ಪೀನಟ್ ಬಟರ್ (Peanut Butter) ಅಂದ್ರೆ ಸಾಕು ಸಾಮಾನ್ಯವಾಗಿ ಎಲ್ರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಇದರ ವಿಶಿಷ್ಟ ರುಚಿ, ಪರಿಮಳ (Smell) ಎಂಥವರಿಗೂ ಇಷ್ಟ ಆಗುತ್ತೆ. ಆದ್ರೆ ಕೆಲವರ ಆರೋಗ್ಯ (Health)ಕ್ಕಿದು ಆಗ್ ಬರಲ್ಲ. ಇದನ್ನು ಪೀನಟ್ ಬಟರ್ ಫೋಬಿಯಾ ಅಂತಾನೂ ಹೇಳ್ತಾರೆ. ಏನಿದು ?
ಕಡಲೇಕಾಯಿ ಬೆಣ್ಣೆ (Peanut Butter) ಪ್ರಪಂಚದ ಅತ್ಯಂತ ಜನಪ್ರಿಯ ಬೆಣ್ಣೆಗಳಲ್ಲಿ ಒಂದಾಗಿದೆ. ಅಲ್ಲದೆ ಇದು ಉತ್ತಮ ಪ್ರೋಟೀನ್ (Protein) ಮೂಲವೂ ಆಗಿರುವ ಕಾರಣ, ಹೆಚ್ಚಾಗಿ ಸ್ಯಾಂಡ್‌ವಿಚ್,ಬರ್ಗರ್‌ಗಳಲ್ಲಿ ಸ್ಪ್ರೆಡ್ ಆಗಿ ಇದನ್ನು ಬಳಸುತ್ತಾರೆ. ಪೀನಟ್ ಬಟರ್ ಪರಿಮಳಭರಿತವಾಗಿದ್ದು, ರುಚಿಕರವೂ ಆಗಿರುವುದರಿಂದ ಇದು ಆಹಾರಕ್ಕೆ ಹೆಚ್ಚು ರುಚಿಯನ್ನು ನೀಡುತ್ತದೆ. ಕಡಲೇಕಾಯಿ ಬೆಣ್ಣೆಯ ಸೇವನೆ ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity Power)ಯನ್ನು ಹೆಚ್ಚಿಸುತ್ತದೆ. ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಸಸ್ಯಾಹಾರಿಗಳಿಗೆ ಪೀನಟ್ ಬಟರ್ ಉತ್ತಮ ಪ್ರೊಟೀನ್‌ನ ಮೂಲವಾಗಿದೆ. ಆದರೆ, ಇಷ್ಟೊಂದು ಆರೋಗ್ಯಕರ ಗುಣಗಳನ್ನು ಹೊಂದಿರುವ ಪೀನಟ್ ಬಟರ್ ಕೂಡಾ ಭಯ ಹುಟ್ಟಿಸುತ್ತೆ ಅನ್ನೋದು ನಿಮ್ಗೆ ಗೊತ್ತಾ ?
ಕಡಲೆಕಾಯಿ ಬೆಣ್ಣೆ ಎಂದರೇನು ?
ಕಡಲೆಕಾಯಿ ಬೆಣ್ಣೆಯು ತುಲನಾತ್ಮಕವಾಗಿ ಸಂಸ್ಕರಿಸದ ಆಹಾರವಾಗಿದೆ. ಕಡಲೇಕಾಯಿಯನ್ನು ಹುರಿದು ಪೇಸ್ಟ್ ಆಗಿ ಬದಲಾಯಿಸಿ ಇದನ್ನು ತಯಾರಿಸಲಾಗುತ್ತದೆ. ಅಲ್ಲದೆ ಇದಕ್ಕೆ, ಸಕ್ಕರೆ, ಟ್ರಾನ್ಸ್ ಕೊಬ್ಬು ಮೊದಲಾದವುಗಳನ್ನು ಸಹ ಸೇರಿಸುತ್ತಾರೆ. ಆದರೆ, ಪ್ರತಿಯೊಬ್ಬರೂ ಕಡಲೇಕಾಯಿ ಬೆಣ್ಣೆಯ ರುಚಿಯನ್ನು ಆಸ್ವಾದಿಸಲು ಸಾಧ್ಯವಿಲ್ಲ. ಕೆಲವರ ದೇಹದಲ್ಲಿ ಪೀನಟ್ ಬಟರ್ ಸೇವನೆ ಅಲರ್ಜಿಯನ್ನುಂಟು ಮಾಡುತ್ತದೆ. ಇದರಿಂದ ಕೆಲವೊಂದು ಆರೋಗ್ಯ (Health) ಸಮಸ್ಯೆಗಳು ಸಹ ಕಾಣಿಸಿಕೊಳ್ಳಬಹುದು. ದಿನಾ ಪೀನಟ್ ಬಟರ್ ತಿನ್ತೀರಾ ? ಹಾಗಿದ್ರೆ ನೀವಿದನ್ನು ತಿಳ್ಕೊಳ್ಳೇಬೇಕು.
