ಸಾಮಾನ್ಯವಾಗಿ ರಸ್ತೆ ಬದಿ ಗೋಲ್ಗಪ್ಪ ಮಾರೋ ಹುಡುಗರು ಹೇಗಿರುತ್ತಾರೆ ಅಂತ ನೀವು ನೋಡಿರಬಹುದು. ಸಾಮಾನ್ಯ ಧಿರಿಸು ಧರಿಸಿ ಅವರು ಗೋಲ್ಗಪ್ಪ ಮಾರಾಟ ಮಾಡುತ್ತಿರುತ್ತಾರೆ. ಆದರೆ ಪಂಜಾಬ್‌ನ ಈ ಯುವಕರು ಸೂಟ್ ಧರಿಸಿ ಹೋಟೇಲ್ ಮ್ಯಾನೇಜರ್‌ಗಳಂತೆ ಡ್ರೆಸ್ ಸ್ಟೈಲ್ ಮಾಡಿಕೊಂಡು ರಸ್ತೆ ಬದಿ ಪಾನಿಪುರಿ ಮಾರಾಟ ಮಾಡುತ್ತಿದ್ದಾರೆ. ಫುಡ್ ವ್ಲಾಗರ್ ಒಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಾಕಿದ್ದು 5 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ.
ಯಾವುದೇ ಕೆಲಸವೂ ದೊಡ್ಡದಲ್ಲ ಹಾಗೆಯೇ ಯಾವುದೇ ಕೆಲಸವೂ ಸಣ್ಣದಲ್ಲ ಎಂಬುದು ನಮ್ಮ ತಂದೆ ತಾಯಿ ಮತ್ತು ಹಿರಿಯರು ಹೆಚ್ಚಾಗಿ ಹೇಳುವ ಮಾತಾಗಿದೆ. ಅದರಂತೆ ಪಂಜಾಬ್‌ನ (Panjab) ಈ 22 ವರ್ಷದ ಹುಡುಗರು ವಿಶೇಷ ಕಾರಣಕ್ಕಾಗಿ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾನೆ. ಈ ಸಹೋದರರು ರಸ್ತೆಬದಿಯಲ್ಲಿ ಉಪಾಹಾರ ಗೃಹವನ್ನು ಸ್ಥಾಪಿಸಿದ್ದು, ಅಲ್ಲಿ ಅವರು ಚಾಟ್ಸ್ ಪಾಪ್ರಿ ಚಾಟ್, ಗೋಲ್ಗಪ್ಪ (Golgappa) ಮತ್ತು ದಹಿ ಭಲ್ಲಾ (Dahi Bhalla) ಮುಂತಾದ ತಿನಿಸುಗಳನ್ನು ಮಾರಾಟ ಮಾಡುತ್ತಾರೆ. ಆದರೆ ಆಹಾರಕ್ಕಿಂತ ಇಲ್ಲಿ ಇವರ ಡ್ರೆಸ್ ಸ್ಟೈಲ್ ಎಲ್ಲರ ಗಮನ ಸೆಳೆದಿದೆ. ಅವರು ಶೂಟು ಬೂಟು ಧರಿಸಿ ಗೋಲ್ಗಪ್ಪ ಮಾರುತ್ತಿರುವುದನ್ನು ನೋಡಿ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಇವರ ಅಂಗಡಿಗೆ ಭೇಟಿ ನೀಡಿದ ಯೂಟ್ಯೂಬರ್ ಹ್ಯಾರಿ ಉಪ್ಪಲ್ ಅವರು ಈ ಪಂಜಾಬ್ ಯುವಕನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಐದು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
undefined
ಗೋಲ್ಗಪ್ಪಗೆ ಈ ವಿಧಾನದಿಂದ ಮನೆಯಲ್ಲೇ ಮಾಡಿ ಗರಿಗರಿ ಪುರಿ!
