಾಗಲೂ ಒಳ್ಳೇಯದು. ಪ್ಯಾಕಲ್ಲಿ ಸಿಗುವ ಹಾಲಿನಲ್ಲಿ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಕೊಡುವುದರಿರಲಿ, ಇರೋ ರೋಗ ನಿರೋಧಕ ಶಕ್ತಿಯನ್ನೇ ಕುಂದಿಸುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ತಜ್ಞರು.

click me!