ಮಗುವಿಗೆ ಯಾವ ವಯಸ್ಸಿನಲ್ಲಿ ಪೀನಟ್ ಬಟರ್ ನೀಡಬೇಕು?
ಪೀನಟ್ ಬಟರ್ ಫೋಬಿಯಾ !
ಆಹಾರ (Food)ಕ್ಕೂ ಆರೋಗ್ಯಕ್ಕೂ ಅವಿನಾವಭಾವ ಸಂಬಂಧವಿದೆ. ಎಲ್ಲಾ ರೀತಿಯ ಆಹಾರ ಎಲ್ಲಾ ರೀತಿಯ ದೇಹಕ್ಕೂ ಹೊಂದುವುದಿಲ್ಲ. ಕೆಲವೊಂದು ಆಹಾರವನ್ನು ಸೇವಿಸಿದಾಗ ದೇಹ ಪ್ರತಿಕ್ರಿಯಿಸುತ್ತದೆ. ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಅಲರ್ಜಿ, ತುರಿಕೆ, ಹೊಟ್ಟೆನೋವು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವುದಿದೆ. ಹೀಗಾಗಿ ಕೆಲವೊಬ್ಬರು ಕೆಲ ನಿರ್ಧಿಷ್ಟ ಆಹಾರಗಳನ್ನು ಸೇವಿಸಲು ಹಿಂಜರಿಯುತ್ತಾರೆ. ಮೀನನ್ನು ತಿನ್ನುವಾಗ ಮುಳ್ಳು ಗಂಟಲಲ್ಲಿ ಸಿಲುಕಿ ಮೀನು ತಿನ್ನುವುದನ್ನೇ ಬಿಟ್ಟವರಿದ್ದಾರೆ. ಹಾಗೆಯೇ ಹಲವು ಆಹಾರಗಳನ್ನು ತಿನ್ನುವುದು ಹಲವು ಕಾರಣಕ್ಕೆ ಭಯ ಹುಟ್ಟಿಸಬಹುದು.
ಆಹಾರದ ಕುರಿತಾದ ಈ ಭಯವನ್ನು ಅಥವಾ ಫೋಬಿಯಾವನ್ನು ಸಾಮಾನ್ಯವಾಗಿ 'ಸಿಬೋಫೋಬಿಯಾ' ಎಂದು ಕರೆಯಲಾಗುತ್ತದೆ. ಪೀನಟ್ ಬಟರ್ ಹಲವರ ದೇಹಕ್ಕೆ ಒಗ್ಗುವುದಿಲ್ಲ. ಇದನ್ನು 'ಅರಾಚಿಬುಟೈರೋ ಫೋಬಿಯಾ' ಎಂದು ಕರೆಯಲಾಗುತ್ತದೆ.
Weight loss Tips : ರಾತ್ರಿ ಹೊತ್ತು ಈ ಆಹಾರ ಸೇವಿಸಿದ್ರೆ ತೂಕ ಇಳಿಸೋದು ಸುಲಭ
ಅರಾಚಿಬುಟೈರೋ ಫೋಬಿಯಾ ಎಂದರೇನು ?