ಫುಡ್ ವ್ಲಾಗರ್ ಹ್ಯಾರಿ ಉಪ್ಪಲ್ (Harry Uppal) ಮೊಹಾಲಿಯಲ್ಲಿ (Mohali) ರಸ್ತೆಬದಿಯ ಉಪಾಹಾರ ಗೃಹವನ್ನು (Food Stal) ನಡೆಸುತ್ತಿರುವ ಇಬ್ಬರು ಸಹೋದರರ ಕುರಿತು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಹುಡುಗರು ತಮ್ಮ ವ್ಯಾಪಾರದಲ್ಲಿ ದೊಡ್ಡ ಯಶಸ್ಸು ಗಳಿಸುವ ಸಲುವಾಗಿ ಕಳೆದ ಕೆಲವು ತಿಂಗಳುಗಳಿಂದ ನಿಜವಾಗಿಯೂ ಶ್ರಮಿಸುತ್ತಿದ್ದಾರೆ. ಯೂಟ್ಯೂಬರ್ (Youtuber) ಅವರನ್ನು ಯಾಕೆ ಈ ರೀತಿ ಶೂಟ್ ಧರಿಸಿದ್ದೀರಿ ಎಂದು ಕೇಳುತ್ತಾರೆ. ಅದಕ್ಕೆ ಆತ ಇದು ನಾನು ಹೋಟೆಲ್ (Hotel Managment) ಮ್ಯಾನೇಜ್‌ಮೆಂಟ್ ಮಾಡಿದ್ದೇನೆ ಎಂಬುದರ ಸಂಕೇತವಾಗಿದೆ. ನಾನು ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಹೊಂದಿದ್ದೇನೆ ಮತ್ತು ಜನರು ಅದನ್ನು ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ ಮತ್ತು ಜನರು ನಮ್ಮ ಕಥೆಯನ್ನು ತಿಳಿದಿದ್ದಾರೆ ಎಂದು 22 ವರ್ಷದ ಯುವಕ ಹೇಳಿದರು.
Food Tips: ಗೋಲ್‌ಗಪ್ಪಾ ತಿಂದ್ರೆ ತೂಕ ಕಡಿಮೆಯಾಗುತ್ತಾ ?
ಯುವಕರ ಶ್ರಮಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಕಷ್ಟಪಟ್ಟು ದುಡಿಯುವ ಈ ಸಹೋದರರ ಬಗ್ಗೆ ನೆಟಿಜನ್‌ಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಯುವ ಬಾಣಸಿಗರು ಮಿಲಿಯನೇರ್ ಆಗುವ ಹಾದಿಯಲ್ಲಿದ್ದಾರೆ. ಅವರ ಡ್ರೆಸ್ ಕೋಡ್ ( DressCode) ಅವರನ್ನು ಹೆಚ್ಚು ವೃತ್ತಿಪರರನ್ನಾಗಿ ಮಾಡುತ್ತದೆ ಎಂದು ಕಾಮೆಂಟ್ ಮಾಡಿದ್ದು, ಯುವಕರಿಗೆ ಶುಭ ಹಾರೈಸಿದ್ದಾರೆ.
ಪಾನಿಪುರಿ ಅಥವಾ ಗೋಲ್ಗಪ್ಪ ರುಚಿ ಅಂದರೆ ಎಲ್ಲರಿಗೂ ಇಷ್ಟ. ಪಾನಿಪುರಿ ದೇಶದ ಅತ್ಯಂತ ನೆಚ್ಚಿನ ಬೀದಿ ಬದಿ ತಿಂಡಿಗಳಲ್ಲಿ ಒಂದಾಗಿದೆ. ಆದರೆ ಅನೇಕ ಜನರು ತಮ್ಮ ಕಟ್ಟುನಿಟ್ಟಿನ ಆಹಾರ ಯೋಜನೆಯಿಂದಾಗಿ ಪಾನಿಪುರಿ ತಿನ್ನುವುದನ್ನು ತಪ್ಪಿಸುತ್ತಾರೆ. ಆದರೆ ಇಲ್ಲೊಂದು ಶಾಕಿಂಗ್, ಅಲ್ಲ ಸಿಹಿ ಸುದ್ದಿ ಇದೆ. ಅದೇನೆಂದರೆ ಪಾನಿಪುರಿ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ. ಹೌದು ನೀವು ಕೇಳಿದ್ದು ಸರಿಯಾಗಿಯೇ ಇದೆ. ಇದು ನಿಜ. ವಾಸ್ತವವಾಗಿ, ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಪಾನಿಪುರಿ ಸಾಕಷ್ಟು ಸಹಾಯ ಮಾಡುತ್ತದೆ.