ಇತ್ತೀಚಿನ ದಿನಗಳಲ್ಲಿ ಕುಕ್ಕಿಂಗ್ (Cooking) ಅನ್ನೋದು ಹಲವರ ಹಾಬಿ ಲಿಸ್ಟ್ ಸೇರಿದೆ. ಆದ್ರೆ ತರಕಾರಿ (Vegetables) ಕಟ್ ಮಾಡೋದು ಇದ್ಯಲ್ಲ ಅದು ದೊಡ್ಡ ಗೋಳು. ಗೃಹಿಣಿಯರಂತೂ ಅಡುಗೆ ಮಾಡೋಕೆ ಸೈ, ಆದ್ರೆ ತರಕಾರಿ ಕಟ್ ಮಾಡೋದು ಹಿಂಸೆ ಅಂತಾರೆ. ನಿಮ್ದು ಇದೇ ಸಮಸ್ಯೆನಾ. ಡೋಂಟ್ ವರಿ, ತರಕಾರಿಯನ್ನು ಫಟಾಫಟ್ ಕಟ್ ಮಾಡೋಕೆ, ಹಣ್ಣು (Fruits)ಗಳನ್ನು ಈಝಿಯಾಗಿ ಬಿಡಿಸೋಕೆ ಇಲ್ಲಿದೆ ಕೆಲವೊಂದು ಟಿಪ್ಸ್
ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನೋದು ಆರೋಗ್ಯಕ್ಕೇನೋ ಒಳ್ಳೆಯದು. ಆದ್ರೆ ವೆಜಿಟೇಬಲ್ (Vegetables), ಫ್ರುಟ್ಸ್ (Fruits) ಕಟ್ ಮಾಡೋದು ಇದ್ಯಲ್ಲ ತಲೆನೋವಿನ ಕೆಲ್ಸ. ಅಡುಗೆ ಕೋಣೆ (Kitchen)ಯಲ್ಲಿ ಅರ್ಧಕರ್ಧ ಟೈಂ ಅದಕ್ಕೇ ಹೋಗಿಬಿಡುತ್ತೆ. ಹಸಿಮೆಣಸು ಹೆಚ್ಚಿದ್ರೆ ಕೈ ಉರಿ, ಕೊತ್ತಂಬರಿ ಸೊಪ್ಪು ಬಿಡಿಸಿ ಕಟ್ ಮಾಡೋದೆ ಕಷ್ಟ. ಇನ್ನು ಆಪಲ್ ಕಟ್ ಮಾಡೋ, ದಾಳಿಂಬೆ ಬಿಡಿಸೋ ಕಷ್ಟ ನೋಡಿದ್ರೆ ತಿನ್ನೋದೆ ಬೇಡ ಅನ್ಸುತ್ತೆ. ಇಂಥಾ ಸಮಸ್ಯೆ ನಿಮ್ಮನ್ನು ಕಾಡಿದ್ಯಾ. ಹಾಗಿದ್ರೆ ತರಕಾರೀನಾ ಈಝಿಯಾಗಿ ಕಟ್ ಮಾಡೋದು ಹೇಗೆ, ಹಣ್ಣನ್ನು ಸುಲಭವಾಗಿ ಬಿಡಿಸೋದು ಹೇಗೆ ನಾವು ಹೇಳ್ತೀವಿ
ಹಸಿರು ಮೆಣಸಿನಕಾಯಿ ಕಟ್ ಮಾಡುವುದು
ಸಾಮಾನ್ಯವಾಗಿ ಹಸಿರು ಮೆಣಸಿನಕಾಯಿ (Green Chilli) ಯನ್ನು ಕತ್ತರಿಸುವುದು ಯಾರಿಗೂ ಇಷ್ಟವಾಗದ ವಿಷಯ. ಯಾಕೆಂದರೆ ಕೈಯಲ್ಲಿ ಹಿಡಿದು ಮೆಣಸಿನಕಾಯಿಗಳನ್ನು ಕಟ್ ಮಾಡುವುದರಿಂದ ಕೈ ಬೆರಳುಗಳು ಖಾರವಾಗಿ ಉರಿ ಬರುತ್ತವೆ. ತಣ್ಣೀರಿನಲ್ಲಿ ಬೆರಳುಗಳನ್ನು ಅದ್ದಿದರೂ, ಕೈಗೆ ಎಣ್ಣೆ ಹಚ್ಚಿದರೂ ಸುಮಾರು ಹೊತ್ತಿನ ಕಾಲ ಉರಿ ಹಾಗೆಯೇ ಇರುತ್ತದೆ. ಹೀಗಾಗಿ ಮೆಣಸಿಕಾಯಿಯನ್ನು ಕತ್ತರಿಸಲು ಚಾಕುವನ್ನು ಬಳಸುವ ಬದಲು ಯಾವಾಗಲೂ ಚೆನ್ನಾಗಿರುವ, ದೊಡ್ಡದಾದ ಕತ್ತರಿಯನ್ನು ಬಳಸಿ. ಈ ರೀತಿ ಮೆಣಸಿಕಾಯಿಯನ್ನು ಕತ್ತರಿಸುವಾಗ ನೀವು ಅದನ್ನು ಕೈಯಲ್ಲಿ ಹಿಡಿಯಬೇಕಾಗಿಲ್ಲ. ಬದಲಿಗೆ ದಂಟನ್ನು ಕೈಯಲ್ಲಿ ಹಿಡಿದು ಮೆಣಸಿನಕಾಯಿಯನ್ನು ಸುಲಭವಾಗಿ ಕಟ್ ಮಾಡಬಹುದು.
