ಬರ್ಗರ್ ಅಂದ್ರೆ ಬಾಯಲ್ಲಿ ನೀರೂರುತ್ತೆ. ಆದ್ರೆ ಬರ್ಗರ್ ತೂಕ ಏರಿಸುತ್ತೆ ಎನ್ನವು ಕಾರಣಕ್ಕೆ ಜನರು ಅದನ್ನು ತಿನ್ನಲು ಹಿಂದೇಟು ಹಾಕ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ರೆ ಆರೋಗ್ಯಕರ ಬರ್ಗರ್ ಟ್ರೈ ಮಾಡಿ, ಎಂಜಾಯ್ ಮಾಡಿ.
ನಮ್ಮ ದೇಶದ ತಿಂಡಿ ಅಲ್ಲದೇ ಇದ್ದರೂ ಇಲ್ಲಿ ಬಹಳ ಪೇಮಸ್ ಆಗಿರುವ ಎಲ್ಲರೂ ಇಷ್ಟಪಟ್ಟು ತಿನ್ನುವ ತಿಂಡಿಗಳಲ್ಲಿ ಬರ್ಗರ್ ಕೂಡ ಒಂದು. ಸಂಜೆಯಾದ ತಕ್ಷಣ ಹಲವಾರು ಮಂದಿ ಫಿಜ್ಜಾ, ಬರ್ಗರ್ ಮುಂತಾದ ನಾನಾ ಬಗೆಯ ಸ್ನಾಕ್ಸ್ ಗಳನ್ನು ಅರಸಿ ಹೋಗುತ್ತಾರೆ. ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಜನ ಇಂತಹ ಸ್ನ್ಯಾಕ್ಸ್ ಅನ್ನು ಮುಗಿಬಿದ್ದು ತಿನ್ನುವುದನ್ನು ಬಿಡುವುದಿಲ್ಲ.
ಅನೇಕ ಚಾಟ್ಸ್ (Chats) ಸೆಂಟರ್ ಗಳಲ್ಲಿ ಜನರು ಬರ್ಗರ್ ತಿನ್ನುತ್ತಿರುವುದನ್ನು ನೀವು ನೋಡಿರಬಹುದು. ಬರ್ಗರ್ (Burger) ಎಂದಾಕ್ಷಣ ಸಾಮಾನ್ಯವಾಗಿ ನೀವು ಆಲೂ ಟಿಕ್ಕಿ ಬರ್ಗರ್ ಅಥವಾ ಅಥವಾ ವೆಜ್ ಬರ್ಗರ್ ಅನ್ನು ತಿಂದಿರುತ್ತೀರಾ. ಆದರೆ ಇಂದು ನಾವು ನಿಮಗೆ ರುಚಿಯೂ ಆದ, ಆರೋಗ್ಯಕ್ಕೂ ಒಳ್ಳೆಯದಾದ ರಾಗಿ ಟಿಕ್ಕಿ ಬರ್ಗರ್ ರೆಸಿಪಿಯನ್ನು ತಿಳಿಸಲಿದ್ದೇವೆ. ಬರ್ಗರ್ ತಿನ್ನುವ ಆಸೆಯಿದ್ದರೂ ಆರೋಗ್ಯ (Health)ದ ಕಾರಣ ಬರ್ಗರ್ ಅನ್ನು ದೂರ ಇಟ್ಟವರು ಕೂಡ ಯಾವ ಚಿಂತೆಯಿಲ್ಲದೇ ಈ ರಾಗಿ ಟಿಕ್ಕಿ ಬರ್ಗರ್ ಅನ್ನು ತಿನ್ನಬಹುದು. ಈ ರಾಗಿ ಟಿಕ್ಕಿ ತಿನ್ನೋದ್ರಿಂದ ಆರೋಗ್ಯವೂ ಚೆನ್ನಾಗಿರುತ್ತೆ ಮತ್ತು ಜನರ ಬರ್ಗರ್ ತಿನ್ನಬೇಕೆನ್ನುವ ಕ್ರೇವಿಂಗ್ ಕೂಡ ಕಡಿಮೆಯಾಗುತ್ತೆ.
