Health Tips: ಆಹಾರ ತಿಂದ ಮೇಲೆ ಚಳಿಯಾಗುತ್ತಾ ? ಇದೇ ಕಾರಣವಿರಬಹುದು

By Suvarna News  |  First Published Feb 6, 2022, 10:12 AM IST

ಐಸ್‌ ಕ್ರೀಂ, ತಣ್ಣಗಿನ ಜ್ಯೂಸ್ ಕುಡಿದಾಗ ಮಾತ್ರವಲ್ಲ, ಸಾಮಾನ್ಯ ಆಹಾರ (Food)ಗಳನ್ನು ತಿಂದಾಗಲೂ ದೇಹ ತಂಪಾದ ಅನುಭವವಾಗುತ್ತದೆಯಾ ? ಅದಕ್ಕಾಗಿ ಗಾಬರಿಯಾಗಬೇಕಿಲ್ಲ. ಅದಕ್ಕೆ ಈ ಕಾರಣವೂ ಇರಬಹುದು. ಆರೋಗ್ಯ (Health)ದ ಬಗ್ಗೆ ಸ್ಪಲ್ಪ ಕಾಳಜಿ ವಹಿಸಿ ಸಾಕು.


ಆಹಾರ (Food) ಮತ್ತು ಆರೋಗ್ಯಕ್ಕೆ ನೇರಾನೇರ ಸಂಬಂಧವಿದೆ. ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ, ಕೆಲವೊಮ್ಮೆ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಹೀಗಾಗಿ ಯಾವಾಗಲೂ ನಾವೇನು ತಿನ್ನುತ್ತಿದ್ದೇವೆ ಎಂಬುದನ್ನು ಗಮನಿಸಿಕೊಳ್ಳಬೇಕಾದುದು ಅತೀ ಮುಖ್ಯ. ತಿನ್ನುವ ಆಹಾರದಿಂದಲೇ ಆರೋಗ್ಯ (Health) ದಲ್ಲಿ ಹಲವು ರೀತಿಯ ಬದಲಾವಣೆಗಳು ಆಗುತ್ತವೆ. ಕೆಲವೊಂದು ಆಹಾರಗಳನ್ನು ತಿಂದ ನಂತರ ಸಂತೃಪ್ತಿಯಾದಂತೆ ಅನಿಸುತ್ತದೆ. ಇನ್ನು ಕೆಲವು ಆಹಾರಗಳನ್ನು ತಿಂದಾಗ ಹೊಟ್ಟೆ ತೊಳೆಸಿದ ಅನುಭವವಾಗುತ್ತದೆ. ಹಾಗೆಯೇ ಕೆಲವೊಂದು ಆಹಾರಗಳನ್ನು ತಿಂದಾಗ ದೇಹ ಬಿಸಿಯಾದಂತೆ ಅನಿಸಿದರೆ, ಇನ್ನು ಕೆಲವೊಮ್ಮೆ ದೇಹವಿಡೀ ತಣ್ಣಗಾದಂತಾಗುತ್ತದೆ.

ಕೆಲವೊಮ್ಮೆ ಊಟದ ನಂತರ ದೇಹದಲ್ಲಿ ಶಾಖದ ಅನುಭವವಾಗುತ್ತದೆ, ಆದರೆ ಇನ್ನು ಕೆಲವೊಮ್ಮೆ ತಿಂದ ನಂತರ ದೇಹ (Body) ತಣ್ಣಗಾದ ಅನುಭವವಾಗಲು ಕಾರಣವೇನು ಎಂಬುದು ಹಲವರಿಗೆ ಅಚ್ಚರಿ ಮೂಡಿಸುವ ವಿಷಯ. ಅದಕ್ಕೆ ಕಾರಣಗಳು ಇಲ್ಲಿವೆ.

