ನಾನ್‌ವೆಜ್‌ ಕಡಿಮೆ ತಿನ್ನಿ, ವೆಜ್ ಜಾಸ್ತಿ ತಿನ್ನಿ..ತೂಕ ಬೇಗ ಕಡಿಮೆಯಾಗುತ್ತೆ

By Suvarna News  |  First Published Mar 25, 2022, 9:04 PM IST

ತೂಕ (Weight)ಹೆಚ್ಚಳ ಎಂಬುದು ಇವತ್ತಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕವನ್ನು ಇಳಿಸ್ಕೊಂಡು ಸ್ಲಿಮ್ (Slim) ಆಗಿರ್ಬೇಕು ಅಂತ ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಇದಕ್ಕಾಗಿ ವ್ಯಾಯಾಮ, ಯೋಗ, ಧ್ಯಾನ, ಡಯೆಟ್‌ ಮೊದಲಾದುದನ್ನು ಮಾಡ್ತಾರೆ. ಆದರೆ ನಿಮಗೆ ಗೊತ್ತಾ ? ನಾನ್‌ವೆಜ್‌ ಬಿಟ್ಟು ವೆಜಿಟೇರಿಯನ್‌ (Vegetarian) ಆದ್ರೆ ಸುಲಭವಾಗಿ ತೂಕ ಇಳಿಸ್ಕೋಬೋದು.


ಒಬ್ಬೊಬ್ಬರು ಒಂದೊಂದು ರೀತಿಯ ಆಹಾರಾಭ್ಯಾಸವನ್ನು ಅಳವಡಿಸಿಕೊಂಡಿರುತ್ತಾರೆ. ಕೆಲವೊಬ್ಬರು ಸಸ್ಯಾಹಾರಿಗಳು (Vegetarian), ಕೆಲವೊಬ್ಬರು ಮಾಂಸಾಹಾರಿಗಳು (Non Vegetarian) ಹೀಗೆ. ದೇಹದ ತೂಕ (Weight Loss)ವನ್ನು ಇಳಿಸಿಕೊಳ್ಳಬೇಕು ಅನ್ನೋದೆ ನಿಮ್ಮ ಉದ್ದೇಶವಾಗಿದ್ದರೆ ಅದಕ್ಕಾಗಿ ಸಮತೋಲನ ಆಹಾರ (Food) ಪದ್ಧತಿಯನ್ನು ಹಾಗೂ ಆರೋಗ್ಯಕಾರಿ ಜೀವನ ಶೈಲಿ (Lifestyle)ಯನ್ನು ತಪ್ಪದೇ ಅನುಸರಿಸಬೇಕು. ಆದರೆ ತೂಕ ಇಳಿಸಿಕೊಳ್ಳೋಕೆ ಯಾವಾ ಆಹಾರಾಭ್ಯಾಸ ಬೆಸ್ಟ್ ಅನ್ನೋದು ನಿಮ್ಗೆ ಗೊತ್ತಾ ?

ಸಸ್ಯಾಹಾರಿ-ಆಧಾರಿತ ಆಹಾರವನ್ನು ಸೇವಿಸುವ ವಯಸ್ಕರು ಮತ್ತು ಮಕ್ಕಳು ಸಾಮಾನ್ಯವಾಗಿ ಮಾಂಸಾಹಾರಿ ಆಹಾರವನ್ನು ಸೇವಿಸುವವರಿಗಿಂತ ತೆಳ್ಳಗಿರುತ್ತಾರೆ. ಸಸ್ಯಾಹಾರಿ ಆಹಾರವು ಸಾಮಾನ್ಯವಾಗಿ ಹಣ್ಣುಗಳು ಮತ್ತು ತರಕಾರಿಗಳು (Vegetables), ಧಾನ್ಯಗಳು, ಫೈಬರ್ ಮತ್ತು ಸಸ್ಯ-ಆಧಾರಿತ ಪ್ರೋಟೀನ್‌ (Protein)ಗಳನ್ನು ಕೇಂದ್ರೀಕರಿಸಿದೆ. ಇದು ಹೆಚ್ಚು ತೃಪ್ತಿಕರ ಮತ್ತು ಕಡಿಮೆ ಕ್ಯಾಲೋರಿಗಳು ಮತ್ತು ಕೊಬ್ಬನ್ನು ಹೊಂದಿರುತ್ತದೆ.

Tap to resize

Latest Videos

ಏನೂ ಮಾಡ್ದೆ ಸಣ್ಣಗಾಗಿದ್ದೀರಾ ? ಇದು ಖುಷಿಪಡೋ ಸಮಯ ಅಲ್ಲ, ಜೀವಕ್ಕೇ ತೊಂದ್ರೆಯಾಗ್ಬೋದು..!

ನಾನ್‌ವೆಜ್ ತಿನ್ನುವವರಲ್ಲಿ ಅಧಿಕ ತೂಕದ ಸಮಸ್ಯೆ
ಆದರೆ ಯಾರು ಹೆಚ್ಚಾಗಿ ನಾನ್‌ವೆಜ್ ತಿನ್ನುತ್ತಾರೋ ಅವರಲ್ಲಿ ತೂಕ ಹೆಚ್ಚಳದ ಸಮಸ್ಯೆ ಕಂಡು ಬರುತ್ತದೆ. ಕೋಳಿ ಮಾಂಸ (Chicken), ಮೊಟ್ಟೆಗಳು ಸೇರಿದಂತೆ ಇತರ ಮಾಂಸಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೊರಿಗಳು, ಕೊಲೆಸ್ಟ್ರಾಲ್, ಸ್ಯಾಚುರೇಟೆಡ್ ಕೊಬ್ಬಿನ ಅಂಶ ದೇಹಕ್ಕೆ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ದೇಹದಲ್ಲಿ ಬೊಜ್ಜಿನ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.

