Food
ಬೆಳಗ್ಗಿನ ಉಪಾಹಾರದಲ್ಲಿ ಜನರು ಹೆಚ್ಚಾಗಿ ಸೇವಿಸುವ ಕೆಲವು ಸಾಮಾನ್ಯ ಆಹಾರಗಳಿವೆ. ಆದ್ರೆ ಇದು ಆರೋಗ್ಯಕ್ಕೆ ಒಳ್ಳೆಯದಾ, ಗೊತ್ತಿಲ್ಲ. ಇಲ್ಲಿ ನಾವು ಸೌತ್ ಇಂಡಿಯನ್ ಬೆಸ್ಟ್ ಬ್ರೇಕ್‌ಫಾಸ್ಟ್‌ಗಳ ಮಾಹಿತಿ ನೀಡಿದ್ದೇವೆ.
ಎಲ್ಲಾ ಋತುಗಳಲ್ಲೂ ಮೊಸರನ್ನ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಯಾರಿಸುವುದು ಸಹ ಸುಲಭ. ಬೇಯಿಸಿದ ಅನ್ನ ಮತ್ತು ಮೊಸರು ಮತ್ತು ಅನ್ನ ಮಿಕ್ಸ್ ಮಾಡಿ ಒಗ್ಗರಣೆ ಹಾಕಿದರಾಯಿತು.
ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿಯಾಗಿ ಅಡುಗೆ ಮನೆಯೊಂದರಲ್ಲಿ ಹುಟ್ಟಿಬೆಳೆದ ಇಡ್ಲಿಗೆ ಇಂದು ದೇಶವ್ಯಾಪ್ತಿ ಜನಪ್ರಿಯತೆಯಿದೆ. ಎಂಥಾ ಆರೋಗ್ಯ ಸಮಸ್ಯೆಯಿದ್ದವರೂ ಇಡ್ಲಿ ತಿನ್ನೋಕೆ ಹಿಂದೆ-ಮುಂದೆ ನೋಡ್ಬೇಕಾಗಿಲ್ಲ.
ಸಾದಾ ದೋಸೆ, ಉದ್ದಿನ ದೋಸೆ, ಹೀರೆಕಾಯಿ ದೋಸೆ ಹೀಗೆ ಹಲವು ವಿಧದ ದೋಸೆಗಳನ್ನು ಮಾಡಬಹುದು. ಇವು ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲೂ ಹೀರೆಕಾಯಿ ದೋಸೆ ವೈಟ್ ಲಾಸ್‌ಗೆ ನೆರವಾಗುತ್ತದೆ.
ಉಪ್ಪಿಟ್ಟು, ಕೆಲವೆಡೆ ಉಪ್ಮಾ ಎಂದು ಕರೆಯಲ್ಪಡುವ ಈ ಉಪಾಹಾರ ಆರೋಗ್ಯಕ್ಕೆ ಒಳ್ಳೆಯದು. ರವೆ ಅಥವಾ ಗೋಧಿ ನುಚ್ಚಿನಿಂದ ಮಾಡೋ ಈ ತಿಂಡಿ ಲೋ ಕ್ಯಾಲೋರಿ ಹೊಂದಿರುತ್ತದೆ. ಹೆಚ್ಚು ತರಕಾರಿ ಸೇರಿಸೋ ಕಾರಣ ಹೈ ಪ್ರೊಟೀನ್ ಲಭ್ಯ.
ಪ್ರೋಟೀನ್ ಹಾಗೂ ಫೈಬರ್ ಧಾರಾಳವಾಗಿ ತುಂಬಿರುವ ಓಟ್ಸ್ ಉತ್ತಪ್ಪಮ್ ಬೆಳಗ್ಗಿನ ನಾಷ್ಟಾಕ್ಕೆ ಅತ್ಯುತ್ತಮ. ಚಟ್ನಿ, ಸಾಂಬಾರ್ ಜೊತೆ ಇದನ್ನು ಸವಿಯಲು ಚೆನ್ನಾಗಿರುತ್ತದೆ.
ರಾಗಿ ಬಾಯಿಗೆ ಅಷ್ಟು ರುಚಿ ಎನಿಸದೇ ಹೋದರೂ, ಆರೋಗ್ಯಕಾರಿ. ರಾಗಿ, ರವೆ, ಮೊಸರು, ಮೆಣಸಿನ ಕಾಯಿ, ಕರಿಬೇವು, ಈರುಳ್ಳಿ, ಮೆಣಸಿನ ಪುಡಿ, ಉಪ್ಪು ಹಾಗೂ ನೀರನ್ನು ಮಿಕ್ಸ್ ಮಾಡಿ ರುಚಿಕರವಾದ ದೋಸೆ ಮಾಡಿಕೊಳ್ಳಬಹುದು.