ಕಳೆದ ಎರಡು ತಿಂಗಳುಗಳಲ್ಲಿ, ಟೆಕ್ ದೈತ್ಯರಾದ ಅಮೆಜಾನ್, ಮೆಟಾ, ಇಂಟೆಲ್, ಟ್ವಿಟರ್ , ಸಿಟಿ ಮತ್ತು ಮೋರ್ಗಾನ್ ಸ್ಟಾನ್ಲಿಯಂತಹ ಸೇರಿದಂತೆ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಭಾರಿ ಉದ್ಯೋಗ ಕಡಿತ ಘೋಷಿಸಿದೆ. ಇದರ ಬೆನ್ನಲ್ಲೇ ಮೊಬೈಲ್ ಆಪ್ ಆಧಾರಿತ ಆಹಾರ ಪೂರೈಕೆ ಕಂಪೆನಿ ಸ್ವಿಗ್ಗಿ 380 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಭಾರತದ ಸ್ಟಾರ್ಟ್ ಅಪ್ ಉದ್ಯಮಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿರುವ ಕಂಪೆನಿಗಳ ಪಟ್ಟಿಗೆ ಇದೀಗ ಸ್ವಿಗ್ಗಿ ಸೇರ್ಪಡೆಯಾಗಿದೆ. ಮೊಬೈಲ್ ಆಪ್ ಆಧಾರಿತ ಆಹಾರ ಪೂರೈಕೆ ಕಂಪೆನಿ ಸ್ವಿಗ್ಗಿ 380 ಉದ್ಯೋಗಿಗಳನ್ನು (Employees) ವಜಾಗೊಳಿಸಿದೆ. ಪುನರ್ ರಚನೆಯ ಪ್ರಕ್ರಿಯೆಯ ಭಾಗವಾಗಿ ನಮ್ಮ ತಂಡದ (Team) ಗಾತ್ರವನ್ನು ಕಡಿಮೆ ಮಾಡಲು ನಾವು ತುಂಬಾ ಕಷ್ಟಕರವಾದ ನಿರ್ಧಾರವನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಪ್ರಕ್ರಿಯೆಯಲ್ಲಿ 380 ಪ್ರತಿಭಾವಂತ ಸ್ವಿಗ್‌ಸ್ಟರ್‌ಗಳಿಗೆ ವಿದಾಯ ಹೇಳುತ್ತೇವೆ ಎಂದು ಸ್ವಿಗ್ಗಿ ಸಿಇಒ ಶ್ರೀಹರ್ಷ ಹೇಳಿದ್ದಾರೆ.
ಕಂಪೆನಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಆದಾಯ ಕುಸಿತವು ಉದ್ಯೋಗ (Job) ಕಡಿತಕ್ಕೆ ಕಾರಣವಾಗಿದೆ. ಪುನರ್ ರಚನೆಯ ಪ್ರಕ್ರಿಯೆಯ ಭಾಗವಾಗಿ ನಮ್ಮ ತಂಡದ ಗಾತ್ರವನ್ನು ಕಡಿಮೆ ಮಾಡಲು ತುಂಬಾ ಕಷ್ಟಕರವಾದ ನಿರ್ಧಾರವನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಸ್ವಿಗ್ಗಿ ಸಂಸ್ಥಾಪಕ ಸಿಇಒ ಶ್ರೀಹರ್ಷ ಮೆಜೆಟಿ ತಿಳಿಸಿದ್ದಾರೆ. 'ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಅನ್ವೇಷಿಸಿದ ನಂತರ ಇಂಥಾ ಕಠಿಣ ನಿರ್ಧಾರ (Decision)ವನ್ನು ತೆಗೆದುಕೊಳ್ಳಬೇಕಾಯಿತು. ಈ ಕುರಿತು ನಾನು ವಿಷಾದಿಸುತ್ತೇನೆ' ಎಂದು ಸಿಇಒ ಶ್ರೀಹರ್ಷ ಉದ್ಯೋಗಿಗಳಿಗೆ ಇಮೇಲ್‌ನಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಆಹಾರ ಪೂರೈಕೆಗೆ ಹೋದಾಗ ಮೈ ಮೇಲೆ ಹಾರಿದ ನಾಯಿ: ಕಟ್ಟಡದಿಂದ ಹಾರಿದ ಸ್ವಿಗ್ಗಿ ಬಾಯ್
ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಕೆಲವು ವಿಷಯಗಳನ್ನು ಗಂಭೀರವಾಗಿ ನೋಡಬೇಕಾಗಿದೆ. ನಮ್ಮ ಮಾಂಸದ ಮಾರುಕಟ್ಟೆಯನ್ನು ಮುಚ್ಚಲಿದ್ದೇವೆ ಎಂದು ಮೆಜೆಟಿ ಹೇಳಿದರು. ಪರಿವರ್ತನೆಯ ಸಮಯದಲ್ಲಿ ಪ್ರಭಾವಿತ ಉದ್ಯೋಗಿಗಳಿಗೆ ಅವರ ಆರ್ಥಿಕ, ದೈಹಿಕ ಯೋಗಕ್ಷೇಮದೊಂದಿಗೆ ಸಹಾಯ ಮಾಡುವ ಸಮಗ್ರ ಉದ್ಯೋಗಿ ಸಹಾಯ ಯೋಜನೆಯನ್ನು ಕಂಪೆನಿ ಜಾರಿಗೆ ತರಲಿದೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
ನಮಸ್ಕಾರ ತಂಡ,
ಇಂದು ಮುಂಚಿನ ಎಲ್ಲಾ ಸಭೆಗೆ ಸೇರಿದ್ದಕ್ಕಾಗಿ ಧನ್ಯವಾದಗಳು. ನಾನು ಈ ಹಿಂದೆ ಹೇಳಿದಂತೆ, ಪುನರ್ರಚನೆಯ ವ್ಯಾಯಾಮದ ಭಾಗವಾಗಿ ನಮ್ಮ ತಂಡದ ಗಾತ್ರವನ್ನು ಕಡಿಮೆ ಮಾಡಲು ನಾವು ತುಂಬಾ ಕಷ್ಟಕರವಾದ ನಿರ್ಧಾರವನ್ನು ಜಾರಿಗೆ ತರುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ, ನಾವು 380 ಪ್ರತಿಭಾವಂತ ಸ್ವಿಗ್‌ಸ್ಟರ್‌ಗಳಿಗೆ ವಿದಾಯ ಹೇಳುತ್ತೇವೆ. ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಅನ್ವೇಷಿಸಿದ ನಂತರ ಇದು ಅತ್ಯಂತ ಕಷ್ಟಕರವಾದ ನಿರ್ಧಾರವಾಗಿದೆ.