ಬೆಳಗ್ಗೆದ್ದು ಏನೇನೋ ತಿನ್ಬೇಡಿ, ಆರೋಗ್ಯಕ್ಕೆ ಈ ಉಪಾಹಾರ ಬೆಸ್ಟ್
ರಾಗಿ ಟಿಕ್ಕಿ ಬರ್ಗರ್ ಅನ್ನು ರಾಗಿಯಿಂದ ಮಾಡುತ್ತಾರೆ. ರಾಗಿಯಲ್ಲಿ ಅವಶ್ಯಕ ಪೋಷಕಾಂಶಗಳಾದ ಕಾರ್ಬೋಹೈಡ್ರೇಟ್, ವಿಟಮಿನ್ ಗಳು ಮತ್ತು ಖನಿಜಗಳು ಸಮೃದ್ಧವಾಗಿದೆ. ರಾಗಿ ಉತ್ಕರ್ಷಣ ನಿರೋಧಕಗಳನ್ನು ಕೂಡ ಹೊಂದಿದೆ. ಇದು ಜೀವಕೋಶ ಹಾನಿಯಾಗುವುದನ್ನು ತಪ್ಪಿಸುತ್ತದೆ. ರಾಗಿ ಗ್ಲುಟನ್ ಮುಕ್ತ ಆಹಾರವಾಗಿದ್ದು ಉದರದ ಖಾಯಿಲೆ ಇರುವವರಿಗೆ ಮತ್ತು ಆಹಾರದ ಅಲರ್ಜಿ ಹೊಂದಿರುವವರಿಗೆ ಇದು ಸೂಕ್ತವಾಗಿದೆ. ರಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಇದರಿಂದ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುತ್ತದೆ ಹಾಗೂ ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಇಷ್ಟೆಲ್ಲ ಒಳ್ಳೆಯ ಗುಣಗಳನ್ನು ಹೊಂದಿರುವ ರಾಗಿಯಿಂದ ಬರ್ಗರ್ ತಯಾರಿಸುವ ವಿಧಾನ ಇಲ್ಲಿದೆ.
ರಾಗಿಯ ಬರ್ಗರ್ ಮಾಡುವ ವಿಧಾನ: ಬೇಯಿಸಿದ ರಾಗಿ 1 ಕಪ್, ಬ್ಲಾಕ್ ಬೀನ್ಸ್, ಬ್ರೆಡ್ ಕ್ರಂಪ್ಸ್ ½ ಕಪ್, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, 2 ಬೆಳ್ಳುಳ್ಳಿಯ ಪೇಸ್ಟ್, ಒಂದು ಚಿಕ್ಕ ಚಮಚ ಜೀರಿಗೆ ಪುಡಿ, ಕೆಂಪುಮೆಣಸು ½ ಚಮಚ, ¼ ಚಮಚ ಉಪ್ಪು, ಕಾಳು ಮೆಣಸು ¼ ಚಮಚ, ಆಲಿವ್ ಎಣ್ಣೆ 1 ದೊಡ್ಡ ಚಮಚ, ಬರ್ಗರ್ ಬನ್ಸ್, ನಿಮಗೆ ಇಷ್ಟವಾದ ಸಲಾಡ್, ಟಮಾಟರ್, ಈರುಳ್ಳಿ, ಅವಾಕಾಡೊ ಮುಂತಾದ ಟಾಪಿಂಗ್.
Healthy Food : ಮಾವು – ಬಾಳೆ ಹಣ್ಣಿನ ಶೇಕ್ ನಲ್ಲಿ ಯಾವುದು ಬೆಸ್ಟ್?
ಬರ್ಗರ್ ಮಾಡುವ ವಿಧಾನ :
• ಒಂದು ದೊಡ್ಡ ಬಾಣಲೆಯಲ್ಲಿ ಕಪ್ಪು ಬೀನ್ಸ್ ಅನ್ನು ಮ್ಯಾಶರ್ ಸಹಾಯದಿಂದ ಪೇಸ್ಟ್ ಮಾಡಿಕೊಳ್ಳಿ.
• ಒಂದು ಪಾತ್ರೆಗೆ ಬೇಯಿಸಿದ ಕಪ್ಪು ಬೀನ್ಸ್, ಬ್ರೆಂಡ್ ಕ್ರಂಪ್ಸ್, ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು, ಕಪ್ಪು ಮೆಣಸು ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
• ಬರ್ಗರ್ ಪ್ಯಾಟೀಸ್ ಮಾಡಲು ಮಿಶ್ರಣವನ್ನು ಸಮಾನ ಭಾಗಗಳಾಗಿ ವಿಂಗಡಿಸಿ ಅದನ್ನು ಬೇಕಾದ ಆಕಾರ ಮಾಡಿಕೊಳ್ಳಿ.
• ಮಧ್ಯಮ ಉರಿಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಬರ್ಗರ್ ಪ್ಯಾಟೀಸ್ ಅನ್ನು ಎರಡೂ ಬದಿಯಲ್ಲೂ 4-5 ನಿಮಿಷಗಳವರೆಗೆ ಅಥವಾ ಗೋಲ್ಡನ್ ಬಣ್ಣ ಬಂದು ಗರಿಗರಿಯಾಗುವವರಗೆ ಬೇಯಿಸಿ.
• ರಾಗಿಯ ಪ್ಯಾಟೀಸ್ ಬೆಂದ ನಂತರ ಸ್ವಲ್ಪ ಸಮಯದ ತನಕ ಅದನ್ನು ತಣ್ಣಗಾಗಲು ಬಿಡಿ. ರಾಗಿಯ ಪ್ಯಾಟೀಸ್ ಅನ್ನು ಬರ್ಗರ್ ಬನ್ಸ್ ಮೇಲಿಟ್ಟು ನಿಮಗೆ ಇಷ್ಟವಾಗುವ ಟಾಪಿಂಗ್ಸ್ ಅನ್ನು ಅದರ ಮೇಲಿಟ್ಟು ಬರ್ಗರ್ ಅನ್ನು ರೆಡಿಮಾಡಿ.