ಯೂಟ್ಯೂಬ್ ನೋಡಿ ಕೇಕ್ (Cake) ಮಾಡೋಕೆ ಹೊರಟಿರ್ತೀರಾ. ಆದ್ರೆ ಮನೇಲಿ ಎಲ್ಲಾ ಐಟಂ ಇದೆ ವೆನಿಲ್ಲಾ (Vanilla) ಎಸೆನ್ಸ್ ಮಾತ್ರ ಇಲ್ಲ. ಅಯ್ಯೋ ಫುಲ್ ಝೂಮ್‌ನಲ್ಲಿ ಏನೋ ಮಾಡೋಕೆ ಹೊರಟು ಪ್ಲಾನ್ ಫ್ಲಾಪ್ ಆಗ್ಬಿಡ್ತಾ. ವರಿ ಮಾಡ್ಬೇಡಿ, ವೆನಿಲ್ಸಾ ಎಸೆನ್ಸ್ ಬದಲಾಗಿ ಈ ಪದಾರ್ಥನೂ ಬಳಸ್ಬೋದು. ಮತ್ತೆ ಎಲ್ರ ಮನೇಲೂ ಸಾಮಾನ್ಯವಾಗಿ ಇರುವಂಥದ್ದೇ.
ಫ್ಯಾಮಿಲಿ ಮೆಂಬರ್, ಬೆಸ್ಟ್ ಫ್ರೆಂಡ್ಸ್, ಬಾಯ್ ಫ್ರೆಂಡ್, ಹೀಗೆ ನಿಮ್ಗೆ ನಿಮ್ಗೆ ಬೇಕಾಗಿರೋ ಯಾರದ್ದೋ ಬರ್ತ್‌ಡೇ (Birthday). ನೀವೇ ಕೇಕ್ ಮಾಡಿ ಸರ್‌ಪ್ರೈಸ್ ಕೊಡ್ಬೇಕು ಅನ್ನೋದು ನಿಮ್ಮ ಪ್ಲಾನ್. ಅಥವಾ ಬೋರಿಂಗ್ ಸಂಡೇ, ಯೂಟ್ಯೂಬ್‌ನಲ್ಲಿ ರೆಸಿಪಿ ವೀಡಿಯೋ ನೋಡಿ ಬಾಯಲ್ಲಿ ನೀರೂರಿರುತ್ತೆ. ನಾನೇ ಕೇಕ್ (Cake)ಮಾಡಿದ್ರೆ ಹೇಗೆ ಅನ್ನೋ ಐಡಿಯಾ. ಆದ್ರೆ ಬೇಕಾಗಿರುವ ಸಾಮಗ್ರಿಗಳು ಏನು ಅಂತ ಪಟ್ಟಿ ಮಾಡಿದ್ರೆ ಮನೇಲಿ ವೆನಿಲ್ಲಾ ಎಸೆನ್ಸೇ ಇಲ್ಲ. ಛೇ ಎಲ್ಲಾ ಪ್ಲಾನ್ ಎಕ್ಕುಟ್ಟು ಹೋಯ್ತು ಅನ್ನೋ ಬೇಜಾರಾ. ಡೋಂಟ್ ವರಿ ಕೇಕ್ ಅಥವಾ ಇತರ ರೆಸಿಪಿ (Recipe)ಗಳನ್ನು ಮಾಡುವಾಗ ವೆನಿಲ್ಲಾ ಬದಲಿಗೆ ನೀವು ಈ ಕೆಳಗೆ ಹೇಳಿರುವ ಕೆಲ ಪದಾರ್ಥಗಳನ್ನು ಬದಲಿಯಾಗಿ ಬಳಸ್ಬೋದು. ಮತ್ತೆ ಇವೆಲ್ಲಾ ನಿಮ್ಮ ಮನೇಲಿ ಹೆಚ್ಚಾಗಿ ಸ್ಟಾಕ್ ಇರೋ ಪದಾರ್ಥಗಳೇ.