ಅಬ್ಬಬ್ಬಾ..ನ್ಯೂ ಇಯರ್‌ಗೆ ಸ್ವಿಗ್ಗಿಗೆ ಬಂದ ಬಿರಿಯಾಗಿ ಆರ್ಡರ್ ಎಷ್ಟ್ ಗೊತ್ತಾ ?
'ಕೆಲಸದಿಂದ ವಜಾಗೊಂಡಿರದಿದ್ದರೂ ಇದು ನಿಮಗೆ ನೋವು ತರಬಹುದು. ನಿಮ್ಮ ಕೆಲವು ಸಹೋದ್ಯೋಗಿಗಳು, ಸ್ನೇಹಿತರಿಗೆ ನಾವು ವಿದಾಯ ಹೇಳುತ್ತೇವೆ ಮತ್ತು ಅದು ಸುಲಭವಲ್ಲ. ನಾವು ಈ ಬಗ್ಗೆ ಆಳವಾಗಿ ಯೋಚಿಸಿದ್ದೇವೆ ಮತ್ತು ಈ ನಿರ್ಧಾರವು ದುರದೃಷ್ಟಕರ ಆದರೆ ನಮ್ಮ ಮುಂದಿನ ಪ್ರಯಾಣಕ್ಕೆ ಅತ್ಯಗತ್ಯ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇಂದು ನಮ್ಮ ಗಮನವು ಪ್ರಭಾವಕ್ಕೊಳಗಾದ ಸ್ವಿಗ್‌ಸ್ಟರ್‌ಗಳ ಮೇಲೆ ಕೇಂದ್ರೀಕೃತವಾಗಿದೆ ಮತ್ತು ಅವರ ಪರಿವರ್ತನೆಯಲ್ಲಿ ಗೌರವ ಮತ್ತು ಕಾಳಜಿಯೊಂದಿಗೆ ನಾವು ಅವರನ್ನು ಬೆಂಬಲಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಮುಂದಿನ ದಾರಿಯ ಕುರಿತು ನೀವೆಲ್ಲರೂ ಸಾಕಷ್ಟು ಪ್ರಶ್ನೆಗಳನ್ನು ಹೊಂದಿರುವಿರಿ ಎಂದು ನನಗೆ ಖಾತ್ರಿಯಿದೆ ಮತ್ತು ಇವುಗಳನ್ನು ಚರ್ಚಿಸಲು ನಾವು ಶೀಘ್ರದಲ್ಲೇ ಸಮಯವನ್ನು ಹೊಂದಿಸುತ್ತೇವೆ.
ನಮ್ಮ ವ್ಯಾಪಾರ ಮತ್ತು ಒಟ್ಟಾರೆ ಕಾರ್ಯಗತಗೊಳಿಸುವಿಕೆಯು ಬಹಳ ಉತ್ತೇಜಕ ಪಥದಲ್ಲಿದೆ, ಮತ್ತು ನಾವು ಗ್ರಾಹಕರ ಅನುಭವವನ್ನು (ಉತ್ತಮವಾದ NYE ಸೇರಿದಂತೆ) ಮತ್ತು ಲಾಭದಾಯಕತೆಯನ್ನು ಸುಧಾರಿಸುವಲ್ಲಿ ಭಾರಿ ದಾಪುಗಾಲುಗಳನ್ನು ಮಾಡಿದ್ದೇವೆ.. ಈ ಪ್ರಗತಿಯನ್ನು ನಾವು ನಿರ್ಮಿಸಬೇಕಾಗಿದೆ, ಹೊಸ ಸಾಮಾನ್ಯಕ್ಕೆ ಹೊಂದಿಕೊಳ್ಳಬೇಕು , ಮತ್ತು ನಮ್ಮಲ್ಲಿಯೇ ಅತ್ಯುತ್ತಮ ಆವೃತ್ತಿಯಾಗುವತ್ತ ಮುನ್ನಡೆಯಿರಿ' ಎಂದು ಸ್ವಿಗ್ಗಿ ಸಿಇಒ ಶ್ರೀಹರ್ಷ ಉದ್ಯೋಗಿಗಳಿಗೆ ಹೇಳಿದ್ದಾರೆ.