ಹೇಗಾದ್ರೂ ಸರಿ ಈ ವರ್ಷನಾದ್ರೂ ಸಣ್ಣಗಾಗ್ಬೇಕಪ್ಪಾ ಅಂತ ಅಂದ್ಕೊಂಡಿದ್ದೀರಾ. ಜಿಮ್ (Gym), ಯೋಗ ಇದ್ದಿದ್ದೇ. ಅದು ಬಿಟ್ಟು ಸಣ್ಣಗಾಗೋಕೆ ಯಾವ ಆಹಾರ (Food) ಉತ್ತಮ ಅನ್ನೋ ಕನ್ ಫ್ಯೂಶನ್ನಾ. ಹಾಗಿದ್ರೆ ನೀವೇನು ತಿನ್ಬೇಕು ನಾವ್ ಹೇಳ್ತೀವಿ. ತೂಕ (Weight) ಇಳಿಸ್ಕೊಂಡು ಸಣ್ಣಗಾಗೋದು ಕಷ್ಟ ಏನಿಲ್ಲ.
ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಪ್ರೋಟೀನ್ (Protein) ಸೇವನೆಯನ್ನು ಹೆಚ್ಚಿಸುವುದು ಅತ್ಯಗತ್ಯ. ಆಹಾರದಲ್ಲಿ ಹೆಚ್ಚಿನ ಪ್ರೋಟೀನ್ ಸೇರಿಸುವ ವಿಷಯಕ್ಕೆ ಬಂದಾಗ, ಮೊಟ್ಟೆ (Egg) ಮತ್ತು ಪನೀರ್ (Paneer) ಹೆಚ್ಚಿನ ಜನರ ಆಹಾರ (Food) ಯೋಜನೆಗಳಲ್ಲಿ ಸ್ಥಾನ ಪಡೆಯುವ ಎರಡು ಆಹಾರ ಪದಾರ್ಥಗಳಾಗಿವೆ. ಮೊಟ್ಟೆ ಹಾಗೂ ಪನೀರ್, ಇವೆರಡನ್ನೂ ಬೇಯಿಸುವುದು ಸುಲಭ. ಅಲ್ಲದೆ, ಇವೆರಡೂ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳಿಂದ ತುಂಬಿದ್ದು, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮೊಟ್ಟೆ ಹಾಗೂ ಪನೀರ್ ಸೇವನೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಸಸ್ಯಾಹಾರಿಗಳಿಗೆ ಪನೀರ್ ಪ್ರೋಟೀನ್‌ನ ಏಕೈಕ ಮೂಲವಾಗಿದೆ. ಮಾಂಸಾಹಾರಿಗಳು ಮೊಟ್ಟೆಯನ್ನು ಬೇಯಿಸಿ ತಿನ್ನಬಹುದು. ಹಾಗಿದ್ರೆ ಮೊಟ್ಟೆಗಳು ಅಥವಾ ಪನೀರ್ ಯಾವುದು ಉತ್ತಮ ?
ಮೊಟ್ಟೆಗಳು ಅಥವಾ ಪನೀರ್ ಯಾವುದು ಉತ್ತಮ ?
ಮೊಟ್ಟೆಗಳು ತುಲನಾತ್ಮಕವಾಗಿ ಅಗ್ಗವಾಗಿವೆ, ಆದರೆ ಇವು ಪ್ರೋಟೀನ್‌ನ ಉತ್ತಮ-ಗುಣಮಟ್ಟದ ಮೂಲವಾಗಿದೆ. ಮೊಟ್ಟೆಯಲ್ಲಿ ದೇಹಕ್ಕೆ ದಿನದಲ್ಲಿ ಅಗತ್ಯವಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳಿವೆ. ಇಡೀ ಮೊಟ್ಟೆಯು 6 ಗ್ರಾಂ ಪ್ರೋಟೀನ್ ಮತ್ತು ದೇಹದ ಸಾಮಾನ್ಯ ಕಾರ್ಯನಿರ್ವಹಣೆಗೆ ಅಗತ್ಯವಿರುವ ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತದೆ. ನೀವು ಬೇಯಿಸಿದ ಮೊಟ್ಟೆಗಳು, ಮೊಟ್ಟೆ ಕರಿ, ಆಮ್ಲೆಟ್ (Omelette) ಸಹ ಸೇವಿಸಬಹುದು.