'ಅರಾಚಿಬುಟೈರೋ ಫೋಬಿಯಾ' ಎಂಬ ಪದವು ಗ್ರೀಕ್ ಪದಗಳಾದ 'ಅರಾಚಿ' ಅಂದರೆ ನೆಲದ ಕಾಯಿ, 'ಬ್ಯುಟೈರ್' ಎಂದರೆ ಬೆಣ್ಣೆ ಮತ್ತು ಕೊನೆಯದಾಗಿ 'ಫೋಬಿಯಾ' ಎಂಬ ಭಯದಿಂದ ಬಂದಿದೆ. ಈ ಫೋಬಿಯಾ ಅಕ್ಷರಶಃ 'ಕಡಲೆಕಾಯಿ ಬೆಣ್ಣೆಯಿಂದ ಉಸಿರುಗಟ್ಟಿಸುವ ಭಯ' ಎಂದರ್ಥ. ಕಡಲೆಕಾಯಿ ಬೆಣ್ಣೆಯ ಭಯದ ಬಗ್ಗೆ ನಾವು ಮಾತನಾಡುವಾಗ, ಒಬ್ಬ ವ್ಯಕ್ತಿಯು ಅದನ್ನು ನೋಡುತ್ತಾನೆ ಮತ್ತು ಹೆದರುತ್ತಾನೆ ಎಂದು ಅರ್ಥವಲ್ಲ. ಅರಾಚಿಬ್ಯುಟಿರೋಫೋಬಿಯಾ ಎಂದರೆ ಕಡಲೆಕಾಯಿ ಅಂಟು ಪದಾರ್ಥವಾಗಿದೆ. ಹೀಗಾಗಿ ಇದನ್ನು ತಿನ್ನುವಾಗ ಇದು ಬಾಯಿಯ ಮೇಲ್ಭಾಗದಲ್ಲಿ ಅಂಟಿಕೊಳ್ಳುತ್ತದೆ. ಹೀಗಾಗಿಯೇ ಇದು ಕೆಲವು ಜನರಿಗೆ ಉಸಿರುಗಟ್ಟಿಸುವ ಭಾವನೆಯನ್ನು ನೀಡುತ್ತದೆ. ಇವಿಷ್ಟೇ ಅಲ್ಲದೆ, ಪೀನಟ್ ಬಟರ್, ತೀವ್ರ ಅಲರ್ಜಿಯ ಪ್ರತಿಕ್ರಿಯೆಗಳನ್ನು ಹೊಂದಿರುವ ಆಹಾರಗಳಲ್ಲಿ ಒಂದಾಗಿದೆ. ಇದು ಈ ಫೋಬಿಯಾಕ್ಕೆ ಮೂಲ ಕಾರಣ. .
ಫೋಬಿಯಾದ ಲಕ್ಷಣಗಳು ಮತ್ತು ಅದರ ಚಿಕಿತ್ಸೆ
ಈ ಫೋಬಿಯಾದ ಕೆಲವು ಸಾಮಾನ್ಯ ಭೌತಿಕ ಚಿಹ್ನೆಗಳೆಂದರೆ ಬೆವರುವುದು, ಬಡಿತ, ದೃಷ್ಟಿ ಮಂದವಾಗುವುದು, ಉಸಿರಾಟದ ತೊಂದರೆ, ನಡುಗುವ ಮಾತು ಮತ್ತು ವಾಕರಿಕೆ ಮೊದಲಾದ ಸಮಸ್ಯೆ ಕಂಡು ಬರುತ್ತದೆ. ಈ ಫೋಬಿಯಾದ ಮಾನಸಿಕ ಲಕ್ಷಣಗಳೂ ಇವೆ. ಈ ಭಯವನ್ನು ಹೊಂದಿರುವ ವ್ಯಕ್ತಿಯು ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗದಿರಬಹುದು, ಪಾರ್ಶ್ವವಾಯು ಅನುಭವಿಸಬಹುದು ಅಥವಾ ಉಸಿರುಗಟ್ಟಿ ಸಾಯುವ' ರೀತಿಯ ಆಲೋಚನೆಗಳನ್ನು ಹೊಂದಿರಬಹುದು.