ಬಾಯಿ ಚಪ್ಪರಿಸಿಕೊಂಡು ನೂಡಲ್ಸ್ ತಿನ್ತೀರಾ ? ಫ್ಯಾಕ್ಟರೀಲಿ ಅದನ್ನು ಹೇಗೆ ಮಾಡ್ತಾರೆ ಅಂತಾನೂ ನೋಡ್ಬಿಡಿ

By Vinutha Perla  |  First Published Jan 21, 2023, 10:36 AM IST

ನೂಡಲ್ಸ್ ತಿನ್ನೋಕೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಅದು ಸ್ಟ್ರೀಟ್‌ನಲ್ಲಾದರೂ ಸರಿ, ರೆಸ್ಟೋರೆಂಟ್‌ನಲ್ಲಾದರೂ ಸರಿ. ನೂಡಲ್ಸ್‌ನಲ್ಲಿ ಸಾಕಷ್ಟು ವೆರೈಟಿಯೂ ಸಿಗುವ ಕಾರಣ ಬೇಕಾದ್ದನ್ನು ಆರ್ಡರ್ ಮಾಡಿ ತಿನ್ಬೋದು. ನೀವು ಕೂಡಾ ಬಾಯಿ ಚಪ್ಪರಿಸಿಕೊಂಡು ನೂಡಲ್ಸ್ ತಿನ್ನೋರು ಆಗಿದ್ರೆ, ಫ್ಯಾಕ್ಟರೀಲಿ ಅದನ್ನು ಮಾಡೋದು ಹೇಗೆ ಅಂತಾನೂ ಸ್ಪಲ್ಪ ನೋಡ್ಕೊಂಡು ಬಿಡಿ. 


ಇತ್ತೀಚಿನ ದಿನಗಳಲ್ಲಿ, ಫಟಾ ಫಟ್ ಆಗಿ ಸೇವಿಸುವಂತಹ ಅನೇಕ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ, ಅವುಗಳಿಂದ ಅಡುಗೆ ಮಾಡಲು ಕಷ್ಟಪಡಬೇಕಾಗಿಲ್ಲ. ಈ ಎಲ್ಲಾ ಆಹಾರಗಳಲ್ಲಿ, ಇನ್ಸ್ಟಂಟ್ ನೂಡಲ್ಸ್ ಜನರು ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ. ಇನ್ಸ್ಟಂಟ್ ನೂಡಲ್ಸ್ ಅನ್ನು ಎರಡು ನಿಮಿಷಗಳಲ್ಲಿ ತಯಾರಿಸಲಾಗುತ್ತೆ. ಅಷ್ಟೇ ಅಲ್ಲ ಇದು ತಿನ್ನಲು ಸಹ ರುಚಿಕರವಾಗಿರುತ್ತೆ, ಹಾಗಾಗಿ ಜನರು ಅವುಗಳನ್ನು ತಿನ್ನಲು ಇಷ್ಟಪಡ್ತಾರೆ. ಸ್ಟೀಟ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಎಲ್ಲಾ ಕಡೆಯೂ ಈ ನೂಡಲ್ಸ್ ಲಭ್ಯವಿರುತ್ತದೆ. ಹಲವು ವೆರೈಟಿಗಳಲ್ಲಿ ಲಭ್ಯವಾಗುವ ಕಾರಣ ಜನರು ತಮ್ಮ ಫೇವರಿಟ್ ನೂಡಲ್ಸ್ ಆಯ್ಕೆ ಮಾಡಿ ತಿನ್ನುತ್ತಾರೆ. 

ಫ್ಯಾಕ್ಟರಿಯಲ್ಲಿ ಕಚ್ಚಾ ನೂಡಲ್ಸ್ ಹೇಗೆ ಸಿದ್ಧವಾಗುತ್ತದೆ ?
ಚೈನೀಸ್ ಹಕ್ಕಾ ನೂಡಲ್ಸ್‌, ಶೆಝವಾನ್ ನೂಡಲ್ಸ್‌ಗೆ ಅದ್ಭುತ ರುಚಿಯಿದೆ ಎಂದೇ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಸುಲಭವಾಗಿ ಮತ್ತು ರುಚಿಕರವಾಗಿ (Tasty) ಇವನ್ನು ತಯಾರಿಸಲು ಸಾಧ್ಯವಿರುವ ಕಾರಣ ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ಇದು  ಸುಲಭವಾಗಿ ಲಭ್ಯವಿವೆ. ಆದರೆ ಕಚ್ಚಾ ವಸ್ತು ಅಂದರೆ ನೂಡಲ್ಸ್ ಹೇಗೆ ಉತ್ಪಾದನೆಯಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

Tap to resize

Latest Videos

ಗರ್ಭಾವಸ್ಥೆಯಲ್ಲಿ instant noodles ತಿನ್ನೋದು ತುಂಬಾನೆ ಡೇಂಜರ್

ನೂಡಲ್ಸ್ ತಿನ್ನೋ ಮುನ್ನ ಈ ವೀಡಿಯೋ ನೋಡಿ ಬಿಡಿ
ಬೀದಿ ಆಹಾರ ಪದಾರ್ಥ (Street food)ಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತೋರಿಸುವ ವೀಡಿಯೊಗಳನ್ನು ನಾವು ಪದೇ ಪದೇ ನೋಡುತ್ತಿದ್ದರೂ, ಫ್ಯಾಕ್ಟರಿಯಲ್ಲಿ ನೂಡಲ್ಸ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದರ ಕುರಿತು ಹೆಚ್ಚಿನವರಿಗೆ ಮಾಹಿತಿಯಿಲ್ಲ. ಈ ವೀಡಿಯೊ ನೋಡಿದರೆ ನೀವು ಮತ್ತೆ ಬಾಯಿ ಚಪ್ಪರಿಸಿಕೊಂಡು ನೂಡಲ್ಸ್ ತಿನ್ನುವ ಮುನ್ನ ಇನ್ನೊಮ್ಮೆ ಯೋಚಿಸೋದು ಖಂಡಿತ. 

