ಫುಡ್ (Food)ನಲ್ಲಿ ಎಕ್ಸಪರಿಮೆಂಟ್ ಮಾಡೋದು ಇತ್ತೀಚಿಗೆ ಟ್ರೆಂಡ್ (Trend) ಆಗ್ತಿದೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ (Combination) ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ (Viral) ಆದರೆ, ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಸದ್ಯಕ್ಕೆ ಎಲ್ಲರ ಗಮನ ಸೆಳೀತಾ ಇರೋದು ಐಸ್‌ಕ್ರೀಂ ಸೂಪ್ ನೂಡಲ್ಸ್. (Icecream Soup)
ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶ. ಇಲ್ಲಿ ಆಯಾ ರಾಜ್ಯಕ್ಕೆ ಅಲ್ಲಿಯ ಭಾಷೆ, ಸಂಸ್ಕೃತಿ. ಆಚಾರ-ವಿಚಾರಗಳು ಇರುವ ಹಾಗೆಯೇ ಪ್ರತ್ಯೇಕವಾದ ಆಹಾರಪದ್ಧತಿಯೂ ಇದೆ. ಭಾರತೀಯರು ಪುರಾತನ ಕಾಲದಿಂದಲೂ ಆಹಾರಪ್ರಿಯರು. ಹೀಗಾಗಿಯೇ ವೆರೈಟಿ ವೆರೈಟಿ ಫುಡ್ (Food) ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಏನನ್ನಾದರೂ ಎಕ್ಸಮರಿಮೆಂಟ್ ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಆದರೆ ಇನ್ನು ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಇನ್‌ಸ್ಟ್ರಾಗ್ರಾಂ, ಫುಡ್ ಬ್ಲಾಗರ್ಸ್ ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರಗಳು ಎಲ್ಲರಿಗೂ ಪರಿಚಯವಾಗುತ್ತಿದೆ.
ಫುಡ್ ಟ್ರೆಂಡ್‌ನಲ್ಲಿ ಮ್ಯಾಗಿ ಮಿಲ್ಕ್‌ಶೇಕ್, ಫುಡ್ ಮಸಾಲೆ ದೋಸೆ ಐಸ್ ಕ್ರೀಂ ರೋಲ್ (Masala Dosa Ice Cream Roll), ಮೊಮೋಸ್ ಐಸ್‌ಕ್ರೀಂ ರೋಲ್ ಹೀಗೆ ಹಲವು ವಿಚಿತ್ರ ಆಹಾರಗಳು ಟ್ರೆಂಡ್ ಆಗಿವೆ. ಮೊನ್ನೆಯಷ್ಟೇ ವಿಚಿತ್ರವಾಗಿರೋ ಫ್ರುಟ್ ಚಾಯ್ ರೆಸಿಪಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಗೆ ಸದ್ಯ ವೈರಲ್ (Viral) ಆಗ್ತಿರೋದು ಐಸ್ ಕ್ರೀಂ ಸೂಪ್. ಅರೆ ಐಸ್‌ಕ್ರೀಂ, ಸೂಪಾ ಯಾವುದು ಕರೆಕ್ಟಾಗಿ ಹೇಳಿ ಅಂತೀರಾ. ನಾವ್ ಹೇಳ್ತಿರೋದು ಐಸ್‌ಕ್ರೀಂ ಮಿಕ್ಸ್ ಮಾಡಿರೋ ನೂಡಲ್ಸ್ ಸೂಪ್ ಬಗ್ಗೆರೀ.
ಹುಳಿ-ಖಾರ ಮಿಶ್ರಿತ ಗ್ರೇವಿ ನೂಡಲ್ಸ್ ತಿನ್ನೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಸೂಪ್‌ಗೆ ನೂಡಲ್ಸ್, ಐಸ್‌ಕ್ರೀಂ ಮಿಕ್ಸ್ ಮಾಡಿದ್ರೆ ಹೇಗಿರುತ್ತೆ. ಜಪಾನೀಸ್ ರೆಸ್ಟೋರೆಂಟ್‌ವೊಂದು ಮಾಡಿರೋದು ಇದನ್ನೇ.