Super Food For Kids: ಮಕ್ಕಳು ಕುಳ್ಳಗಿದ್ದಾರೆ ಅನ್ನೋ ಬೇಜಾರಾ..ಮೊಟ್ಟೆ, ಸಿಹಿ ಗೆಣಸು ಕೊಟ್ಟು ನೋಡಿ
ದಾಳಿಂಬೆ ಹಣ್ಣನ್ನು ಬಿಡಿಸುವುದು
ದಾಳಿಂಬೆ (Pomegranate) ತಿನ್ನೋದು ಎಲ್ಲರಿಗೂ ಇಷ್ಟ. ಆದ್ರೆ ಅದನ್ನು ಕಟ್ ಮಾಡಿ ಬೀಜಗಳನ್ನು ಬಿಡಿಸಿ ತಿನ್ಬೇಕು ಎಂದಾಗ ಎಲ್ಲರೂ ಮುಖ ಸಿಂಡರಿಸುತ್ತಾರೆ. ದಾಳಿಂಬೆ ಬೀಜಗಳನ್ನು ತೆಗೆಯೋದು ತುಂಬಾ ಹೊತ್ತು ಹಿಡಿಯುತ್ತೆ. ಅದಕ್ಕಿಂತ ತಿನ್ನದೇ ಇರೋದೆ ಬೆಸ್ಟ್ ಅಂತ ಹಲವರು ಸುಮ್ನಾಗ್ತಾರೆ. ದಾಳಿಂಬೆ ಬೀಜಗಳನ್ನು ಸುಲಭವಾಗಿ ತೆಗೆದುಹಾಕಲು ನಿಮಗೆ ಸಹಾಯ ಮಾಡುವ ತ್ವರಿತ ವಿಧಾನ ಇಲ್ಲಿದೆ. ಮೊದಲು ದಾಳಿಂಬೆಯ ತೊಟ್ಟನ್ನು ಕತ್ತರಿಸಿ. ನಂತರ ಚಾಕುವಿನಲ್ಲಿ ಹಣ್ಣಿನ ಸುತ್ತಲೂ ಕಟ್ ಮಾಡುವಂತೆ ಲಘುವಾಗಿ ಮಾರ್ಕ್ ಮಾಡಿಕೊಳ್ಳಿ (ಹಣ್ಣಿನ ಮೇಲಿನಿಂದ ಮಾತ್ರ ಚಾಕು ತಾಗಿಸಬೇಕು. ಹಣ್ಣಿನೊಳಗಿರುವ ದಾಳಿಂಬೆ ಬೀಜಗಳಿಗೆ ಏನು ಆಗಬಾರದು). ನಂತರ ಬಿಳಿ ಬಣ್ಣದಲ್ಲಿರುವ ದಾಳಿಂಬೆಯ ಮಧ್ಯ ಭಾಗವನ್ನು ತೆಗೆಯಿರಿ. ಒಂದು ಬಟ್ಟಲಿನಲ್ಲಿ ನೀರು ತುಂಬಿಸಿ ಮತ್ತು ಅದರಲ್ಲಿ ಹಣ್ಣನ್ನು ತಿರುಗಿಸಿ. ಬೀಜಗಳು ಹೊರಬರುವಂತೆ ಮಾಡಲು ದಾಳಿಂಬೆಯ ಹಿಂಭಾಗವನ್ನು ಚಮಚದೊಂದಿಗೆ ಟ್ಯಾಪ್ ಮಾಡಿ. ಈ ರೀತಿಯಲ್ಲಿ ಎಲ್ಲಾ ಬೀಜಗಳನ್ನು ತೆಗೆದುಹಾಕಿ.