ಟ್ವಿಟರ್ ಬಳಕೆದಾರರಾದ ಚಿರಾಗ್ ಬರ್ಜಾತ್ಯಾ ಅವರು ಫ್ಯಾಕ್ಟರಿಯಲ್ಲಿ ನೂಡಲ್ಸ್ ಅನ್ನು ಮೊದಲಿನಿಂದ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತೋರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಫ್ಯಾಕ್ಟರಿಯಲ್ಲಿ ಕೆಲಸಗಾರರು ಅವುಗಳನ್ನು ಅತ್ಯಂತ ಅಸಹ್ಯಕರ ರೀತಿಯಲ್ಲಿ ಹೇಗೆ ನಿರ್ವಹಿಸುತ್ತಾರೆ. ಹಿಟ್ಟನ್ನು ಬರಿಗೈಯಲ್ಲಿ ನಿರ್ವಹಿಸುವುದರಿಂದ ಹಿಡಿದು ಕೊಳಕು ಪಾತ್ರೆಗಳಲ್ಲಿ ಇರಿಸಿ ಮತ್ತು ಕೊಳಕು ನೆಲದ ಮೇಲೆ ಎಸೆಯುವವರೆಗೆ ಹೇಗೆ ನೂಡಲ್ಸ್ ತಯಾರಿಸಲಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ವೀಡಿಯೋ ನೀವು ಬೀದಿಯಲ್ಲಿ, ರೆಸ್ಟೋರೆಂಟ್‌ನಲ್ಲಿ ಆನಂದಿಸುವ ನೂಡಲ್ಸ್‌ನ ಅನೈರ್ಮಲ್ಯದ ಬಗ್ಗೆ ವಿವರಿಸುತ್ತದೆ.

When was the last time you had road side chinese hakka noodles with schezwan sauce? pic.twitter.com/wGYFfXO3L7

— Chirag Barjatya (@chiragbarjatyaa)

ಫಿಟ್‌ನೆಸ್ ಕೋಚಿಂಗ್ ಕ್ಲಬ್‌ನ ಸಂಸ್ಥಾಪಕ ಚಿರಾಗ್ ಬರ್ಜತ್ಯಾ, ಟ್ವಿಟರ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು, 'ನೀವು ಕೊನೆಯ ಬಾರಿಗೆ ರೋಡ್ ಸೈಡ್ ಚೈನೀಸ್ ಹಕ್ಕಾ ನೂಡಲ್ಸ್ ಜೊತೆಗೆ ಸ್ಕೆಜ್ವಾನ್ ಸಾಸ್ ಅನ್ನು ಯಾವಾಗ ತಿಂದಿದ್ದೀರಿ' ಎಂದು ಶೀರ್ಷಿಕೆ ನೀಡಿದ್ದಾರೆ. ವೀಡಿಯೋ ಈಗಾಗಲೇ 4 ಲಕ್ಷಕ್ಕೂ ಹೆಚ್ಚು ವೀವ್ಸ್ ಮತ್ತು 600 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಗಳಿಸಿದೆ.

ಭಯಂಕರ ಚಳಿಗೆ ಕೋಲಿನಂತಾದ ನೂಡಲ್ಸ್ : ವೈರಲ್ ವಿಡಿಯೋ

'ವಿಶ್ವದ ಅತ್ಯಂತ ಆರೋಗ್ಯಕರ ನೂಡಲ್ ತಯಾರಿಕೆ ಪ್ರಕ್ರಿಯೆ. ನೂಡಲ್ಸ್ ಟೇಸ್ಟಿ ಮಸಾಲಾ ಪುಡಿ ಮತ್ತು ಅತಿಸಾರದೊಂದಿಗೆ ಬರುತ್ತದೆ' ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 'ಇದನ್ನು ರಸ್ತೆ ಬದಿಯ ಮಾರಾಟಗಾರರನ್ನು ಮಾತ್ರ ಬಳಸುತ್ತಾರೆ ಮತ್ತು 5-ಸ್ಟಾರ್ ರೆಸ್ಟೋರೆಂಟ್‌ಗಳಲ್ಲ ಎಂದು ನಿಮಗೆ ಹೇಗೆ ಗೊತ್ತು' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. 'ರಸ್ತೆ ಬದಿ ಮಾತ್ರ ಯಾಕೆ, ರೆಸ್ಟೋರೆಂಟ್‌ಗಳು ಸಹ ಅದನ್ನೇ ಬಳಸುತ್ತಿರಬೇಕು, ಇಲ್ಲವೇ' ಎಂದು ಇನ್ನೊಬ್ಬರು ಹೇಳಿದ್ದಾರೆ. 

click me!