ನೀವು ನಿಮ್ಮ ಹೃದಯ (Heart)ವನ್ನು ಆರೋಗ್ಯವಾಗಿಡಲು ಬಯಸುವಿರಾ ? ಹಾಗಿದ್ರೆ ನಿಮ್ಮ ಫುಡ್ ಲಿಸ್ಟ್‌ನಲ್ಲಿ ಈ ಆಹಾರ (Food)ಗಳು ಇಲ್ಲದಂತೆ ನೋಡಿಕೊಳ್ಳಿ. ಹೃದಯದ ಆರೋಗ್ಯಕ್ಕೆ ಅಡ್ಡಿಯಾಗುವ ಆಹಾರಗಳು ಯಾವುವೆಲ್ಲಾ?
ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಹೃದಯರಕ್ತನಾಳದ ಕಾಯಿಲೆಗಳು (Cardiovascular Diseases) ಹೆಚ್ಚಾಗುತ್ತಿದೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರ ಸಾವಿಗೆ ಇದೂ ಕೂಡಾ ಒಂದು ಪ್ರಮುಖ ಕಾರಣವಾಗಿದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಭಾರತದಲ್ಲಿ 4 ರಲ್ಲಿ 1 ಸಾವು ಹೃದಯರಕ್ತನಾಳದ ಕಾಯಿಲೆಗಳಿಂದ ಉಂಟಾಗುತ್ತದೆ, ಇದು ಹೃದಯ (Heart) ವೈಫಲ್ಯದಂತಹ ತೊಡಕುಗಳಿಗೆ ಕಾರಣವಾಗಬಹುದು. ಪ್ರಪಂಚದ ಸುಮಾರು 40 ಪ್ರತಿಶತದಷ್ಟು ಹೃದಯ ವೈಫಲ್ಯದ ರೋಗಿಗಳು ಭಾರತದವರು. ಜಾಗತಿಕವಾಗಿ 28.4 ವರ್ಷಗಳ ಸರಾಸರಿ ವಯಸ್ಸಿನೊಂದಿಗೆ ಭಾರತವು ಅತ್ಯಂತ ಕಿರಿಯ ಜನಸಂಖ್ಯೆಯನ್ನು ಹೊಂದಿದೆ.
ದುರದೃಷ್ಟವಶಾತ್, ಹೆಚ್ಚುತ್ತಿರುವ ಯುವಜನರು ಅರಿವಿಲ್ಲದೆ ಕೆಟ್ಟ ಜೀವನಶೈಲಿ (Lifestyle)ಯನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚಿದ ಒತ್ತಡದ ಮಟ್ಟಗಳು, ಕಳಪೆ ಆಹಾರ (Food) ಮತ್ತು ವ್ಯಾಯಾಮ (Exercise) ಹೃದಯರಕ್ತನಾಳದ ಕಾಯಿಲೆಗಳನ್ನು ಹೆಚ್ಚಿಸುತ್ತಿದೆ. ಇಂಥವರು ಹೃದಯ ವೈಫಲ್ಯ, ಅಪಧಮನಿಗಳಲ್ಲಿನ ಅಡಚಣೆ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದಯರಕ್ತನಾಳದ ಕಾಯಿಲೆಯ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಮುಚ್ಚಿಹೋಗಿರುವ ಅಪಧಮನಿಗಳು ಹೃದಯ ಸಂಬಂಧಿ ಕಾಯಿಲೆಗಳಿಗೆ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಅಪಧಮನಿಯ ಗೋಡೆಗಳ ಮೇಲೆ ಕೊಬ್ಬಿನ ನಿಕ್ಷೇಪಗಳು ಸಂಗ್ರಹವಾದಾಗ ಅದನ್ನು ಅಪಧಮನಿಕಾಠಿಣ್ಯ ಎಂದು ಕರೆಯಲಾಗುತ್ತದೆ. ಮುಚ್ಚಿಹೋಗಿರುವ ಅಪಧಮನಿಗಳು ಸಾಮಾನ್ಯವಾಗಿ ಹೃದಯ ಮತ್ತು ದೇಹದ ವಿವಿಧ ಭಾಗಗಳಿಗೆ ರಕ್ತದ ಹರಿವನ್ನು ನಿರ್ಬಂಧಿಸುತ್ತವೆ. ಹಾಗಿದ್ರೆ ಹೃದಯದ ಆರೋಗ್ಯಕ್ಕೆ ಅಡ್ಡಿಯಾಗುವ ಆಹಾರಗಳು ಯಾವುವೆಲ್ಲಾ?
ಕಿತ್ತಳೆ ಅಥವಾ ನಿಂಬೆ, ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು
ಫ್ರೆಂಚ್ ಫ್ರೈಸ್: ಡೀಪ್-ಫ್ರೈಡ್ ಫ್ರೆಂಚ್ ಫ್ರೈಗಳನ್ನು ತಿನ್ನದೇ ಇರುವುದು ಕಷ್ಟ. ಆದರೆ ಫ್ರೆಂಚ್ ಫ್ರೈಸ್ (French Fries) ನಿಮ್ಮ ರಕ್ತದ ಸಕ್ಕರೆಯನ್ನು ತಕ್ಷಣವೇ ಹೆಚ್ಚಿಸುವ ಕಾರ್ಬೋಹೈಡ್ರೇಟ್‌ಗಳ ಮೂಲದಿಂದ ತುಂಬಿವೆ ಎಂದು ನಿಮಗೆ ತಿಳಿದಿದೆಯೇ. ಅಷ್ಟೇ ಅಲ್ಲ, ಅವುಗಳು ಹೆಚ್ಚು ಉಪ್ಪು ಮತ್ತು ಕೊಬ್ಬಿನಿಂದ ಕೂಡಿರುತ್ತವೆ.
