ಒಂದು ಹನಿ ಎಣ್ಣೆ, ಸೋಡಾ ಬೇಡ.. ಮಗುಚಿ ಹಾಕೋದೂ ಬೇಡ.. ಫಾಸ್ಟಾಗಿ ಮಾಡಿ ಮೆತ್ತನೆಯ ಸ್ಪಾಂಜ್ ದೋಸೆ

Published : Jul 19, 2026, 12:57 PM IST
Sponge Dosa recipe in Kannada

ಸಾರಾಂಶ

Sponge Dosa recipe in Kannada: ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಏನು ಮಾಡೋದು ಎಂಬ ಚಿಂತೆನಾ? ಹಾಗಿದ್ದರೆ ಎಣ್ಣೆ ಮತ್ತು ಸೋಡಾವಿಲ್ಲದೆ ಕೇವಲ 2 ಚಮಚ ಉದ್ದಿನಬೇಳೆ ಬಳಸಿ ಹತ್ತಿಯಂತಹ ಸಾಫ್ಟ್ ಸ್ಪಾಂಜ್ ದೋಸೆ ತಯಾರಿಸುವ ವಿಧಾನ ಇಲ್ಲಿದೆ ನೋಡಿ..

ಬೆಳಗಿನ ಉಪಹಾರಕ್ಕೆ ಮೃದುವಾದ ದೋಸೆ ಇಷ್ಟಪಡುವವರಿಗೆ ಇಲ್ಲಿದೆ ಒಂದು ವಿಶೇಷ ರೆಸಿಪಿ. ಕೇವಲ 2 ಟೇಬಲ್ ಚಮಚ ಉದ್ದಿನಬೇಳೆ ಮತ್ತು ತೆಂಗಿನಕಾಯಿ ಬಳಸಿ, ಒಂದು ಹನಿ ಎಣ್ಣೆ ಅಥವಾ ಸೋಡಾ ಇಲ್ಲದೆ ಮೆತ್ತನೆಯ ಸ್ಪಾಂಜ್ ದೋಸೆಗಳನ್ನು ನೀವು ತಯಾರಿಸಬಹುದು. ಇದಕ್ಕೆ ಸಖತ್ ಕಾಂಬಿನೇಶನ್ ಆಗಿರುವ ಖಾರವಾದ ಈರುಳ್ಳಿ ಚಟ್ನಿ ಮಾಡುವ ವಿಧಾನವನ್ನೂ ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ಇಡ್ಲಿ ದೋಸೆಗಿಂತ ಚಟ್ನಿಗೇ ಡಿಮ್ಯಾಂಡ್! ತೆಳ್ಳನೆಯ ಚಟ್ನಿ ಮಾಡಲು ಟಿಫನ್ ಸೆಂಟರ್‌ನಲ್ಲಿ ಬಳಸುವ 2 ಸೀಕ್ರೆಟ್ ಪದಾರ್ಥಗಳಿವು

ಮೊದಲಿಗೆ ಸ್ಪೈಸಿ ಈರುಳ್ಳಿ ಚಟ್ನಿ ತಯಾರಿಸುವ ವಿಧಾನ ನೋಡೋಣ

ನೆನೆಸಿಡಿ: ಮೊದಲು ಚಟ್ನಿಗಾಗಿ 10 ಒಣಮೆಣಸಿನಕಾಯಿಯನ್ನು (ಬಣ್ಣಕ್ಕಾಗಿ ಬ್ಯಾಡಗಿ ಅಥವಾ ಕಾಶ್ಮೀರಿ ಮೆಣಸಿನಕಾಯಿ ಬಳಸಬಹುದು) 15 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಡಿ.

ರುಬ್ಬಿಕೊಳ್ಳಿ: ಮಿಕ್ಸಿ ಜಾರ್‌ಗೆ ನೆನೆಸಿದ ಮೆಣಸಿನಕಾಯಿ, 2 ದೊಡ್ಡ ಈರುಳ್ಳಿ, 2 ಟೊಮೆಟೊ, 10 ಬೆಳ್ಳುಳ್ಳಿ ಎಸಳು, ಸ್ವಲ್ಪ ಅರಿಶಿನ, ಉಪ್ಪು ಮತ್ತು ಸ್ವಲ್ಪ ಹುಣಸೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಒಗ್ಗರಣೆ: ಬಾಂಡ್ಲಿಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಮತ್ತು ಜೀರಿಗೆ ಹಾಕಿ ಹುರಿಯಿರಿ. ನಂತರ ಕರಿಬೇವು ಸೇರಿಸಿ, ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಕಿ.

ಬೇಯಿಸಿ: ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಎಣ್ಣೆ ಸೈಡ್‌ನಲ್ಲಿ ಬಿಡುವವರೆಗೆ ಬೇಯಿಸಿ. ಈ ಚಟ್ನಿಯನ್ನು 4 ದಿನಗಳವರೆಗೆ ಸ್ಟೋರ್ ಮಾಡಿ ಬಳಸಬಹುದು.