ಆರೋಗ್ಯ ತಜ್ಞರೇ ಹೇಳುವ ಪ್ರಕಾರ ಮಾಂಸಾಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವ ಜನರಿಗೆ ಅತಿಯಾದ ತೂಕದ ಸಮಸ್ಯೆ ಕಂಡು ಬರುತ್ತದೆ. ಇದರಿಂದಾಗಿ ಬೊಜ್ಜಿನ ಸಮಸ್ಯೆಗಳು ಹಾಗೂ ಕೆಲವೊಂದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ದೇಹದ ತೂಕ ಹೆಚ್ಚಾದಂತೆ ಸಕ್ಕರೆಕಾಯಿಲೆ, ಅಧಿಕ ರಕ್ತದೊತ್ತಡ, ಹೃದಯದ ತೊಂದರೆ ಮೊದಲಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಮಾತ್ರವಲ್ಲ ಇದರಿಂದ ಕ್ಯಾನ್ಸರ್‌ ಅಪಾಯವೂ ಹೆಚ್ಚಾಗುತ್ತದೆ. ಹೀಗಾಗಿ ಕಡಿಮೆ ಕೊಬ್ಬಿನಾಂಶಗಳನ್ನು ಒಳಗೊಂಡಿರುವ ಡೈರಿ ಉತ್ಪನ್ನಗಳು, ಹಣ್ಣು- ತರಕಾರಿಗಳು, ಕೆಲವು ಬಗೆಯ ಬೇಳೆ ಕಾಳುಗಳು ಹಾಗೂ ಧಾನ್ಯಗಳನ್ನು ಹೆಚ್ಚು ಸೇವನೆ ಮಾಡಬೇಕು.

ತೂಕ ಕಳೆದುಕೊಳ್ಳೋಕೆ ಟ್ರೈ ಮಾಡ್ತಿದ್ದೀರಾ ? ಮೊದ್ಲು ಬಾಡಿ ಟೈಪ್ ಯಾವ್ದು ತಿಳ್ಕೊಳ್ಳಿ

ಸಸ್ಯಾಹಾರಿ ಆಹಾರದ ಪ್ರಯೋಜನಗಳೇನು ?
ಸಸ್ಯಾಹಾರಿ ಆಹಾರವು ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ. ಏಕೆಂದರೆ ವಯಸ್ಕರು, ಮಕ್ಕಳು ಮತ್ತು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ತಮ್ಮ ಎಲ್ಲಾ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸಬಹುದು. ಆದರೆ ಸಸ್ಯಾಹಾರ ಸೇವನೆಯಿಂದ ಜೀವಸತ್ವಗಳು B12 ಮತ್ತು Dಯಂತಹ ಕೆಲವು ವಿಟಮಿನ್ ಮತ್ತು ಖನಿಜಗಳ ಕೊರತೆ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಪೂರಕಗಳು ಬೇಕಾಗಬಹುದು.

ಸಸ್ಯಾಹಾರಿ ಆಹಾರಾಭ್ಯಾಸ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಟೈಪ್ 2 ಮಧುಮೇಹ (Type 2 Diabetes)ವನ್ನು ತಡೆಯಬಹುದು. ಅಸ್ತಮಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ

ತೂಕ ನಷ್ಟಕ್ಕೆ ಯಾವ ಸಸ್ಯಾಹಾರಿ ಆಹಾರಗಳು ಒಳ್ಳೆಯದು ?
ನೀವು ಸಸ್ಯಾಹಾರಿಯಾಗಿದ್ದರೆ ಅಥವಾ ಸಸ್ಯಾಹಾರಿ ಆಹಾರವನ್ನು ಯೋಜಿಸುತ್ತಿದ್ದರೆ, ಸರಿಯಾದ ಪೋಷಣೆಯನ್ನು ಒದಗಿಸಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡಲು ಕೆಳಗಿನ ಆಹಾರಗಳನ್ನು ನಿಮ್ಮ ಪಾಕವಿಧಾನಗಳಲ್ಲಿ ಸೇರಿಸಿಕೊಳ್ಳಬಹುದು. ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಬಾರ್ಲಿ, ಸಂಪೂರ್ಣ ಗೋಧಿ ಪಾಸ್ಟಾ ಮತ್ತು ಬ್ರೆಡ್, ಕಂದು ಅಕ್ಕಿ, ದ್ವಿದಳ ಧಾನ್ಯಗಳು ಮತ್ತು ಮಸೂರ, ಕಡಲೆ, ಕಪ್ಪು ಹುರುಳಿ, ಓಟ್ಸ್, ನವಣೆ ಅಕ್ಕಿ, ಸಿಹಿ ಆಲೂಗಡ್ಡೆ, ಹೂಕೋಸು, ಕೋಸುಗಡ್ಡೆ, ಎಲೆಕೋಸು ಸೇವನೆ ಉತ್ತಮವಾಗಿದೆ

click me!