Food Trend: ವೈರಲ್ ಆಗ್ತಿದೆ ಮೊಮೋಸ್ ಐಸ್‌ಕ್ರೀಂ ರೋಲ್
ಫ್ರೂಟ್ ಚಾಯ್ ನಂತರ, 'ರಾಮೆನ್ ಸೂಪ್ ವಿತ್ ಐಸ್ ಕ್ರೀಂ' ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಜಪಾನೀಸ್ ರೆಸ್ಟೋರೆಂಟ್‌ವೊಂದು ಡಿಫರೆಂಟ್ ಆಗಿರೋ ಈ ಐಸ್‌ಕ್ರೀಂ ಸೂಪ್‌ನ್ನು ತಯಾರಿಸಿದೆ. ನೂಡಲ್ಸ್ ಮತ್ತು ಸೂಪ್‌ಗೆ ಕಟ್ ಮಾಡಿದ ಐಸ್‌ಕ್ರೀಂನ್ನು ಸೇರಿಸುವುದನ್ನು ವೀಡಿಯೋದಲ್ಲಿ ನೋಡಬಹುದು. ಗ್ರಾಹಕರು ಇದನ್ನು ಖುಷಿಯಿಂದ ಸವಿಯುತ್ತಾರೆ. ಸಿಹಿ ಮತ್ತು ಹುಳಿಯಾಗಿರುವ ಸೂಪ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಬರ್ತವೆ. ಈ ಹಿಂದೆ ಚೋಲೆ ಬಟೂರೆ ಐಸ್‌ಕ್ರೀಂ, ವಡಾ ಪಾವ್ ಐಸ್‌ಕ್ರೀಂ, ಚಾಕೋಲೇಟ್ ಪಾನಿಪುರಿ ಮೊದಲಾದ ಐಸ್‌ಕ್ರೀಂನಿಂದ ಮಾಹಿದ ತಿನಿಸುಗಳ ವೈರಲ್ ಆಗಿದ್ದವು.
3.3 ಮಿಲಿಯನ್ ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಕೆಲವರು ಈ ವಿಚಿತ್ರ ಆಹಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದೆಂಥಾ ಕೆಟ್ಟ ಆಹಾರವೆಂದು ಟೀಕಿಸಿದ್ದಾರೆ. ಕೆಲವೊಬ್ಬರು ನಾನು ಖಂಡಿತ ಇದನ್ನು ಟ್ರೈ ಮಾಡುತ್ತೇನೆ ಎಂದರೆ, ಇನ್ನು ಕೆಲವೊಬ್ಬರು ನಾನು ಐಸ್‌ಕ್ರೀಂ ತಿನ್ನುವ ಆಸಕ್ತಿಯನ್ನೇ ಕಳೆದುಕೊಂಡೆ ಎಂದಿದ್ದಾರೆ.
Food Trend: ವೈರಲ್ ಆಗ್ತಿದೆ ಮಸಾಲೆ ದೋಸೆ ಐಸ್ ಕ್ರೀಂ ರೋಲ್
ಮೊನ್ನೆಯಷ್ಟೇ ಗುಜರಾತ್‌ನ ಸೂರತ್‌ನ ರಸ್ತೆ ಬದಿ ವ್ಯಾಪಾರಿಯೊಬ್ಬರು ತಯಾರಿಸಿದ ಫ್ರುಟ್ ಟೀ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಗಈ ಚಾಯ್‌ವಾಲ ಬಾಳೆಹಣ್ಣು, ಸಪೋಟ ಮತ್ತು ಸೇಬು ಹಣ್ಣು ಸೇರಿಸಿ ಚಹಾ ಮಾಡಿದ್ದರು.. foodie_incarnate ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫ್ರುಟ್ ಚಾಯ್ ತಯಾರಿಸುವ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. ಆಹಾರ ಬ್ಲಾಗರ್ ಅಮರ್ ಸಿರೋಹಿ ಇದನ್ನು ಪೋಸ್ಟ್ ಮಾಡಿದ್ದರು.