undefined
Super Food For Kids: ಮಕ್ಕಳು ಕುಳ್ಳಗಿದ್ದಾರೆ ಅನ್ನೋ ಬೇಜಾರಾ..ಮೊಟ್ಟೆ, ಸಿಹಿ ಗೆಣಸು ಕೊಟ್ಟು ನೋಡಿ
ಪನೀರ್ ಅಥವಾ ಕಾಟೇಜ್ ಚೀಸ್ ಭಾರತದಲ್ಲಿ ಜನಪ್ರಿಯವಾಗಿರುವ ಡೈರಿ ಉತ್ಪನ್ನವಾಗಿದೆ. ಹಾಲನ್ನು ಒಡೆದು ಮೊಸರನ್ನು ಬೇರ್ಪಡಿಸುವ ಮೂಲಕ ಪನೀರ್‌ನ್ನು ತಯಾರಿಸಲಾಗುತ್ತದೆ. ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಪನೀರ್‌ನಿಂದ ಹಲವು ಆಹಾರಗಳನ್ನು ತಯಾರಿಸಬಹುದಾಗಿದೆ. ಪನೀರ್ ಗ್ರೇವಿ, ಪನೀರ್ ಕಬಾಬ್, ಪನೀರ್ ಬಟರ್ ಮಸಾಲ ಮೊದಲಾದ ಖಾದ್ಯಗಳು ರುಚಿಕರವಾಗಿರುತ್ತದೆ. ಹಾಗೆಯೇ ಸ್ಯಾಂಡ್‌ವಿಚ್ (Sandwich) ತಯಾರಿಸಲುವಾಗಲೂ ಪನೀರ್‌ನ್ನು ಬಳಸಲಾಗುತ್ತದೆ. ಪನೀರ್ ವಿಟಮಿನ್ ಬಿ 12, ಸೆಲೆನಿಯಮ್, ವಿಟಮಿನ್ ಡಿ ಮತ್ತು ರೈಬೋಫ್ಲಾವಿನ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. 40 ಗ್ರಾಂ ಪನೀರ್ 7.54 ಗ್ರಾಂ ಪ್ರೋಟೀನ್ ಮತ್ತು ಸುಮಾರು 5 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ.
ಮೊಟ್ಟೆಯಲ್ಲಿರುವ ಪೌಷ್ಟಿಕಾಂಶದ ಅಂಶ
ಮೊಟ್ಟೆ ಸಹ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒಳಗೊಂಡಿದೆ. 44 ಗ್ರಾಂ ತೂಕದ 1 ಬೇಯಿಸಿದ ಮೊಟ್ಟೆ 5.5 ಗ್ರಾಂ ಪ್ರೋಟೀನ್‌ನ್ನು ಒಳಗೊಂಡಿದೆ. 4.2 ಗ್ರಾಂ ಕೊಬ್ಬಿನ ಪ್ರಮಾಣ, 24.6 ಮಿ.ಗ್ರಾಂ ಕ್ಯಾಲ್ಸಿಯಂ, 0.8 ಮಿಗ್ರಾಂ ಕಬ್ಬಿಣ, 5.3 ಮಿಗ್ರಾಂ ಮೆಗ್ನೀಸಿಯಮ್, 86.7 ಮಿಗ್ರಾಂ ರಂಜಕ, 60.3 ಮಿಗ್ರಾಂ ಪೊಟ್ಯಾಸಿಯಮ್, 0.6 ಮಿಗ್ರಾಂ ಸತು, 162 ಮಿಗ್ರಾಂ ಕೊಲೆಸ್ಟ್ರಾಲ್, 13.4 ಮೈಕ್ರೋಗ್ರಾಂ ಸೆಲೆನಿಯಮ್ ಒಳಗೊಂಡಿದೆ.