ಕೊತ್ತಂಬರಿ ಸೊಪ್ಪನ್ನು ಕಟ್ ಮಾಡುವುದು
ಕೊತ್ತಂಬರಿ ಸೊಪ್ಪು (Coriander leaves) ಹೆಚ್ಚಾಗಿ ಉದುರಿಹೋಗುತ್ತದೆ. ಹೀಗಾಗಿ ಅದನ್ನು ಕತ್ತರಿಸಲು ಹೊರಟಾಗ ಒಂದೊಂದೇ ಉದುರಿ ಸೊಪ್ಪನ್ನು ಕಟ್ ಮಾಡುವುದೇ ಕಷ್ಟವಾಗುತ್ತದೆ. ಇದಲ್ಲದೆ, ಒದ್ದೆಯಾದ ಕೊತ್ತಂಬರಿ ಸೊಪ್ಪಿನಿಂದ ಚೆನ್ನಾಗಿಲ್ಲದ ಎಲೆಗಳನ್ನು ಆರಿಸಿ ತೆಗೆಯುವುದು ಕಷ್ಟ. ಅವು ಕೈಗೆ ಅಂಟಿಕೊಳ್ಳುತ್ತವೆ. ಹೀಗಾಗಿ ಕೊತ್ತಂಬರಿ ಸೊಪ್ಪನ್ನು ಕಟ್ ಮಾಡುವಾಗಲೂ ಯಾವಾಗಲೂ ಚೆನ್ನಾಗಿಲ್ಲದ ಸೊಪ್ಪನ್ನು ಮೊದಲೇ ಆರಿಸಿ ತೆಗೆಯಿರಿ. ನಂತರ ಬೇಕಾಗಿರುವ ಸೊಪ್ಪನ್ನು ಕೈಯಲ್ಲೇ ಕಟ್ಟಿನ ರೀತಿ ಮಾಡಿಕೊಳ್ಳಿ. ಈಗ ಇದನ್ನು ಅರ್ಧದಷ್ಟು ಮಡಚಿ, ಚಾಪಿಂಗ್ ಬೋರ್ಡ್ ಮೇಲಿಟ್ಟು ಸಣ್ಣಗೆ ಕತ್ತರಿಸಿಕೊಳ್ಳುವುದು ಸುಲಭ.
Get Rid of Fruit Flies: ಹಣ್ಣುಗಳಲ್ಲಿ ಕೂರುವ ನೊಣಗಳ ಕಾಟ ತಪ್ಪಿಸಲು ಹೀಗೆ ಮಾಡಿ
ಆ್ಯಪಲ್ ಕಟ್ ಮಾಡುವುದು
ಚಾಕುವನ್ನು ಬಳಸಿ ಆ್ಯಪಲ್ (Apple) ಬುಡದ ಸುತ್ತಲೂ ಚೌಕಾಕಾರದಲ್ಲಿ ಕಟ್ ಮಾಡಿ. ಈಗ ಚೌಕಾಕಾರದ ಕೆಳಭಾಗದಲ್ಲಿ ಕತ್ತರಿಸಿ. ಕಾಂಡವನ್ನು ಎಳೆಯುವ ಮೂಲಕ ಸೇಬಿನಿಂದ ಈ ಲಾಗ್ ಅನ್ನು ತೆಗೆದುಹಾಕಿ. ಇದು ಬೀಜಗಳು ಮತ್ತು ಸೇಬಿನ ಮಧ್ಯ ಭಾಗವನ್ನು ಒಂದೇ ಸಮಯದಲ್ಲಿ ತೆಗೆದುಹಾಕುತ್ತದೆ. ಈಗ ನೀವು ಸೇಬನ್ನು ನಿಮ್ಮ ಆಯ್ಕೆಯ ಪ್ರಕಾರ ರೌಂಡ್ ಡಿಸ್ಕ್ ಅಥವಾ ಉದ್ದನೆಯ ಹೋಳುಗಳಾಗಿ ಕತ್ತರಿಸಿಕೊಳ್ಳಬಹುದು. ಸೋ, ಇನ್ಮುಂದೆ ಕುಕ್ಕಿಂಗ್ ಅಂದ್ರೆ ನೋ ಟೆನ್ಶನ್. ಫಟಾಫಟ್ ವೆಜಿಟೇಬಲ್ಸ್ ಕಟ್ ಮಾಡೋದು. ವೆರೈಟಿ ವೆರೈಟಿ ಅಡುಗೆ ಮಾಡೋದೆ. ಹಾಗೆಯೇ ಹೆಲ್ತೀ ಫ್ರುಟ್ಸ್ ತಿನ್ನೋಕೆ ಇನ್ನೇನು ಪ್ರಾಬ್ಲೆಮ್ ಇಲ್ಲಾ ಅಲ್ವಾ.