Latest Videos

undefined

ಮಸಾಲೆಯುಕ್ತ ಆಹಾರಗಳನ್ನು ತಿಂದಾಗ ದೇಹದಲ್ಲಿ ಶಾಖವನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಆದರೆ ಕೆಲವೇ ಸಂದರ್ಭಗಳಲ್ಲಿ ಆಹಾರ ತಿಂದ ನಂತರ ದೇಹ ತಣ್ಣಗಾದಂತೆ ಅನುಭವವಾಗುತ್ತದೆ. ಅದರಲ್ಲೂ, ವಿಶೇಷವಾಗಿ ಚಳಿಗಾಲ (Winter)ದಲ್ಲಿ ಐಸ್ ಕ್ರೀಮ್, ಜ್ಯೂಸ್ ಅಥವಾ ತಣ್ಣನೆಯ ಏನನ್ನಾದರೂ ಸೇವಿಸಿದರೆ ಈ ಸಮಸ್ಯೆ ಸಾಮಾನ್ಯವಾಗಿದೆ. ಆದರೆ, ಇದಲ್ಲದೆಯೂ ಆಹಾರವನ್ನು ಸೇವಿಸಿದ ನಂತರ ನಿಮಗೆ ಎಂದಾದರೂ ದೇಹವಿಡೀ ತಣ್ಣಗಾದಂತೆ ಅನುಭವ ಆಗಿದೆಯೇ ? ಪಾದಗಳು ಮತ್ತು ಕೈಗಳು ಹೇಗೆ ತಣ್ಣಗಾಗುತ್ತವೆ, ದೇಹವು ಸ್ವಲ್ಪ ನಡುಗಲು ಪ್ರಾರಂಭಿಸುತ್ತದೆ. ಇದಕ್ಕೇನು ಕಾರಣ, ನಾವ್ ಹೇಳ್ತೀವಿ.

Food Tips: ಹಸಿವಾಗುತ್ತೆ ಅಂತ ಆಗಾಗ ತಿನ್ಬೇಡಿ..ಊಟದ ಮಧ್ಯೆ ಇಷ್ಟು ಗಂಟೆ ಗ್ಯಾಪ್ ಇರ್ಲೇಬೇಕು

ಆಹಾರಕ್ಕೂ, ದೇಹದ ಉಷ್ಣತೆಗೂ ಏನಾದರೂ ಸಂಬಂಧವಿದ್ಯಾ ?
ಹೌದು, ನಾವು ದಿನನಿತ್ಯ ಸೇವಿಸುವ ಆಹಾರಗಳು ದೇಹದ ಉಷ್ಣತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ದೇಹದೊಳಗೆ ಜೀರ್ಣಕ್ರಿಯೆಯ ಪ್ರಕ್ರಿಯೆ ನಡೆಯುವುದರಿಂದ ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಬದಲಾಗುತ್ತದೆ. ಸಾಮಾನ್ಯವಾಗಿ ಮಸಾಲೆಯುಕ್ತ ಆಹಾರ ತಿನ್ನುವುದು ದೇಹದ ಉಷ್ಣಾಂಶದಲ್ಲಿ ಸ್ವಲ್ಪ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದರೆ ಬಿಸಿ (Hot) ಆಹಾರ ಸೇವಿಸಿದ ನಂತರವೂ ನಿಮಗೆ ತಣ್ಣಗಾದ ಅನುಭವವಾದರೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದುದು  ಅಗತ್ಯ. 

ಝೆನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಯೆಟಿಯನ್ ಪ್ರಿಯಾ ಪಾಲನ್ ಪ್ರಕಾರ,  ಆಹಾರವು  ದೇಹದ ಉಷ್ಣತೆಯ ನಿಯಂತ್ರಣಕ್ಕೆ ಕಾರಣವಾಗಬಹುದು ಎಂದು ಹೇಳುತ್ತಾರೆ. ಆಹಾರದ ನಂತರ ಶೀತದ ಭಾವನೆಯು ಅತ್ಯಲ್ಪವಾಗಿರಬಹುದು ಆದರೆ ರೋಗನಿರ್ಣಯ ಮಾಡದ ವೈದ್ಯಕೀಯ ಸ್ಥಿತಿಯ ಲಕ್ಷಣವೂ ಆಗಿರಬಹುದು ಎನ್ನುತ್ತಾರೆ. ಆಹಾರ ತಿಂದ ನಂತರ ಒಬ್ಬ ವ್ಯಕ್ತಿಯು ತಣ್ಣಗಾಗಲು ಕೆಲವು ಕಾರಣಗಳು ಇಲ್ಲಿವೆ

Food Tips: ಮೊಸರು ಮತ್ತು ಯೋಗರ್ಟ್ ಒಂದೇನಾ ? ಬೇರೆ ಬೇರೆನಾ ?