ಪನೀರ್‌ನಲ್ಲಿರುವ ಪೌಷ್ಟಿಕಾಂಶದ ಅಂಶ
40 ಗ್ರಾಂ ತೂಕದ ಪನೀರ್ 7.54 ಗ್ರಾಂ ಪ್ರೋಟೀನ್, 5.88 ಗ್ರಾಂ ಕೊಬ್ಬು, 4.96 ಗ್ರಾಂ ಕಾರ್ಬೋಹೈಡ್ರೇಟ್ಗಳು, 37.32 ಮೈಕ್ರೋಗ್ರಾಂ ಫೋಲೇಟ್‌ಗಳು, 190.4 ಮಿಗ್ರಾಂ ಕ್ಯಾಲ್ಸಿಯಂ, 132 ಮಿಗ್ರಾಂ ರಂಜಕ, 50 ಮಿಗ್ರಾಂ ಪೊಟ್ಯಾಸಿಯಮ್ ಅಂಶವನ್ನು ಒಳಗೊಂಡಿದೆ.
Benefits of Paneer: ಕಚ್ಚಾ ಪನೀರ್ ಸೇವನೆ ಮಾಡೋದ್ರಿಂದ ಎಷ್ಟೊಂದು ಲಾಭ ಗೊತ್ತಾ?
ಮೊಟ್ಟೆಗಳು ಮತ್ತು ಪ್ರೋಟೀನ್, ಎರಡೂ ಒಂದೇ ರೀತಿಯ ಪೋಷಕಾಂಶ ಸಂಯೋಜನೆಯನ್ನು ಹೊಂದಿವೆ. ಇವುಗಳು ಪ್ರೋಟೀನ್‌ನ ಸಂಪೂರ್ಣ ಮೂಲಗಳಾಗಿವೆ, ಏಕೆಂದರೆ ಅವು ಪ್ರೋಟೀನ್ ತಯಾರಿಸಲು ಅಗತ್ಯವಿರುವ ಎಲ್ಲಾ ಒಂಬತ್ತು ಪೋಷಕಾಂಶಗಳನ್ನು ಒಳಗೊಂಡಿರುತ್ತವೆ; ಆದ್ದರಿಂದ, ಇವುಗಳನ್ನು ಉತ್ತಮ ಗುಣಮಟ್ಟದ ಪ್ರೊಟೀನ್‌ಗಳು ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಪನೀರ್ ಮತ್ತು ಮೊಟ್ಟೆಗಳು ವಿಟಮಿನ್ ಬಿ-12 ಮತ್ತು ವಿಟಮಿನ್ (Vitamin) ಡಿಯಲ್ಲಿ ಸಮೃದ್ಧವಾಗಿವೆ, ಇದು ಯಾವುದೇ ಸಸ್ಯ ಆಧಾರಿತ ಆಹಾರ ಉತ್ಪನ್ನಗಳಲ್ಲಿ ವಿರಳವಾಗಿ ಕಂಡುಬರುವ ಎರಡು ಪೋಷಕಾಂಶಗಳು. ಹೀಗಾಗಿ ಮೊಟ್ಟೆ ಹಾಗೂ ಪನೀರ್ ಆರೋಗ್ಯಕರವಾಗಿದ್ದು, ಪ್ರತಿನಿತ್ಯ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು, ಪನೀರ್, ಮೊಟ್ಟೆಗಳನ್ನು ತಿನ್ನುವುದು ಪ್ರಯೋಜನಕಾರಿಯಾಗಿದೆ. ಇದರಿಂದ ದೇಹಕ್ಕೆ ಅಗತ್ಯವಾಗುವಷ್ಟು ಪ್ರೋಟೀನ್, ಪೋಷಕಾಂಶಗಳು ದೊರಕುತ್ತವೆ. ಜತೆಗೆ ಸೋಯಾ ಉತ್ಪನ್ನಗಳು, ಮಸೂರ ಬೀಜಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಹೆಚ್ಚು ಪೋಷಕಾಂಶಗಳು ದೇಹಕ್ಕೆ ಲಭಿಸುತ್ತದೆ. ಸೋ, ಇನ್ಮುಂದೆ ತೂಕ ಹೆಚ್ಚಳದ ಬಗ್ಗೆ ವರಿ ಮಾಡ್ಬೇಕಾಗಿಲ್ಲ. ಸಣ್ಣಗಾಗೋಕೆ ಸಸ್ಯಾಹಾರಿಗಳಾಗಿದ್ದರೆ ಪನೀರ್ ತಿನ್ನಿ. ಮಾಂಸಾಹಾರಿಗಳಾಗಿದ್ದರೆ ಮೊಟ್ಟೆ ತಿನ್ನಿ. ಪ್ರಾಬ್ಲೆಮ್ ಸಾಲ್ವಡ್