300 ಕಾಯಿಲೆಗೆ ಔಷಧವಾದ್ರೂ ಅಪ್ಪಿತಪ್ಪಿಯೂ ಇವ್ರು ನುಗ್ಗೆಕಾಯಿ ತಿನ್ಬಾರದು

ನುಗ್ಗೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಅದ್ರಲ್ಲಿ ಸಾಕಷ್ಟು ಪೋಷಕಾಂಶವಿದೆ. ಅನೇಕಾನೇಕ ರೋಗಕ್ಕೆ ಇದ್ರಲ್ಲಿ ಮದ್ದಿದೆ. ಆದ್ರೆ ಇದ್ರಲ್ಲೂ ಸೈಡ್ ಇಫೆಕ್ಟ್ ಇದೆ. ಯಾರೆಲ್ಲ ಇದನ್ನು ತಿನ್ನಬಾರದು  ಗೊತ್ತಾ? 
 

These people should not consume drumstick even by mistake

ಕೊರೊನಾ ನಂತ್ರ ಜನರು ತಮ್ಮ ಜೀವನ ಶೈಲಿ ಹಾಗೂ ಆರೋಗ್ಯ (Health)ದಲ್ಲಿ ಸಾಕಷ್ಟು ಬದಲಾವಣೆ ಮಾಡ್ಕೊಂಡಿದ್ದಾರೆ. ಆಯುರ್ವೆದ, ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ನುಗ್ಗೆಕಾಯಿ (Drumstick) ಆರೋಗ್ಯಕ್ಕೆ ಒಳ್ಳೆಯದು. ಪ್ರಧಾನಿ ನರೇಂದ್ರ ಮೋದಿ ಕೂಡ ನುಗ್ಗೆ ಕಾಯಿ ಮಹತ್ವವನ್ನು ಈ ಹಿಂದೆ ಹೇಳಿದ್ದರು. ಅದಾದ್ಮೇಲೆ ನುಗ್ಗೆ ಕಾಯಿಗೆ ಮೊದಲಿಗಿಂತ ಹೆಚ್ಚು ಬೇಡಿಕೆ ಬಂದಿದೆ.  ಅನೇಕು ತಮ್ಮ ಡಯಟ್ ನಲ್ಲಿ ನುಗ್ಗೆಕಾಯಿ ಸೇರಿಸಿಕೊಂಡಿದ್ದಾರೆ.  ಹಲವು ವರ್ಷಗಳಿಂದ ಆಯುರ್ವೇದ (Ayurveda)ದಲ್ಲಿ ಅನೇಕ ರೋಗಗಳ ಚಿಕಿತ್ಸೆಗೆ ನುಗ್ಗೆ ಕಾಯಿ, ಸೊಪ್ಪನ್ನು ಬಳಸಲಾಗುತ್ತಿದೆ. ಇದರ ಎಲೆಗಳು ಕಿತ್ತಳೆಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ಬಾಹಣ್ಣಿಗಿಂತ 15 ಪಟ್ಟು ಹೆಚ್ಚು ಪೊಟ್ಯಾಸಿಯಮ್ ಹೊಂದಿದೆ. 300 ರೋಗಗಳಿಗೆ ಚಿಕಿತ್ಸೆ ನೀಡಲು ಈ ನುಗ್ಗೆ ಕಾಯಿಯನ್ನು ಬಳಸಲಾಗುತ್ತದೆ. ನೋವು ನಿವಾರಕ, ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ, ಕ್ಯಾನ್ಸರ್ ವಿರೋಧಿ, ಮಧುಮೇಹ ವಿರೋಧಿ, ಆಂಟಿವೈರಲ್ ಆಗಿರುವ ಇದ್ರಲ್ಲಿ ವಿಟಮಿನ್ ಎ, ಬಿ, ಸಿ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್ ಎ, ಬಿ, ಸಿ ಸಮೃದ್ಧವಾಗಿದೆ. ವಿಟಮಿನ್ ಎ, ವಿಟಮಿನ್ ಬಿ1, ಬಿ2, ಫೋಲೇಟ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಸತು ಸೇರಿದಂತೆ  ಅನೇಕ ಪೋಷಕಾಂಶ ಇದ್ರಲ್ಲಿದೆ.  ಇಷ್ಟೊಂದು ಗುಣವಿದ್ರೂ ನುಗ್ಗೆಕಾಯಿ ಸೇವನೆ ಎಲ್ಲರಿಗೂ ಒಳ್ಳೆಯದಲ್ಲ. ನಾವಿಂಯಾರೆಲ್ಲ ನುಗ್ಗೆಕಾಯಿ ಸೇವನೆ ಮಾಡ್ಬಾರದು ಎಂದು ಬಗ್ಗೆ ಮಾಹಿತಿ ನೀಡ್ತೇವೆ. 