ವೆನಿಲ್ಲಾ ಎಸೆನ್ಸ್ ಬದಲು ಬೇರೇನನ್ನು ಬಳಸಬಹುದು ?
undefined
ಜೇನು ತುಪ್ಪ (Honey)
ವೆನಿಲ್ಲಾಎಸೆನ್ಸ್ ಬದಲು ಜೇನು ತುಪ್ಪ ಬಳಸುವುದು ಅತ್ಯುತ್ತಮವಾಗಿದೆ. ಇದು ರುಚಿಯಲ್ಲೂ ಯಾವುದೇ ಬದಲಾವಣೆಯನ್ನು ತರುವುದಿಲ್ಲ. ವೆನಿಲ್ಲಾ ಎಸೆನ್ಸ್ ಬದಲಿಯಾಗಿ ಯಾವುದೇ ಪಾಕವಿಧಾನದಲ್ಲಿಯೂ ಜೇನುತುಪ್ಪದ ಬಳಕೆಯ ಅನುಪಾತವು ಒಂದೇ ಆಗಿರುತ್ತದೆ. ಆಹಾರ ತಯಾರಿಸುವಾಗ ವೆನಿಲ್ಲಾ (Vanilla) ಸಾರದ ಬದಲು, ಒಂದು ಟೀ ಚಮಚ ಜೇನುತುಪ್ಪವನ್ನು ಸೇರಿಸಿ. ಜೇನುತುಪ್ಪವು ಸಿಹಿ ಹಾಗೂ ಪರಿಮಳವನ್ನು ಹೊಂದಿರುವುದರಿಂದ ಆಹಾರದ ಸ್ವಾದ ಹೆಚ್ಚಾಗುತ್ತಿದೆ.
ನೀಲಿ ಜಾವ ಬಾಳೆಹಣ್ಣು ಗೊತ್ತಾ ? ಥೇಟ್ ವೆನಿಲ್ಲಾ ಐಸ್‌ಕ್ರೀಂನದ್ದೇ ಟೇಸ್ಟ್
ನಿಂಬೆ ಹಣ್ಣು (Lemon)
ಸಿಟ್ರಸ್ ಅಂಶವುಳ್ಳ ಯಾವುದೇ ಹಣ್ಣನ್ನು ವೆನಿಲ್ಲಾ ಎಸೆನ್ಸ್ ಬದಲಿಯಾಗಿ ಬಳಸಬಹುದು. ನಿಂಬೆ ಅಥವಾ ಕಿತ್ತಳೆ ಬಳಕೆ ವೆನಿಲ್ಲಾ ಸಾರಕ್ಕೆ ಉತ್ತಮ ಬದಲಿಯಾಗಿದೆ. ನಿಂಬೆ, ಕೇಕ್ ಅನ್ನು ಹುಳಿಯಾಗಿಸದೆ ಅದರ ರುಚಿಯನ್ನು ಸಮತೋಲನಗೊಳಿಸುತ್ತದೆ.
ರಮ್/ ಬ್ರಾಂಡಿ (Rum/Brandy)
ವೆನಿಲ್ಲಾ ಎಸೆನ್ಸ್ ತಯಾರಿಸಲು, ವೆನಿಲ್ಲಾ ಬೀಜಗಳನ್ನು ದೀರ್ಘಕಾಲದ ವರೆಗೆ ಆಲ್ಕೋಹಾಲ್‌ನಲ್ಲಿ ನೆನೆಸಲಾಗುತ್ತದೆ. ಆದ್ದರಿಂದ, ಕೇಕ್ ಮತ್ತು ಮಫಿನ್‌ಗಳಲ್ಲಿ ವೆನಿಲ್ಲಾ ಸಾರವನ್ನು ಆಲ್ಕೋಹಾಲ್‌ನೊಂದಿಗೆ ಬದಲಾಯಿಸುವುದು ಸಂಪೂರ್ಣವಾಗಿ ಉತ್ತಮವಾಗಿದೆ. ವೆನಿಲ್ಲಾ ಎಸೆನ್ಸ್ ಹಾಕುವಷ್ಟೇ ಪ್ರಮಾಣದಲ್ಲಿ ರಮ್ ಅಥವಾ ಬ್ರಾಂಡಿಯನ್ನು ನೀವು ಆಹಾರ ತಯಾರಿಸುವಾಗ ಹಾಕಿ. ಇದರಿಂದ ಕೇಕ್ ಸ್ಪಂಜ್‌ನಂತೆ ಮೆತ್ತಗಾಗುತ್ತದೆ.