ಐಸ್ ಕ್ರೀಮ್: ಐಸ್‌ಕ್ರೀ (Ice cream) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಊಟವಾದ ಮೇಲೆ ಒಂದು ಐಸ್‌ಕ್ರೀಂ ತಿಂದರೆ ಚಂದ ಎಂದು ಪ್ರತಿದಿನ ಐಸ್‌ಕ್ರೀಂ ತಿನ್ನುವವರೂ ಇದ್ದಾರೆ. ಆದ್ರೆ ಈ ಐಸ್ ಕ್ರೀಮ್‌ಗಳು ಸ್ಯಾಚುರೇಟೆಡ್ ಕೊಬ್ಬು ಮತ್ತು ಕ್ಯಾಲೊರಿಗಳಲ್ಲಿ ಅಧಿಕವಾಗಿರುತ್ತವೆ, ಇದು ತೂಕ ಹೆಚ್ಚಾಗಲು ಮತ್ತು ಕಳಪೆ ಹೃದಯದ ಆರೋಗ್ಯಕ್ಕೆ ಕಾರಣವಾಗುತ್ತದೆ.
ಪಿಜ್ಜಾ: ಈಟ್ ದಿಸ್, ನಾಟ್ ದಟ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಪಿಜ್ಜಾ (Pizza)ದಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ಹೃದಯಕ್ಕೆ ಅತಿ ಹೆಚ್ಚು ಹಾನಿಕರವಾಗಿದೆ. ಸಂಪೂರ್ಣ ಪಿಜ್ಜಾ ತಿನ್ನುವ ಕ್ರೇಜ್ ನಿಮಗಿದ್ದರೆ. ಅಟ್‌ಲೀಸ್ಟ್ ಅದನ್ನು ಒಂದು ಸ್ಲೈಸ್‌ಗಷ್ಟೇ ಸೀಮಿತಗೊಳಿಸಿ.
ಹೆಲ್ದೀ ಅಂತ ಇವುಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬೇಡಿ..!
ಸೋಡಾ ಪಾನೀಯಗಳು: ಯಾವುದೇ ರೂಪದಲ್ಲಿ ಸೋಡಾ (Soda) ನಿಮಗೆ ಒಳ್ಳೆಯದಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ಕೆಲವು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಬಹುದು, ತೂಕ ಹೆಚ್ಚಾಗುವುದನ್ನು ಉತ್ತೇಜಿಸಬಹುದು ಮತ್ತು ನಿಮ್ಮ ಮೆಟಬಾಲಿಕ್ ಆರೋಗ್ಯವನ್ನು ಅಡ್ಡಿಪಡಿಸಬಹುದು. ಸೋಡಾ ಅಥವಾ ಇತರ ಸೋಡಾ ಸೇರಿಸಿದ ತಂಪು ಪಾನೀಯಗಳು ಹೃದಯದ ಆರೋಗ್ಯವನ್ನು ಹದಗೆಡಿಸುತ್ತದೆ. ಸೋಡಾ ಕುಡಿಯಬೇಕು ಎಂದು ಅನಿಸಿದಾಗಲ್ಲೆಲ್ಲಾ ನೀರನ್ನು ಕುಡಿಯಿರಿ. ಅಥವಾ ನೀರಿಗೆ ನಿಂಬೆ ಅಥವಾ ತಾಜಾ ಹಣ್ಣಿನ ರಸ ಸೇರಿಸಿ ಕುಡಿಯಿರಿ.
ಮಾಂಸ: ಕೆಂಪು ಮಾಂಸ (Meat) ಮತ್ತು ಸಂಸ್ಕರಿಸಿದ ಮಾಂಸವು ರುಚಿಕರವಾಗಿರಬಹುದು. ಆದರೆ ತಿನ್ನಲು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಇದು ಎಂದಿಗೂ ಕಾಣಿಸಿಕೊಂಡಿಲ್ಲ ಎಂಬುದಕ್ಕೆ ಹಲವು ಕಾರಣಗಳಿವೆ. ವಾಸ್ತವವಾಗಿ, ಹೃದಯದ ಸಮಸ್ಯೆಗಳು ಮತ್ತು ಬೊಜ್ಜು ಹೊಂದಿರುವವರು ಯಾವಾಗಲೂ ಸಂಸ್ಕರಿಸಿದ ಮಾಂಸ ಮತ್ತು ಕೆಂಪು ಮಾಂಸದಿಂದ ದೂರವಿರಲು ಹೇಳಲಾಗುತ್ತದೆ. ಸುಮಾರು 20,000 ವ್ಯಕ್ತಿಗಳಲ್ಲಿ ಇತ್ತೀಚಿನ ಅವಲೋಕನದ ಅಧ್ಯಯನವು ಕೆಂಪು ಮತ್ತು ಸಂಸ್ಕರಿಸಿದ ಮಾಂಸದ ಹೆಚ್ಚಿನ ಸೇವನೆಯು ಕೆಟ್ಟ ಹೃದಯದ ಕಾರ್ಯಕ್ಕೆ ಸಂಬಂಧಿಸಿದೆ ಎಂದು ಕಂಡುಹಿಡಿದಿದೆ.