ಪ್ರೆಗ್ನೆಂಟ್ : ಗರ್ಭಿಣಿಯರು ನುಗ್ಗೆಕಾಯಿ, ನುಗ್ಗೆ ಸೊಪ್ಪನ್ನು ಸೇವನೆ ಮಾಡದಿರುವುದು ಒಳ್ಳೆಯದು. ಇದು ಹೆಚ್ಚು ಉಷ್ಣತೆಯನ್ನು ಹೊಂದಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಗರ್ಭಿಣಿಯರು ನುಗ್ಗೆಕಾಯಿ ತಿಂದ್ರೆ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.  

Latest Videos

ಬಾದಾಮಿಯೊಂದಿಗೆ ಇವುಗಳನ್ನು ಎಂದಿಗೂ ತಿನ್ನಬೇಡಿ!

ಪಿರಿಯಡ್ಸ್ : ಪಿರಿಯಡ್ಸ್ ಸಮಯದಲ್ಲಿ ಹೆಚ್ಚು ಬ್ಲೀಡಿಂಗ್ ಆಗುವ ಮಹಿಳೆಯರು ಕೂಡ ನುಗ್ಗೆಕಾಯಿಯನ್ನು ಕಡಿಮೆ ಸೇವನೆ ಮಾಡುವಂತೆ ತಜ್ಞರು ಸಲಹೆ ನೀಡ್ತಾರೆ. ಅತಿಯಾಗಿ ಮೊರಿಂಗಾ ಸೇವಿಸುವುದರಿಂದ ದೇಹದಲ್ಲಿ ಪಿತ್ತ ದೋಷ ಹೆಚ್ಚಾಗುತ್ತದೆ. ಆದ್ದರಿಂದ ಮುಟ್ಟಿನ ಸಮಯದಲ್ಲಿ ನುಗ್ಗೆಕಾಯಿ ತಿನ್ನುವುದನ್ನು ತಪ್ಪಿಸಬೇಕು.

ಲೋ ಪಿಬಿ : ಲೋ ಬಿಪಿ ಸಮಸ್ಯೆಯಿಂದ ಬಳಲುವ ಜನರು ಕೂಡ ನುಗ್ಗೆ ಕಾಯಿ, ಸೊಪ್ಪನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡ್ಬೇಕು. ಇದು ಅತಿ ಬೇಗ ಬಿಪಿಯನ್ನು ಮತ್ತಷ್ಟು ಕಡಿಮೆ ಮಾಡುವ ಕಾರಣ ಸಮಸ್ಯೆ ಉಲ್ಬಣಿಸುವ ಸಂಭವವಿದೆ. 

ಗ್ಯಾಸ್ಟ್ರಿಕ್ – ಅಲ್ಸರ್  : ಯಾರಿಗೆ ಗ್ಯಾಸ್ಟ್ರಿಕ್ ಹಾಗೂ ಅಲ್ಸರ್ ಸಮಸ್ಯೆ ಇದ್ಯೋ ಅವರೂ ಕೂಡ ನುಗ್ಗೆ ಕಾಯಿ, ಸೊಪ್ಪು ಸೇರಿದಂತೆ ಅದಕ್ಕೆ ಸಂಬಂಧಿಸಿದ ಆಹಾರದಿಂದ ದೂರ ಇರುವುದು ಒಳ್ಳೆಯದು. ಅತಿಯಾಗಿ ನುಗ್ಗೆಕಾಯಿ ತಿನ್ನೋದ್ರಿಂದ ಗ್ಯಾಸ್ಟ್ರಿಕ್ ಹೆಚ್ಚಾಗುತ್ತದೆ. 

ಮಾನಸಿಕ ಆರೋಗ್ಯ : ನುಗ್ಗೆಕಾಯಿ ತಿನ್ನುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಗಳು ಉಂಟಾಗುತ್ತೆ. ನುಗ್ಗೆಕಾಯಿಯಲ್ಲಿ ಐಸೋಥಿಯೋಸೈನೇಟ್ ಮತ್ತು ಗ್ಲೈಕೋಸೈಡ್ ಸೈನೈಡ್ ನಂತಹ ಅಂಶಗಳು ಕಂಡುಬರುತ್ತವೆ. ಈ ಅಂಶಗಳನ್ನು ದೇಹಕ್ಕೆ ವಿಷಕಾರಿ ಎಂದು ಪರಿಗಣಿಸಲಾಗುತ್ತದೆ.

ಮೊಸರು ತಿಂದ ನಂತರ ನೀರು ಕುಡಿಯಬಾರದು, ಕುಡಿದ್ರೆ ಏನಾಗುತ್ತೆ?

ಹೆರಿಗೆ ನಂತ್ರ ನುಗ್ಗೆಕಾಯಿ ಬೇಡ : ಹೆರಿಗೆಯಾದ ತಕ್ಷಣ ನುಗ್ಗೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಹೆರಿಗೆಯಾದ ತಕ್ಷಣ ನುಗ್ಗೆಕಾಯಿ   ನುಗ್ಗೆಕಾಯಿ ತೊಗಟೆ ಇತ್ಯಾದಿಗಳನ್ನು ಬಳಸುವುದು ಹಾನಿಕಾರಕ.  ಸ್ತನ್ಯಪಾನ ಮಾಡುವವರು ನುಗ್ಗೆಕಾಯಿ ತಿಂದ್ರೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

vuukle one pixel image
click me!