ಮನುಷ್ಯ ಬದುಕೋಕೆ ನೀರು, ಆಹಾರ ಬೇಕೇ ಬೇಕು. ರುಚಿಕರವಾದ ಆಹಾರವನ್ನು ಎಲ್ಲರೂ ತಿನ್ನುತ್ತಾರೆ. ಆದ್ರೆ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಅನ್ನಕ್ಕೆ ಪವಿತ್ರವಾದ ಸ್ಥಾನವಿದೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಊಟ ಮಾಡುವ ರೀತಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಅನ್ನಂ ಪರಬ್ರಹ್ಮಂ ಎಂದು ಹೇಳುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಅನ್ನವನ್ನು ಅಷ್ಟು ಪೂಜನೀಯವಾಗಿ ನೋಡಲಾಗುತ್ತದೆ. ವ್ಯಕ್ತಿಯೊಬ್ಬನಿಗೆ ದಿನದ ಮೂರು ಹೊತ್ತು ತಿನ್ನಲು ಆಹಾರ ಸಿಗುವುದೇ ಮಹತ್ಕಾರ್ಯ. ಹಸಿದವನಿಗೆ ಅನ್ನ ನೀಡುವುದು ಪುಣ್ಯದ ಕೆಲಸ ಎಂದು ಹೇಳುತ್ತಾರೆ. ಅನ್ನದಾನ ಮಹಾದಾನ ಎಂಬ ಮಾತೇ ಇದೆ. ಹಾಗೆಯೇ ತಟ್ಟೆ ತುಂಬಾ ಹಾಕಿಕೊಂಡು ಊಟ ಮಾಡುವ ಮೊದಲು ಹೊತ್ತಿನ ತುತ್ತು ನೀಡಿದ ಭಗವಂತನಿಗೆ ಧನ್ಯವಾದ ಸಮರ್ಪಿಸುತ್ತಾರೆ. ಊಟದ ಮೊದಲು ಮಂತ್ರವನ್ನು ಹೇಳುವ ಅಭ್ಯಾಸವೂ ಹಲವೆಡೆ ರೂಢಿಯಲ್ಲಿದೆ. ಆದ್ರೆ ಇವತ್ತಿನ ದಿನಗಳಲ್ಲಿ ಅನ್ನಕ್ಕೆ ಪ್ರಾಮುಖ್ಯತೆ ನೀಡುವವರೇ ಇಲ್ಲ.
ಚಪ್ಪಲಿ ತೆಗೆದಿಟ್ಟು ಊಟ ಮಾಡಿದ ವ್ಯಕ್ತಿ, ಫೋಟೋ ವೈರಲ್
ಇವತ್ತಿಗೂ ಅದೆಷ್ಟೋ ಮಂದಿ ತಿನ್ನಲು ಆಹಾರ (Food)ವಿಲ್ಲದೆ ದಿನವಿಡೀ ಹಸಿದುಕೊಂಡಿರುತ್ತಾರೆ. ಆದ್ರೆ ಅದೇ ಕೆಲವು ಮದುವೆ, ಸಭೆ-ಸಮಾರಂಭಗಳಿಗೆ ಹೋದರೆ ಅಲ್ಲಿ ರಾಶಿ ರಾಶಿ ಅನ್ನ (Rice)ವನ್ನು ಎಸೆಯುವುದನ್ನು ನೋಡಬಹುದು. ಬರೀ ಶೋಕಿಗಾಗಿ ಕೆಜಿಗಟ್ಟಲೆ ಆಹಾರ ತಯಾರಿಸಿ, ಯಾರೂ ತಿನ್ನದೆ ಹಾಗೆಯೇ ಹಂಡೆ ಹಂಡೆ ಎಸೆದು ಬಿಡುತ್ತಾರೆ. ಅದರಲ್ಲೂ ಇವತ್ತಿನ ಯುವಜನತೆಗಂತೂ ಆಹಾರದ ಬೆಲೆಯೇ ಗೊತ್ತಿಲ್ಲ. ವೆರೈಟಿ ವೆರೈಟಿ ಆಹಾರ ಆರ್ಡರ್ ಮಾಡುವುದು, ಟೇಸ್ಟ್ ಚೆನ್ನಾಗಿಲ್ಲವೆಂದು ಎಸೆದು ಬಿಡುವುದು (Waste) ತುಂಬಾ ಕಾಮನ್ ಆಗಿದೆ. ಹೀಗಿರುವಾಗ ಇಲ್ಲೊಬ್ಬರು ವೃದ್ಧ ಆಹಾರ ಸೇವಿಸುವ ರೀತಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ಅತ್ತೆ ಜೊತೆ ಸೇರಿ ದಕ್ಷಿಣ ಭಾರತದ ಆಹಾರ ತಯಾರಿಸಿದ ಡಚ್ ಸೊಸೆ: ವಿಡಿಯೋ ವೈರಲ್
ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು, ನಾನಾ ರೀತಿ ಪ್ರತಿಕ್ರಿಯೆ
ಅವನೀಶ್ ಶರಣ್ ಎಂಬವರು ಇಂಟರ್‌ನೆಟ್‌ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಇಲ್ಲಿ ವ್ಯಕ್ತಿಯೊಬ್ಬರು ಚಪ್ಪಲಿ ತೆಗೆದು ಊಟ ಮಾಡುವುದನ್ನು ನೋಡಬಹುದು. ವೃದ್ಧರೊಬ್ಬರು ಸಾಮಾನ್ಯ ಹೊಟೇಲ್‌ವೊಂದರಲ್ಲಿ ಚಪ್ಪಲಿ ಬದಿಗಿಟ್ಟು ನಿಂತು ಮಾಡುತ್ತಿರುತ್ತಾರೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ಫೋಟೋಗೆ ನೆಟ್ಟಿಗರು ಅದ್ಭುತವಾಗಿ ಪ್ರತಿಕ್ರಿಯಿಸಿದ್ದಾರೆ. ವೈರಲ್ ಆಗಿರೋ ಫೋಟೋಗೆ ಸಾವಿರಾರು ಲೈಕ್ಸ್ ಬಂದಿದ್ದು, ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
'ಕೆಲವೊಬ್ಬರು ಈ ಜನರೇಷನ್‌ನಿಂದ ಇದನ್ನು ಎಕ್ಸ್‌ಪೆಕ್ಟ್ ಮಾಡಲು ಸಾಧ್ಯವಿಲ್ಲ' ಎಂದಿದ್ದಾರೆ. ಇನ್ನು ಕೆಲವೊಬ್ಬರು 'ನೀವು ಸಹ ರೆಸ್ಟೋರೆಂಟ್‌ನಲ್ಲಿ ಈ ರೀತಿಯೇ ಊಟ ಮಾಡುತ್ತೀರಾ' ಎಂದು ಪ್ರಶ್ನಿಸಿದ್ದಾರೆ. 'ಇಂಥಾ ವಿಚಾರಗಳನ್ನು ಪೋಸ್ಟ್ ಮಾಡಲಷ್ಟೇ ಚೆನ್ನಾಗಿರುತ್ತದೆ. ಇದನ್ನು ಪ್ರಾಯೋಗಿಕವಾಗಿ ಮಾಡುವುದು ಕಷ್ಟ' ಎಂದು ತಿಳಿಸಿದ್ದಾರೆ. ಮತ್ತೆ ಕೆಲವರು ಊಟ ಮಾಡುವಾಗ ಚಪ್ಪಲಿ (Slippers) ಧರಿಸುವುದರಿಂದ ಅಗೌರವ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಹೀಗಿದ್ದೂ ಹಲವಾರು ಮಂದಿ ಹಾರ್ಟ್ ಎಮೋಜಿಯ ಮೂಲಕ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಸ್ಕೃತಿಗೆ ಗೌರವ ನೀಡಿರುವ ರೀತಿ ಮೆಚ್ಚುವಂತದ್ದು ಎಂದಿದ್ದಾರೆ.
ರೆಸ್ಟೋರೆಂಟ್‌ನಲ್ಲಿ ಆಹಾರ ಸರ್ವ್ ಮಾಡೋ ಬುಲೆಟ್ ಟ್ರೈನ್: ವಿಡಿಯೋ ನೋಡಿ
ಅದೇನೆ ಇರ್ಲಿ, ಹಂಡೆಗಟ್ಟಲೆ ಅನ್ನ ಎಸೆಯೋ ಈ ಕಾಲದಲ್ಲಿ, ಮನೆಯಲ್ಲಿಯೂ ಬೇಕಾಬಿಟ್ಟಿ ಕುಳಿತು ಊಟ ಮಾಡುವ ಈ ದಿನಗಳಲ್ಲಿ ವ್ಯಕ್ತಿಯೊಬ್ಬರು ನಿಂತು ಊಟ ಮಾಡುವಾಗಲೂ ಅನ್ನಕ್ಕೆ ಗೌರವ ತೋರಿರುವುದು ಮೆಚ್ಚುವಂತಹಾ ಕಾರ್ಯ. ಯಾವುದರ ಮಹತ್ವ (Importance)ವನ್ನು ತಿಳಿದಿರದ ಇವತ್ತಿನ ಜನರೇಷನ್ ಮಂದಿಯ ಮನಸ್ಸು ಇಂಥಾ ಫೋಟೋಗಳಿಂದಾದರೂ ಬದಲಾದರೆ ಅದುವೇ ಖುಷಿಯ ವಿಚಾರ.
Respect Your Food.🙏🙏🙏 pic.twitter.com/hphD7T39Mg
— Awanish Sharan (@AwanishSharan)