ಈಗ ಸ್ಪಾಂಜ್ ದೋಸೆಗೆ ಹಿಟ್ಟನ್ನು ಮಾಡುವ ವಿಧಾನ ನೋಡೋಣ

ನೆನೆಸಿಡಿ: ಒಂದು ಪಾತ್ರೆಲ್ಲಿ 1 ಕಪ್ ಇಡ್ಲಿ ಅಕ್ಕಿ, 1/2 ಕಪ್ ಗಟ್ಟಿ ಅವಲಕ್ಕಿ ಮತ್ತು 2 ಟೇಬಲ್ ಚಮಚ ಉದ್ದಿನಬೇಳೆಯನ್ನು ಹಾಕಿ ಚೆನ್ನಾಗಿ ತೊಳೆದು 5-6 ಗಂಟೆಗಳ ಕಾಲ ನೆನೆಸಿಡಿ.

ರುಬ್ಬುವ ವಿಧಾನ: ನೆನೆಸಿದ ಪದಾರ್ಥಗಳನ್ನು ಮಿಕ್ಸಿ ಜಾರ್‌ಗೆ ಹಾಕಿ. ಅದರ ಜೊತೆಗೆ 1 ಕಪ್ ಹಸಿ ತೆಂಗಿನಕಾಯಿ ತುರಿ ಮತ್ತು 1 ಚಮಚ ಸಕ್ಕರೆ ಸೇರಿಸಿ. ರುಬ್ಬುವಾಗ ಹಿಟ್ಟು ಬಿಸಿಯಾಗದಂತೆ ತಣ್ಣೀರನ್ನು ಬಳಸಿ ನುಣ್ಣಗೆ ರುಬ್ಬಿಕೊಳ್ಳಿ.

ಹುದುಗುವಿಕೆ (Fermentation): ಈ ಹಿಟ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ ಮುಚ್ಚಳ ಮುಚ್ಚಿ ರಾತ್ರಿಯಿಡೀ ಹುದುಗಲು ಬಿಡಿ.

ಇದನ್ನೂ ಓದಿ: ತುಂಬಾ ಸಿಂಪಲ್, ವಾರವಿಡೀ ಇರುತ್ತೆ.. ತಿಂಡಿಗೆ ಸೈಡ್ ಡಿಶ್‌ ರುಚಿ ರುಚಿಯಾದ ಟೊಮೆಟೊ ತೊಕ್ಕು

ದೋಸೆ ಮಾಡುವ ಕ್ರಮ

*ಮರುದಿನ ಬೆಳಗ್ಗೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಗುರವಾಗಿ ಕಲಕಿ (ಹಿಟ್ಟಿನ ಒಳಗಿನ ಗಾಳಿ ಹೋಗದಂತೆ ಎಚ್ಚರವಹಿಸಿ).

*ದೋಸೆ ಹಂಚನ್ನು ಚೆನ್ನಾಗಿ ಬಿಸಿ ಮಾಡಿ. ಒಂದು ಸೌಟು ಹಿಟ್ಟನ್ನು ಹಂಚಿನ ಮಧ್ಯದಲ್ಲಿ ಹಾಕಿ, ಅತೀ ಹೆಚ್ಚು ಹರಡದೆ ಲಘುವಾಗಿ ಸ್ಪ್ರೆಡ್ ಮಾಡಿ.

ಕೂಡಲೇ ಮುಚ್ಚಳ ಮುಚ್ಚಿ ಮೀಡಿಯಂ ಫ್ಲೇಮ್‌ನಲ್ಲಿ ಆವಿಯಲ್ಲಿ ಬೇಯಿಸಿ. ಈ ದೋಸೆಗೆ ಎಣ್ಣೆ ಹಾಕುವ ಅಗತ್ಯವಿಲ್ಲ.

*ಸುಮಾರು 2 ನಿಮಿಷದ ನಂತರ ಮುಚ್ಚಳ ತೆಗೆದು ನೋಡಿ. ಮೇಲೆ ಕೈ ತಾಕಿದಾಗ ಹಿಟ್ಟು ಅಂಟದಿದ್ದರೆ ದೋಸೆ ರೆಡಿ ಎಂದರ್ಥ. ಈ ದೋಸೆಯನ್ನು ಮಗುಚಿ ಹಾಕುವ ಅಗತ್ಯವಿಲ್ಲ.

*ತೆಂಗಿನಕಾಯಿ ಮತ್ತು ಅವಲಕ್ಕಿ ಬಳಸಿರುವುದರಿಂದ ಈ ದೋಸೆಗಳು ಸ್ಪಾಂಜ್‌ನಂತೆ ಮೆತ್ತಗಿರುತ್ತವೆ ಮತ್ತು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ತಯಾರಿಸಿ ನೋಡಿ ಮತ್ತು ಈ ರುಚಿಕರ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರಿಬೇವು ಫ್ರಿಡ್ಜ್‌ನಲ್ಲಿಟ್ಟರೂ ಕಪ್ಪಾಗುತ್ತಿದೆಯೇ? ಈ ಮ್ಯಾಜಿಕ್ ಟ್ರಿಕ್ ಫಾಲೋ ಮಾಡಿದ್ರೆ ತಿಂಗಳುಗಟ್ಟಲೆ ಫ್ರೆಶ್ ಆಗಿರುತ್ತೆ!
ಇಡ್ಲಿ ದೋಸೆಗಿಂತ ಚಟ್ನಿಗೇ ಡಿಮ್ಯಾಂಡ್! ತೆಳ್ಳನೆಯ ಚಟ್ನಿ ಮಾಡಲು ಟಿಫನ್ ಸೆಂಟರ್‌ನಲ್ಲಿ ಬಳಸುವ 2 ಸೀಕ್ರೆಟ್ ಪದಾರ್ಥಗಳಿವು