
ಸಂಗೀತ ಕ್ಷೇತ್ರದಲ್ಲಿನ ಹೆಸರಾಂತ ಕಲಾವಿದರಿಂದ ಸಂಗೀತವನ್ನು ಆನಂದಿಸುತ್ತಲೇ ನೀವು ಮಕ್ಕಳ ಹಸಿವನ್ನು ನೀಗಿಸಬಹುದು. ಇಂಥದೊಂದು ಅವಕಾಶವನ್ನು ಅಕ್ಷಯಪಾತ್ರ ಫೌಂಡೇಶನ್ ಕಲ್ಪಿಸಿದೆ.
ಮಕ್ಕಳ ಹಸಿವಿನ ವಿರುದ್ಧದ ಹೋರಾಟದಲ್ಲಿ ಪ್ರಭಾವ ಬೀರುವ ಗುರಿಯೊಂದಿಗೆ, ಕಲಾವಿದರು, ಪ್ರಾಯೋಜಕರು, ಮಾಧ್ಯಮ ಪಾಲುದಾರರು ಮತ್ತು ಸಮುದಾಯಗಳ ಸಹಕಾರದೊಂದಿಗೆ ಅಕ್ಷಯಪಾತ್ರ 'ಮ್ಯೂಸಿಕ್ ಫಾರ್ ಮೀಲ್ಸ್' ಕಾರ್ಯಕ್ರಮ ಆಯೋಜಿಸಿದೆ. ಇದರಿಂದ ಬರುವ ಆದಾಯವು ಭಾರತದಾದ್ಯಂತ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಸಾಮಾಜಿಕ ಆರ್ಥಿಕವಾಗಿ ಸವಾಲು ಹೊಂದಿರುವ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ನೀಡುತ್ತದೆ.
ಮ್ಯೂಸಿಕ್ ಫಾರ್ ಮೀಲ್ಸ್
ಸಂಗೀತ ಕಾರ್ಯಕ್ರಮವು ವಿವಿಧ ಕ್ಷೇತ್ರಗಳಲ್ಲಿ ಸೇತುವೆಗಳನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ. ‘ಮ್ಯೂಸಿಕ್ ಫಾರ್ ಮೀಲ್ಸ್’ ಒಂದು ಕಾರಣಕ್ಕಾಗಿ ನಡೆಯಲಿರುವ ಸಂಗೀತ ಕಚೇರಿಯಾಗಿದೆ. ಇದರಲ್ಲಿ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಹಾಗೂ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಪ್ರದರ್ಶನ ನೀಡಲಿದ್ದಾರೆ. ಈ ಸಂಗೀತ ಕಚೇರಿ ಸಂಗ್ರಹಿಸುವ ಆದಾಯವು ಇಡೀ ವರ್ಷ ಸುಮಾರು 6,667 ಮಕ್ಕಳ ಹಸಿವನ್ನು ನೀಗಿಸಲಿದೆ.
ಮಾರ್ಚ್ 1ರಂದು ಬೆಂಗಳೂರಿನ ಯಶವಂತಪುರದ ಔರಾ ಹಾಲ್‌ನಲ್ಲಿ ಸಂಜೆ 5 ಗಂಟೆಗೆ ಕಚೇರಿ ನಡೆಯಲಿದೆ. ಈ ಈವೆಂಟ್‌ಗಾಗಿ ನೀವು ಕಾಂಪ್ಲಿಮೆಂಟರಿ ಪಾಸ್ ಬಯಸಿದರೆ, ಪಾವತಿಸುವ ಬದಲು, ನೀವು ಮೂರು ಮಕ್ಕಳಿಗೆ ಅವರ ಹಸಿವನ್ನು ನೀಗಿಸಲು ಸಹಾಯ ಮಾಡಬಹುದು. ಇದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ.
https://www.akshayapatra.org/ music-for-meals/ ಅಥವಾ ಹೆಚ್ಚಿನ ಮಾಹಿತಿಗಾಗಿ @theakshayapatrafoundation ನ ಬಯೋವನ್ನು ಭೇಟಿ ಮಾಡಿ.
ದಿನಾಂಕ: ಮಾರ್ಚ್ 1
ಸಮಯ: ಸಂಜೆ 5 ಗಂಟೆಯಿಂದ
ಸ್ಥಳ: ತಾಜ್ ಯಶವಂತಪುರ, ಔರಾ ಹಾಲ್, ಬೆಂಗಳೂರು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.