ಕಡಿಮೆ ಕ್ಯಾಲೋರಿಗಳನ್ನು ತಿನ್ನುವುದು
ಕ್ಯಾಲೋರಿ ಸೇವನೆಯು ದೇಹದಲ್ಲಿ ಶಕ್ತಿ ಉತ್ಪಾದನೆ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಆದರೆ ದೀರ್ಘಕಾಲೀನ ನಿರ್ಬಂಧಿತ ಕ್ಯಾಲೋರಿ ಆಹಾರದಲ್ಲಿರುವ ಜನರು ಕಡಿಮೆ ದೇಹದ ಉಷ್ಣತೆಯನ್ನು ಹೊಂದಿರುತ್ತಾರೆ. ಅದರೊಂದಿಗೆ, ಅಸಮರ್ಪಕ ಪೋಷಣೆಯ ಸೇವನೆಯು ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ಮಧ್ಯಂತರ ಉಪವಾಸ
ದೀರ್ಘ ಉಪವಾಸದ ಸಮಯವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಹವನ್ನು ಹೆಚ್ಚಿನ ಒತ್ತಡದ ಸ್ಥಿತಿಯಲ್ಲಿ ಇರಿಸುತ್ತದೆ. ಹೀಗಾಗಿ ಇದು ಉಪವಾಸದ ಸಮಯದಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ತಂಪು ಆಹಾರ ಮತ್ತು ಪಾನೀಯಗಳು
ತಣ್ಣನೆ (Cold)    ಯ ಆಹಾರ ಅಥವಾ ಪಾನೀಯವನ್ನು ತಿನ್ನುವುದು ಒಟ್ಟಾರೆಯಾಗಿ ತಂಪಾಗಿಸುವ ಸಂವೇದನೆಗೆ ಕಾರಣವಾಗಬಹುದು, ಇದು ದೇಹದ ಉಷ್ಣತೆಯಲ್ಲಿ ಸ್ವಲ್ಪ ಇಳಿಕೆಗೆ ಕಾರಣವಾಗಬಹುದು. ಇದರಿಂದ ಕೈ, ಕಾಲು ತಣ್ಣಗಾದಂತೆ ಅನಿಸುತ್ತದೆ.

ರಕ್ತಹೀನತೆ
ರಕ್ತಹೀನತೆ ಇರುವವರು ಸಾಮಾನ್ಯವಾಗಿ ಆಹಾರ ತಿಂದೊಡನೇ ಬೇಗನೇ ತಣ್ಣಗಾಗುತ್ತಾರೆ, ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ತಿಂದ ನಂತರವೂ.ಅವರಿಗೆ ಶೀತದ ಅನುಭವ ಆಗುತ್ತಿರುತ್ತದೆ.

ಹೈಪೋಥೈರಾಯ್ಡಿಸಮ್ 
ಕಡಿಮೆ ಮಟ್ಟದ ಥೈರಾಯ್ಡ್ ಹಾರ್ಮೋನುಗಳು ಜೀರ್ಣಕ್ರಿಯೆಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ಇದು ದೇಹವು ಉತ್ಪಾದಿಸುವ ಶಾಖದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ತಿಂದ ನಂತರವೂ ದೇಹ ತಂಪಾಗಿರುತ್ತದೆ.

ಅನಿಯಂತ್ರಿತ ಮಧುಮೇಹ
ಪೆರಿಫೆರಲ್ ನ್ಯೂರೋಪತಿ, ಅನಿಯಂತ್ರಿತ ಮಧುಮೇಹದಿಂದ ನರಗಳ ಹಾನಿಯು ಸಾಮಾನ್ಯ ಊಟವನ್ನು ಸೇವಿಸಿದ ನಂತರವೂ ಮರಗಟ್ಟುವಿಕೆ ಅಥವಾ ಶೀತದ ಭಾವನೆಗೆ ಕಾರಣವಾಗಬಹುದು.

click me!