ದಾಲ್ಚಿನ್ನಿ ಮತ್ತು ಏಲಕ್ಕಿ (Cinnamon/Cardamom)
ವೆನಿಲ್ಲಾ ಸಾರದ ಬದಲು ದಾಲ್ಚಿನ್ನಿ ಪುಡಿ, ಏಲಕ್ಕಿ ಪುಡಿ ಅಥವಾ ಜಾಯಿಕಾಯಿ ಪುಡಿಯನ್ನೂ ಪರ್ಯಾಯವಾಗಿ ಬಳಸಬಹುದು. ಒಂದು ಚಿಟಿಕೆಯಷ್ಟು ಈ ಮೇಲಿನ ಯಾವುದೇ ಮಸಾಲೆ ಸೇರಿಸಿದರೂ ಸಾಕು, ಇದು ಒಂದು ಸ್ಪೂನ್ ವೆನಿಲ್ಲಾ ಎಸೆನ್ಸ್‌ಗೆ ಸಮವಾಗಿರುತ್ತದೆ.
Fish Cake Recipe: ಟೇಸ್ಟೀ ಫಿಶ್ ಕೇಕ್ ತಯಾರಿಸುವುದು ಹೇಗೆ ?
ಕಾಫಿ ಪೌಡರ್ (Coffee Powder)
ಚಾಕೊಲೇಟ್ ಕೇಕ್‌ಗಳು, ಚಾಕೊಲೇಟ್ ಮಫಿನ್‌ಗಳು ಇತ್ಯಾದಿಗಳಂತಹ ಚಾಕೊಲೇಟ್ ರುಚಿಯ ಪಾಕವಿಧಾನಗಳಿಗಾಗಿ, ಕಾಫಿ ಪೌಡರ್, ವೆನಿಲ್ಲಾಗೆ ಉತ್ತಮ ಪರ್ಯಾಯವಾಗಿದೆ. ಕಾಫಿ ಪುಡಿಯನ್ನು ಸೇರಿಸುವುದರಿಂದ ಚಾಕೊಲೇಟ್ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಇನ್ನಷ್ಟು ರುಚಿಕರಗೊಳಿಸುತ್ತದೆ. ಆದರೆ ಇದಕ್ಕಾಗಿ ನೀವು 1 ಚಮಚ ವೆನಿಲ್ಲಾ ಎಸೆನ್ಸ್ ಬದಲು ಒಂದು ಚಮಚ ಕಾಫಿ ಪುಡಿಯನ್ನು ಸೇರಿಸುವ ಅಗತ್ಯವಿಲ್ಲ. ಜಸ್ಟ್ 1 ಪಿಂಚ್ ಕಾಫಿ ಪುಡಿಯಿಂದ ರುಚಿ ಬದಲಾವಣೆಯಾಗುತ್ತದೆ.
ಹೀಗಾಗಿ ಇನ್ಮುಂದೆ ಮನೇಲಿ ವೆನಿಲ್ಲಾ ಎಸೆನ್ಸ್ ಇಲ್ಲಾಂದ್ರೂ ಹೊಸ ರೆಸಿಪಿ ಟ್ರೈ ಮಾಡೋಕೆ ಏನೇನೂ ಪ್ಲಾಬ್ಲಂ ಇಲ್ಲ. ವೆನಿಲ್ಲಾ ಎಸೆನ್ಸ್ ಇಲ್ಲ ಕಾರಣಕ್ಕೆ ಅಂಗಡಿಯಿಂದ ತಂದ ಮೇಲೆ ಮಾಡೋಣ ಅಂತ ರೆಸಿಪಿ ಮಾಡೋದನ್ನು ಪೋಸ್ಟ್ ಪೋನ್ ಮಾಡ್ಬೇಕಾಗಿಲ್ಲ. ಮೇಲೆ ಹೇಳಿರೋ ಐಟಂನಲ್ಲಿ ಯಾವುದಾದ್ರೂ ಒಂದಾದ್ರೂ ನಿಮ್ಮ ಮನೇಲಿದ್ರೆ ಸಾಕು, ಹೊಸ ರೆಸಿಪಿ ತಯಾರಿಸಿ ಮನೆಯವರ ಮೇಲೆ ಎಕ್ಸಪರಿಮೆಂಟ್ ಮಾಡೋದೆ.